ಶಿಯೋಮಿ ಪ್ಯಾಡ್ 7 ಪ್ರೊ ಟ್ಯಾಬ್ ಬಿಡುಗಡೆಗೆ ದಿನಗಣನೆ! ಏನೆಲ್ಲಾ ನಿರೀಕ್ಷೆ !
ಟೆಕ್ ದೈತ್ಯ ಶಿಯೋಮಿ ಕಂಪೆನಿ ಸ್ಮಾರ್ಟ್‌ಫೋನ್ ಮಾತ್ರವಲ್ಲದೆ ಸ್ಮಾರ್ಟ್ ಟ್ಯಾಬ್‌ಗಳಿಗೂ ಕೂಡ ಪ್ರಸಿದ್ದಿ ಪಡೆದಿದೆ. ಈಗಾಗಲೇ ಹಲವು ಟ್ಯಾಬ್‌ಗಳನ್ನು ಪರಿಚಯಿಸಿರುವ ಶಿಯೋಮಿ ಇದೀಗ ಹೊಸ ಶಿಯೋಮಿ ಪ್ಯಾಡ್ 7 ಪ್ರೊ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಈ ಟ್ಯಾಬ್ಲೆಟ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 2 SoC ಪ್ರೊಸೆಸರ್‌ನಲ್ಲಿ ರನ್ ಆಗಲಿದೆ ಎಂದು ವರದಿಯಾಗಿದೆ.
ಹೌದು, ಶಿಯೋಮಿ ಪ್ಯಾಡ್ 7 ಪ್ರೊ ಶೀಘ್ರದಲ್ಲೇ ಮಾರುಕಟ್ಟೆಗೆ ಎಂಟ್ರಿ ನೀಡುವ ನಿರೀಕ್ಷೆ ಇಡಲಾಗಿದೆ. ಇದು 144Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ LCD ಸ್ಕ್ರೀನ್ ಹೊಂದಿರಲಿದೆ ಎನ್ನಲಾಗಿದೆ. ಜೊತೆಗೆ 9600 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 80W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್ ಹೊಂದಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಶಿಯೋಮಿ ಪ್ಯಾಡ್ 7 ಪ್ರೊ ಟ್ಯಾಬ್ಲೆಟ್ ಡಿಸ್‌ಪ್ಲೇ ರಚನೆ
ಶಿಯೋಮಿ ಪ್ಯಾಡ್ 7 ಪ್ರೊ ಟ್ಯಾಬ್ಲೆಟ್ 11 ಇಂಚಿನ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಈ ಡಿಸ್‌ಪ್ಲೇ 1800 x 2880 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಳ್ಳುವ ಸಾಧ್ಯತೆಯಿದೆ. ಜೊತೆಗೆ ಟ್ಯಾಬ್ ಡಿಸ್‌ಪ್ಲೇ 309 ಪಿಪಿಐ ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿರಲಿದೆ ಎನ್ನಲಾಗಿದ್ದು, 1050 ನೀಟ್ಸ್ ಗರಿಷ್ಠ ಬ್ರೈಟ್‌ನೆಸ್ ನೀಡಲಿದೆ ಎಂದು ವರದಿಯಾಗಿದೆ. ಅಲ್ಲದೆ ಡಿಸ್‌ಪ್ಲೇ 1400:1 ಕಾಂಟ್ರಾಸ್ಟ್ ಅನುಪಾತದಲ್ಲಿ ಬರಲಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್‌ನೊಂದಿಗೆ ಬರುವ ಸಾಧ್ಯತೆಯಿದೆ.
ಶಿಯೋಮಿ ಪ್ಯಾಡ್ 7 ಪ್ರೊ ಟ್ಯಾಬ್ಲೆಟ್ ಪ್ರೊಸೆಸರ್ ನಿರೀಕ್ಷೆ?
ಶಿಯೋಮಿ ಪ್ಯಾಡ್ 7 ಪ್ರೊ ಟ್ಯಾಬ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 2 SoC ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗಿದೆ. ಇದು ಆಂಡ್ರಾಯ್ಡ್ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8 GB RAM ಮತ್ತು 128 GB ಇಂಟರ್ ಸ್ಟೋರೇಜ್ ಸಾಮರ್ಥ್ಯದೊಂದಿಗೆ ಬರಲಿದೆ.

ಶಿಯೋಮಿ ಪ್ಯಾಡ್ 7 ಪ್ರೊ ಟ್ಯಾಬ್ಲೆಟ್ ಕ್ಯಾಮೆರಾ ಸೆಟ್‌ಅಪ್ ಏನಿರಬಹುದು?
ಶಿಯೋಮಿ ಪ್ಯಾಡ್ 7 ಪ್ರೊ ಟ್ಯಾಬ್ಲೆಟ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ನೊಂದಿಗೆ ಬರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಇರಲಿದೆ ಎಂದು ಅಂದಾಜಿಸಲಾಗಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿರಬಹುದು ಎಂದು ನಿರೀಕ್ಷಿಸಲಾಗಿದೆ.
ಶಿಯೋಮಿ ಪ್ಯಾಡ್ 7 ಪ್ರೊ ಟ್ಯಾಬ್ಲೆಟ್ ಬ್ಯಾಟರಿ ಮತ್ತು ಇತರೆ
ಶಿಯೋಮಿ ಪ್ಯಾಡ್ 7 ಪ್ರೊ ಟ್ಯಾಬ್ಲೆಟ್ 9600 mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬರಲಿದೆ. ಇದು 80W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ ನಿರೀಕ್ಷೆಯಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ v5.3, ವೈಫೈ, USB-C v3.2 ಅನ್ನು ಬೆಂಬಲಿಸಲಿದೆ.

ಶಿಯೋಮಿ ಪ್ಯಾಡ್ 7 ಪ್ರೊ ಟ್ಯಾಬ್ಲೆಟ್ ಬೆಲೆ ಮತ್ತು ಲಭ್ಯತೆ
ಶಿಯೋಮಿ ಪ್ಯಾಡ್ 7 ಪ್ರೊ ಟ್ಯಾಬ್ಲೆಟ್ ಬೆಲೆ ವಿವರಗಳು ಇನ್ನು ಕೂಡ ಬಹಿರಂಗವಾಗಿಲ್ಲ. ಹಾಗೆಯೇ ಇದರ ಬಿಡುಗಡೆ ದಿನಾಂಕ ಕೂಡ ಇನ್ನು ಅಧಿಕೃತವಾಗಿಲ್ಲ. ಆದರೆ ಶೀಘ್ರದಲ್ಲೇ ಈ ಸ್ಮಾರ್ಟ್ ಟ್ಯಾಬ್ಲೆಟ್ ಮಾರುಕಟ್ಟೆಗೆ ಎಂಟ್ರಿ ನೀಡುವ ನಿರೀಕ್ಷೆಯಿದ್ದು, ಇದರ ಬೆಲೆ ವಿವರಗಳು ಕೂಡ ಸದ್ಯದಲ್ಲೇ ಬಹಿರಂಗವಾಗುವ ಸಾಧ್ಯತೆಯಿದೆ. ಇನ್ನು ಈ ಟ್ಯಾಬ್ಲೆಟ್ ಕಲರ್ ಆಯ್ಕೆಗಳ ಕುರಿತ ವಿವರಗಳು ಲಭ್ಯವಾಗಿಲ್ಲ. ಜೊತೆಗೆ ಇದು ಭಾರತಕ್ಕೆ ಎಂಟ್ರಿ ನೀಡುವ ಬಗ್ಗೆ ಸಹ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.


Click it and Unblock the Notifications








