ಶಿಯೋಮಿಯ 'ಪೊಕೊ x2' ಸ್ಮಾರ್ಟ್‌ಫೋನ್‌ನ ಫೀಚರ್ಸ್‌ ಬಹಿರಂಗ!

|

ಚೀನಾ ಮೂಲದ ಸ್ಮಾರ್ಟ್‌ಫೋನ್‌ ಕಂಪೆನಿ ಶಿಯೋಮಿ ಗೇಮರ್‌ಗಳಿಗಾಗಿಯೇ ಪೊಕೊ ಮೊಬೈಲ್‌ ಬ್ರ್ಯಾಂಡ್‌ ಅನ್ನ ಹುಟ್ಟುಹಾಕಿತ್ತು. ಈ ಮೂಲಕ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಬಾರಿ ಸಂಚಲನವನ್ನು ಸೃಷ್ಟಿಸಿತ್ತು. ಅದರಂತೆ 2018 ರಲ್ಲಿ ಪೊಕೊ ಎಫ್ 1 ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿದ ಶಿಯೋಮಿ ಇದೀಗ ಅದರ ಹೊಸ ಆವೃತ್ತಿಯಾದ ಪೊಕೊ X2 ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಮುಂದಾಗಿದೆ.

ಹೌದು

ಹೌದು, ಪೊಕೊ ಎಫ್‌1 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುವ ಮೂಲಕ ಹೊಸ ಟ್ರೆಂಡ್‌ ಹುಟ್ಟುಹಾಕಿದ್ದ ಶಿಯೋಮಿ ಇದೀಗ ಪೊಕೊ X2 ಪರಿಚಯಿಸಲು ಮುಂದಾಗಿದೆ. ಈ ಸ್ಮಾರ್ಟ್‌ಫೋನ್‌ ಹೇಗಿರಲಿದೆ ಅನ್ನೊ ಮಾಹಿತಿಯನ್ನ ಗೀಕ್‌ಬೆಂಚ್ ಪಟ್ಟಿಯಲ್ಲಿ ಗುರುತಿಸಲಾಗಿದೆ. ಈ ಮಾಹಿತಿ ಪ್ರಕಾರ ಪೊಕೊ X2 ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್ 10os ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದು ಕಸ್ಟಮ್ ಎಂಐಯುಐ ಕವಚವನ್ನು ಹೊಂದಿರಲಿದೆ ಎನ್ನಲಾಗ್ತಿದೆ. ಲೀಕ್‌ ಮಾಹಿತಿ ಪ್ರಕಾರ ಯಾವೆಲ್ಲಾ ಫೀಚರ್ಸ್‌ಗಳನ್ನ ಒಳಗೊಂಡಿದೆ ಅನ್ನೊದನ್ನ ತಿಳಿಯಲು ಈ ಲೇಖನವನ್ನ ಓದಿ.

ಡಿಸ್‌ಪ್ಲೇ

ಡಿಸ್‌ಪ್ಲೇ

ಈ ಸ್ಮಾರ್ಟ್‌ಫೋನ್‌ 1080 x 2340 ಪಿಕ್ಸೆಲ್‌ ರೆಸಲ್ಯೂಶನ್‌ ಹೊಂದಿರುವ 6.39-ಇಂಚಿನ ಅಮೋಲೆಡ್ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಹೊಂದಿರಲಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್‌ನೊಂದಿಗೆ ಬರಲಿದೆ ಎಂದು ಹೇಳಲಾಗಿದೆ. ಗೇಮರ್‌ಗಳಿಗೆ ಉತ್ತಮ ಅನುಭವ ನೀಡುವ ಶೈಲಿಯನ್ನ ಎಂದಿನಮತೆ ಇದರಲ್ಲಿಯೂ ಮುಂದುವರೆಸುವ ಸಾಧ್ಯತೆ ಇದ್ದು, ವಿಡಿಯೋ ವಿಕ್ಷಣೆಯಲ್ಲೂ ಡಿಸ್‌ಪ್ಲೇ ಉತ್ತಮವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಇನ್ನು ಈ ಸ್ಮಾರ್ಟ್‌ಫೋನ್‌ 'ಫೀನಿಕ್ಸಿನ್' ಎಂಬ 1.80GHz ಚಿಪ್‌ಸೆಟ್ ಹೊಂದಿರಲಿದೆ ಎಂದು ಗ್ರೀಕ್‌ ಬೆಂಚ್‌ ಅಭಿಪ್ರಾಯ ಪಟ್ಟಿದೆ. ಆದರೆ ಈ ಹಿಂದಿನ ಪೊಕೊ ಸ್ಮಾರ್ಟ್‌ಫೋನ್‌ಗಳು ಸ್ನ್ಯಾಪ್‌ಡ್ರಾಗನ್ 845 ಪ್ರೊಸೆಸರ್‌ಹೊಂದಿದ್ದರಿಂದ ಈಗ ಬಿಡುಗಡೆಗೆ ಸಿದ್ದವಿರುವ ಪೊಕೊ X2 ಸ್ನಾಪ್‌ಡ್ರಾಗನ್ 855+ ಅಥವಾ ಸ್ನಾಪ್‌ಡ್ರಾಗನ್ 865 ಪ್ರೊಸೆಸರ್ ಅನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲದೆ ಅಡ್ರಿನೊ 640 ಜಿಪಿಯು, 8GB RAMಮತ್ತು 128GB ಸಂಗ್ರಹ ಸಾಮರ್ಥ್ಯವನ್ನ ಹೊಂದಿರಲಿದೆ ಎಂದು ಹೇಳಲಾಗಿದೆ.

