ಶಿಯೋಮಿ 'ನಂ.1 ಮೈ ಫ್ಯಾನ್ ಸೇಲ್' ಆರಂಭ!..ಭಾರಿ ಡಿಸ್ಕೌಂಟ್ಸ್ ಜೊತೆ ಗೆಲ್ಲಿರಿ ಉಚಿತ ಮೊಬೈಲ್!!
ಸ್‌ಮಸ್ ಮತ್ತು ಹೊಸವರ್ಷದ ಸಂಭ್ರಮಾಚರಣೆಗಾಗಿ ಶಿಯೋಮಿ 'ನಂಬರ್ ಒನ್ ಮೈ ಫ್ಯಾನ್ ಸೇಲ್' ಎಂಬ ಎರಡು ದಿನಗಳ ಸೇಲ್ ನಡೆಸಲು ಮುಂದಾಗಿದೆ.!!
ಬಹುತೇಕ ಭಾರತೀಯರನ್ನು ಈಗಾಗಲೇ ತನ್ನ ಬುಟ್ಟಿಗೆ ಹಾಕಿಕೊಂಡಿರುವ ಶಿಯೋಮಿ ಕಂಪೆನಿ ತನ್ನ ವೆಬ್‌ಸೈಟ್‌ನಲ್ಲಿ ಮತ್ತೊಂದು ಬಂಪರ್ ಸೇಲ್ ಅನ್ನು ಆಯೋಜಿಸಿದೆ.! ಕ್ರಿಸ್‌ಮಸ್ ಮತ್ತು ಹೊಸವರ್ಷದ ಸಂಭ್ರಮಾಚರಣೆಗಾಗಿ ಶಿಯೋಮಿ 'ನಂಬರ್ ಒನ್ ಮೈ ಫ್ಯಾನ್ ಸೇಲ್' ಎಂಬ ಎರಡು ದಿನಗಳ ಸೇಲ್ ನಡೆಸಲು ಮುಂದಾಗಿದೆ.!!
ಈ ಸೇಲ್‌ನಲ್ಲಿ ಶಿಯೋಮಿ ತನ್ನ ಎಲ್ಲಾ ಮೊಬೈಲ್ ಮತ್ತು ಗ್ಯಾಜೆಟ್‌ಗಳ ಮೇಲೆ ಡಿಸ್ಕೌಂಟ್ಸ್ ಪ್ರಕಟಿಸಿದ್ದು. ನಂಬರ್ ಒನ್ ಮೈ ಫ್ಯಾನ್ ಸೇಲ್‌ನಲ್ಲಿ ಒಂದು ರೂಪಾಯಿಗೆ ರೆಡ್ ಮಿ ಸ್ಮಾರ್ಟ್‌ಫೋನ್‌ಗಳನ್ನು ಗೆಲ್ಲುವ ಅವಕಾಶ ನೀಡಿದೆ.! ಮೇಡ್ ಇನ್ ಇಂಡಿಯಾ ಪವರ್‌ಬ್ಯಾಂಕ್‌ಗಳನ್ನು ಅತ್ಯಂತ ಕಡಿಮೆ ಬೆಲೆಗೆ ನೀಡುತ್ತಿದೆ.!!'

ಇನ್ನು 'ಸ್ನೀಕಿ ಸಂತಾ' ಆಟವಾಡುವ ಮೂಲಕ ನೂತನವಾಗಿ ರಿಲೀಸ್ ಆದ ರೆಡ್‌ಮಿ 5A ಸ್ಮಾರ್ಟ್‌ಫೋನ್ ಸಹ ಗೆಲ್ಲಬಹುದಾಗಿದ್ದು, ಹಾಗಾದರೆ, ಶಿಯೋಮಿಯ 'ನಂಬರ್ ಒನ್ ಮೈ ಫ್ಯಾನ್ ಸೇಲ್ ಆಯೋಜನೆಯಾಗಿರುವುದು ಯಾವಾಗ? ಯಾವ ಯಾವ ಶಿಯೋಮಿ ಪ್ರಾಡೆಕ್ಟ್‌ಗಳ ಮೇಲೆ ಏನೆಲ್ಲಾ ಡಿಸ್ಕೌಂಟ್ಸ್ ಇದೆ ಎಂಬುದನ್ನು ಮುಂದೆ ತಿಳಿಯಿರಿ.!

ನಂಬರ್ ಒನ್ ಮೈ ಫ್ಯಾನ್ ಸೇಲ್ ಆಯೋಜನೆ!!
ಶಿಯೋಮಿ ಇಂಡಿಯಾ ಇದೇ ಇದೇ ತಿಂಗಳ 20 ಮತ್ತು 21 ನೇ ತಾರೀಖು ಅಂದರೆ ನಾಳೆ ಮತ್ತು ನಾಡಿದ್ದು ನಂಬರ್ ಒನ್ ಮೈ ಫ್ಯಾನ್ ಸೇಲ್ ಅನ್ನು ಆಯೋಜನೆ ಮಾಡಿದೆ. ಈ ಸೇಲ್‌ನಲ್ಲಿ ಶಿಯೋಮಿ ತನ್ನೆಲ್ಲಾ ಸ್ಮಾರ್ಟ್‌ಫೋನ್ ಮತ್ತು ಗ್ಯಾಜೆಟ್‌ಗಳ ಮೇಲೆ ಡಿಸ್ಕಂಟ್ಸ್ ನೀಡಿಗಮನ ಸೆಳೆದಿದೆ.!!


