ಶಿಯೋಮಿ ಸಂಸ್ಥೆಯಿಂದ ಮಿಜಿಯಾ ಹ್ಯಾಂಗಿಂಗ್‌ ಡಿಸ್‌ಪ್ಲೇ ಲ್ಯಾಂಪ್ ಬಿಡುಗಡೆ!

|

ಚೀನಾದ ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಶಿಯೋಮಿ ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ಪ್ರಾಡಕ್ಟ್‌ಗಳನ್ನ ಪರಿಚಯಿಸಿದೆ. ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಇತರೆ ಸ್ಮಾರ್ಟ್‌ಪ್ರಾಡಕ್ಟ್‌ಗಳ ಮಾರುಕಟ್ಟೆಯಲ್ಲೂ ತನ್ನ ಪ್ರಾಬಲ್ಯವನ್ನ ವಿಸ್ತರಿಸಿಕೊಂಡಿದೆ. ಅಷ್ಟೇ ಅಲ್ಲ ಲ್ಯಾಪ್‌ಟಾಪ್‌ ಡಿಸ್‌ಪ್ಲೇ ಮಾರುಕಟ್ಟೆಯಲ್ಲು ಶಿಯೋಮಿ ನೆಚ್ಚಿನ ಬ್ರ್ಯಾಂಡ್‌ ಆಗಿ ಗುರುತಿಸಿಕೊಂಡಿದೆ. ಸದ್ಯ ಇದೀಗ ತನ್ನ ಮತ್ತೊಂದು ಹೊಸ ಮಾದರಿಯ ಸ್ಮಾರ್ಟ್‌ ಡಿಸ್‌ಪ್ಲೇ ಒಂದನ್ನು ಬಿಡುಗಡೆ ಮಾಡಿದೆ.

ಹೌದು

ಹೌದು, ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಶಿಯೋಮಿ ತನ್ನ ಹೊಸ ಮಿಜಿಯಾ ಡಿಸ್‌ಪ್ಲೇ ಹ್ಯಾಂಗಿಂಗ್ ಲ್ಯಾಂಪ್ ಅನ್ನು ಬಿಡುಗಡೆ ಮಾಡಿದೆ. ಸದ್ಯ ಈ ಡಿಸ್‌ಪ್ಲೇ ಅಸಮ್ಮಿತ ಫಾರ್ವರ್ಡ್-ಪ್ರೊಜೆಕ್ಷನ್ ವಿನ್ಯಾಸವನ್ನು ಹೊಂದಿದ್ದು, ಹೊಸ ಮಾದರಿಯ ವಿನ್ಯಾಸವನ್ನ ಹೊಂದಿದೆ. ಇನ್ನು ಈ ಡಿಸ್‌ಪ್ಲೇ ಹ್ಯಾಂಗಿಂಗ್‌ ಲ್ಯಾಂಪ್‌ ವಿಶೇಷತೆ ಹಾಗೂ ವಿನ್ಯಾಸ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬಿಡುಗಡೆ

ಸದ್ಯ ಇದೀಗ ಬಿಡುಗಡೆ ಆಗಿರುವ ಶಿಯೋಮಿ ಡಿಸ್‌ಪ್ಲೇ ಹ್ಯಾಂಗಿಂಗ್‌ ಲ್ಯಾಂಪ್‌ ಲೋಹದ ದೀಪದ ಬಾಡಿ ವಿನ್ಯಾಸವನ್ನು ಹೊಂದಿದೆ. ಅಲ್ಲದೆ ಇದು ಯುಎಸ್‌ಬಿ-ಸಿ ಇಂಟರ್‌ಫೇಸ್‌ ಅನ್ನು ಒಳಗೊಂಡಿದೆ. ಜೊತೆಗೆ ಇದನ್ನು ಕಂಪ್ಯೂಟರ್‌ಗೆ ಲ್ಯಾಂಪ್‌ ಕನೆಕ್ಟ್‌ ಮಾಡುವುದಕ್ಕೆ ಸಹ ಬಳಸಬಹುದು. ಇದನ್ನು ಕಂಪ್ಯೂಟರ್‌ಗೆ ಕನೆಕ್ಟ್‌ ಮಾಡಿದ ನಂತರ, ಕಂಪ್ಯೂಟರ್ ಆನ್ ಮಾಡಿದರೆ ಲ್ಯಾಂಪ್‌ ಬೆಳಗಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಇನ್ನು ಈ ಡಿಸ್‌ಪ್ಲೇ ಹ್ಯಾಂಗಿಂಗ್‌ ಲ್ಯಾಂಪ್‌ ವಾಯರ್‌ಲೆಸ್‌ ರಿಮೋಟ್ ಕಂಟ್ರೋಲ್ ಮತ್ತು ಹ್ಯಾಂಡಲ್‌ಗೆ ಬೆಂಬಲವನ್ನು ನೀಡಲಿದೆ ಎನ್ನಲಾಗಿದೆ.

