'ಪೊಕೊ ಎಫ್1' ಫೋನಿನ ಲಾಂಚರ್ ಈಗ ಎಲ್ಲಾ ಶಿಯೋಮಿ ಪೋನ್‌ಗಳಿಗೂ ಲಭ್ಯ!!
ಭಾರತದಲ್ಲಿ ಅತಿ ಹೆಚ್ಚು ಫೋನ್‌ಗಳನ್ನು ಮಾರಾಟ ಮಾಡುತ್ತಿರುವ ಶಿಯೋಮಿ ಕಂಪೆನಿ ತನ್ನ ಉಪ ಸ್ಮಾರ್ಟ್‌ಫೋನ್ ಬ್ರ್ಯಾಂಡ್ 'ಪೊಕೊ ಎಫ್ 1' ಬಿಡುಗಡೆ ಸಮಾರಂಭದಲ್ಲಿ ತನ್ನೆಲ್ಲಾ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಮತ್ತೊಂದು ಸಿಹಿಸುದ್ದಿ ನಿಡಿದೆ. ಶಿಯೋಮಿಯ 'ಪೊಕೊ F1' ಸ್ಮಾರ್ಟ್‌ಫೋನ್ ಲಾಂಚರ್ ಈಗ ಪ್ರತಿ ಶಿಯೋಮಿ ಸ್ಮಾರ್ಟ್‌ಫೋನ್ ಬಳಕೆದಾರರಿಗೂ ಲಭ್ಯವಿದೆ.
ಹೌದು, ಆಂಡ್ರಾಯ್ಡ್ ಓರಿಯೊ ಆಧರಿಸಿ ಕೆಲವು ಹೆಚ್ಚುವರಿ ಕಸ್ಟಮೈಸೇಷನ್‌ಗಳೊಂದಿಗೆ ಬಂದಿರುವ 'ಪೊಕೊ F1' ಸ್ಮಾರ್ಟ್‌ಫೋನ್ ಲಾಂಚರ್ ಆಗಸ್ಟ್ 23 ರಿಂದಲೇ ಎಲ್ಲಾ ಶಿಯೋಮಿ ಸ್ಮಾರ್ಟ್‌ಫೊನ್‌ಗಳಿಗೆ ಲಭ್ಯವಿರುತ್ತದೆ ಎಂದು ಖಚಿತಪಡಿಸಿದೆ. 'ಪೊಕೊ F1' ಸ್ಮಾರ್ಟ್‌ಫೋನ್ ಬಿಡುಗಡೆ ಸಮಾರಂಭದಲ್ಲಿ ಈ ಸಿಹಿಸುದ್ದಿಯನ್ನು ಶಿಯೋಮಿ ಕಂಪೆನಿ ಪ್ರಕಟಿಸಿದೆ.

MIUI ಲಾಂಚರ್‌ಗೆ ಹೋಲಿಸಿದರೆ, ಪೊಕೊ ಎಫ್ 1 ಸ್ಮಾರ್ಟ್‌ಫೋನಿನೊಂದಿಗೆ ಬಂದಿರುವ ಲಾಂಚರ್ ಹೊಸ ಮತ್ತು ಸುಧಾರಿತ ಅಪ್ಲಿಕೇಶನ್ ಸರ್ಚ್ ಅಲ್ಗಾರಿದಮ್ ಅಪ್ಲಿಕೇಶನ್ ಟ್ರೇನೊಂದಿಗೆ ಬರುತ್ತಿದೆ ಹಾಗಾದರೆ, ಪೊಕೊ F1 ನೊಂದಿಗೆ ಬಂದಿರುವ ಲಾಂಚರ್ ಅನ್ನು ನಿಮ್ಮ ಶಿಯೋಮಿ ಸ್ಮಾರ್ಟ್‌ಫೋನಿನಲ್ಲಿ ಬಳಸುವುದು ಹೇಗೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಪೊಕೊ F1 ಲಾಂಚರ್ ಇನ್‌ಸ್ಟಾಲ್ ಮಾಡುವುದು ಹೇಗೆ?
ಪೊಕೊ F1 ಲಾಂಚರ್ ಅನ್ನು ಪಡೆಯಲು ನಾವಿಲ್ಲಿ ನೀಡಿರುವ 'Download the APK' ಲಿಂಕ್ ಅನ್ನು ಕ್ಲಿಕ್ ಮಾಡಿ. ನಂತರ, ಹೊಸದೊಂದು ವೆಬ್‌ಸೈಟ್ ತೆರೆದುಕೊಳ್ಳುತ್ತದೆ. ಅಲ್ಲಿ APK ಅನ್ನು ಡೌನ್ಲೋಡ್ ಮಾಡಿ. ಹೀಗೆ ಮಾಡಿದ ನಂತರ ನಿಮ್ಮ ಶಿಯೋಮಿ ಸ್ಮಾರ್ಟ್‌ಫೋನಿಗೆ ಪೊಕೊ ಲಾಂಚರ್ ಸ್ಥಾಪನೆಯಾಗುತ್ತದೆ. ಹೊಸ ಲಾಂಚರ್ ಅನ್ನು ಆನಂದಿಸಲು ಹೋಮ್ ಬಟನ್ ಒತ್ತಿರಿ.

