Home
ಸುದ್ದಿಜಾಲ

ಮಾರುಕಟ್ಟೆಗೆ ಶಿಯೋಮಿ ಸ್ಮಾರ್ಟ್ ವಾಚ್: ಬೆಲೆ ಕೇಳಿದ್ರೆ ಬುಕ್ ಮಾಡುವುದು ಖಂಡಿತ..!

By Srinidhi

ಚೀನಾ‌ ಮೂಲದ‌‌ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಶಿಯೋಮಿ ಮಾರುಕಟ್ಟೆಗೆ ಸಾಕಷ್ಟು ಹೊಸ ಮಾದರಿಯ ಸ್ಮಾರ್ಟ್ ಉತ್ಪನ್ನಗಳನ್ನು ಲಾಂಚ್‌‌ ಮಾಡುತ್ತಿದೆ. ಇದೇ‌ ಮಾದರಿಯಲ್ಲಿ ಹೊಸದಾಗಿ ಸ್ಮಾರ್ಟ್ ವಾಚ್ ಗಳನ್ನು ನಿರ್ಮಾಣ ಮಾಡಲು ಮುಂದಾಗಿದೆ. ಮಾರುಕಟ್ಟೆ ಯಲ್ಲಿ ಸ್ಮಾರ್ಟ್ ವಾಚ್ ಬೇಡಿಕೆಯೂ ಹೆಚ್ಚಾಗಿ ಇರುವುದು ಇದಕ್ಕೆ ಕಾರಣ ಎನ್ನ ಲಾಗಿದೆ.

ಮಾರುಕಟ್ಟೆಗೆ ಶಿಯೋಮಿ ಸ್ಮಾರ್ಟ್ ವಾಚ್: ಬೆಲೆ ಕೇಳಿದ್ರೆ ಬುಕ್ ಮಾಡುವುದು ಖಂಡಿತ..!

ಎಲೆಕ್ಟ್ರಾನಿಕ್ ಮಾರುಕಟ್ಟೆ ಯಲ್ಲಿ ಏಕಸ್ವಾಮ್ಯ ಸಾಧಿಸಲು ಯೋಜನೆಯನ್ನು ರೂಪಿಸಿರುವ ಶಿಯೋಮಿ ‌ಒಂದೊಂದೆ ಸ್ಮಾರ್ಟ್ ಉತ್ಪನ್ನ ಗಳನ್ನು ಮಾರುಕಟ್ಟೆ ಗೆ‌ ಪರಿಚಯ ಮಾಡುತ್ತಿದೆ. ಇದೇ ಮಾದರಿಯಲ್ಲಿ ಮೊದಲ ಬಾರಿಗೆ ‌ಸ್ಮಾರ್ಟ್ ವಾಚ್ ನಿರ್ಮಾಣಕ್ಕೆ ‌ಯೋಜನೆ‌ ರೂಪಿಸಿದೆ. ಅತೀ ಕಡಿಮೆ‌ ಬೆಲೆಗೆ ಮಿಜಾ ಕ್ವಾಜ್ಟ್ ಸ್ಮಾರ್ಟ್ ವಾಚ್ ಬಿಡುಗಡೆ ಮಾಡಲಿದ್ದು, ಈ ಮೂಲಕ ಹೆಚ್ವಿನ ಪ್ರಮಾಣದ ಬೇಡಿಕೆ‌ ನಿರ್ಮಿಸಿಕೊಳ್ಳಲು ಮುಂದಾಗಿದೆ.

ಸೆಮಿ ಸ್ಮಾರ್ ವಾಚ್

ಸೆಮಿ ಸ್ಮಾರ್ ವಾಚ್

ಇದು ಸದ್ಯ ಮಾರುಕಟ್ಟೆ ಯಲ್ಲಿ ಲಭ್ಯವಿರುವ ಸ್ಮಾರ್ಟ್ ವಾಚ್ ಗಳಿಗಿಂತ ಭಿನ್ನವಾಗಿ ಕಾರ್ಯನಿರ್ವಹಿಸಲಿದ್ದು, ಸೆಮಿ ‌ಸ್ಮಾರ್ಟ್ ವಾಚ್ ‌ಎನ್ನಲಾಗಿದೆ.‌‌ ನಿಮಗೆ ಕರೆ ನೋಟಿಫಿಕೇಷನ್, ಅಲಾರಂ ಸೇರಿದಂತೆ ಹಲವು ‌ಸೇವೆಗಳನ್ನು ನೀಡಲಿದೆ. ಸಾಮಾನ್ಯ ಸ್ಮಾರ್ಟ್ ವಾಚಿಗೆ‌ ಹೋಲಿಕೆ ಮಾಡಿಕೊಂಡಲ್ಲಿ ಕಡಿಮೆ‌ ಕಾರ್ಯಗಳನ್ನು ‌ಮಾಡಲಿದೆ.

