Home
ಸುದ್ದಿಜಾಲ

ಶಿಯೋಮಿಯಿಂದ ಮಿಜಿಯಾ ಸ್ಕೂಟರ್‌1 S ಲಾಂಚ್‌!

ಇದು ಹೇಳಿಕೇಳಿ ಟೆಕ್ನಾಲಜಿ ಜಮಾನ. ಟೆಕ್ನಾಲಜಿ ಮುಂದುವರೆದಷ್ಟು ಹೊಸ ಮಾದರಿಯ ಪ್ರಾಡಕ್ಟ್‌ಗಳನ್ನ ಬಿಡುಗಡೆ ಆಗುತ್ತಲೇ ಇವೆ. ಈಗಾಗಲೇ ಟೆಕ್‌ ಮಾರುಕಟ್ಟೆಯಲ್ಲಿ ಟೆಕ್ನಾಲಜಿ ಆಧಾರಿತ ಹೊಸ ಮಾದರಿಯ ಡಿವೈಸ್‌ಗಳನ್ನ ನಾವಿಂದು ಕಾಣಬಹುದಾಗಿದೆ. ಕೇವಲ ಸ್ಮಾರ್ಟ್‌ಫೋನ್‌ ಕ್ಷೇತ್ರ ಮಾತ್ರವಲ್ಲ ಲ್ಯಾಪ್‌ಟಾಪ್‌, ಡೆಸ್ಕ್‌ಟಾಪ್‌, ಸ್ಕೂಟರ್‌,ವಾಹನ ಎಲ್ಲಾ ವಲಯದಲ್ಲೂ ಹೊಸ ಮಾದರಿಯ ಪ್ರಾಡಕ್ಟ್‌ಗಳನ್ನ ನೋಡಬಹುದಾಗಿದೆ. ಇನ್ನು ಹೊಸ ಮಾದರಿಯ ಡಿವೈಸ್‌ಗಳನ್ನ ಪರಿಚಯಿಸುವಲ್ಲಿ ಶಿಯೊಮಿ ಕಂಪೆನಿ ಕೂಡ ಸಕ್ರಿಯವಾಗಿದ್ದು,ಹಲವು ಹೊಸ ಸ್ಮಾರ್ಟ್‌ ಡಿವೈಸ್‌ಗಳನ್ನ ಪರಿಚಯಿಸಿದೆ.

ಗೊತ್ತಿರುವ

ಇನ್ನು ನಿಮಗೆಲ್ಲಾ ಗೊತ್ತಿರುವ ಹಾಗೇ ಎಲೆಕ್ಟ್ರೀಕ್‌ ವಾಹನಗಳಿಗೆ ಇತ್ತೀಚಿನ ದಿನಗಳಲ್ಲಿ ಭಾರಿ ಪ್ರಚಾರ ಸಿಗುತ್ತಿದೆ. ಅಷ್ಟೇ ಅಲ್ಲ ಜಾಗೃತಿ ಕೂಡ ಮೂಡಿಸಲಾಗುತ್ತಿದೆ. ಈಗಾಗಲೇ ಹಲವು ರಾಷ್ಟ್ರಗಳಲ್ಲಿ ಹಲವು ಕಂಪೆನಿಗಳ ಎಲೆಕ್ಟ್ರಿಕ್‌ ಸ್ಕೂಟರ್‌ಗಳು ರಸ್ತೆಗಿಳಿದಿವೆ. ಜೊತೆಗೆ ಡಿಸೆಲ್‌ ಪೆಟ್ರೋಲ್‌ ವಾಹನಗಳಿಗಿಂತ ಉತ್ತಮವಾದ ಅನುಭವವನ್ನ ಈ ವಾಹನಗಳ ಮೂಲಕ ಬಳಕೆದಾರರು ಪಡೆದುಕೊಳ್ತಿದ್ದಾರೆ. ಈಗಾಗಲೇ ಹಲವು ಎಲೆಕ್ಟ್ರಿಕ್‌ ಸ್ಕೂಟರ್‌ಗಳು ಮಾರುಕಟ್ಟೆಯಲ್ಲಿದ್ದರು ಸಹ ಇದೀಗ ಶಿಯೋಮಿ ಕಂಪೆನಿಯಿಂದ ಹೊಸ ಸ್ಕೂಟರ್‌ ಬಿಡುಗಡೆ ಆಗಿದೆ.