ಒಂದು ರೂ,ಗೆ ಶಿಯೋಮಿ ಫೋನ್!!
ಶಿಯೋಮಿ ಪ್ರತಿ ಸೇಲ್‌ನಲ್ಲಿಯೂ ಆಯೋಜಿಸುವಂತೆ ನಂಬರ್ ಒನ್ ಮೈ ಫ್ಯಾನ್ ಸೇಲ್‌ನಲ್ಲಿ ಕೂಡ ಒಂದು ರೂಪಾಯಿಗೆ ರೆಡ್ ಮಿ ವೈ1 ಲೈಟ್ ಸ್ಮಾರ್ಟ್‌ಫೋನ್ ಮತ್ತು ವೈಫೈ ರೂಟರ್ ಹಾಗೂ ಮೈ ಬ್ಯಾಂಡ್ ಗೆಲ್ಲುವ ಅವಕಾಶ ನೀಡಿದೆ. ಒನ್ ಮೈ ಫ್ಯಾನ್ ಸೇಲ್ ಆಫರ್ ಇರುವ ಎರಡು ದಿವಸವು ಮಧ್ಯಾಹ್ನ 2 ಗಂಟೆಗೆ ಒಂದು ರೂಪಾಯಿಗೆ ಫೋನ್ ಗೆಲ್ಲಬಹುದು.!!

ಶಿಯೋಮಿ ಮೈ ಎ1 ಫೋನ್ ಕೇವಲ 12,999 ರೂ.ಗೆ!!
ಶಿಯೋಮಿಯ ಮೊದಲ ಆಂಡ್ರಾಯ್ಡ್ ಒನ್ ಸ್ಮಾರ್ಟ್‌ಫೋನ್ ಶಿಯೋಮಿ ಮೈ ಎ1 ಫೋನ್ ಅನ್ನು ಕೇವಲ 12,999 ರೂ.ಗಳಿಗೆ ಮಾರಾಟಕ್ಕಿಡಲಾಗಿದೆ. ಪ್ರಸ್ತುತ 14,999 ರೂ ಬೆಲೆ ಹೊಂದಿರುವ ಈ ಫೋನ್ ನಂಬರ್ ಒನ್ ಮೈ ಫ್ಯಾನ್ ಸೇಲ್‌ಗಾಗಿ 2000 ರೂ. ಬೆಲೆಯನ್ನು ಕಳೆದುಕೊಂಡಿದೆ.!!

ಪವರ್‌ಬ್ಯಾಂಕ್ ಖರೀದಿಸಲು ಬೆಸ್ಟ್ ಟೈಮ್!!
ಶೀಯೋಮಿ ಮೇಡ್ ಇನ್ ಇಂಡಿಯಾ ಪವರ್‌ಬ್ಯಾಂಕ್‌ಗಳನ್ನು ಹೆಚ್ಚು ಡಿಸ್ಕೌಂಟ್ಸ್‌ನಲ್ಲಿ ನೀಡಲು ಮುಂದಾಗಿದೆ. ಶಿಯೋಮಿಯ 20,000mAh ಶಕ್ತಿಯ ಪವರ್‌ಬ್ಯಾಂಕ್ ಕೇವಲ 1,499 ರೂಪಾಯಿಗಳಿಗೆ ಲಭ್ಯವಿದ್ದರೆ 10,000mAh ಶಕ್ತಿಯ ಪವರ್‌ಬ್ಯಾಂಕ್ ಕೇವಲ 799 ರೂಪಾಯಿಗಳಿಗೆ ಲಭ್ಯವಿದೆ.!!

899 ರೂ,ಗೆ ಬ್ಲೂಟೂತ್ ಸ್ಪೀಕರ್!!
ಸಿನಿಮಾ ನೋಡಲು ಮತ್ತು ಹಾಡುಕೇಳಲು ಒಂದು ಉತ್ತಮ ಬ್ಲೂಟೂತ್ ಸ್ಪೀಕರ್ ಖರೀದಿಸುವ ಯೋಚನೆ ನಿಮ್ಮಲ್ಲಿದ್ದರೆ ಶಿಯೋಮಿಯ ಈ ಸೇಲ್ ನಿಮಗೆ ಸಹಾಯವಾಗಬಹುದು. ಮೈ ಬ್ಲೂಟೂತ್ ಸ್ಪೀಕರ್ ಮಿನಿ ಕೆವಲ 899 ರೂ.ಗೆ ಲಭ್ಯವಿದ್ದರೆ, ಮೈ ಬ್ಲೂಟೂತ್ ಸ್ಪೀಕರ್ ಬೇಸಿಕ್ 2 ಬೆಲೆ ಕೇವಲ 1,799 ರೂಪಾಯಿಗಳಾಗಿವೆ.!!

ಗೆಳೆಯರನ್ನು ಆಹ್ವಾನಿಸಿ ಗೆಲ್ಲಿ!!
ಶೀಯೋಮಿ ಈ ಭಾರಿ ಹೊಸದೊಂದು ಆಪರ್ ಅನ್ನು ನೀಡಿದ್ದು, ನಂಬರ್ ಒನ್ ಮೈ ಫ್ಯಾನ್ ಸೇಲ್‌ಗೆ ಗೆಳೆಯರನ್ನು ಆಹ್ವಾನಿಸಿ ಶಿಯೋಮಿಯ ಉತ್ಪನ್ನವನ್ನು ಗೆಲ್ಲಬಹುದು ಎಂದು ತಿಳಿಸಿದೆ. ರೆಫರ್ ಮಾಡಿದ ಗೆಳೆಯರ ಪ್ರತಿ ಖರೀದಿಗೆ ಟೋಕನ್‌ಗಳು ಒಂದು ನಿಮಗೆ ದೊರೆಯಲಿದೆ ಎಂದು ಶಿಯೋಮಿ ಹೇಳಿದೆ.!!


Click it and Unblock the Notifications








