ಒಂದರ ಮೇಲೊಂದು ಮೋಸ: ಶಿಯೋಮಿ ಬಳಕೆದಾರರ ಗೋಳು ಕೇಳೋರ್ಯಾರು..?!
ಮಾರುಕಟ್ಟೆಯಲ್ಲಿ ಅತೀ ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡುವ ಮೂಲಕ ಸದ್ದು ಮಾಡುತ್ತಿರುವ ಶಿಯೋಮಿ, ತಾನು ಹೆಚ್ಚಿನ ಪ್ರಮಾಣದ ಲಾಭವನ್ನು ಮಾಡವುದಿಲ್ಲ, ಈ ಕಾರಣಕ್ಕೆ ಸ್ಮಾರ್ಟ್‌ಫೋನ್‌ಗಳ ಬೆಲೆಯೂ ತೀರಾ ಕಡಿಮೆ ಇದೆ ಎನ್ನುತ್ತಲೇ ತನ್ನ ಬಳಕೆದಾರರಿಗೆ ಕಿರಿಕಿರಿ ಎನ್ನವಂತೆ ಆಡ್‌ಗಳನ್ನು ಪ್ರಸಾರ ಮಾಡುತ್ತಿದೆ. ಶಿಯೋಮಿಯ ಪ್ರತಿಯೊಂದು ಆಪ್‌ನಲ್ಲಿ ಆಡ್‌ಗಳದ್ದೇ ಕಾರುಬಾರು ಎನ್ನಲಾಗಿದೆ. ಶಿಯೋಮಿ ಬಳಕೆದಾರರ ಗೋಳು ಕೇಳುವವರಿಲ್ಲ.

ಇದೇ ಆಡ್‌ಗಳನ್ನು ಬ್ಲಾಕ್ ಮಾಡಲು ಹಲವು ವಿಧಾನಗಳು ಇದ್ದರೂ ಸಹ ಕೆಲವು ಫೋನ್‌ಗಳಲ್ಲಿ ಮಾತ್ರವೇ ಆಡ್ ಬ್ಲಾಕ್ ಸಾಧ್ಯವಾಗುತ್ತಿದೆ. ಬಳಕೆದಾರರು ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಬೇಸತ್ತಿದ್ದಾರೆ. ಶಿಯೋಮಿ ಫೋನ್ ಬಿಟ್ಟರೇ ಬೇರೆ ಯಾವುದೇ ಫೋನ್‌ಗಳಲ್ಲಿ ಈ ಮಾದರಿಯ ಹೇರಕೆಯ ಆಡ್‌ಗಳನ್ನು ನೋಡಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಮತ್ತೊಂದು ಮಾದರಿಯಲ್ಲಿ ಕಿರಿಕಿರಿಯನ್ನು ಶುರು ಮಾಡಿದೆ. ಶಿಯೋಮಿ ಬಳಕೆದಾರರು ಈ ಕಾರಣಕ್ಕೆ ಫೋನ್ ಬಳಕೆಯನ್ನು ನಿಲ್ಲಿಸುವ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಶಿಯೋಮಿ ಬಳಕೆದಾರರಿಗೆ ಇದೇ ಮಾದರಿ ಅನೇಕ ಕಿರಿಕಿರಿಯನ್ನು ಮಾಡುತ್ತಿದೆ.

ಸೆಟ್ಟಿಂಗ್ಸ್‌ನಲ್ಲಿಯೂ ಆಡ್:
ತನ್ನ ಸ್ಮಾರ್ಟ್‌ಫೋನ್‌ಗಳಲ್ಲಿ ಆಡ್‌ಗಳನ್ನು ಹೆರಿಕೆ ಮಾಡುವ ಮೂಲಕ ಬಳಕೆದಾರರ ಕೆಂಗಣ್ಣಿಗೆ ಗುರಿಯಾಗಿರುವ ಶಿಯೋಮಿ, ಈಗ ಮತ್ತೊಮ್ಮೆ ಬಳಕೆದಾರರ ಕೋಪಕ್ಕೆ ಕಾರಣವಾಗಿದೆ. ಸೆಟ್ಟಿಂಗ್ಸ್‌ನಲ್ಲಿಯೂ ಆಡ್‌ಗಳನ್ನು ಪ್ರಸಾರ ಮಾಡುತ್ತಿದೆ. ಇದು ಬಳಕೆದಾರರಿಗೆ ಕಿರಿಕಿರಿಯನ್ನು ಉಂಟು ಮಾಡಿದೆ. ಹಲವು ಬಳಕೆದಾರರಿಗೆ ಈ ಆಡ್ ಕಾಣಿಸಿಕೊಳ್ಳುತ್ತಿದೆ.