ಪೊಕೊ F1 ಲಾಂಚರ್ ಬೇಡ ಎಂದರೆ?
ಪೊಕೊ ಲಾಂಚರ್ ನಿಮ್ಮ ಸ್ಮಾರ್ಟ್‌ಪೋನಿನಲ್ಲಿ ಸ್ಥಾಪನೆಯಾಗುವುದು ಬೇಡ ಎಂದರೆ, ಸ್ಮಾರ್ಟ್‌ಫೋನ್ ಸೆಟ್ಟಿಂಗ್ಸ್ ತೆರೆದು ಇನ್‌ಸ್ಟಾಲ್ ಆಪ್ಸ್> ಸಿಸ್ಟಮ್ ಲಾಂಚರ್ ಆಯ್ಕೆಮಾಡಿ. ಲಾಂಚರ್ ಅನ್ನು ಅನ್‌ಇನ್‌ಸ್ಟಾಲ್ ಮಾಡಿ. ಹೀಗೆ ಮಾಡಿದರೆ ನೀವು ಸ್ಮಾರ್ಟ್‌ಫೋನಿನಲ್ಲಿ ಈ ಮೊದಲು ಇದ್ದ ಲಾಂಚರ್ ಅನ್ನು ಮರಳಿ ಪಡೆಯುತ್ತೀರಾ.

ಹೇಗಿದೆ ಪೊಕೊ ಎಫ್ 1 ಸ್ಮಾರ್ಟ್‌ಫೋನ್!
ಟಾಪ್ ಎಂಡ್ ವಿಶೇಷತೆಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಯಲ್ಲಿ ಬಳಕೆದಾರರಿಗೆ ಅತ್ಯಂತ ಕಡಿಮೆ ಬೆಲೆಗೆ ನೀಡುವ ಸಲುವಾಗಿ ಪೊಕೊ ಬ್ರಾಂಡ್ ಅನ್ನು ಹುಟ್ಟಿ ಹಾಕಲಾಗಿದೆ. ಈ ಹಿನ್ನಲೆಯಲ್ಲಿ ಮೊದಲಾಗಿ ಕಾಣಿಸಿಕೊಂಡಿರುವ ಪೊಕೊ FI ಸ್ಮಾರ್ಟ್‌ಫೋನ್ ಫರ್ಫಾರ್ಮೆನ್ಸ್‌ಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ಇದಕ್ಕದಾಗಿಯೇ ಇದನ್ನು ಮಾಸ್ಟರ್ ಆಫ್ ಸ್ಪೀಡ್ ಎಂದು ಹೆಸರು ಪಡೆದುಕೊಂಡಿದೆ. ಬೆಲೆಯಲ್ಲಿ ಬೇರೆ ಯಾವುದೇ ಸ್ಮಾರ್ಟ್‌ಫೋನ್‌ಗಳು ಇದಕ್ಕೆ ಸೆಡ್ಡು ಹೊಡೆಯುವುದು ಸಾಧ್ಯವೇ ಇಲ್ಲ ಎಂದು ಮಾರುಕಟ್ಟೆ ತಜ್ಞರೇ ಬಣ್ಣಿಸಿದ್ದಾರೆ.

