ಭಾರತದ ಇತಿಹಾಸದಲ್ಲೇ ಕಂಡುಕೇಳರಿಯದ ದಾಖಲೆ ಸೃಷ್ಟಿಸಿತು 'ರೆಡ್‌ಮಿ ನೋಟ್ 6 ಪ್ರೊ'!!

|

ಭಾರತದ ಮೊಬೈಲ್ ಮಾರುಕಟ್ಟೆಯನ್ನೇ ನಡುಗಿಸುತ್ತಿರುವ ಚೀನಾದ ಮೊಬೈಲ್ ಕಂಪೆನಿ ಶಿಯೋಮಿ ಮತ್ತೊಂದು ದಾಖಲೆಯನ್ನು ನಿರ್ಮಿಸಿದೆ. ಮೊನ್ನೆಯಷ್ಟೇ ಬಿಡುಗಡೆಯಾದ ಶಿಯೋಮಿಯ ಬಹುನಿರೀಕ್ಷಿತ 'ರೆಡ್‌ಮಿ ನೋಟ್ 6 ಪ್ರೊ' ಸ್ಮಾರ್ಟ್‌ಫೋನ್‌ ಕೇವಲ ಒಂದೇ ದಿನದಲ್ಲಿ ದಾಖಲೆಯ ಮಾರಾಟ ಕಂಡಿದೆ. ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಮಿಂಚಿನ ಸಂಚಾರ ನಡೆಸಿದ 'ರೆಡ್‌ಮಿ ನೋಟ್ 6' ಸ್ಮಾರ್ಟ್‌ಪೋನ್ ದೇಶದ ಮೊಬೈಲ್ ಇತಿಹಾಸದಲ್ಲಿ ಮೈಲಿಗಲ್ಲನ್ನು ಸೃಷ್ಟಿಸಿದೆ.

ಹೌದು, ಬಿಡುಗಡೆಯಾದ ಕೇವಲ ಒಂದೇ ದಿನದಲ್ಲೇ ಭಾರತೀಯರ ಗಮನಸೆಳೆದಿರುವ 'ರೆಡ್‌ಮಿ ನೋಟ್ 6 ಪ್ರೊ' ಸ್ಮಾರ್ಟ್‌ಫೋನ್‌ ತನ್ನ ಮೊದಲ ಫ್ಲಾಶ್‌ಸೇಲ್‌ನಲ್ಲಿಯೇ 6,00,000 ಮಾರಾಟ ಕಂಡಿದೆ ಎಂದು ಶಿಯೋಮಿ ತಿಳಿಸಿದೆ. ಫ್ಲಿಪ್‌ಕಾರ್ಟ್ ಮತ್ತು ಶಿಯೋಮಿಯ ವೆಬ್‌ಸೈಟ್‌ಗಳಲ್ಲಿ ಮಾರಾಟಕ್ಕಿದ್ದ 'ರೆಡ್‌ಮಿ ನೋಟ್ 6ಪ್ರೊ' ಫೋನಿನ ಫ್ಲಾಶ್‌ಸೇಲ್ ಶುರುವಾದ ಕೆಲವೇ ನಿಮಿಷಗಳಲ್ಲಿ 6,00,000 ಲಕ್ಷ ಮಾರಾಟ ಕಂಡಿದೆ. ಇನ್ನು ಒಂದೇ ದಿನದಲ್ಲಿ 10 ಲಕ್ಷಕ್ಕೂ ಹೆಚ್ಚು ಫೋನ್‌ಗಳು ಮಾರಾಟವಾಗಿ ಇತಿಹಾಸದ ದಾಖಲೆ ನಿರ್ಮಿಸಿದೆ.

ಭಾರತದ ಇತಿಹಾಸದಲ್ಲೇ ಕಂಡುಕೇಳರಿಯದ ದಾಖಲೆ ಸೃಷ್ಟಿಸಿತು 'ರೆಡ್‌ಮಿ ನೋಟ್ 6 ಪ್ರೊ'!!

