ಶಿಯೋಮಿ ಸಂಸ್ಥೆಯಿಂದ ಮಿ ವ್ಯಾಕ್ಯೂಮ್-ಮಾಪ್ ಪಿ ಲಾಂಚ್!
ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್ ಕಂಪೆನಿ ಶಿಯೋಮಿ ತನ್ನ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಂದ ಗುರುತಿಸಿಕೊಂಡಿದೆ. ಕೇವಲ ಸ್ಮಾರ್ಟ್‌ಫೋನ್‌ಗಳು ಮಾತ್ರವಲ್ಲ ಇತರೆ ಸ್ಮಾರ್ಟ್ ಪ್ರಾಡಕ್ಟ್‌ಗಳನ್ನು ಸಹ ಮಾರುಕಟ್ಟೆಗೆ ಶಿಯೋಮಿ ಪರಿಚಯಿಸಿದೆ. ಈ ಮೂಲಕ ತನ್ನ ಪ್ರಾಬಲ್ಯವನ್ನ ಟೆಕ್ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ವಿಸ್ತರಿಸಿಕೊಂಡಿದೆ. ಸದ್ಯ ತನ್ನ ವಿಶೇಷ ಮಾದರಿಯ ಸ್ಮಾರ್ಟ್ ಪ್ರಾಡಕ್ಟ್‌ಗಳನ್ನ ಪರಿಚಯಿಸಿ ಸೈ ಎನಿಸಿಕೊಂಡಿರುವ ಶಿಯೋಮಿ ಇದೀಗ ಹೊಸ ಮಾದರಿಯ ಮಾಪ್ ಅನ್ನು ಪರಿಚಯಿಸಿದೆ.

ಹೌದು, ಪ್ರಸಿದ್ದ ಸ್ಮಾರ್ಟ್‌ಫೋನ್ ತಯಾರಕ ಕಂಪೆನಿ ಎನಿಸಿಕೊಂಡಿರುವ ಶಿಯೋಮಿ ತನ್ನ ಹೊಸ ಸ್ಮಾರ್ಟ್ ಪ್ರಾಡಕ್ಟ್ ಅನ್ನು ಲಾಂಚ್ ಮಾಡಿದೆ. ಈಗಾಗಲೇ ಹಲವು ಮಾದರಿಯ ಮಾಪ್ ಗಳನ್ನ ಪರಿಚಯಿಸಿದ್ದ ಶಿಯೋಮಿ ಈ ಭಾರಿ ಹೊಸ ವಿನ್ಯಾಸ ಮಿ ವ್ಯಾಕ್ಯೂಮ್-ಮಾಪ್-ಪಿ ಅನ್ನು ಬಿಡುಗಡೆ ಮಾಡಿದೆ. ಈ ಮೂಲಕ ಕ್ಲೀನಿಂಗ್‌ಗಾಗಿ ಹೊಸ ಪ್ರಾಡಕ್ಟ್‌ಅನ್ನು ಪರಿಚಯಿಸಿದೆ. ಸದ್ಯ ಈ ಮಾಪ್ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದ್ದು, ಇದರ ಬೆಲೆ 17,999.ರೂ,ಆಗಿದೆ. ಇನ್ನು ಈ ಮಾಪ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ಇನ್ನು ಶಿಯೋಮಿ ಬಿಡುಗಡೆ ಮಾಡಿರುವ ಹೊಸ ಮಿ ವ್ಯಾಕ್ಯೂಮ್ ಮಾಪ್ ಪಿ ಹೊಸ ವಿನ್ಯಾಸದಲ್ಲಿ ಮೂಡಿ ಬಂದಿದ್ದು, ಕ್ಲೀನಿಂಗ್ ಮಾಡಲು ಉತ್ತಮ ಆಯ್ಕೆಯಾಗಿದೆ. ಇದು ಒಂದು ರೀಬೋಟ್ ವ್ಯಾಕ್ಯೂಮ್ ಕ್ಲೀನರ್ ಆಗಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಮಿ ರೋಬೋಟ್ ವ್ಯಾಕ್ಯೂಮ್-ಮಾಪ್ ಪಿ ರೋಬೊವಾಕ್ ಎಂದು ಹೇಳಬಹುದಾಗಿದೆ. ಇನ್ನು ಇದನ್ನು ಮೊದಲು ಟೆಕ್ ಪಿಪಿ ಗುರುತಿಸಿದೆ. ಅಲ್ಲದೆ ಮಿ ರೋಬೋಟ್ ವ್ಯಾಕ್ಯೂಮ್-ಮಾಪ್ ಪಿ ಎಂಬುದು ನಿರ್ವಾತ ಮತ್ತು ಮಾಪ್ ವೈಶಿಷ್ಟ್ಯಗಳೊಂದಿಗೆ ಬಂದಿರುವ 2-ಇನ್ -1 ರೋಬೋವಾಕ್ ಆಗಿದೆ.

