Home
ಸುದ್ದಿಜಾಲ

Xiaomi; ಸ್ಯಾಟಲೈಟ್ ಕನೆಕ್ಟಿವಿಟಿ ಜೊತೆ ಬರಲಿದೆ Xiaomi MIX Fold 4 ಸ್ಮಾರ್ಟ್‌ಫೋನ್‌ ! ಫೀಚರ್ಸ್‌ ಲೀಕ್

ಜನಪ್ರಿಯ ಸ್ಮಾರ್ಟ್‌ಫೋನ್ ಕಂಪನಿಯಾಗಿರುವ ಶಿಯೋಮಿ (Xiaomi ) ತನ್ನದೇ ಆದ ವಿಭಿನ್ನ ಫೀಚರ್ಸ್‌ ಮೂಲಕ ಮೊಬೈಲ್ ಮಾರುಕಟ್ಟೆಯಲ್ಲಿ ವಿಶೇಷ ಬೇಡಿಕೆ ಹೊಂದಿದೆ. ಕಡಿಮೆ ಬೆಲೆ ಉತ್ತಮ ಗುಣಮಟ್ಟದ ಮೊಬೈಲ್‌ಗಳನ್ನು ನೀಡುವಲ್ಲಿಯೂ ಶಿಯೋಮಿ ಸಂಸ್ಥೆ ಯಶಸ್ವಿಯಾಗಿದೆ. ಮೊಬೈಲ್‌ ಮಾರುಕಟ್ಟೆಯಲ್ಲಿ ಉಳಿದ ಸಂಸ್ಥೆಯ ಮೊಬೈಲ್‌ಗಳಿಗೆ ಪೈಪೋಟಿ ನೀಡುವಲ್ಲಿಯೂ ಈ ಸಂಸ್ಥೆಯ ಮೊಬೈಲ್‌ಗಳು ಯಶಸ್ವಿಯಾಗಿರುವುದನ್ನು ನಾವು ಗಮನಿಸಬಹುದಾಗಿದೆ. ಇದೀಗ ಶಿಯೋಮಿ ಸಂಸ್ಥೆ ಭಾರತದಲ್ಲಿ ತನ್ನ ಮಡಚಬಹುದಾದ ಸ್ಮಾರ್ಟ್‌ಫೋನ್ ಒಂದನ್ನು ಲಾಂಚ್ ಮಾಡಲಿದೆ ಎಂಬುದರ ಕುರಿತು ವದಂತಿಗಳು ಕೆಲವು ಪ್ರಮಾಣಿಕೃತ ವೆಬ್‌ಸೈಟ್‌ಗಳಲ್ಲಿ ಹರಿದಾಡುತ್ತಿವೆ.

ಹೌದು ಶಿಯೋಮಿ ಸಂಸ್ಥೆ ಬಜೆಟ್ ಸ್ನೇಹಿ ಫೋಲ್ಡಬಲ್ ಸ್ಮಾರ್ಟ್‌ಫೋನ್ ಒಂದನ್ನು ಬಿಡುಗಡೆ ಮಾಡಲು ಸಿದ್ದವಾಗಿದೆ ಎಂದು ನಿರೀಕ್ಷಿಸಲಾಗಿದೆ. ಈ ಫೋಲ್ಡಬಲ್ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ 'ಮಿಕ್ಸ್ ಫೋಲ್ಡ್ 4' (Mix Fold 4) ಎಂದು ಹೆಸರಿಸಲಾಗುವುದು ಮತ್ತು ಇದು ಶೀಘ್ರದಲ್ಲೇ ಅಂದರೆ ಇದೇ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಸ್ಯಾಟಲೈಟ್ ಕನೆಕ್ಟಿವಿಟಿ ಜೊತೆ ಬರಲಿದೆ Xiaomi MIX Fold 4 ಸ್ಮಾರ್ಟ್‌ಫೋನ್‌ !

ಚೀನೀ ವೆಬ್‌ಸೈಟ್‌ ಮತ್ತು ಸಾಮಾಜಿಕ ಮಾಧ್ಯಮವಾಗಿರುವ ಎಕ್ಸ್‌ ( X) ನಲ್ಲಿ ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ, ಮುಂಬರುವ Xiaomi MIX Fold 4 ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಈ ಸಾಧನವನ್ನು ಭಾರತದಲ್ಲಿ ಬಿಡುಗಡೆ ಮಾಡುವುದಕ್ಕೆ ಮೊದಲು ಚೀನೀ ಸೇರಿದಂತೆ ಇತರೆ ದೇಶದ ಮೊಬೈಲ್‌ ಮಾರುಕಟ್ಟೆಯಲ್ಲಿ ಕಂಡು ಬರಲಿದೆ ಎಂದು ಹೇಳಲಾಗುತ್ತಿದೆ.

ಪ್ರಮಾಣೀಕರಣ ಸೈಟ್‌ನಲ್ಲಿ ಲಿಸ್ಟ್‌ ಮಾಡಲಾಗಿದೆ:
ಹೌದು ಮುಂಬರಲಿರುವ Xiaomi MIX Fold 4 ಸಂಬಂಧಿಸಿದಂತೆ ದೊಡ್ಡ ಅಪ್‌ಡೇಟ್ ಒಂದು ಕಾಣಿಸಿಕೊಂಡಿದ್ದು, ಲಭ್ಯವಿರುವ ವಿವರಗಳ ಪ್ರಕಾರ ಮುಂಬರುವ ಫೋಲ್ಡಬಲ್ ಸ್ಮಾರ್ಟ್‌ಫೋನ್ ಸಾಧನವನ್ನು 3C ಪ್ರಮಾಣೀಕರಣ ವೆಬ್‌ಸೈಟ್‌ನಲ್ಲಿ ಗುರುತಿಸಲಾಗಿದೆ.