ಭಾರತದಲ್ಲಿಯೇ ಮೊದಲು:
ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಆದ್ಯತೆಯನ್ನು ಪಡೆದುಕೊಂಡಿರುವ ಹಿನ್ನಲೆಯಲ್ಲಿ ಶಿಯೋಮಿ, ತನ್ನ ನೂತನ ಸ್ಮಾರ್ಟ್‌ಫೋನ್ ಅನ್ನು ಜಾಗತಿಕವಾಗಿ ಭಾರತದಲ್ಲಿಯೇ ಲಾಂಚ್ ಮಾಡಿದೆ. ಈ ಮೂಲಕ ಭಾರತೀಯ ಮಾರುಕಟ್ಟೆಯ ಪ್ರಾಮುಖ್ಯತೆಯನ್ನು ಜಗತ್ತಿಗೆ ತೋರಿಸಲು ಮುಂದಾಗಿದೆ. ಮೊದಲಿಗೆ ಈ ಫೋನ್ ಇಲ್ಲಿ ಮಾರಾಟವಾಗಲಿದೆ. ಆನ್‌ಲೈನ್ ಸೇಲಿನಲ್ಲಿ ಪಡೆಯುವುದು ಕಷ್ಟ ಸಾಧ್ಯವಾಗಲಿದೆ.

ಗೇಮರ್‌ಗಳಿಗೆ ಸ್ಮಾರ್ಟ್‌ಫೋನ್:
ಪೊಕೊ FI ಸ್ಮಾರ್ಟ್‌ಫೋನ್ ಗೇಮರ್‌ಗಳಿಗೆ ವಿನ್ಯಾಸ ಮಾಡಲಾಗಿದ್ದು, ಇದಕ್ಕಾಗಿಯೇ ಸ್ನಾಪ್‌ಡ್ರಾಗನ್ 845 ಪ್ರೋಸೆಸರ್ ಅನ್ನು ಕಾಣಬಹುದಾಗಿದೆ. ಮಾರುಕಟ್ಟೆಯಲ್ಲಿ ಕೆಲವೇ ಸ್ಮಾರ್ಟ್‌ಫೋನ್‌ಗಳು ಈ ಪ್ರೋಸೆಸರ್ ಹೊಂದಿವೆ. ಇದಲ್ಲದೇ ಆಡ್ರಿನೋ 630 GPUವನ್ನು ನೀಡಲಾಗಿದ್ದು, 2.8GHz CPU ಬಳಕೆದಾರರಿಗೆ ವೇಗದ ಕಾರ್ಯಚರಣೆಯನ್ನು ನೀಡಲಿದ್ದು, ಮಾರುಕಟ್ಟೆಯ ಟಾಪ್ ಎಂಡ್ ಪ್ರೋಸೆಸರ್ ಇದಾಗಿದೆ.

ಗೇಮರ್ ಗಳ ಸ್ವರ್ಗ:
ಹೆಚ್ಚಿನ ಗೇಮ್ ಆಡುವ ಸಂದರ್ಭದಲ್ಲಿ ಬಿಸಿಯಾಗಬಾರದು ಎನ್ನುವ ಕಾರಣಕ್ಕಾಗಿ ಲಿಕ್ವೀಡ್ ಕೂಲಿಂಗ್ ಟೆಕ್ನಾಲಜಿಯನ್ನು ಬಳಕೆ ಮಾಡಿಕೊಳ್ಳಲಾಗಿದೆ. ಇದು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಬಿಸಿ ಮಾಡುವುದನ್ನು ಕಡಿಮೆ ಮಾಡಲಿದೆ. ಇದರಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಗೇಮ್‌ಗಳನ್ನು ಹೆಚ್ಚು ಹೊತ್ತು ಆಡಬಹುದಾಗಿದೆ. ಈ ಹೊಸ ತಂತ್ರಜ್ಞಾನ 300% ವೇಗದಲ್ಲಿ ಬಿಸಿಯನ್ನು ತಡೆಯಲಿದೆ. ಈ ವಿಚಾರದಲ್ಲಿ ಒನ್‌ಪ್ಲಸ್ 6 ಗಿಂತಲೂ ಬೆಸ್ಟ್ ಎನ್ನಲಾಗಿದೆ. ಸ್ಯಾಮ್‌ಸಂಗ್‌ಗೆ ಸಹ ಸೆಡ್ಡು ಹೊಡೆಯಲಿದೆ.