ಇದು ಒಟ್ಟಿಗೆ ಗುಡಿಸುವುದು ಮತ್ತು ಚಲಿಸುವುದು ಮಾಡಲಿದೆ. ಅಂದರೆ ನಿಮಗೆ ಗುಡಿಸುವುದು ಬೇಕಿದ್ದರೆ ಗುಡಿಸುವುದು ಮೋಡ್, ಅಥವಾ ಮಾಪಿಂಗ್ ಮಾತ್ರ ಮಾಡಬೇಕಿದ್ದರೆ ಮಾಪಿಂಗ್ ಮೋಡ್ ಅನ್ನು ಉಪಯೋಗಿಸಬಹುದಾಗಿದೆ. ಅಂದರೆ ನಿಮಗೆ ಬೇಕೆನಿಸಿದಾ ಗುಡಿಸುವುದು-ಮಾತ್ರ ಮೋಡ್ ಮತ್ತು ಮಾಪಿಂಗ್-ಮಾತ್ರ ಮೋಡ್ ಅನ್ನು ಉಪಯೋಗಿಸಬಹುದಾಗಿದೆ. ಇನ್ನು ಈ ರೋಬೋವಾಕ್ ಜಪಾನಿನ ಬ್ರಷ್ ರಹಿತ ಮೋಟರ್ ಅನ್ನು ಸಹ ಹೊಂದಿದ್ದು, ಇದು 2,100Pa ಹೀರುವಿಕೆಯನ್ನು ಹೊಂದಿದೆ.

ಜೊತೆಗೆ ಈ ಮಾಪಿಂಗ್ ರೋಬೋವಾಕ್ 12 ವಿಭಿನ್ನ ಸೆನ್ಸಾರ್‌ಗಳನ್ನ ಹೊಂದಿದೆ. ಲೇಸರ್ ಡಿಟೆಕ್ಟ್ ಸಿಸ್ಟಮ್ (ಎಲ್ಡಿಎಸ್) ಬಳಸಿ, ಮಿ ರೋಬೋಟ್ ವ್ಯಾಕ್ಯೂಮ್ ಮೇಲ್ಮೈಯಲ್ಲಿರುವಾಗ ವಸ್ತುಗಳನ್ನು ಹತ್ತಿರದಲ್ಲಿ ಗುರುತಿಸಬಹುದಾಗಿದೆ. ಸದ್ಯ ಶಿಯೋಮಿ ಮಿ ರೋಬೋಟ್ ವ್ಯಾಕ್ಯೂಮ್-ಮಾಪ್ ಪಿ ಬೆಲೆ 17,999 ರೂ.ಆಗಿದೆ. ಆದರೆ ಭಾರತ ಸರ್ಕಾರವು ಲಾಕ್‌ಡೌನ್ ಘೋಷಣೆ ಮಾಡಿರುವುದರಿಂದ ಲಾಕ್‌ಡೌನ್ ನಿಯಮಗಳ ಸಡಿಲಿಕೆ ನಂತರ ರೋಬೋವಾಕ್ ಖರೀದಿಸಲು ಲಭ್ಯವಿರುತ್ತದೆ.


Click it and Unblock the Notifications