ಶಿಯೋಮಿ ಈಗ 'ರೆಡ್‌ಮಿ ನೋಟ್6 ಪ್ರೊ' ಸ್ಮಾರ್ಟ್‌ಫೋನಿನ ಮೂಲಕ ತನ್ನದೇ ದಾಖಲೆಯನ್ನು ಮುರಿದಿದೆ. ಕೇವಲ ನೆನ್ನೆ ಒಂದು ದಿನ ಮಾತ್ರ 12,999 ರೂಪಾಯಿಗಳಿಗೆ ಲಭ್ಯವಿದ್ದ 'ರೆಡ್‌ಮಿ ನೋಟ್6 ಪ್ರೊ' ಸ್ಮಾರ್ಟ್‌ಫೋನ್ ಖರೀದಿಗೆ ಭಾರತೀಯರು ಮುಗಿಬಿದ್ದಿದ್ದಾರೆ. ಹಾಗಾದರೆ, ಕೇವಲ ಒಂದೇ ದಿನದಲ್ಲಿ ಭಾರತದಲ್ಲಿ ಇತಿಹಾಸದ ದಾಖಲೆಯನ್ನು ಸೃಷ್ಟಿಸಿರುವ 'ರೆಡ್‌ಮಿ ನೋಟ್ 6 ಪ್ರೊ' ಸ್ಮಾರ್ಟ್‌ಫೋನ್ ಹೇಗಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಸ್ಮಾರ್ಟ್‌ಪೋನ್ ವಿನ್ಯಾಸ ಹೇಗಿದೆ?

ಸ್ಮಾರ್ಟ್‌ಪೋನ್ ವಿನ್ಯಾಸ ಹೇಗಿದೆ?

ಆಪಲ್ ಐಫೋನ್ ಎಕ್ಸ್ ಮಾದರಿಯ ಡಿಸ್‌ಪ್ಲೇ ನೋಚ್, ನಾಲ್ಕು ಕ್ಯಾಮೆರಾಗಳು ಹಾಗೂ ಹಿಂಬಾಗದಲ್ಲಿ ಫಿಂಗರ್‌ಪ್ರಿಂಟ್ ಆಯ್ಕೆಯನ್ನು ಹೊಂದಿರುವ 'ರೆಡ್‌ಮಿ ನೋಟ್ 6 ಪ್ರೊ' ಸ್ಮಾರ್ಟ್‌ಪೋನ್ ವಿನ್ಯಾಸ ಹೈ ಎಂಡ್ ಸ್ಮಾರ್ಟ್‌ಪೋನ್‌ಗಳಿಗೆ ಸೆಡ್ಡು ಹೊಡೆಯುತ್ತಿದೆ. ಈ ಸ್ಮಾರ್ಟ್‌ಫೋನಿನ ನಾಲ್ಕು ಬದಿಗಳಲ್ಲಿ ರೌಂಡೆಡ್ ಕಾರ್ನರ್ ಎಡ್ಜ್ ವಿನ್ಯಾಸವಿರುವುದು ಸ್ಮಾರ್ಟ್‌ಫೋನಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.

ಸ್ಮಾರ್ಟ್‌ಪೋನ್ ಡಿಸ್‌ಪ್ಲೇ!

ಸ್ಮಾರ್ಟ್‌ಪೋನ್ ಡಿಸ್‌ಪ್ಲೇ!