ಬ್ಲೂಟೂತ್:

ಬ್ಲೂಟೂತ್:

ಮಿಜಾ ಕ್ವಾಜ್ಟ್ ಸ್ಮಾರ್ಟ್ ವಾಚ್ ಬ್ಲೂಟೂತ್ 4.0 ದಲ್ಲಿ ಕಾರ್ಯನಿರ್ವಹಿಸಲಿದೆ. ಇದರ ಮೂಲಕ ಬಿಮದಮ ಸ್ಮಾರ್ಟ್‌ಫೋನ್ ನೊಂದಿಗೆ ಸಂಪರ್ಕ ವನ್ನು ‌ಸಾಧಿಸಲಿದೆ. ಇದರ‌‌ ಮೂಲಕ ಹಲವು ನೋಟಿಫಿಕೇಷನ್, ಲೋಕೆಷನ್‌ ಸೇರಿದಂತೆ ಹಲವು ಮಾಹಿತಿಗಳನ್ನು ನೀಡಲಿದೆ‌ ಎನ್ನಲಾಗಿದೆ.

ವಾಟರ್‌ ಫ್ರೂಫ್:

ವಾಟರ್‌ ಫ್ರೂಫ್:

ಶಿಯೀಮಿ‌ ಬಿಡುಗಡೆ ಮಾಡಲು ಸಿದ್ದತೆ ನಡೆಸಿರುವ ಮಿಜಾ ಕ್ವಾಜ್ಟ್ ಸ್ಮಾರ್ಟ್ ವಾಚ್ ವಾಟರ್‌ ಫ್ರೂಪ್ ಆಗಿದೆ. ಅಲ್ಲದೆ‌ ಇದರಲ್ಲಿ ಉತ್ತಮ ಗುಣಮಟ್ಟದ ‌ಬ್ಯಾಟರಿ ಅಳವಡಿಸಿದ್ದು, ಇದನ್ನು ಪ್ರತಿ ದಿನ ಚಾರ್ಜ್ ಮಾಡುವ ಅವಶ್ಯಕತೆ ಇಲ್ಲ ಎನ್ನಲಾಗಿದೆ. ಇದು‌ ಒಂದು‌ ಮಾದರಿಯಲ್ಲಿ ‌ಬಳಕೆದಾರರಿಗೆ ಸಹಾಯವಾಗಲಿದೆ.

ಬೆಲೆ:

ಬೆಲೆ:

ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ಸ್ಮಾರ್ ವಾಚ್ ‌ಕಾಣಿಸಿಕೊಂಡಿದ್ದು,‌ ಇವುಗಳಿಗೆ ಸೆಡ್ಡು ಹೊಡೆಯುವ ಮಿಜಾ ಕ್ವಾಜ್ಟ್ ಸ್ಮಾರ್ಟ್ ವಾಚ್ ಕೇವಲ ರೂ.‌ 3500ಕ್ಕೆ‌ ಮಾರಾಟವಾಗಲಿದೆ‌‌ ಎನ್ನಲಾಗಿದೆ. ಈ‌ ಹಿನ್ನಲೆಯಲ್ಲಿ ಇದರ ಬೇಡಿಕೆ‌ ದೊಡ್ಡಮಟ್ಟದಲ್ಲಿ‌ ಇರಲಿದೆ.

ಲಾಂಚ್

ಲಾಂಚ್

ಮಿಜಾ ಕ್ವಾಜ್ಟ್ ಸ್ಮಾರ್ಟ್ ವಾಚ್ ಜುಲೈ 17ರಂದು ಚೀನಾದಲ್ಲಿ‌ ಲಾಂಚ್ ಆಗಲಿದೆ. ಇದಾದ ನಂತರದಲ್ಲಿ ಭಾರತೀಯ ಮಾರುಕಟ್ಟೆ ಯಲ್ಲಿಯೂ‌ ದೊರೆಯಲಿದೆ ‌ಎನ್ನುವ‌ ಮಾಹಿತಿಯೂ ಲಭ್ಯವಿದೆ.

Best Mobiles in India

English summary
Xiaomi Mijia Quartz Watch launched in China for around Rs 3,500. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+