ಬೆಂಚ್ ಮಾರ್ಕ್:
ಪೊಕೊ FI ಸ್ಮಾರ್ಟ್‌ಫೋನ್ ಅಂಟಂಟು ಬೆಂಚ್ ಮಾರ್ಕ್ ನಲ್ಲಿ 2,91,302 ಅಂಕವನ್ನು ಪಡೆದುಕೊಂಡಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಲಭ್ಯವಿರುವ ಟಾಪ್ ಎಂಡ್ ಸ್ಮಾರ್ಟ್ಫೋನ್ ಎನ್ನಿಸಿಕೊಂಡಿದೆ. ಇದು ಬೆಸ್ಟ್ ಗೇಮಿಂಗ್ ಫೋನ್ ಎನ್ನುವುದಕ್ಕೆ ಯಾವುದೇ ಸಂಶಯವಿಲ್ಲ ಎನ್ನಲಾಗಿದೆ. ಒನ್‌ಪ್ಲಸ್ 6 ಗಿಂತಲೂ ಬೆಸ್ಟ್ ಎನ್ನುವ ಮಾತು ಕೇಳಬಂದಿದೆ.

ಪೊಕೊ FI ಇನ್‌ಫ್ರಾರೆಡ್ ಫೇಸ್ ಅನ್‌ಲಾಕ್
6.18 ಇಂಚಿನ FHD+ ಗುಣಮಟ್ಟದ ಡಿಸ್‌ಪ್ಲೇಯನ್ನು ನೀಡಲಾಗಿದೆ. ಇದಲ್ಲದೇ ಇನ್‌ಫ್ರಾರೆಡ್ ಫೇಸ್ ಆನ್‌ಲಾಕ್ ಅನ್ನು ಇದರಲ್ಲಿ ಅಳವಡಿಸಲಾಗಿದೆ. ಇದು ಕತ್ತಲೆಯಲ್ಲಿಯೂ ನಿಮ್ಮ ಫೇಸ್ ಅನ್ನು ಗುರುತಿಸಿ ಫೇಸ್‌ಆನ್‌ಲಾಕ್ ಮಾಡಲಿದೆ ಎನ್ನಲಾಗಿದೆ. ಅಲ್ಲದೇ ಬೇರೆ ಯಾರು ಸಹ ನಿಮ್ಮ ಫೋಟೋವನ್ನು ಕದ್ದು ಆನ್‌ಲಾಕ್ ಮಾಡಲಾಗದ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ. ಇದಕ್ಕದಾಗಿ ಕ್ಯಾಮೆರಾವನ್ನು ಬಳಕೆ ಮಾಡಿಕೊಂಡಿಲ್ಲ ಎನ್ನಲಾಗಿದೆ. ಇದಕ್ಕದಾಗಿಯೇ ನೀಡಲಾಗದೆ. ನೋಚ್ ಬೇಡ ಎಂದರೆ ತೆಗೆದು ಬಿಡುವ ಆಯ್ಕೆಯನ್ನು ನೀಡಲಾಗಿದೆ.

ಬ್ಯಾಟರಿ:
ಪೊಕೊ FI ಸ್ಮಾರ್ಟ್‌ಫೋನ್ ಬ್ಯಾಟರಿ ಅತ್ಯುತ್ತಮವಾಗಿದೆ. ಇದಕ್ಕಾಗಿ ಇದರಲ್ಲಿ ಮಾರುಕಟ್ಟೆಯಲ್ಲಿ ಟಾಪ್ ಎಂಡ್ ಫೋನ್‌ಗಳಲ್ಲಿ ಇದರದಂತಹ 4000mAh ಬ್ಯಾಟರಿಯನ್ನು ನೀಡಿದ್ದು, ಇದು ಹೆಚ್ಚಿನ ಪ್ರಮಾಣದ ಬಾಳಿಕೆಯನ್ನು ನೀಡಲಿದೆ. ಫುಲ್ ಡೇ ಲೈಫ್ ನೀಡಲಿದೆ. ವೇಗವಾಗಿ ಚಾರ್ಜ್ ಆಗುವ ಸಲುವಾಗಿ ಕ್ವಿಕ್ ಚಾರ್ಜ್ 3.0ವನ್ನು ನೀಡಲಾಗಿದೆ.