ಈಗಾಗಲೇ ತಿಳಿದಿರುವಂತೆ, ರೆಡ್‌ಮಿ ನೋಟ್ 6 ಪ್ರೊ ಸ್ಮಾರ್ಟ್‌ಪೋನ್ 6.26-ಇಂಚಿನ ಪೂರ್ಣ ಹೆಚ್‌ಡಿ+ ಐಪಿಎಸ್ ಎಲ್ಸಿಡಿ (1080*2280p) ಡಿಸ್‌ಪ್ಲೇಯನ್ನು ಹೊಂದಿದೆ. 1080*2280 ಪಿಕ್ಸೆಲ್ ಸಾಮರ್ಥ್ಯದ ಡಿಸ್‌ಪ್ಲೇ ಶೇ. 86 ಪ್ರತಿಶತ ಸ್ಕ್ರೀನ್-ಟು-ಬಾಡಿಯನ್ನು ಹೊಂದಿದ್ದು, 19:9 ಆಕಾರ ಅನುಪಾತದಲ್ಲಿರುವುದರಿಂದ ಮಲ್ಟಿಮೀಡಿಯಾ ಪ್ರಿಯರಿಗೆ ಡಿಸ್‌ಪ್ಲೇ ಹೇಳಿ ಮಾಡಿಸಿದಂತಿದೆ. ಇನ್ನು ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆಯನ್ನು ಹೊಂದಿರುವುದು ಡಿಸ್‌ಪ್ಲೇ ಸುರಕ್ಷತೆಗೆ ಖಾತ್ರಿಯಾಗಿದೆ.

ಕ್ವಾಡ್ ಕ್ಯಾಮೆರಾ ಸ್ಮಾರ್ಟ್‌ಫೋನ್

ಕ್ವಾಡ್ ಕ್ಯಾಮೆರಾ ಸ್ಮಾರ್ಟ್‌ಫೋನ್

'ರೆಡ್ ಮಿ ನೋಟ್ 6 ಪ್ರೊ' ಸ್ಮಾರ್ಟ್‌ಪೋನಿನ ಪ್ರಮುಖ ಆಕರ್ಷಣೆಯೇ ನಾಲ್ಕು ಕ್ಯಾಮೆರಾಗಳಲಾಗಿದ್ದು, 12MP + 5MP ಹಿಂಬದಿಯ ಕ್ಯಾಮರಾ, 20MP + 2MP ಸೆಲ್ಫಿ ಕ್ಯಾಮರಾಗಳನ್ನು ನೀಡಲಾಗಿದೆ. ಡ್ಯುಯಲ್ ಪಿಕ್ಸೆಲ್ ಆಟೋಫೋಕಸ್, 1.4-ಮೈಕ್ರಾನ್ ಪಿಕ್ಸೆಲ್‌ಗಳು, ಎಐ ಭಾವಚಿತ್ರ 2.0 ಮತ್ತು ಎಐ ಡೈನಾಮಿಕ್ ಬೊಕೆ ವೈಶಿಷ್ಟ್ಯಗಳಂತಹ ವೈಶಿಷ್ಟ್ಯಗಳೊಂದಿಗೆ ಬಂದಿದೆ. ಶಿಯೋಮಿಯ ಮೊದಲ ಎಐ ಆಧಾರಿತ ಕ್ವಾಡ್ ಕ್ಯಾಮೆರಾ ಸ್ಮಾರ್ಟ್‌ಫೋನ್ ಆಗಿ 'ರೆಡ್ ಮಿ ನೋಟ್ 6 ಪ್ರೊ' ಹೊರಹೊಮ್ಮಿದೆ.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

ರೆಡ್ ಮಿ ನೋಟ್ 6 ಪ್ರೊ' ಸ್ಮಾರ್ಟ್‌ಪೋನಿನಲ್ಲಿ ಕ್ಯಾಮೆರಾಗೆ ಹೆಚ್ಚು ಒತ್ತು ನೀಡಿರುವ ಶಿಯೋಮಿ ಕಂಪೆನಿ, ಈ ಸ್ಮಾರ್ಟ್‌ಫೋನಿನಲ್ಲಿ 'ರೆಡ್ ಮಿ ನೋಟ್ 5 ಪ್ರೊ'ನಲ್ಲಿ ನೀಡಲಾಗಿದ್ದ ಸ್ನ್ಯಾಪ್‌ಡ್ರಾಗನ್ 636 ಆಕ್ಟಕೋರ್ ಪ್ರೊಸೆಸರ್ ಅನ್ನೇ ನೀಡಿದೆ. ಕ್ವಾಲ್ಕಮ್ ಸ್ಪೆಕ್ಟ್ರಾ ಪ್ರೊಸೆಸರ್ ,ಅಡ್ರಿನೋ 509 ಜಿಪಿಯು, 4ಜಿಬಿ RAM ಮತ್ತು 64GB ಹಾಗೂ 6ಜಿಬಿ RAM ಮತ್ತು 64GB ಆಂತರಿಕ ಮೆಮೊರಿ ವೆರಿಯಂಟ್‌ಗಳಲ್ಲಿ ಸ್ಮಾರ್ಟ್‌ಫೋನ್ ಭಾರತದ ಮೊಬೈಲ್ ಮಾರುಕಟ್ಟೆಗೆ ಎಂಟ್ರಿ ನೀಡಿದೆ.

