ಶಿಯೋಮಿಯ ಹೊಸ ಸರಣಿ ಸ್ಮಾರ್ಟ್‌ಪೋನ್ ಬಿಡುಗಡೆಗೆ ಹೆದರಿದೆ ಮೊಬೈಲ್ ಮಾರುಕಟ್ಟೆ!!

|

ಶಿಯೋಮಿ ಫೋಕೊಫೋನ್ ಸರಣಿಯ 'ಫೋಕೊಫೋನ್ ಎಫ್1' ಎಂಬ ಸ್ಮಾರ್ಟ್‌ಫೋನ್ ಒಂದನ್ನು ಶಿಯೋಮಿ ಶೀಘ್ರದಲ್ಲೇ ಬಿಡುಗಡೆ ಮಾಡುತ್ತಿದೆ ಎಂಬ ಸುದ್ದಿ ಈಗ ವೈರಲ್ ಆಗಿದೆ. ಭಾರತ ಮತ್ತು ಚೀನಾ ಸೇರಿದಂತೆ ಶಿಯೋಮಿ ಕಂಪೆನಿ ಹೊಂದಿರುವ ಎಲ್ಲಾ ದೇಶಗಳ ಮೊಬೈಲ್ ಮಾರುಕಟ್ಟೆಗಳಲ್ಲಿಯೂ ಈ ಸ್ಮಾರ್ಟ್‌ಫೋನ್ ಏಕಕಾಲದಲ್ಲಿ ಬಿಡುಗಡೆಯಾಗುತ್ತಿದೆ.

ಹೌದು, ಮೊಬೈಲ್ ಮಾರುಕಟ್ಟೆಯಲ್ಲಿ ಬಜೆಟ್ ಸ್ಮಾರ್ಟ್‌ಪೋನ್‌ಗಳ ಮೂಲಕ ಧೂಳೆಬ್ಬಿಸುತ್ತಿರುವ ಶಿಯೋಮಿ ಕಂಪೆನಿ ಈಗ ಮಧ್ಯಮ ವರ್ಗದ ಸ್ಮಾರ್ಟ್‌ಪೋನ್‌ಗಳ ಬಗ್ಗೆ ದೃಷ್ಟಿ ನೆಟ್ಟಿದ್ದು, ಒನ್‌ಪ್ಲಸ್, ಸ್ಯಾಮ್‌ಸಂಗ್ ಕಂಪೆನಿಗಳ ಮಧ್ಯಮ ವರ್ಗದ ಸ್ಮಾರ್ಟ್‌ಪೋನ್‌ಗಳಿಗೆ ಸೆಡ್ಡುಹೊಡೆಯಲು ಈಗ ಈ ಹೊಸ ಸರಣಿಯ ಸ್ಮಾರ್ಟ್‌ಪೋನ್ ಒಂದನ್ನು ಪರಿಚಯಿಸುತ್ತಿದೆ.

ಶಿಯೋಮಿಯ ಹೊಸ ಸರಣಿ ಸ್ಮಾರ್ಟ್‌ಪೋನ್ ಬಿಡುಗಡೆಗೆ ಹೆದರಿದೆ ಮೊಬೈಲ್ ಮಾರುಕಟ್ಟೆ!!

ಶಿಯೋಮಿ ಫೋಕೊಫೋನ್ ಎಫ್1 ಸ್ಮಾರ್ಟ್‌ಫೋನ್ ಬಿಡುಗಡೆ ದಿನಾಂಕ ಈ ವರೆಗೂ ಪ್ರಕಟವಾಗದಿದ್ದರೂ ಸಹ, ಈ ಸ್ಮಾರ್ಟ್‌ಪೋನಿನ ಬೆಲೆ ಮತ್ತು ಫೀಚರ್ಸ್‌ಗಳು ಈಗ ಲೀಕ್ ಆಗಿವೆ. ಹಾಗಾದರೆ, ಶಿಯೋಮಿ ಫೋಕೊಫೋನ್ ಎಫ್ ಸ್ಮಾರ್ಟ್‌ಫೋನ್ ಹೊಂದಿರುವ ಫೀಚರ್ಸ್ ಯಾವುವು? ಸ್ಮಾರ್ಟ್‌ಫೋನ್ ಬೆಲೆ ಎಷ್ಟು ಎಂಬ ಪೂರ್ಣ ಮಾಹಿತಿಯನ್ನು ಮುಂದೆ ತಿಳಿಯಿರಿ.

ಫೋಕೊಫೋನ್ ಎಫ್ 1 ವಿನ್ಯಾಸ!

ಫೋಕೊಫೋನ್ ಎಫ್ 1 ವಿನ್ಯಾಸ!

