Home
ಸುದ್ದಿಜಾಲ

ವಾಹನ ಮಾಲೀಕರೇ ಶಿಯೋಮಿಯ ಈ ಡಿವೈಸ್‌ ನಿಮಗೆ ಉಪಯುಕ್ತ ಎನಿಸಲಿದೆ!

ಶಿಯೋಮಿ ಕಂಪೆನಿ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಹಲವು ಹೋಮ್‌ ಡಿವೈಸ್‌ಗಳನ್ನು ಕೂಡ ಪರಿಚಯಿಸುತ್ತಾ ಬಂದಿದೆ. ಅದರಲ್ಲೂ ಕೆಲವು ಡಿವೈಸ್‌ಗಳು ಅಚ್ಚರಿಯನ್ನುಂಟು ಮಾಡುವ ವಿನ್ಯಾಸವನ್ನು ಪಡೆದುಕೊಂಡಿದೆ. ಇದೀಗ ಶಿಯೋಮಿ ಕಂಪೆನಿ ಪರಿಚಯಿಸಿರುವ ಹೊಸ ಡಿವೈಸ್‌ ಒಂದು ಟೆಕ್‌ ವಲಯದಲ್ಲಿ ಅಚ್ಚರಿ ಹಾಗೂ ಹೊಸ ತಲ್ಲಣವನ್ನು ಕ್ರಿಯೆಟ್‌ ಮಾಡಿದೆ.

ಹೌದು, ಶಿಯೋಮಿ ಹೊಸ MIJIA ಟೈರ್ ಇನ್‌ಫ್ಲೇಟರ್ 2 ಅನ್ನು ಪರಿಚಯಿಸಿದೆ. ಇದನ್ನು ಪೋರ್ಟಬಲ್ ಟೈರ್ ಇನ್‌ಫ್ಲೇಟರ್ ಎಂದು ಹೆಸರಿಸಲಾಗಿದೆ. ಈ ಡಿವೈಸ್‌ ಮೂಲಕ ನಿಮ್ಮ ವಾಹನದ ಟೈರ್‌ಗಳಿಗೆ ಗಾಳಿ ತುಂಬಿಸುವುದಕ್ಕೆ ಬಳಸಬಹುದಾಗಿದೆ. ಕೇವಲ ಅಂಗೈ ಅಗಲ ಗಾತ್ರದ ಈ ಡಿವೈಸ್‌ ಹೇಗೆ ಕಾರ್ಯನಿರ್ವಹಿಸಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಹನ ಮಾಲೀಕರೇ ಶಿಯೋಮಿಯ ಈ ಡಿವೈಸ್‌ ನಿಮಗೆ ಉಪಯುಕ್ತ ಎನಿಸಲಿದೆ!

ನೋಡುವುದಕ್ಕೆ ಪವರ್‌ ಬ್ಯಾಂಕ್‌ನಂತೆ ಕಾಣುವ MIJIA ಟೈರ್ ಇನ್‌ಫ್ಲೇಟರ್ 2 ವಾಹನಗಳ ಟೈರ್‌ಗೆ ಗಾಳಿ ತುಂಬಿಸುವ ಡಿವೈಸ್‌ ಆಗಿದೆ. ಇದಕ್ಕಾಗಿ ಈ ಡಿವೈಸ್‌ನಲ್ಲಿ 19mm ಹೈ-ಪ್ರಿಸಿಶನ್ ಮಿಶ್ರಲೋಹ ಡೈ-ಕಾಸ್ಟಿಂಗ್ ಸಿಲಿಂಡರ್ ಅನ್ನು ಹೊಂದಿದೆ. ಇದರಿಂದ ನೀವು 150psi ವರೆಗಿನ ಇನ್‌ಫ್ಲೇಟರ್‌ ಪ್ರೆಸರ್‌ ಅನ್ನು ಒದಗಿಸಲಿದೆ. ಇನ್ನು ಈ ಸಿಲಿಂಡರ್ ಅನ್ನು ಬಾಳಿಕೆ ಬರುವ ಮತ್ತು ಪರಿಣಾಮಕಾರಿಯಾಗಿ ವಿನ್ಯಾಸಗೊಳಿಸಲಾಗಿದ್ದು, ವಾಹನದ ಟೈರ್‌ಗಳಿಗೆ ವೇಗವಾಗಿ ಗಾಳಿ ತುಂಬುವ ಕೆಲಸವನ್ನು ಮಾಡಲಿದೆ.