ಕ್ಯಾಮೆರಾ ಮಾದರಿ

ಕ್ಯಾಮೆರಾ ಮಾದರಿ

ಪೊಕೊ X2 ಸ್ಮಾರ್ಟ್‌ಫೋನ್‌ ಕ್ವಾಡ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೋನಿ ಐಎಂಎಕ್ಸ್ 686 ಸೆನ್ಸಾರ್‌ ಹೊಂದಿದ್ದು, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್, ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್, ಮತ್ತು ನಾಲ್ಕನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಇರಲಿವೆ ಎಂದು ಅಂದಾಜಿಸಲಾಗಿದೆ. ಅಲ್ಲದೆ ಡ್ಯುಯಲ್ ಸೆಲ್ಫಿ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾ 20 ಮೆಗಾಪಿಕ್ಸೆಲ್ ಮತ್ತು ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್‌ ಸೆನ್ಸಾರ್‌ ಒಳಗೊಂಡಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಪೊಕೊ X2 ಸ್ಮಾರ್ಟ್‌ಫೋನ್‌ 4,500mAh ಬ್ಯಾಟರಿ ಪ್ಯಾಕ್‌ಆಫ್‌ ಹೊಂದಿದ್ದು, 30W ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ನೀಡಲಿದೆ. ಅಲ್ಲದೆ ಪೊಕೊ X2 ಸಿಂಗಲ್-ಕೋರ್‌ನಲ್ಲಿ 547 ಪಾಯಿಂಟ್‌ಗಳನ್ನು ಮತ್ತು ಮಲ್ಟಿ-ಕೋರ್ ಪರೀಕ್ಷೆಗಳಲ್ಲಿ 1,767 ಪಾಯಿಂಟ್‌ಗಳನ್ನು ದಾಖಲಿಸಿದೆ. ಹಾಗೇ ನೋಡಿದರೆ ಪೊಕೊ X2 ಸ್ಮಾರ್ಟ್‌ಫೋನ್‌ ಕುರಿತು ಆನ್‌ಲೈನ್‌ನಲ್ಲಿ ಮಾಹಿತಿ ಲೀಕ್‌ ಆಗಿರುವುದು ಇದೇ ಮೊದಲು. ಆದ್ದರಿಂದ, ಇದು ಪೊಕೊ ಎಫ್ 2 ರಿಬ್ರಾಂಡೆಡ್ ಇಲ್ಲವೇ ಸಂಪೂರ್ಣ ಹೊಸ ಸ್ಮಾರ್ಟ್‌ಫೋನ್‌ ಆಗಿರಲಿದೆಯಾ ಅನ್ನೊದನ್ನ ಊಹಿಸುವುದು ತುಸು ಕಷ್ಟವಾಗಲಿದೆ.

Most Read Articles
Best Mobiles in India

English summary
In December 2019, Xiaomi Poco Global Head Alvin Tse hinted that a new Poco phone will launch in 2020. Recently, a trademark application was filed by Xiaomi for the Poco F2. This suggested that the Poco F2 will see the light of the day in a few months. Interestingly, a phone with Poco X2 label has now been listed on Geekbench revealing its key specs and some of the features of the device.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X