ಸೋರಿಕೆಯಾದ ಮಾಹಿತಿಯಂತೆ ಶಿಯೋಮಿಯಿಂದ ಹೊಸ ಫೋಲ್ಡಬಲ್ ಸ್ಮಾರ್ಟ್‌ಫೋನ್ ಸ್ಯಾಟಲೈಟ್ ಸಂಪರ್ಕ ಹೊಂದಿರಲಿದೆ. ಹೊಸ ಸ್ಮಾರ್ಟ್‌ಫೋನ್ ಅನ್ನು 3C ಪ್ರಮಾಣೀಕರಣ ಸೈಟ್‌ನ ಮಾಡೆಲ್ ಸಂಖ್ಯೆ 24072PX77C ನೊಂದಿಗೆ ಗುರುತಿಸಲಾಗಿದೆ. ಸಾಧನವು ಸ್ಯಾಟಲೈಟ್ ಸಂಪರ್ಕ ಹೊಂದಿರಲಿದೆ ಮತ್ತು 67W ವೇಗದ ಚಾರ್ಜಿಂಗ್ ಸಾಮರ್ಥ್ಯದೊಂದಿಗೆ ಬರಲಿದೆ ಎಂದು 3C ಪ್ರಮಾಣೀಕರಣ ಸೈಟ್ ಬಹಿರಂಗಪಡಿಸಿದೆ. ಸ್ಮಾರ್ಟ್‌ಫೋನ್‌ ಲಾಂಚ್ ಕುರಿತಾದ ಹೆಚ್ಚಿನ ಮಾಹಿತಿಯನ್ನು Xiaomi ಇನ್ನೂ ಬಹಿರಂಗಪಡಿಸಿಲ್ಲ, ಆದರೆ 3C ಪಟ್ಟಿಯಲ್ಲಿ ಬಂದ ಬಳಿಕ ಇದು ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ ಎಂದು ನಂಬಲಾಗಿದೆ ಮುಖ್ಯವಾಗಿ ಚೀನಾದಿಂದ ಪ್ರಾರಂಭವಾಗುತ್ತದೆ ಎಂಬ ಅಂಶವನ್ನು ಗಮನಿಸಬಹುದಾಗಿದೆ.

Xiaomi MIX Fold 4 ಸಂಭಾವ್ಯ ಫೀಚರ್ಸ್‌:

* ಮುಂಬರುವ Xiaomi MIX Fold 4 ಮೊಬೈಲ್‌ AMOLED ಡಿಸ್‌ಪ್ಲೇ ಹೊಂದಿರಲಿದ್ದು, ಅದು 6.7 ಇಂಚುಗಳ ಮತ್ತು 144Hz ರಿಫ್ರೆಶ್ ರೇಟ್‌ಗಿಂತಲೂ ದೊಡ್ಡದಾಗಿರಲಿದೆ ಎನ್ನಲಾಗಿದೆ.

* ಸೋರಿಕೆಯಾದ ಮಾಹಿತಿ ಪ್ರಕಾರ ಮಡಚಬಹುದಾದ ಈ ಮೊಬೈಲ್ ಹಿಂದಿನ ಮೊಬೈಲ್‌ಗಳಿಗಿಂತಲೂ ತೆಳುವಾದ ವಿನ್ಯಾಸ ಹೊಂದಿರಲಿದೆ ಎಂದು ಹೇಳಲಾಗುತ್ತಿದೆ.
* ಸಾಧನವು Qualcomm Snapdragon 8 Gen 3 ಪ್ರೊಸೆಸರ್‌ನಿಂದ ಚಾಲಿತವಾಗಬಹುದು ಎಂದು ನಿರೀಕ್ಷಿಸಲಾಗಿದೆ.
*ಛಾಯಾಗ್ರಹಣಕ್ಕಾಗಿ ಇದು OIS ವೈಶಿಷ್ಟ್ಯದೊಂದಿಗೆ 50 MP ಪ್ರಾಥಮಿಕ ಶೂಟರ್‌ ಅನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ.
* ಈ ಫೋನ್ ಹಿಂಭಾಗದಲ್ಲಿ 12MP ಟೆಲಿಫೋಟೋ ಲೆನ್ಸ್ ಮತ್ತು 10MP 5X ಜೂಮ್ ಪೆರಿಸ್ಕೋಪ್ ಲೆನ್ಸ್ ಅನ್ನು ಸಹ ಹೊಂದಿರಲಿದೆ.
* ಸೆಲ್ಫಿಗಾಗಿ ಕನಿಷ್ಠ 16MP ಶೂಟರ್‌ನೊಂದಿಗೆ ಪ್ರಾರಂಭಿಸುವ ನಿರೀಕ್ಷೆಯನ್ನು ಸಂಸ್ಥೆ ಹೊಂದಿದೆ
* ಸೋರಿಕೆಯಾಗಿರುವ ಮಾಹಿತಿ ಪ್ರಕಾರ ಕಂಪನಿಯು ಐಪಿ ರೇಟಿಂಗ್‌ನೊಂದಿಗೆ ಸಾಧನವನ್ನು ಪ್ರಾರಂಭಿಸುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ
Best Mobiles in India

English summary
Xiaomi is all set to launch a budget-friendly foldable smartphone. It is known that this foldable smartphone will be named Xiaomi Mix Fold 4 in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+