Home
ಸುದ್ದಿಜಾಲ

Xiaomi Pad 6s ಪ್ರೊ ಫಸ್ಟ್‌ ಇಮೇಜ್‌ ಬಹಿರಂಗ: ಲುಕ್‌ ನೋಡಿದ್ರೆ ಸ್ಟನ್‌ ಆಗಿ ಬಿಡ್ತೀರಾ!

ಶಿಯೋಮಿ ಕಂಪೆನಿಯು ಸ್ಮಾರ್ಟ್‌ಫೋನ್‌ಗಳಿಗೆ ಮಾತ್ರವಲ್ಲ ಸ್ಮಾರ್ಟ್‌ ಪ್ಯಾಡ್‌ಗಳಿಗೂ ಕೂಡ ಸೈ ಎನಿಸಿಕೊಂಡಿದೆ. ತನ್ನ ವಿಭಿನ್ನ ಸ್ಮಾರ್ಟ್‌ ಪ್ಯಾಡ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಪ್ರಸಿದ್ಧಿ ಪಡೆದುಕೊಂಡಿದೆ. ಇದೀಗ ಹೊಸ ಶಿಯೋಮಿ ಪ್ಯಾಡ್‌ 6s ಪ್ರೊ ಪ್ಯಾಡ್‌ ಬಿಡುಗಡೆ ಮಾಡುವುದಕ್ಕೆ ತಯಾರಿ ನಡೆಸಿದೆ. ಇದೀಗ ಈ ಸ್ಮಾರ್ಟ್‌ಪ್ಯಾಡ್‌ನ ಫಸ್ಟ್‌ ಇಮೇಜ್‌ ಬಹಿರಂಗವಾಗಿದೆ.

ಹೌದು, ಶಿಯೋಮಿ ಪ್ಯಾಡ್‌ 6s ಪ್ರೊ ಫಸ್ಟ್‌ ಇಮೇಜ್‌ ಬಹಿರಂಗವಾಗಿದ್ದು, ವಿಭಿನ್ನ ವಿನ್ಯಾಸದಿಂದ ಎಲ್ಲರ ಗಮನಸೆಳೆದಿದೆ. ಅಲ್ಲದೆ ಸ್ಮಾರ್ಟ್‌ ಪ್ಯಾಡ್‌ ವಲಯದಲ್ಲಿ ಹೊಸ ಸಂಚಲನ ಮೂಡಿಸುವ ಸೂಚನೆ ನೀಡಿದೆ. ಜೊತೆಗೆ ಇದೇ ತಿಂಗಳು ಚೀನಾದಲ್ಲಿ ನಡೆಯಲಿರುವ ಲಾಂಚ್‌ ಈವೆಂಟ್‌ನಲ್ಲಿ ಈ ಪ್ಯಾಡ್‌ ಅನ್ನು ಬಿಡುಗಡೆ ಮಾಡುವ ಸೂಚನೆ ದೊರೆತಿದೆ. ಹಾಗಾದ್ರೆ Xiaomi Pad 6s Pro ಫೀಚರ್ಸ್‌ ನಿರೀಕ್ಷೆ ಏನು? ಇದರ ಡಿಸೈನ್‌ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Xiaomi Pad 6s ಪ್ರೊ ಇಮೇಜ್‌ ಬಹಿರಂಗ: ಲುಕ್‌ ನೋಡಿದ್ರೆ ಸ್ಟನ್‌ ಆಗಿ ಬಿಡ್ತೀರಾ!

Xiaomi Pad 6s ಪ್ರೊ ಫೀಚರ್ಸ್‌ ನಿರೀಕ್ಷೆ ಏನು?
Xiaomi Pad 6s Pro 12.4 ಇಂಚಿನ ಡಿಸ್‌ಪ್ಲೇಯೊಂದಿಗೆ ಬರಲಿದೆ. ಇದು 144Hz ರಿಫ್ರೆಶ್ ರೇಟ್‌ ಹೊಂದಿದ್ದು, LCD ಪ್ಯಾನೆಲ್ ಆಗಿದೆ. ಇನ್ನು ಈ ಪ್ಯಾಡ್‌ ಅನ್ನು ಶಿಯೋಮಿ ಕಂಪೆನಿಯ ಮುಂಬರುವ ಕಾರು SU7 ನೊಂದಿಗೆ ಕೆಲಸ ಮಾಡುವುದಕ್ಕೆ ಸೂಕ್ತವಾಗುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ವರದಿಗಳು ಹೇಳಿವೆ.

ಈ ಸ್ಮಾರ್ಟ್‌ ಪ್ಯಾಡ್‌ ಸ್ನಾಪ್‌ಡ್ರಾಗನ್‌ 8 Gen 2SoC ಪ್ರೊಸೆಸರ್‌ ವೇಗದೊಂದಿಗೆ ಬರಲಿದೆ. ಇದು HyperOS ಆನ್‌ಬೋರ್ಡ್‌ನೊಂದಿಗೆ, ಸಾಧನವು SU7 ನೊಂದಿಗೆ ತಡೆರಹಿತ ಸಂಪರ್ಕವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಪ್ಯಾಡ್‌ನಲ್ಲಿ ಡ್ಯುಯಲ್‌ ರಿಯರ್‌ ಕ್ಯಾಮೆರಾವನ್ನು ಇರಿಸಲಾಗುವುದು ಎಂದು ವರದಿಯಾಗಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಮತ್ತು ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ನೊಂದಿಗೆ ಬರಲಿದೆ. ಇದಲ್ಲದೆ 20 ಮೆಗಾಪಿಕ್ಸೆಲ್ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಸಹ ಇರಿಸಲಾಗಿದೆ.