4G +:
ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ 4G ಸೇವೆಯನ್ನು ಕಾಣಬಹುದಾಗಿದೆ. ಆದರೆ ಇದನ್ನು ಮೀರಿಸುವಂತೆ ಪೊಕೊ FI ಸ್ಮಾರ್ಟ್‌ಫೋನಿನಲ್ಲಿ 4G + ಸೇವೆಯನ್ನು ಮೊದಲ ಬಾರಿಗೆ ನೀಡುತ್ತಿದೆ. ಇದರಿಂದಾಗಿ ಬಳಕೆದಾರರು ಅತೀ ಹೆಚ್ಚು ವೇಗದ ಡೇಟಾವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಡ್ಯುಯಲ್ VoLTE ಸೇವೆಯನ್ನು ಇದರಲ್ಲಿ ನೀಡಲಾಗಿದೆ. ಬೆಸ್ಟ್ ನೆಟ್‌ವರ್ಕ್ ಎನ್ನಬಹುದಾಗಿದೆ.

8GB RAM- 256GB ಇಂಟರ್ನಲ್:
ಮಾರುಕಟ್ಟೆಯಲ್ಲಿ ಬೆಸ್ಟ್ ಎನ್ನಿಸಿಕೊಳ್ಳಬಹುದಾದ LPDDR4X 8GB RAM ಅನ್ನು ಪೊಕೊ FI ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ. ಇದಲ್ಲದೇ 256GB ಇಂಟರ್ನಲ್ ಮೆಮೊರಿಯನ್ನು ನೀಡಲಾಗುತ್ತಿದೆ. ಇದರಿಂದಾಗಿ ಹೆಚ್ಚಿನ ವೇಗದಲ್ಲಿ ಕಾರ್ಯನಿರ್ವಹಿಸುವುದಲ್ಲದೇ, ಹೆಚ್ಚು ಪ್ರಮಾಣದಲ್ಲಿ ಸೇವ್ ಮಾಡಿಕೊಳ್ಳುವ ಅವಕಾಶ ಮಾಡಿಕೊಟ್ಟಿದೆ. ಅಲ್ಲದೇ 256GB ವರೆಗೆ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ.

ಪೊಕೊ FI ಸ್ಮಾರ್ಟ್‌ಫೋನ್ ಡಿಸೈನ್:
ಹಾರ್ಡ್ ಕೋಟೆಡ್ ಪಾಲಿಕೋರ್ನೆಟ್ ಯೂನಿಬಾಡಿ ವಿನ್ಯಾಸವನ್ನು ಮಾಡಲಾಗಿದ್ದು, ಇದು ಬಿದ್ದರು ಒಡೆಯುವುದಿಲ್ಲ ಎನ್ನಲಾಗಿದೆ. ತುಂಬ ಗಟ್ಟಿಯಾಗಿ ನಿರ್ಮಿಸಲಾಗಿದೆ. USB -C ಅನ್ನು ಅಲ್ಲದೇ 3.5mm ಹೆಡ್‌ಪೋನ್ ಜಾಕ್ ಅನ್ನು ಇದರೊಂದಿಗೆ ನೀಡಲಾಗಿದೆ. ಒಟ್ಟು ನಾಲ್ಕು ಬಣ್ಣದಲ್ಲಿ ಈ ಸ್ಮಾರ್ಟ್‌ಫೋನ್ ಮಾರಾಟವಾಗಲಿದೆ. ಬಿದ್ದರು ಒಡೆಯ ಪೈಬರ್ ಅನ್ನು ನೀಡಲಾಗಿದೆ.

20 ಸೆಲ್ಫಿ ಕ್ಯಾಮೆರಾ:
ಪೊಕೊ FI ಸ್ಮಾರ್ಟ್‌ಫೋನಿನಲ್ಲಿ 20 ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಇದರಿಂದಾಗಿ ಬೆಸ್ಟ್ ಸೆಲ್ಪಿಗಳನ್ನು ತೆಗೆಯಬಹುದಾಗಿದೆ. ಇದಕ್ಕದಾಗಿ AI ಬ್ಯೂಟಿಫೈ ಅನ್ನು ಅಳವಡಿಸಲಾಗಿದ್ದು, ಬಳಕೆದಾರರು ಉತ್ತಮ ಸೆಲ್ಫಿಗಳನ್ನು ಕ್ಲಿಕಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.