18:9ರ ಆಕಾರ ಅನುಪಾತದಲ್ಲಿ 2160 × 1080 ಪಿಕ್ಸೆಲ್ ಸಾಮರ್ಥ್ಯದ 5.99-ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇಯನ್ನು 'ಫೋಕೊಫೋನ್ ಎಫ್1' ಸ್ಮಾರ್ಟ್‌ಫೋನ್ ಹೊಂದಿದೆ ಎನ್ನಲಾಗಿದೆ. ಹಿಂಬಾಗದಲ್ಲಿ ಫಿಂಗರ್‌ಪ್ರಿಂಟ್ ಆಯ್ಕೆ ಮತ್ತು ಡ್ಯುಯಲ್ ಕ್ಯಾಮೆರಾಗಳನ್ನು ಹೊಂದಿರುವ ಈ ಸ್ಮಾರ್ಟ್‌ಪೋನ್ ವಿನ್ಯಾಸ ಹೈ ಎಂಡ್ ಸ್ಮಾರ್ಟ್‌ಫೋನ್‌ಗಳಂತಿದೆ.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

ಫೋಕೊಫೋನ್ ಎಫ್1 ಫೋನ್ ಶಿಯೋಮಿಯ ಹೈ ಎಂಡ್ ಸ್ಮಾರ್ಟ್‌ಫೋನ್ ಆಗಿರುವುದರಿಂದ, ಕ್ವಾಲ್ಕಾಮ್ ಕಂಪೆನಿಯ ಸ್ನ್ಯಾಪ್‌ಡ್ರಾಗನ್ 845 SOC ಪ್ರೊಸೆಸರ್ ಅನ್ನು ನೀಡಲಾಗಿದೆ. ಜೊತೆಗೆ 6GB RAM ಮತ್ತು 64GB ಹಾಗೂ 128GB ವೆರಿಯಂಟ್‌ಟ್‌ಗಳಲ್ಲಿ ಸ್ಮಾರ್ಟ್‌ಪೋನ್ ಬಿಡುಗಡೆಯಾಗುತ್ತಿದೆ ಎಂದು ಹೇಳಲಾಗಿದೆ.

ಕ್ಯಾಮೆರಾ ಮಾಹಿತಿ ಇಲ್ಲ!

ಕ್ಯಾಮೆರಾ ಮಾಹಿತಿ ಇಲ್ಲ!

ಫೋಕೊಫೋನ್ ಎಫ್1 ಸ್ಮಾರ್ಟ್‌ಫೋನಿನ ಚಿತ್ರಗಳ ಮೂಲಕ ಈ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾಗಳನ್ನು ಹೊಂದಿರುವುದನ್ನು ತಿಳಿಯಬಹುದಾದರೂ ಈ ಸ್ಮಾರ್ಟ್‌ಫೋನಿನ ಕ್ಯಾಮರಾ ಸಾಮರ್ಥ್ಯ ಬಹಿರಂಗವಾಗಿಲ್ಲ. ಆದರೆ, ಈ ಫೋನಿನಲ್ಲಿ ಕ್ಯಾಮರಾ ತಂತ್ರಜ್ಞಾನವೆ ಹೆಚ್ಚು ವಿಶೇಷತೆ ಎಂದು ಶಿಯೋಮಿ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

4000mAh ಬ್ಯಾಟರಿ!

4000mAh ಬ್ಯಾಟರಿ!

ಮೊಬೈಲ್ ಬಳಕೆದಾರರ ನಿರೀಕ್ಷೆಗೆ ತಕ್ಕಂತೆ ಫೋಕೊಫೋನ್ ಎಫ್1 ಸ್ಮಾರ್ಟ್‌ಫೋನಿನಲ್ಲಿ 4000mAH ಶಕ್ತಿಯ ಬ್ಯಾಟರಿಯನ್ನು ನೀಡಲಾಗಿದೆ. ಬ್ಯಾಟರಿ ತಂತ್ರಜ್ಞಾನದಲ್ಲಿ ಸುಧಾರಣೆ ತಂದಿರುವ ಶಿಯೋಮಿ ಕಂಪೆನಿ ಫಾಸ್ಟ್‌ಚಾರ್ಜಿಂಗ್ ತಂತ್ರಜ್ಞಾನದ ಜೊತೆಗೆ ಬ್ಯಾಟರಿ ಉಳಿಸುವ ತಂತ್ರಜ್ಞಾನವನ್ನು ಸ್ಮಾರ್ಟ್‌ಪೋನಿನಲ್ಲಿ ನೀಡಿದೆ ಎನ್ನಲಾಗಿದೆ.

ಇತರೆ ಫೀಚರ್ಸ್ ಮತ್ತು ಬೆಲೆ

ಇತರೆ ಫೀಚರ್ಸ್ ಮತ್ತು ಬೆಲೆ

ಆಂಡ್ರಾಯ್ಡ್ 8.1 ಓರಿಯೊ ಆಧಾರಿತ MIUI 9ನ, ಫೇಸ್‌ಅನ್‌ಲಾಕ್, ಬ್ಯಾಂಡ್ 40 LTE ಬೆಂಬಲವನ್ನು ಒಳಗೊಂಡಿರುವ ಈ ಸ್ಮಾರ್ಟ್‌ಫೋನ್ ಇತರೆ ಎಲ್ಲಾ ಸಾಮಾನ್ಯ ಹೈ ಎಂಡ್ ಫೀಚರ್ಸ್‌ಗಳನ್ನು ಹೊಂದಿದೆ. ಇಷ್ಟೆಲ್ಲಾ ಫೀಚರ್ಸ್ ಹೊಂದಿರಬಹುದಾದ ಈ ಸ್ಮಾರ್ಟ್‌ಪೋನಿನ ಆರಂಭಿಕ ಬೆಲೆ 33,600 ರೂಪಾಯಿಗಳಿಂದ ಶುರುವಾಗಲಿದೆ ಎಂದು ಹೇಳಲಾಗಿದೆ.

Best Mobiles in India

English summary
Xiaomi Pocophone F1 is suggested to come with Snapdragon 845 SoC alongside 6GB of RAM. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X