ಲ್ಯಾಂಪ್

ಇದಲ್ಲದೆ ಈ ಲ್ಯಾಂಪ್‌ ಮೂಲಕ ಮಾನಿಟರ್‌ ಹಾಗೂ ಇತರೆ ಕನೆಕ್ಟಿವಿಟಿ ಹೊ0ದಿರುವ ಡಿವೈಸ್‌ ಅನ್ನು ಸಹ ಕಂಟ್ರೋಲ್‌ ಮಾಡಬಹುದು ಅಥವಾ ಸ್ಥಗಿತಗೊಳಿಸಬಹುದು. ಇನ್ನು ಈ ಶಿಯೋಮಿ ಲ್ಯಾಂಪ್‌ ಮ್ಯಾಗ್ನೆಟಿಕ್ ತಿರುಗುವಿಕೆಯನ್ನು ಸಹ ಬೆಂಬಲಿಸುತ್ತದೆ, ಮತ್ತು ರಾ90 ಹೈ ಕಲರ್ ರೆಂಡರಿಂಗ್ ಇಂಡೆಕ್ಸ್ ಮತ್ತು ಮೊದಲೇ ಕಂಪ್ಯೂಟರ್ ಮೋಡ್ ಅನ್ನು ಸಹ ಹೊಂದಿದೆ. ಇನ್ನು ಈ ಡಿಸ್‌ಪ್ಲೇಯ ಪ್ರತಿಫಲನವನ್ನು ತಪ್ಪಿಸಲು ಮಿಜಿಯಾ ಡಿಸ್‌ಪ್ಲೇ ಹ್ಯಾಂಗಿಂಗ್ ಲ್ಯಾಂಪ್ ಕಸ್ಟಮೈಸ್ ಮಾಡಿದ ಆಪ್ಟಿಕಲ್ ಲೆನ್ಸ್ ಮತ್ತು ಫೋಟೊಮಾಸ್ಕ್ ಅನ್ನು ಸಹ ಹೊಂದಿದೆ.

ಡಿಸ್‌ಪ್ಲೇ

ಇನ್ನು ಮಿಜಿಯಾ ಡಿಸ್‌ಪ್ಲೇ ಹ್ಯಾಂಗಿಂಗ್ ಲ್ಯಾಂಪ್ ಅನ್ನು ರಿಮೋಟ್ ಕಂಟ್ರೋಲ್‌ ಜೊತೆ ಕನೆಕ್ಟ್‌ ಮಾಡಲು ಇದರಲ್ಲಿ 2.4GHz ವಾಯರ್‌ಲೆಸ್‌ ಕನೆಕ್ಟಿವಿಟಿ ಟೆಕ್ನಾಲಜಿಯನ್ನ ಬಳಸುತ್ತದೆ. ಇದಲ್ಲದೆ ಐಟಿಹೌಸ್‌ನ ವರದಿಯ ಪ್ರಕಾರ ರಿಮೋಟ್ ಎರಡು ಸಂಖ್ಯೆಯ 7 ಬ್ಯಾಟರಿಗಳನ್ನು ಬಳಸುತ್ತದೆ. ಕಲರ್‌ ತಾಪಮಾನದ ಬ್ರೈಟ್‌ನೆಶ್‌ ಅನ್ನು ಸರಿಹೊಂದಿಸಲು ಗ್ರಾಹಕರು ಇದನ್ನು ಬಳಸಬಹುದಾಗಿದೆ. ಇನ್ನು ಶಿಯೋಮಿ ಮಿಜಿಯಾ ಡಿಸ್‌ಪ್ಲೇ ಹ್ಯಾಂಗಿಂಗ್ ಲ್ಯಾಂಪ್ ಯುಎಸ್‌ಬಿ ಅಡಾಪ್ಟರ್ ಮತ್ತು ಪವರ್ ಬ್ಯಾಂಕ್‌ನಿಂದ ಪವರ್‌ಸಪ್ಲೇಯನ್ನು ಸಹ ಪಡೆಯಬಹುದಾಗಿದೆ.

ಮಿಜಿಯಾ ಡಿಸ್‌ಪ್ಲೇ

ಸದ್ಯ ಇದೀಗ ಬಿಡುಗಡೆ ಆಗಿರುವ ಮಿಜಿಯಾ ಡಿಸ್‌ಪ್ಲೇ ಹ್ಯಾಂಗಿಂಗ್ ಲ್ಯಾಂಪ್ ಬೆಲೆ RMB 199 (ಅಂದಾಜು 2,100 ರೂ.) ಆಗಿದೆ. ಆದರೆ, ಬ್ರಾಂಡ್ ಪ್ರಸ್ತುತ ಶಿಯೋಮಿ ಮಿಜಿಯಾ ಡಿಸ್‌ಪ್ಲೇ ಹ್ಯಾಂಗಿಂಗ್ ಲ್ಯಾಂಪ್ ಅನ್ನು RMB 169( ಸುಮಾರು 1,780 ರೂ.) ಬೆಲೆಯನ್ನ ಒಳಗೊಂಡಿದೆ.

Best Mobiles in India

English summary
Xiaomi company has launched a Xiaomi Mijia Display Hanging Lamp.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X