ಇದಲ್ಲದೆ MIJIA ನಿಂದ ಟೈರ್ ಇನ್ಫ್ಲೇಟರ್ ಡಿಜಿಟಲ್ ಟೈರ್ ಪ್ರೆಸರ್‌ ಡಿಟೆಕ್ಟ್‌ ಅನ್ನು ಕೂಡ ಹೊಂದಿದೆ. ಇದರಿಂದ ನಿಮ್ಮ ಟೈರ್‌ನಲ್ಲಿ ಯಾವ ಪ್ರಮಾಣದಲ್ಲಿ ಗಾಳಿಯಿದೆ ಅನ್ನೊದನ್ನ ಚೆಕ್‌ ಮಾಡಬಹುದಾಗಿದೆ. ಅಲ್ಲದೆ ಟೈರ್‌ ಪ್ರೆಸರ್‌ ಅನ್ನು ಡಿಟೆಕ್ಟ್‌ ಮಾಡುವಾಗ ಅಲ್ಲಿರುವ ಪ್ರೆಸರ್‌ ಅನ್ನು ಡಿಜಿಟಲ್‌ ಸ್ಕ್ರೀನ್‌ನಲ್ಲಿ ತೋರಿಸಲಿದೆ. ಇದಕ್ಕಾಗಿಯೇ ಡಿಜಿಟಲ್‌ ಡಿಸ್‌ಪ್ಲೇಯನ್ನು ಕೂಡ ನೀಡಲಾಗಿದೆ. ಆದರಿಂದ ಇದನ್ನು ನೀವು ಟೈರ್ ಇನ್ಫ್ಲೇಟರ್ ಆಗಿ ಮಾತ್ರವಲ್ಲದೆ ಟೈರ್ ಗೇಜ್ ಆಗಿಯೂ ಕೂಡ ಬಳಸಬಹುದಾಗಿದೆ.

ವಾಹನ ಮಾಲೀಕರೇ ಶಿಯೋಮಿಯ ಈ ಡಿವೈಸ್‌ ನಿಮಗೆ ಉಪಯುಕ್ತ ಎನಿಸಲಿದೆ!

ಇನ್ನು MIJIA ಟೈರ್ ಇನ್ಫ್ಲೇಟರ್ 2 ಇನ್‌ಬಿಲ್ಟ್‌ ಲೈಟ್‌ ಸಿಸ್ಟಂ ಅನ್ನು ಹೊಂದಿದೆ. ಇದರಿಂದ ಬೆಳಕು ಇಲ್ಲದ ಸಮಯದಲ್ಲಿಯೂ ಸಹ ಚಾಲಕರು ತಮ್ಮ ಟೈರ್‌ಗಳಿಗೆ ಗಾಳಿ ತುಂಬಿಸುವುದಕ್ಕೆ ಸಹಾಯವಾಗಲಿದೆ. ಅಂದರೆ ಟೈರ್‌ಗೆ ಗಾಳಿ ತುಂಬಿಸುವಾಗ ಇದರಲ್ಲಿ ಲೈಟಿಂಗ್‌ ವ್ಯವಸ್ಥೆ ಇರುವುದರಿಂದ ಕಷ್ಟಕರ ಪರಿಸ್ಥಿತಿಗಳಲ್ಲಿ ಚಾಲಕರಿಗೆ ಅನುಕೂಲವಾಗಲಿದೆ. ಈ ಡಿವೈಸ್‌ ಈ ಹಿಂದಿನ ಇನ್ಫ್ಲೇಟರ್ ಡಿವೈಸ್‌ಗಿಂತ ಸುಮಾರು 25% ವೇಗವಾಗಿ ಟೈರ್‌ಗಳನ್ನು ಉಬ್ಬಿಸಬಹುದು ಎಂದು ವರದಿಯಾಗಿದೆ.

