Home
ಸುದ್ದಿಜಾಲ

'ಶಿಯೋಮಿ ಮಿಕ್ಸ್ ಫ್ಲಿಪ್ 2': ಜೂನ್ ಅಂತ್ಯದ ವೇಳೆಗೆ ಬಿಡುಗಡೆ?!

ಶಿಯೋಮಿಯ ಮುಂಬರುವ ಕ್ಲಾಮ್‌ಶೆಲ್ ಫೋಲ್ಡಬಲ್ ಫೋನ್ 'ಶಿಯೋಮಿ ಮಿಕ್ಸ್ ಫ್ಲಿಪ್ 2' ಶೀಘ್ರದಲ್ಲೇ ಬಿಡುಗಡೆಯಾಗಬಹುದು ಎಂಬ ಸುದ್ದಿಗಳ ಬೆನ್ನಲ್ಲೆ, ಶಿಯೋಮಿಯ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿಯೊಬ್ಬರು ಮುಂಬರುವ ಈ ಕ್ಲಾಮ್‌ಶೆಲ್ ಫೋಲ್ಡಬಲ್ ಬಿಡುಗಡೆಯ ಬಗ್ಗೆ ಕೆಲವು ಸುಳಿವು ನೀಡಿದ್ದಾರೆ. ಶಿಯೋಮಿಯ ಮಾರ್ಕೆಟಿಂಗ್ ಜನರಲ್ ಮ್ಯಾನೇಜರ್ ಸಿಕಿ ವೀ ಅವರು ತಮ್ಮ ವೀಬೋ ಪೋಸ್ಟ್‌ನಲ್ಲಿ, ಕಂಪನಿಯ ಅಧ್ಯಕ್ಷ ಲು ವೀಬಿಂಗ್ ಅವರು ಇತ್ತೀಚೆಗೆ ಶಿಯೋಮಿ ಮಿಕ್ಸ್ ಫ್ಲಿಪ್ ಬಳಕೆದಾರರೊಂದಿಗೆ ಚರ್ಚೆ ನಡೆಸಿರುವುದಾಗಿ ತಿಳಿಸಿದ್ದಾರೆ.

ಕಂಪನಿಯ ಅಧ್ಯಕ್ಷ ಲು ವೀಬಿಂಗ್ ಅವರು ಇತ್ತೀಚೆಗೆ ಶಿಯೋಮಿ ಮಿಕ್ಸ್ ಫ್ಲಿಪ್ ಬಳಕೆದಾರರೊಂದಿಗೆ ಚರ್ಚೆ ನಡೆಸಿದ್ದು, ಯೋಮಿ ಮಿಕ್ಸ್ ಫ್ಲಿಪ್ ಫೋನ್‌ನ ಅನುಕೂಲಗಳು, ಅನಾನುಕೂಲಗಳು ಮತ್ತು ಸುಧಾರಿಸಬಹುದಾದ ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂದು ಸಿಕಿ ವೀ ಹೇಳಿದ್ದಾರೆ. ಇದು ಅಸ್ತಿತ್ವದಲ್ಲಿರುವ ಕ್ಲಾಮ್‌ಶೆಲ್ ಫೋಲ್ಡಬಲ್ ಅನ್ನು ಸುಧಾರಿಸಲು ಕಂಪನಿ ಪ್ರಯತ್ನಿಸುತ್ತಿದೆ ಎಂಬುದನ್ನು ಸೂಚಿಸುತ್ತದೆ, ಹಾಗಾಗಿ ಶಿಯೋಮಿ ಮಿಕ್ಸ್ ಫ್ಲಿಪ್ 2 ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಟಿಪ್‌ಸ್ಟರ್ ಸ್ಮಾರ್ಟ್ ಪಿಕಾಚು ಅವರ ಪ್ರಕಾರ, ಶಿಯೋಮಿ ಮಿಕ್ಸ್ ಫ್ಲಿಪ್ 2 ಫೋನ್ ಮುಂದಿನ ಜೂನ್ ಅಂತ್ಯದ ವೇಳೆಗೆ ಚೀನಾದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಮಡಚಬಹುದಾದ ಸ್ಮಾರ್ಟ್‌ಫೋನ್ ರೆಡ್‌ಮಿ ಕೆ 80 ಅಲ್ಟ್ರಾ ಮತ್ತು ಗೇಮಿಂಗ್-ಕೇಂದ್ರಿತ ರೆಡ್‌ಮಿ ಟ್ಯಾಬ್ಲೆಟ್ ಜೊತೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ. ಮಿಕ್ಸ್ ಫ್ಲಿಪ್ 2 ಪ್ರಸ್ತುತ ಮಾದರಿಗಿಂತ ಹೆಚ್ಚು ತೆಳ್ಳಗೆ ಮತ್ತು ಹಗುರವಾಗಿರುತ್ತದೆ ಎಂದು ಹೇಳಲಾಗಿದೆ. ಇದು ತೆರೆದಾಗ 7.8 ಎಂಎಂ ದಪ್ಪ ಮತ್ತು 192 ಗ್ರಾಂ ತೂಕವನ್ನು ಹೊಂದಿರಬಹುದು ಎನ್ನಲಾಗಿದೆ.

