Home
ಸುದ್ದಿಜಾಲ

2021 ಕ್ಕೆ ಲಾಂಚ್‌ ಆಗಲಿದೆ ಶಿಯೋಮಿಯ ಮೂರು ಹೊಸ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌!

ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಶಿಯೋಮಿ ಕಂಪೆನಿ ಮುಂಚೂಣಿ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ. ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳ ಮೂಲಕ ಸ್ಮಾರ್ಟ್‌ಫೋನ್‌ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ ವಿಭಾಗಕ್ಕೆ ಎಂಟ್ರಿ ನೀಡಿರಲಿಲ್ಲ. ಸದ್ಯ ಇದೀಗ ಶಿಯೋಮಿ ಸಂಸ್ಥೆ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ ಗಳನ್ನು ಪರಿಚಯಿಸಲು ಮುಂದಾಗಿದೆ. 2021 ರಲ್ಲಿ ಶಿಯೋಮಿ ಮೂರು ಹೊಸ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ಗಳನ್ನ ಭಾರತದಲ್ಲಿ ಬಿಡುಗಡೆ ಮಾಡಲು ಪ್ಲ್ಯಾನ್‌ ರೂಪಿಸಿದೆ ಎನ್ನಲಾಗಿದೆ.

ಸ್ಮಾರ್ಟ್‌ಫೋನ್‌

ಹೌದು, ಜನಪ್ರಿಯ ಸ್ಮಾರ್ಟ್‌ಫೋನ್‌ ಕಂಪೆನಿ ಶಿಯೋಮಿ ಭಾರತದಲ್ಲಿ 2021ಕ್ಕೆ ಮೂರು ಹೊಸ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲಿದೆ. ಈಗಾಗಲೇ ಫೋಲ್ಡಬಲ್ ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಸ್ಯಾಮ್‌ಸಂಗ್‌ ಸೈ ಎನಿಸಿಕೊಂಡಿದೆ. ಸ್ಯಾಮ್‌ಸಂಗ್‌ ಕಂಪೆನಿಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಶಿಯೋಮಿ ಕೂಡ ಮುಂದಾಗಿದೆ ಎನ್ನಲಾಗಿದೆ. ಹಾಗಾದ್ರೆ ಶಿಯೋಮಿ ಬಿಡುಗಡೆ ಮಾಡಲಿರುವ ಹೊಸ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಶಿಯೋಮಿ

ಇನ್ನು ಶಿಯೋಮಿ ಫೋಲ್ಡಬಲ್ ಫೋನ್ ಮೂರು ಮಾದರಿಯ ವಿನ್ಯಾಸದಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗಿದೆ. ಇದರಲ್ಲಿ ಮೊದಲನೆಯದು ಔಟ್‌-ಫೋಲ್ಡಿಂಗ್‌, ಎರಡನೆಯದು ಇನ್-ಫೋಲ್ಡಿಂಗ್ ಮತ್ತು ಮೂರನೆಯದು ಕ್ಲಾಮ್ಶೆಲ್ ಫೋಲ್ಡಬಲ್ ವಿನ್ಯಾಸವನ್ನು ಹೊಂದಿರಲಿದೆ ಎಂಬ ಮಾಹಿತಿಯಿದೆ. ಸ್ಯಾಮ್‌ಸಂಗ್ ಈಗಾಗಲೇ ತಮ್ಮ ಫೋನ್‌ಗಳಲ್ಲಿ ಇನ್-ಫೋಲ್ಡಿಂಗ್ ಮತ್ತು ಕ್ಲಾಮ್‌ಶೆಲ್ ಫೋಲ್ಡಬಲ್ ಫೋನ್ ವಿನ್ಯಾಸವನ್ನು ಬಳಸಿದೆ. ಈಗಾಗಲೇ ಲಭ್ಯವಿರುವ ಸ್ಯಾಮ್‌ಸಂಗ್ ಫೋಲ್ಡಬಲ್ ಫೋನ್‌ಗಳಿಗೆ ಹೋಲಿಸಿದರೆ ಶಿಯೋಮಿ ವಿನ್ಯಾಸಗಳಲ್ಲಿ ಉತ್ತಮ ಬೆಳವಣಿಗೆಯನ್ನು ಹೊಂದಲಿದೆ ಎಂದು ಕೆಲವು ವರದಿಗಳು ಸೂಚನೆ ನೀಡಿವೆ.

ಶಿಯೋಮಿ

ಇನ್ನು ಶಿಯೋಮಿ ಕಂಪೆನಿ ಬಿಡುಗಡೆ ಮಾಡಲಿರುವ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 2 ರ ಮಾದರಿಯಂತೆ ಲಭ್ಯವಾಗುವ ಸಾಧ್ಯತೆ ಇದೆ ಎಂದು ವದಂತಿ ಇದೆ. ಸದ್ಯ ಮಡಿಸಬಹುದಾದ ಸ್ಮಾರ್ಟ್‌ಫೋನ್‌ನ ಮುಖ್ಯ ಡಿಸ್‌ಪ್ಲೇ 7.59-ಇಂಚಿನಿಂದ 7.55-ಇಂಚಿಗೆ ಕುಗ್ಗುತ್ತದೆ ಎಂದು ಹೇಳಲಾಗಿದೆ. ಗ್ಯಾಲಕ್ಸಿ Z ಫೋಲ್ಡ್ 2 ರ 6.23-ಇಂಚಿನ ಪರದೆಯೊಂದಿಗೆ ಹೋಲಿಸಿದರೆ ಕವರ್ ಪ್ರದರ್ಶನವು 6.21 ಇಂಚು ಉದ್ದವಿರಲಿದೆ ಎನ್ನಲಾಗಿದೆ.

ಸ್ಮಾರ್ಟ್‌ಫೋನ್

ಶಿಯೋಮಿಯ ಜೊತೆಗೆ, ಇತರ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳಾದ ಒಪ್ಪೊ ಮತ್ತು ಸ್ಯಾಮ್‌ಸಂಗ್ ಸಹ ಔಟ್‌-ಫೋಲ್ಡಿಂಗ್‌ ವಿನ್ಯಾಸದ ಫೋನ್‌ಗಳನ್ನು ತಯಾರಿಸುವ ಕೆಲಸ ಮಾಡುತ್ತಿವೆ ಎಂದು ವರದಿಯಾಗಿದೆ. 2021 ರಲ್ಲಿ, ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 2, ಗ್ಯಾಲಕ್ಸಿ Z ಫೋಲ್ಡ್‌‌ 3 ಮತ್ತು ಗ್ಯಾಲಕ್ಸಿ Z ಫೋಲ್ಡ್‌ ಲೈಟ್ ಎಂಬ ಮೂರು ಫೋಲ್ಡಬಲ್‌ ಫೋನ್‌ಗಳನ್ನು ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಹಾಗೇ ನೋಡಿದರೆ 2021 ರಲ್ಲಿ ಹೆಚ್ಚಿ ನ ಪ್ರಮಾಣದಲ್ಲಿ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡುವ ನಿರೀಕ್ಷೆ ಇದೆ.

Best Mobiles in India

English summary
Xiaomi may launch three foldable smartphones in 2021.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+