ಶಿಯೋಮಿ

ಸದ್ಯ ಶಿಯೋಮಿ ಬಿಡುಗಡೆ ಮಾಡಿರುವ ಹೊಸ ಮಾದರಿಯ ಮಿಜಿಯಾ ಎಲೆಕ್ಟ್ರೀಕ್‌ 1s ಸ್ಕೂಟರ್‌ ಪರಿಸರ ಸ್ನೇಹಿಯಾಗಿರುವ ಸ್ಕೂಟರ್‌ ಆಗಿದೆ. ಇನ್ನು ಎಲೆಕ್ಟ್ರಿಕ್ ಸ್ಕೂಟರ್‌ಗಳು ಸಮಾನ್ಯವಾಗಿ ಸಾಮಾನ್ಯ ಪೆಟ್ರೋಲ್ ಚಾಲಿತ ಸ್ಕೂಟರ್‌ಗಳಷ್ಟು ದೊಡ್ಡದಲ್ಲ ಆದರೆ ಶಿಯೋಮಿ ಮಿಜಿಯಾ 1s ಸ್ಕೂಟರ್‌ ಉತ್ತಮ ವಿನ್ಯಾಸವನ್ನ ಒಳಗೊಂಡಿದೆ. ಈಗಾಗಲೇ ದ ಭಾರತದಲ್ಲಿ, ಈ ರೀತಿಯ ವಾಹನವು ಹೆಚ್ಚು ಜನಪ್ರಿಯತೆ ಪಡೆದುಕೊಂಡಿಲ್ಲವಾದರೂ ಪ್ರಪಂಚದ ಉಳಿದ ಭಾಗಗಳಲ್ಲಿ ಬಹಳ ಜನಪ್ರಿಯವಾಗಿದೆ. ಈಗೀಗ ಭಾರತದಲ್ಲೂ ಈ ಮಾದರಿಯ ಸ್ಕೂಟರ್‌ಗಳು ರಸ್ತೆಯಲ್ಲಿ ಕಾಣಸಿಗುತ್ತಿವೆ.

ಶಿಯೋಮಿ

ಇನ್ನು ಶಿಯೋಮಿ ಬಿಡುಗಡೆ ಮಾಡಿರುವ ಮಿಜಿಯಾ ಸ್ಕೂಟರ್ 1 ಎಸ್ ಕಂಪ್ಲೀಟ್‌ ಚಾರ್ಜ್‌ನಲ್ಲಿ 30 ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ. ಅಲ್ಲದೆ ಡಿಸಿ ಮೋಟರ್ ಅನ್ನು 3,000 ಗಂಟೆಗಳವರೆಗೆ ಬಳಸಲಾಗುವುದು ಎಂದು ಕಂಪೆನಿ ಹೇಳಿಕೊಂಡಿದೆ. ಇದಲ್ಲದೆ ಈ ಸ್ಕೂಟರ್ ಗಂಟೆಗೆ 25 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ ABS(ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ನೊಂದಿಗೆ ಡಿಸ್ಕ್ ಬ್ರೇಕ್ ಹೊಂದಿದೆ. ಸ್ಕೂಟರ್ ಕೇವಲ 12.5 ಕಿ.ಗ್ರಾಂ ತೂಗುತ್ತದೆ, ಮತ್ತು ಕಾರ್ಯಾಚರಣೆಯ ಸಮಯದಲ್ಲಿ ಅದರ ಫುಟ್‌ಬೋರ್ಡ್‌ನಲ್ಲಿ 100 ಕಿ.ಗ್ರಾಂ ಲೋಡ್ ತೆಗೆದುಕೊಳ್ಳಬಹುದಾಗಿದೆ.

ಸ್ಕೂಟರ್

ಅಲ್ಲದೆ ಈ ಸ್ಕೂಟರ್ ಹೆಚ್ಚುವರಿಯಾಗಿ ಇಂಧನ ಉಳಿತಾಯ, ಸಾಮಾನ್ಯ ಮತ್ತು ಕ್ರೀಡಾ ಮೋಡ್ ಸೇರಿದಂತೆ ವಿವಿಧ ಕಾರ್ಯಾಚರಣೆ ವಿಧಾನಗಳನ್ನು ಒಳಗೊಂಡಿದೆ. ಡ್ಯಾಶ್‌ಬೋರ್ಡ್‌ನಂತೆ ಕಾರ್ಯನಿರ್ವಹಿಸುವ ಮೇಲ್ಭಾಗದಲ್ಲಿ ಡಿಸ್‌ಪ್ಲೇ ಕೂಡ ಇದ್ದು, ಇದು ವೇಗ, ಬ್ಯಾಟರಿ ಮತ್ತು ಸ್ಕೂಟರ್‌ನಲ್ಲಿನ ಯಾವುದೇ ಸಮಸ್ಯೆಗಳನ್ನು ಒಳಗೊಂಡಂತೆ ಸ್ಕೂಟರ್ ಬಗ್ಗೆ ವೈವಿಧ್ಯಮಯ ಮಾಹಿತಿಯನ್ನು ನೀಡುತ್ತದೆ. ಇನ್ನು ಈ ಸ್ಕೂಟರ್‌ ಸಣ್ಣ ಗಾತ್ರ ಮತ್ತು ಮಡಿಸುವ ಕಾರ್ಯವಿಧಾನವನ್ನ ಹೊಂದಿರುವುದರಿಂದ ನೆರೆಹೊರೆಯಲ್ಲಿ ಕಡಿಮೆ-ಶ್ರೇಣಿಯ ಪ್ರಯಾಣಕ್ಕೆ ಸೂಕ್ತವಾಗಿದೆ. ಸದ್ಯ ಈ ಸ್ಕೂಟರ್‌ ಚೀನಾದಲ್ಲಿ ಬಿಡುಗಡೆ ಆಗಿದ್ದು, ಇದರ ಬೆಲೆ CNY 1,999 (ಸುಮಾರು ರೂ. 21,700)ಆಗಿದೆ.

Best Mobiles in India

English summary
Mijia Scooter 1S weighs 12.5kg, and can take a load of up to 100kg.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+