ಟಾಪ್ ಫೋನ್‌ಗಳಲ್ಲೂ:
ಶಿಯೋಮಿ MIUI ಬಳಕೆ ಮಾಡಿಕೊಳ್ಳುತ್ತಿರುವ ಫೋನ್‌ಗಳಲ್ಲಿ ಈ ಮಾದರಿಯ ಆಡ್‌ಗಳನ್ನು ಕಾಣಬಹುದಾಗಿದೆ. ಶಿಯೋಮಿ ಲಾಂಚ್ ಮಾಡಿರುವ ಟಾಪ್ ಎಂಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಆಡ್‌ಗಳನ್ನು ಪ್ರಸಾರ ಮಾಡಲಾಗುತ್ತಿದೆ ಎನ್ನಲಾಗಿದೆ. ಇದರಿಂದಾಗಿ ಶಿಯೋಮಿ ಬಳಕೆದಾರರಿಗೆ ಕಿರಿಕಿರಿಯಾಗುತ್ತಿದೆ.

ಪೊಕೊದಲ್ಲಿಯೂ ಇದೆ:
ಇದೇ ಮಾದರಿಯಲ್ಲಿ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಟಾಪ್ ಎಂಡ್ ಫೋನ್ ಪೊಕೊ F1 ನಲ್ಲಿಯೂ ಈ ಮಾದರಿಯ ಆಡ್‌ಗಳನ್ನು ಕಾಣಬಹುದಾಗಿದೆ. ಶೀಘ್ರವೇ ಈ ಫೋನಿ ಸೆಟ್ಟಿಂಗ್ಸ್‌ನಲ್ಲಿಯೂ ಆಡ್‌ಗಳನ್ನು ಶಿಯೋಮಿ ಪ್ರದರ್ಶಿಸುತ್ತಿದೆ ಎನ್ನಲಾಗಿದೆ.

ಬ್ಲಾಕ್ ಮಾಡುವುದು ಹೇಗೆ..?
ಇಂದು ನಿಮ್ಮ ಶಿಯೋಮಿ ಸ್ಮಾರ್ಟ್‌ಫೋನಿನಲ್ಲಿ ಹೇಗೆ ಆಡ್‌ಗಳನ್ನು ಬ್ಲಾಕ್ ಮಾಡುವುದು ಎನ್ನುವುದನ್ನು ತಿಳಿಸುವ ಪ್ರಯತ್ನವು ಇದಾಗಿದೆ. ಇದರ ಮೂಲಕ ನೀವು ಇನ್ನು ಮುಂದೆ ನಿಮ್ಮ ಶಿಯೋಮಿ ಸ್ಮಾರ್ಟ್‌ಪೋನಿನಲ್ಲಿ ಆಡ್‌ಗಳನ್ನು ಡಿಸೆಬಲ್ ಮಾಡಬಹುದಾಗಿದೆ. ಅದು ಹೇಗೆ ಎಂಬುದನ್ನು ಮುಂದಿನಂತೆ ನೋಡುವ.