Xiaomi Pad 6s ಪ್ರೊ ಇಮೇಜ್‌ ಬಹಿರಂಗ: ಲುಕ್‌ ನೋಡಿದ್ರೆ ಸ್ಟನ್‌ ಆಗಿ ಬಿಡ್ತೀರಾ!

Xiaomi Pad 6s Pro 10,000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಇದು 120W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ ಎನ್ನಲಾಗಿದೆ. ಇನ್ನು ಸ್ಮಾರ್ಟ್‌ಪ್ಯಾಡ್‌ನಲ್ಲಿ ನಾಲ್ಕು ಸ್ಪೀಕರ್‌ಗಳನ್ನು ನೀಡಲಾಗಿರುತ್ತದೆ ಎನ್ನಲಾಗಿದ್ದು, ಇದೆ ಫೆಬ್ರವರಿ 22 ರಂದು ಬಿಡುಗಡೆ ಆಗಲಿದೆ ಎಂದು ವರದಿಯಾಗಿದೆ. ಇದರ ಬೆಲೆ ವಿವರಗಳ ಬಗ್ಗೆ ಯಾವುದೆ ಮಾಹಿತಿ ಬಹಿರಂಗವಾಗಿಲ್ಲ.

ಇನ್ನು ಇತ್ತೀಚಿಗೆ ಶಿಯೋಮಿ 15 ಪ್ರೊ ಮತ್ತು ಶಿಯೋಮಿ 15 ಅಲ್ಟ್ರಾ ಸ್ಮಾರ್ಟ್‌ಫೋನ್‌ ಫೀಚರ್ಸ್‌ ಬಹಿರಂಗವಾಗಿದೆ. ಇದರ ಪ್ರಕಾರ ಈ ಫೋನ್‌ಗಳು ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಪಡೆಯಲಿವೆ ಎಂದು ಉಲ್ಲೇಖ ಮಾಡಲಾಗಿದೆ. ಇನ್ನು ಈ ಅಲ್ಟ್ರಾಸಾನಿಕ್ ಪ್ರೀಮಿಯಂ ಫೀಚರ್ಸ್‌ ಆಗಿದ್ದು, ಇದುವರೆಗೆ ಆಯ್ದ ಫೋನ್‌ಗಳಲ್ಲಿ ಮಾತ್ರ ಕಂಡುಬಂದಿದೆ.

ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ರೀಡರ್‌ಗಳು ವ್ಯಕ್ತಿಯ ಫಿಂಗರ್‌ಪ್ರಿಂಟ್ ಅನ್ನು ದೃಢೀಕರಿಸಲು ಸೌಂಡ್ ಅನ್ನು ಬಳಕೆ ಮಾಡಿಕೊಳ್ಳುತ್ತವೆ. ಅಂದರೆ ಇದು ಹೆಚ್ಚಿನ ಆವರ್ತನದ ಸೌಂಡ್ ತರಂಗಗಳನ್ನು ಬೆರಳಿಗೆ ರವಾನಿಸುತ್ತದೆ ಮತ್ತು ಫಿಂಗರ್‌ಪ್ರಿಂಟ್‌ನ ವಿವರವಾದ 3D ರೆಂಡರ್‌ನೊಂದಿಗೆ ಧ್ವನಿ ತರಂಗವು ರಿಟರ್ನ್‌ ಆಗುತ್ತದೆ. ಇನ್ನೊಂದೆಡೆ ಆಪ್ಟಿಕಲ್ ಸ್ಕ್ಯಾನರ್‌ಗಳು 2D ನಕ್ಷೆಯನ್ನು ರಚಿಸಲು ಬೆಳಕಿನ ಅಲೆಗಳನ್ನು ಬಳಕೆ ಮಾಡುತ್ತವೆ.

Xiaomi Pad 6s ಪ್ರೊ ಇಮೇಜ್‌ ಬಹಿರಂಗ: ಲುಕ್‌ ನೋಡಿದ್ರೆ ಸ್ಟನ್‌ ಆಗಿ ಬಿಡ್ತೀರಾ!

ಇದಿಷ್ಟೇ ಅಲ್ಲದೆ ಈ ವಿಶೇಷ ಫೀಚರ್ಸ್‌ ಆಯ್ಕೆಯಿಂದಾಗಿ ಹೃದಯ ಬಡಿತ, ಬಿಎಮ್‌ಐ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಹ ಮೇಲ್ವಿಚಾರಣೆ ಮಾಡಬಹುದಾಗಿದೆ. ಅದರಂತೆ ಇಷ್ಟೆಲ್ಲಾ ವಿಶೇಷ ಸೌಲಭ್ಯ ಇರುವ ಫೀಚರ್ಸ್‌ ಅನ್ನು ಮುಂದಿನ ದಿನಗಳಲ್ಲಿ ಶಿಯೋಮಿಯ ಪ್ರೊ ಸರಣಿಯಲ್ಲಿ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಹೆಚ್ಚು ಸುರಕ್ಷಿತ ಮತ್ತು ವೆಚ್ಚ-ಪರಿಣಾಮಕಾರಿ ಬಯೋಮೆಟ್ರಿಕ್ ಆಯ್ಕೆಯನ್ನು ನೀಡುತ್ತವೆ.

Best Mobiles in India

English summary
Xiaomi Pad 6S Pro image leaked before launch: Expected Specs Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+