MIUI 10 ಆಧಾರಿತ ಟಾಪ್ ಆಂಡ್ರಾಯ್ಡ್

MIUI 10 ಆಧಾರಿತ ಟಾಪ್ ಆಂಡ್ರಾಯ್ಡ್

ರೆಡ್ ಮಿ ನೋಟ್ 6 ಪ್ರೊ' ಸ್ಮಾರ್ಟ್‌ಪೋನ್ MIUI 10 ಆಧಾರಿತ ಟಾಪ್ ಆಂಡ್ರಾಯ್ಡ್ ಮೂಲಕ ಕಾರ್ಯನಿರ್ವಹಣೆ ನೀಡಲಿದೆ. ಇದು ಶೇ. 30 ರಷ್ಟು ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆ ವೇಗವನ್ನು ಹೆಚ್ಚಿಸಲಿದೆ ಎಂದು ಶಿಯೋಮಿ ಕಂಪೆನಿ ಹೇಳಿಕೊಂಡಿದೆ. ಬ್ಯಾಟರಿ ಉಳಿತಾಯದಲ್ಲಿ MIUI 10 ಆಧಾರಿತ ಟಾಪ್ ಆಂಡ್ರಾಯ್ಡ್ ಸಾಮರ್ಥ್ಯ ಹೆಚ್ಚಿದೆಯಂತೆ. ಪ್ರಸ್ತುತ ಆಂಡ್ರಾಯ್ಡ್ ಓರಿಯೋದಲ್ಲಿ ಕಾರ್ಯನಿರ್ವಹಣೆ ನೀಡುವ ಸ್ಮಾರ್ಟ್‌ಪೋನ್ ಆಂಡ್ರಾಯ್ಡ್ ಪೈಗೆ ಬಹುಬೇಗ ಅಪ್‌ಡೇಟ್ ಆಗಲಿದೆ ಎಂದು ಶಿಯೋಮಿ ಕಂಪೆನಿ ತಿಳಿಸಿದೆ.

4000mAh ಬ್ಯಾಟರಿ ಸಾಮರ್ಥ್ಯ!

4000mAh ಬ್ಯಾಟರಿ ಸಾಮರ್ಥ್ಯ!

ರೆಡ್ ಮಿ ನೋಟ್ 6 ಪ್ರೊ' ಸ್ಮಾರ್ಟ್‌ಪೋನಿನಲ್ಲಿ 4,000 mAh ಬ್ಯಾಟರಿಯೊಂದಿಗೆ ಏಕೈಕ ಪೂರ್ಣ ಚಾರ್ಜನಲ್ಲಿ 2 ದಿನ ಬ್ಯಾಟರಿ ಬಾಳಿಕೆ ಅವಧಿಯ ಭರವಸೆಯನ್ನು ಶಿಯೋಮಿ ನೀಡಿದೆ. ವೇಗವಾಗಿ ಚಾರ್ಜಿಂಗ್‌ಗಾಗಿ ರೆಡ್‌ಮಿ ನೋಟ್ 6 ಪ್ರೊ ಕ್ವಿಕ್ ಚಾರ್ಜ್ 3.0 ಅನ್ನು ಬೆಂಬಲಿಸುತ್ತದೆ ಎಂದು ಕಂಪೆನಿ ತಿಳಿಸಿದೆ. ಶಿಯೋಮಿ ಮೊಬೈಲ್ ಪ್ರಿಯರು ಎದುರುನೋಡುತ್ತಿದ್ದ ಬಹುನಿರೀಕ್ಷಿತ ಕ್ವಿಕ್ ಚಾರ್ಜ್ ಫೀಚರ್ ಈಗ ಸಿಕ್ಕಿದೆ.

ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

ಇಷ್ಟೆಲ್ಲಾ ಮುಖ್ಯ ಫೀಚರ್ಸ್‌ಗಳನ್ನು ಹೊಂದಿರುವ 'ರೆಡ್ ಮಿ ನೋಟ್ 6 ಪ್ರೊ' ಸ್ಮಾರ್ಟ್‌ಪೋನ್, 4-ಇನ್ -1 ಸೂಪರ್ ಪಿಕ್ಸೆಲ್ ಮತ್ತು ಎಐ ಫೇಸ್ ಅನ್ಲಾಕ್ ಸಾಮರ್ಥ್ಯಗಳನ್ನು ಹೊಂದಿರುವುದು ವಿಶೇಷತೆಯಾದರೆ, ಕ್ಯಾಮೆರಾ ತಂತ್ರಜ್ಞಾನದಲ್ಲಿ ಬಹಳಷ್ಟು ಮುಂದಿದೆ. ಎಐ ಆಧಾರಿತ ಕ್ಯಾಮೆರಾ ತಂತ್ರಜ್ಞಾನದಿಂದ ಅದ್ಬುತ ಕ್ಯಾಮೆರಾ ಸ್ಮಾರ್ಟ್‌ಫೋನ್ ಆಗಿ ಸ್ಮಾರ್ಟ್‌ಫೋನ್ ಹೊರಹೊಮ್ಮಿದೆ. ಇನ್ನು ಫೋನ್ ಡ್ಯುಯಲ್ ಸಿಮ್‌ಗಳನ್ನು ಹೊಂದಿದ್ದು, ಎರಡೂ ಸಿಮ್‌ಗಳು ವೋಲ್ಟ್ ಸೇವೆಗೆ ಲಭ್ಯವಿವೆ. ಜೊತೆಗೆ ಫೋನ್ ರಸ್ಟ್ ಪ್ರೊಟೆಕ್ಷನ್ ಹೊಂದಿದೆ.

 ಸ್ಮಾರ್ಟ್‌ಫೋನ್ ಬೆಲೆ ಎಷ್ಟು?

ಸ್ಮಾರ್ಟ್‌ಫೋನ್ ಬೆಲೆ ಎಷ್ಟು?

ಡಾಲರ್ ಎದುರು ರೂಪಾಯಿಯ ಕುಸಿತದ ನಡುವೆಯೂ ಶೀಯೋಮಿ ತನ್ನ ಸ್ಮಾರ್ಟ್‌ಫೋನ್‌ಗಳ ಬೆಲೆಯನ್ನು ನಿರೀಕ್ಷೆಗೂ ಮೀರಿ ಕಡಿತಗೊಳಿಸಿದೆ. 4ಜಿಬಿ RAM ಮತ್ತು 64GB ಆಂತರಿಕ ಮೆಮೊರಿ ಮಾದರಿಯ ರೆಡ್ ಮಿ ನೋಟ್ 6 ಪ್ರೊ' ಸ್ಮಾರ್ಟ್‌ಪೋನ್ ಬೆಲೆ ಕೇವಲ 13,999 ರೂಪಾಯಿಗಳಾಗಿದೆ. ಇನ್ನು 6ಜಿಬಿ RAM ಮತ್ತು 64GB ಆಂತರಿಕ ಮೆಮೊರಿ ಮಾದರಿಯ ಸ್ಮಾರ್ಟ್‌ಪೋನ್ ಬೆಲೆ 15,999 ರೂಪಾಯಿಗಳಾಗಿವೆ.

Best Mobiles in India

English summary
Xiaomi launched the Redmi Note 6 Pro in India a couple of days ago, and the device has so far been a resounding success in the subcontinent. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X