ಕಾರ್ಯಕ್ಷಮತೆ ವಿಭಾಗದಲ್ಲಿ, ಶಿಯೋಮಿ ಮಿಕ್ಸ್ ಫ್ಲಿಪ್ 2 ಸಾಧನವು ಸ್ನಾಪ್‌ಡ್ರಾಗನ್ 8 ಎಲೈಟ್ SoC ಪ್ರೊಸೆಸರ್ ಹೊಂದಿರಬಹುದು ಮತ್ತು ಡಿಸ್‌ಪ್ಲೇ ವಿಭಾಗದಲ್ಲಿ, ಇದು 120Hz ರಿಫ್ರೆಶ್ ದರದೊಂದಿಗೆ 6.85-ಇಂಚಿನ 1.5K LTPO OLED ಮುಖ್ಯ ಮಡಚಬಹುದಾದ ಡಿಸ್‌ಪ್ಲೇಯೊಂದಿಗೆ ಬರಲಿದೆ ಎಂದು ವದಂತಿಗಳಿವೆ. ಜೊತೆಗೆ ಈ ಹ್ಯಾಂಡ್‌ಸೆಟ್ ನೀರಿನ ಪ್ರತಿರೋಧಕ್ಕಾಗಿ IPX8 ರೇಟಿಂಗ್ ಹೊಂದಿರಬಹುದು ಮತ್ತು ಭದ್ರತೆಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಸಹ ಒಳಗೊಂಡಿರಬಹುದು ಎನ್ನಲಾಗಿದೆ.

'ಶಿಯೋಮಿ ಮಿಕ್ಸ್ ಫ್ಲಿಪ್ 2': ಜೂನ್ ಅಂತ್ಯದ ವೇಳೆಗೆ ಬಿಡುಗಡೆ?!

ಕ್ಯಾಮೆರಾ ವಿಭಾಗದಲ್ಲಿ, ಶಿಯೋಮಿ ಮಿಕ್ಸ್ ಫ್ಲಿಪ್ 2 ಫೋನ್ ಎರಡು 50-ಮೆಗಾಪಿಕ್ಸೆಲ್ ಹೊರಮುಖ ಕ್ಯಾಮೆರಾಗಳನ್ನು ಹೊಂದಿರಬಹುದು, ಇದರಲ್ಲಿ ಅಲ್ಟ್ರಾವೈಡ್ ಶೂಟರ್ ಕೂಡ ಸೇರಿರಬಹುದು. ಈ ಫೋನ್ 67W ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,100mAh ಬ್ಯಾಟರಿ ಹೊಂದಿರಬಹುದು. ಎನ್ನಲಾಗಿದೆ. ಹಿಂದಿನ ಸೋರಿಕೆಗಳು ಈ ಫೋನ್ 7.6 ಎಂಎಂ ಅಳತೆ ಮಾಡಬಹುದು ಮತ್ತು ಸುಮಾರು 190 ಗ್ರಾಂ ತೂಗಬಹುದು ಎಂದು ಸೂಚಿಸಿದ್ದನ್ನು ನಾವು ನೋಡಬಹುದು. ಆದರೆ, ಈ ಕುರಿತು ನಿಖರ ಮಾಹಿತಿ ಹೊರಬಿದ್ದಿಲ್ಲ.

ಗಮನಾರ್ಹವಾಗಿ, ಪ್ರಸ್ತುತ ಶಿಯೋಮಿ ಮಿಕ್ಸ್ ಫ್ಲಿಪ್ ಫೋನ್ ಸ್ನಾಪ್‌ಡ್ರಾಗನ್ 8 ಜೆನ್ 3 SoC, 4,780mAh ಬ್ಯಾಟರಿ, 6.86-ಇಂಚಿನ 1.5K ಒಳಗಿನ ಡಿಸ್‌ಪ್ಲೇ ಮತ್ತು 4.01-ಇಂಚಿನ 1.5K ಕವರ್ ಸ್ಕ್ರೀನ್ ವೈಶಿಷ್ಟ್ಯಗಳನ್ನು ಹೊಂದಿದೆ. ಆದರೆ, ಭಾರತದಲ್ಲಿ ಶಿಯೋಮಿಯ ಕ್ಲಾಮ್‌ಶೆಲ್ ಫೋಲ್ಡಬಲ್ ಫೋನ್‌ಗಳು ಯಾವಾಗ ಲಭ್ಯವಾಗಲಿವೆ ಎಂಬುದೆ ಎಲ್ಲರ ಪ್ರಶ್ನೆಯಾಗಿದೆ. ಭಾರತದ ಮಾರುಕಟ್ಟೆಗೆ ಶಿಯೋಮಿಯ ಕ್ಲಾಮ್‌ಶೆಲ್ ಫೋಲ್ಡಬಲ್ ಫೋನ್‌ಗಳು ಬರಬೇಕೆ ಎಂಬುದು ನಿಮ್ಮ ಅಭಿಪ್ರಾಯವೇ? ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Siqi Wei, Xiaomi's General Manager of Marketing, confirmed on Weibo that the brand's President, Lu Weibing, engaged in a conversation with a user of the Xiaomi Mix Flip.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+