ಶಿಯೋಮಿ ಪ್ಯಾಡ್ 6 ಪ್ರೊ ಎಂಟ್ರಿಗೆ ವೇದಿಕೆ ಸಜ್ಜು: ಬಿಡುಗಡೆ ಯಾವಾಗ? ಏನೆಲ್ಲಾ ನಿರೀಕ್ಷೆ
ಶಿಯೋಮಿ ಕಂಪೆನಿಯು ಶಿಯೋಮಿ 14 ಅಲ್ಟ್ರಾ ಫೋನ್ ಬಿಡುಗಡೆಗೆ ಸಕಲ ತಯಾರಿ ನಡಸಿದೆ. ಇದೀಗ ಈ ಸ್ಮಾರ್ಟ್‌ಫೋನ್ ಜೊತೆಗೆ ಶಿಯೋಮಿ ಪ್ಯಾಡ್ 6 ಪ್ರೊ ಕೂಡ ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಈ ಸ್ಮಾರ್ಟ್‌ಪ್ಯಾಡ್ ಇದೇ ಫೆಬ್ರವರಿ 22 ರಂದು ಬಿಡುಗಡೆ ಆಗುವುದು ಪಕ್ಕಾ ಆಗಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 2 SoC ಪ್ರೊಸೆಸರ್ ವೇಗವನ್ನು ಹೊಂದಿದೆ.
ಹೌದು, ಶಿಯೋಮಿ ಪ್ಯಾಡ್ 6 ಪ್ರೊ ಸ್ಮಾರ್ಟ್ ಟ್ಯಾಬ್ಲೆಟ್ ಬಿಡುಗಡೆಗೆ ಸಿದ್ಧವಾಗಿದೆ. ಇದು 120W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ ಎಂದು ವರದಿಯಾಗಿದೆ. ಇದಲ್ಲದೆ ಸ್ಮಾರ್ಟ್ ಟ್ಯಾಬ್ಲೆಟ್ HyperOS ನಲ್ಲಿ ರನ್ ಆಗಲಿದೆ. ಈ ಟ್ಯಾಬ್ ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಕೀಬೋರ್ಡ್ ಡಾಕ್ ಮತ್ತು ಸ್ಟೈಲಸ್ ಅನ್ನು ತೋರಿಸುತ್ತದೆ. ಹಾಗಾದ್ರೆ ಈ ಸ್ಮಾರ್ಟ್ ಟ್ಯಾಬ್ ಯಾವೆಲ್ಲಾ ಫೀಚರ್ಸ್‌ನೊಂದಿಗೆ ಬರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಶಿಯೋಮಿ ಪ್ಯಾಡ್ 6 ಪ್ರೊ ಫೀಚರ್ಸ್ ಹೇಗಿದೆ?
ಶಿಯೋಮಿ ಪ್ಯಾಡ್ 6 ಪ್ರೊ ಸ್ಮಾರ್ಟ್ ಟ್ಯಾಬ್ಲೆಟ್ 12.4 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 2000 x 3200 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿರಲಿದೆ. ಇನ್ನು ಡಿಸ್‌ಪ್ಲೇಯು 304 ಪಿಪಿಐ ಪಿಕ್ಸೆಲ್ ಸಾಂದ್ರತೆಯನ್ನು ಒಳಗೊಂಡಿರಲಿದ್ದು, 2050 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ನಲ್ಲಿರಲಿದೆ. ಇದರೊಂದಿಗೆ 1400:1 ಕಾಂಟ್ರಾಸ್ಟ್ ಅನುಪಾತದೊಂದಿಗೆ ಬರಲಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್ ಬೆಂಬಲಿಸಲಿದೆ. ಶಿಯೋಮಿ ಪ್ಯಾಡ್ 6 ಪ್ರೊ 144 Hz ರಿಫ್ರೆಶ್ ರೇಟ್ ಹಾಗೂ 240 Hz ಟಚ್ ಸ್ಯಾಂಪ್ಲಿಂಗ್ ರೇಟ್‌ನಲ್ಲಿರಲಿದೆ.
ಶಿಯೋಮಿ ಪ್ಯಾಡ್ 6 ಪ್ರೊ ಪ್ರೊಸೆಸರ್ ಯಾವುದು?
ಶಿಯೋಮಿ ಪ್ಯಾಡ್ 6 ಪ್ರೊ ಟ್ಯಾಬ್ಲೆಟ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 2 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್ v13 ಬೆಂಬಲದೊಂದಿಗೆ ರನ್ ಆಗಲಿದೆ. ಹಾಗೆಯೇ 24GB RAM ಮತ್ತು 1TB ವರೆಗೆ ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದಿದೆ.

ಶಿಯೋಮಿ ಪ್ಯಾಡ್ 6 ಪ್ರೊ ಕ್ಯಾಮೆರಾ ಸೆಟಪ್ ಏನಿದೆ?
ಶಿಯೋಮಿ ಪ್ಯಾಡ್ 6 ಪ್ರೊ ಟ್ಯಾಬ್ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ನಲ್ಲಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿರಲಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿರಲಿದೆ.
ಶಿಯೋಮಿ ಪ್ಯಾಡ್ 6 ಪ್ರೊ ಬ್ಯಾಟರಿ ಮತ್ತು ಇತರೆ
ಶಿಯೋಮಿ ಪ್ಯಾಡ್ 6 ಪ್ರೊ 10,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 120W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ ಎಂದು ವರದಿಯಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್, ವೈಫೈ, ಹಾಟ್‌ಸ್ಪಾಟ್ ಒಳಗೊಂಡಿದೆ. ಇದರಲ್ಲಿ ಹೆಡ್‌ಫೋನ್ ಜ್ಯಾಕ್ ಇರುವುದಿಲ್ಲ ಎಂದು ಹೇಳಲಾಗಿದೆ. ಇದರೊಂದಿಗೆ 4 ಸ್ಪೀಕರ್‌ಗಳನ್ನು ಸಹ ನೀಡಲಾಗುವುದು ಎಂದು ನಿರೀಕ್ಷಿಸಲಾಗಿದೆ.

ಶಿಯೋಮಿ ಪ್ಯಾಡ್ 6 ಪ್ರೊ ಬೆಲೆ ಮತ್ತು ಲಭ್ಯತೆ
ಶಿಯೋಮಿ ಪ್ಯಾಡ್ 6 ಪ್ರೊ ಫೆಬ್ರವರಿ 25 ರಂದು MWC ಈವೆಂಟ್‌ನಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗಿದೆ. ಇದರ ಬೆಲೆ ವಿವರಗಳು ಇನ್ನು ಕೂಡ ಬಹಿರಂಗವಾಗಿಲ್ಲ. ಈ ಸ್ಮಾರ್ಟ್ ಪ್ಯಾಡ್ ಯಾವೆಲ್ಲಾ ಕಲರ್ ಆಯ್ಕೆಗಳಲ್ಲಿ ಬರಲಿದೆ ಎಂಬುದು ಕೂಡ ನಿಗೂಡವಾಗಿದೆ. ಈ ಟ್ಯಾಬ್ ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಕೀಬೋರ್ಡ್ ಡಾಕ್ ಮತ್ತು ಸ್ಟೈಲಸ್ ಅನ್ನು ತೋರಿಸುತ್ತದೆ


Click it and Unblock the Notifications