ಇದು ಖಾಲಿ ಟೈರ್ ಕೇವಲ 8 ನಿಮಿಷಗಳಲ್ಲಿ ಗಾಳಿ ತುಂಬುವಂತೆ ಮಾಡಲಿದೆ. ಇದರಲ್ಲಿ ಹಾರ್ಡ್‌ವೇರ್ ಕಾನ್ಫಿಗರೇಶನ್, ಅಂತರ್ನಿರ್ಮಿತ 2000mAh ಬ್ಯಾಟರಿ ಮತ್ತು ಟೈಪ್-ಸಿ ಇಂಟರ್ಫೇಸ್ ಅನ್ನು ಅಳವಡಿಸಲಾಗಿದೆ. ಇದನ್ನು ಸಂಪೂರ್ಣವಾಗಿ ಚಾರ್ಜ್‌ ಮಾಡಿದಾಗ ನೀವು ನಿರಂತರವಾಗಿ 10 ಟೈರ್‌ಗಳಿಗೆ ಗಾಳಿ ತುಂಬಿಸಬಹುದಾಗಿದೆ. ಜೊತೆಗೆ ವಾಹನದ ದೈನಂದಿನ ನಿರ್ವಹಣೆ ಅಗತ್ಯಗಳನ್ನು ಪೂರೈಸಲು 2 ಖಾಲಿ ಟೈರ್‌ಗಳನ್ನು ನಿರಂತರವಾಗಿ ತುಂಬಿಸಬಹುದು ಎಂದು ಹೇಳಲಾಗಿದೆ. ಫ್ಲಾಟ್ ಟೈರ್‌ನಿಂದ ಹೆದ್ದಾರಿಯಲ್ಲಿ ಕಷ್ಟಪಡಲು ಬಯಸದ ವಾಹನ ಮಾಲೀಕರಿಗೆ ಇದು ಕೈಗೆಟುಕುವ ಆಯ್ಕೆಯಾಗಿದೆ.

ವಾಹನ ಮಾಲೀಕರೇ ಶಿಯೋಮಿಯ ಈ ಡಿವೈಸ್‌ ನಿಮಗೆ ಉಪಯುಕ್ತ ಎನಿಸಲಿದೆ!

ಶಿಯೋಮಿ MIJIA ಟೈರ್ ಇನ್‌ಫ್ಲೇಟರ್ 2 ಡಿವೈಸ್‌ ಸದ್ಯ ಚೀನಾದಲ್ಲಿ ಮಾತ್ರ ಬಿಡುಗಡೆಯಾಗಿದೆ. ಆದರಿಂದ ಈ ಡಿವೈಸ್‌ನ ಬೆಲೆ 199 ಯುವಾನ್ (ಅಂದಾಜು 2,375ರೂ) ಆಗಿದೆ. ಈ ಡಿವೈಸ್‌ ಭಾರತಕ್ಕೂ ಕೂಡ ಎಂಟ್ರಿ ನೀಡುತ್ತಾ ಅನ್ನೊದು ಇನ್ನು ಕೂಡ ಬಹಿರಂಗವಾಗಿಲ್ಲ. ಆದರೆ ಈ ಡಿವೈಸ್‌ ಸದ್ಯ ಸಿಕ್ಕಾಪಟ್ಟೆ ಸೌಂಡ್‌ ಮಾಡ್ತಾ ಇದೆ.

Best Mobiles in India

English summary
Xiaomi MIJIA Tire Inflator 2 with built-in lithium battery launched: Specs details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+