ಚೀನಾ ವಸ್ತು ಬಹಿಷ್ಕರಿಸಿ ಎನ್ನುವುದು ಬರಿ ಮಾತಿನಲ್ಲಿ!.ಎಲ್ಲರ ಪ್ರೀತಿ ಶಿಯೋಮಿ ಮೇಲಿದೆ!!

ಚೀನಾ ವಸ್ತುಗಳ ಮಾರುಕಟ್ಟೆಯಲ್ಲಿ ಬಿಸಿತುಪ್ಪದಂತೆಯೇ ಖರ್ಚಾಗುತ್ತಿದ್ದು, ಬಹಿಷ್ಕಾರ ಎಂಬುದು ಬರಿ ಮಾತಾಗಿದೆ.!!

|

ಚೀನಾ ವಸ್ತುಗಳನ್ನು ಬಹಿಷ್ಕಾರ ಹಾಕಿ, ಚೀನಾ ವಸ್ತುಗಳನ್ನು ಖರೀದಿಸಬೇಡಿ ಎಂದು ಹೇಳುತ್ತಾರೆಯೇ ಹೊರತು ಚೀನಾ ವಸ್ತುಗಳನ್ನು ಖರೀದಿಸುವವರ ಸಂಖ್ಯೆ ಏನು ಕಡಿಮೆಯಾಗಿಲ್ಲ.! ಹೌದು, ಚೀನಾ ವಸ್ತುಗಳ ಮಾರುಕಟ್ಟೆಯಲ್ಲಿ ಬಿಸಿತುಪ್ಪದಂತೆಯೇ ಖರ್ಚಾಗುತ್ತಿದ್ದು, ಬಹಿಷ್ಕಾರ ಎಂಬುದು ಬರಿ ಮಾತಾಗಿದೆ.!!

ಮಾರ್ಕೆಟ್ ರಿಸರ್ಚ್ ಕಂಪೆನಿ ಕೌಂಟರ್‌ಪಾಯಿಂಟ್ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು, ಈ ವರ್ಷದ ಎರಡನೇ ತ್ರೈ ಮಾಸಿಕದಲ್ಲಿ, 10,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾದ ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ ಚೀನಾದ ಶಿಯೋಮಿ ಕಂಪೆನಿಯ ಎರಡು ಸ್ಮಾರ್ಟ್‌ಫೋನ್‌ಗಳು ಮೊದಲೆರಡು ಸ್ಥಾನವನ್ನು ಪಡೆದಿವೆ.!!

ಮಾರುಕಟ್ಟೆಯಲ್ಲಿ ಇಲ್ಲಿಯವರೆಗೂ ಇದ್ದ ಸ್ಯಾಮ್‌ಸಂಗ್ ಪ್ರಾಬಲ್ಯ ಸ್ವಲ್ಪ ಸ್ವಲ್ಪವೇ ಕಡಿಮೆಯಾಗುತ್ತಿದ್ದು, ಶಿಯೋಮಿ ಈ ಸ್ಥಾನವನ್ನು ಆಕ್ರಮಿಸಿಕೊಂಡಿದೆ.! ಹಾಗಾದರೆ, ಮೊದಲ ಮೂರು ಸ್ಥಾನದಲ್ಲಿ ಯಾವ ಯಾವ ಸ್ಮಾರ್ಟ್‌ಫೋನ್‌ಗಳಿವೆ? ಶಿಯೋಮಿ ಏಕೆ ಮೊದಲ ಸ್ಥಾನಕ್ಕೇರಿದೆ? ಎಂಬುದನ್ನು ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಮೊದಲ ಮೂರು ಸ್ಥಾನ ಇವುಗಳ ಪಾಲು!!

ಮೊದಲ ಮೂರು ಸ್ಥಾನ ಇವುಗಳ ಪಾಲು!!

ಕೌಂಟರ್‌ಪಾಯಿಂಟ್ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಈ ವರ್ಷದ ಎರಡನೇ ತ್ರೈ ಮಾಸಿಕದಲ್ಲಿ, 10,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾದ ಸ್ಮಾರ್ಟ್‌ಫೋನ್‌ ಪಟ್ಟಿಯಲ್ಲಿ , ಶಿಯೋಮಿ ರೆಡ್‌ಮಿ ನೋಟ್ 4 ಮತ್ತು ರೆಡ್‌ಮಿ 4 ಮೊದಲೆರಡು ಸ್ಥಾನಗಳನ್ನು ಪಡೆದುಕೊಂಡಿವೆ. ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಜೆ2 ಮೂರನೇ ಸ್ಥಾನ ಪಡೆದಿದೆ.!!

ಮಾರ್ಕೆಟ್ ಶೇರು ಎಷ್ಟು?

ಮಾರ್ಕೆಟ್ ಶೇರು ಎಷ್ಟು?