ಹೊಸ ಮಾದರಿಯ ಇಂಟರ್‌ರ್ಪೇಸ್:
ಪೊಕೊ FI ಸ್ಮಾರ್ಟ್‌ಫೋನಿನಲ್ಲಿ ಪೊಕೊ ಲಾಂಚರ್ ಅನ್ನು ನೀಡಲಾಗಿದೆ. ಇದರೊಂದಿಗೆ ಟಾರ್ಬೋ ಚಾರ್ಜರ್ ನೊಂದಿಗೆ ಕಾಣಿಸಿಕೊಳ್ಳಲಿದೆ. ಇದಕ್ಕಾಗಿಯೇ ಭಿನ್ನ ಮಾದರಿಯ ಲಾಂಚರ್ ಅನ್ನು ನೀಡಲಾಗಿದೆ. ಇದು ಬೆಸ್ಟ್ ಎನ್ನಿಸಿಕೊಳ್ಳಲಿದೆ. ಇದು ಟಾಪ್ ಎಂಡ್ ವಿಶೇಷತೆಗಳನ್ನು ಹೊಂದಿದೆ. ಕಲರ್ಗಳಲ್ಲೇ ಆಪ್‌ಗಳನ್ನು ಕಂಡು ಹಿಡಿಯಬಹುದಾಗಿದೆ. ಆಂಡ್ರಾಯ್ಡ್ p ಆಪ್‌ಡೇಟ್ ಪಡೆದುಕೊಳ್ಳಲಿದೆ.

ಪೊಕೊ FI ಸ್ಮಾರ್ಟ್‌ಫೋನ್ ಬೆಲೆ:
ಮೂರು ಆವೃತ್ತಿ ಆವೃತ್ತಿಯಲ್ಲಿ ಪೊಕೊ FI ಸ್ಮಾರ್ಟ್‌ಫೋನ್ ಮಾರಾಟವಾಗಲಿದ್ದು, 6GB RAM + 64GB ಕೇವಲ ರೂ.20,999ಕ್ಕೆ ದೊರೆಯಲಿದೆ, ಮಾರುಕಟ್ಟೆಯನ್ನು ಈ ಬೆಲೆಯೂ ಅಲ್ಲಾಡಿಸಲಿದೆ. ಇದರೊಂದಿಗೆ 6GB RAM + 128GB ಆವೃತ್ತಿಯೂ 23,999ಕ್ಕೆ ದೊರೆಯಲಿದೆ. ಇದರೊಂದಿಗೆ 8GB RAM+256GB ಆವೃತ್ತಿಯೂ ರೂ.28,999ಕ್ಕೆ ಮಾರಾಟವಾಗಲಿದೆ. ಇನ್ನೊಂದು ಮಾದರಿಯಲ್ಲಿ 8GB RAM+256GB ಆವೃತ್ತಿಯೂ ರೂ.29999ಕ್ಕೆ ದೊರೆಯಲಿದೆ.

ಮೊದಲ ಸೇಲ್.
ರೂ,1000 ಕ್ಯಾಷ್ ಬ್ಯಾಕ್ ಸಹ ನೀಡಲಾಗಿದೆ. ಇದರೊಂದಾಗಿ ಗಿ 6GB RAM + 64GB ರೂ.19999ಕ್ಕೆ ದೊರೆಯಲಿದೆ ಎನ್ನಲಾಗಿದೆ. ಟಾಪ್ ಎಂಡ್ ಫೋನ್‌ವೊಂದು ಇಷ್ಟು ಕಡಿಮೆ ಬೆಲೆಗೆ ದೊರೆಯುವುದು ಸಾಧ್ಯವೇ ಇಲ್ಲ. 6GB RAM + 128GB ಆವೃತ್ತಿಯೂ 22,999ಕ್ಕೆ ಹಾಗೂ 8GB RAM+256GB ಆವೃತ್ತಿಯೂ ರೂ.27,999ಕ್ಕೆ ದೊರೆಯಯಲಿದೆ. ಅಲ್ಲದೇ ಜಿಯೋ 6T ಡೇಟಾವನ್ನು ನೀಡಲಿದೆ. ಇದು ಮೊದಲ ಸೇಲ್‌ನಲ್ಲಿ ಮಾತ್ರವೇ ಲಭ್ಯವಿರಲಿದೆ.


Click it and Unblock the Notifications