ಆಡ್‌ಗಳನ್ನು ತಡೆಯುವುದು ಹೇಗೆ..?
ಹಲವು ಮಂದಿ ಶಿಯೋಮಿ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನಿನಲ್ಲಿ ಬರುತ್ತಿರುವ ಆಡ್‌ಗಳಿಂದ ತೊಂದರೆಯನ್ನು ಅನುಭವಿಸುತ್ತಿದ್ದು, ಈ ಹಿನ್ನಲೆಯಲ್ಲಿ ಆಡ್‌ಗಳನ್ನು ಬ್ಲಾಕ್ ಮಾಡುವುದು ಹೇಗೆ ಎಂಬ ಪ್ರಶ್ನೆಯನ್ನು ಹಲವು ಬಾರಿ ಕೇಳುತ್ತಿದ್ದರು. ಈ ಹಿನ್ನಲೆಯಲ್ಲಿ ಶಿಯೋಮಿ ಫೋನ್‌ಗಳಲ್ಲಿ ಹೇಗೆ ಆಡ್ ಬ್ಲಾಕ್ ಮಾಡುವುದು ಎನ್ನುವುದನ್ನು ತಿಳಿಸುವ ಪ್ರಯತ್ನ ಇದಾಗಿದೆ.

ಮಾದರಿ ಒಂದು:
ಶಿಯೋಮಿ ಸ್ಮಾರ್ಟ್‌ಫೋನಿನಲ್ಲಿ ಆಡ್ ತೋರಿಸುತ್ತಿರುವ ಆಪ್ ಆಡ್ ಗಳನ್ನು ಬ್ಲಾಕ್ ಮಾಡಬಹುದಾಗಿದೆ. ಇದಕ್ಕಾಗಿ ನೀವು ಮೊದಲಿಗೆ ಆಪ್ ಸೆಟ್ಟಿಂಗ್ಸ್ ನಲ್ಲಿ receive recommendations ಎಂಬ ಆಯ್ಕೆಯನ್ನು ಆಪ್ ಮಾಡಿದ ಸಂದರ್ಭದಲ್ಲಿ ಯಾವುದೇ ರೀತಿಯ ಆಡ್‌ಗಳನ್ನು ನೀವು ನೋಡುವುದಿಲ್ಲ.

ಮತ್ತೊಂದು ಮಾದರಿ:
ಇದಲ್ಲದೇ ಸೆಟ್ಟಿಂಗ್ಸ್‌ನಲ್ಲಿ ಇನ್ನೊಂದು ಮಾದರಿಯಲ್ಲಿ ಬದಲಾವಣೆಯನ್ನು ಮಾಡುವ ಮೂಲಕವೂ ನೀವು ಆಡ್‌ಗಳನ್ನು ನೋಡದಂತೆ ಮಾಡಬಹುದಾಗಿದೆ. ಇದು ಹೇಗೆ ಎಂಬುದನ್ನು ಮುಂದಿನಂತೆ ನೊಡುವ.

ಹಂತ 01:
ಮೊದಲಿಗೆ ಶಿಯೋಮಿ ಫೋನಿನಲ್ಲಿ ಸೆಟ್ಟಿಂಗ್ಸ್ ಆಯ್ಕೆಯನ್ನು ಓಪನ್ ಮಾಡಿರಿ. ಮಾಡಿದ ನಂತರದಲ್ಲಿ Settings > Additional Settings > ಆಯ್ಕೆಯನ್ನು ಓಪನ್ ಮಾಡಿರಿ.

ಹಂತ 02:
Additional Settings >ಆಯ್ಕೆಯನ್ನು ಓಪನ್ ಮಾಡಿದ ನಂತರದಲ್ಲಿ Authorisation and revocation > ಎಂಬ ಆಯ್ಕೆಯೂ ಕಾಣಿಸಿಕೊಳ್ಳಲಿದೆ. ಅದನ್ನು ಓಪನ್ ಮಾಡಿರಿ.

ಹಂತ 03:
ಇದಾದ ನಂತರದಲ್ಲಿ ನೀವು ಆಪ್‌ಗಳ ಲಿಸ್ಟ್‌ವೊಂದು ಕಾಣಿಸಿಕೊಳ್ಳಲಿದೆ. ಅದರಲ್ಲಿ msa ಎಂಬ ಆಯ್ಕೆಯನ್ನು ಡಿಸೆಬಲ್ ಮಾಡಿ. ಹೀಗೇ ಮಾಡಿದ ನಂತರದಲ್ಲಿ ನೀವು ಶಿಯೋಮಿ ಫೋನಿನಲ್ಲಿ ಆಡ್ ಬರದಂತೆ ತಡೆಯಬಹುದಾಗಿದೆ.


Click it and Unblock the Notifications