ಶಿಯೋಮಿ ರೆಡ್‌ಮಿ ನೋಟ್ 4 ಮತ್ತು ರೆಡ್‌ಮಿ 4 ಮೊದಲೆರಡು ಸ್ಥಾನಗಳನ್ನು ಪಡೆದುಕೊಂಡಿದ್ದು, ಮಾರುಕಟ್ಟೆಯಲ್ಲಿ ಕ್ರಮವಾಗಿ 7.5 ಮತ್ತು 4.5 ಪರ್ಸೆಂಟ್‌ನಷ್ಟು ಪಾಲನ್ನು ಪಡೆದುಕೊಂಡಿವೆ. ಇನ್ನು ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಜೆ2 ಮಾರುಕಟ್ಟೆಯ 4.2 ರಷ್ಟು ಪಾಲನ್ನು ಪಡೆದಿದೆ.

ಕಡಿಮೆ ಬೆಲೆಗೆ ಉತ್ತಮ ಸ್ಮಾರ್ಟ್‌ಪೋನ್‌!!

ಕಡಿಮೆ ಬೆಲೆಗೆ ಉತ್ತಮ ಸ್ಮಾರ್ಟ್‌ಪೋನ್‌!!

10,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಚೀನಾದ ಶಿಯೋಮಿ ಕಂಪೆನಿ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದ್ದು,ರೆಡ್‌ಮಿ ನೋಟ್ 4 ಮತ್ತು ರೆಡ್‌ಮಿ 4 ಈ ಸಾಲಿನಲ್ಲಿ ಮೊದಲಿನಲ್ಲಿ ನಿಂತಿವೆ.!! ಹಾಗಾಗಿಯೇ, ಕಡಿಮೆ ಬೆಲೆಗೆ ಉತ್ತಮ ಸ್ಮಾರ್ಟ್‌ಪೋನ್‌ಗಳತ್ತ ಜನರು ಮಾರುಹೋಗುತ್ತಿದ್ದಾರೆ.!!

ಮಧ್ಯಮವರ್ಗದವರೆ ಹೆಚ್ಚು!!

ಮಧ್ಯಮವರ್ಗದವರೆ ಹೆಚ್ಚು!!

ಭಾರತದಲ್ಲಿ ಮಧ್ಯಮ ವರ್ಗದವರೆ ಹೆಚ್ಚಿದ್ದಾರೆ. ಹಾಗಾಗಿಯೇ ಮಧ್ಯಮಬೆಲೆಯಲ್ಲಿ ಲಭ್ಯವಿರುವ ಶಿಯೋಮಿಯ ಎರಡು ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಎಲ್ಲಾ ಮಧ್ಯಮ ವರ್ಗದವರು ಮುಗಿಬಿದ್ದಿದ್ದಾರೆ. ಕಡಿಮೆ ದರದಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್‌ ಪಡೆಯಬೇಕಿರುವುದು ಎಲ್ಲರ ಹೆಬ್ಬಯಕೆ!!

ಸ್ಯಾಮ್‌ಸಂಗ್ ಪ್ರಾಬಲ್ಯ ಕಡಿಮೆಯಾಯಿತೆ?

ಸ್ಯಾಮ್‌ಸಂಗ್ ಪ್ರಾಬಲ್ಯ ಕಡಿಮೆಯಾಯಿತೆ?

ಸ್ಯಾಮ್‌ಸಂಗ್ ಮೊಬೈಲ್‌ಗಳು ಗುಣಮಟ್ಟದಲ್ಲಿ ಉತ್ತಮವಾಗಿಯೇ ಇವೆ. ಆದರೆ, ಚೀನಾ ಮೊಬೈಲ್‌ಗಳಿಗೆ ಹೋಲಿಸಿದರೆ ಅವುಗಳ ಬೆಲೆ ಬಹಳ ಹೆಚ್ಚಾಗಿದೆ.!! ಹಾಗಾಗಿಯೇ ಸ್ಯಾಮ್‌ಸಂಗ್ ಪ್ರಾಬಲ್ಯ ಸ್ವಲ್ಪ ಕಡಿಮೆಯಾಗಿದೆ ಎನ್ನಬಹುದು.! ಆದರೆ, ಇದೀಗ ಸ್ಯಾಮ್‌ಸಂಗ್ ಮೊಬೈಲ್ ಬೆಲೆ ಕಡಿತ ಮಾಡಲು ಶುರುಮಾಡಿದ್ದು, ಚೀನಿ ಕಂಪೆನಿಗಳಿಗೆ ತಲೆನೋವಾಗಿದೆ.!!

<strong>ವಾಟ್ಸ್‌ಆಪ್‌ನಲ್ಲಿ ಪ್ರತಿದಿನ ಸೆಂಡ್ ಆಗುವ ಮೆಸೇಜ್‌ಗಳ ಸಂಖ್ಯೆ ಎಷ್ಟುಗೊತ್ತಾ?..ಶಾಕ್ ಆಗ್ರೀರಾ!!</strong>ವಾಟ್ಸ್‌ಆಪ್‌ನಲ್ಲಿ ಪ್ರತಿದಿನ ಸೆಂಡ್ ಆಗುವ ಮೆಸೇಜ್‌ಗಳ ಸಂಖ್ಯೆ ಎಷ್ಟುಗೊತ್ತಾ?..ಶಾಕ್ ಆಗ್ರೀರಾ!!

Best Mobiles in India

English summary
The top two positions were grabbed by Xiaomi Redmi Note 4 with 7.2 per cent and Redmi 4 with 4.5 per cent market share.to know know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X