ಶ್ಯೋಮಿ ರೆಡ್ಮೀ 1ಎಸ್ ಸಕ್ಸೆಸರ್ ಜನವರಿ 4 ಕ್ಕೆ ಆಗಮನ

By Shwetha
|

ಶ್ಯೋಮಿ ರೆಡ್ಮೀ 1 ಎಸ್‌ನ ಹೆಚ್ಚು ನಿರೀಕ್ಷಿತ ಸಕ್ಸೆಸರ್ ಜನವರಿ 4 ರಂದು ಲಾಂಚ್ ಆಗುವ ನಿರೀಕ್ಷೆ ಇದೆ. ಇತ್ತೀಚೆಗೆ ಶ್ಯೋಮಿ ಹ್ಯಾಂಡ್‌ಸೆಟ್ ತೆನ್ನಾ ಪ್ರಮಾಣೀಕೃತ ವೆಬ್‌ಸೈಟ್‌ನಲ್ಲಿ ಕಂಡುಬಂದಿದ್ದು 4 ಜಿ ಎಲ್‌ಟಿಇ ಸಂಪರ್ಕದೊಂದಿಗೆ ರೆಡ್ಮೀ 1ಎಸ್ ಸಕ್ಸೆಸರ್ ಆಗಿ ಶ್ಯೋಮಿ ಹ್ಯಾಂಡ್‌ಸೆಟ್ ಹೊರಹೊಮ್ಮಿದೆ.

ಇದನ್ನೂ ಓದಿ: ಹೊಸ ವರ್ಷಕ್ಕಾಗಿ ಹೊಚ್ಚ ಹೊಸ ಫೋನ್‌ಗಳು

ಅತ್ಯಾಧುನಿಕ ಅಂಟೂಟು ಬೆಂಚ್‌ಮಾರ್ಕ್‌ಗಳಿಗೆ ಅನುಗುಣವಾಗಿ ಹೆಚ್ಚು ನಿರೀಕ್ಷಿತ ರೆಡ್ಮೀ 2ಎಸ್, 4.7 ಇಂಚಿನ ಎಚ್‌ಡಿ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಆಂಡ್ರಾಯ್ಡ್ 4.4.4 ಕಿಟ್‌ಕ್ಯಾಟ್ ಇದರಲ್ಲಿ ಚಾಲನೆಯಾಗುತ್ತಿದೆ. 1.2GHZ ಕ್ವಾಡ್ ಕೋರ್ ಕೋರ್ಟೆಕ್ಸ್ A53 LTE ಸಕ್ರಿಯಗೊಂಡಿದ್ದು 64 ಬಿಟ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 410 ಪ್ರೊಸೆಸರ್ ಜೊತೆಗೆ ಅಡ್ರೆನೊ 306 ಜಿಪಿಯು ಇದರಲ್ಲಿದೆ. ಇದು 1 ಜಿಬಿ RAM ಅನ್ನು ಕೂಡ ಪಡೆದುಕೊಂಡಿದೆ.

ಇದನ್ನೂ ಓದಿ: ಸ್ಮಾರ್ಟ್‌ಫೋನ್ ಭದ್ರತೆಗಾಗಿ ಅತೀ ಅಗತ್ಯ ಈ ಸಲಹೆಗಳು

ಜನವರಿ 4 ಕ್ಕೆ ಆಗಮನ ಶ್ಯೋಮಿ ರೆಡ್ಮೀ 1ಎಸ್ ಸಕ್ಸೆಸರ್

ಫೋನ್‌ನ ಮುಂಭಾಗ ಕ್ಯಾಮೆರಾ 2 ಮೆಗಾಪಿಕ್ಸೆಲ್ ಆಗಿದ್ದು ಹಿಂಭಾಗ ಕ್ಯಾಮೆರಾ 8 ಮೆಗಾಪಿಕ್ಸೆಲ್‌ಗಳಾಗಿವೆ. 134x67.21x9.2mm ಅಳತೆಯಾಗಿದ್ದು 132 ಗ್ರಾಮ್‌ಗಳು ಇದರ ತೂಕವಾಗಿದೆ. ಇನ್ನು ಫೋನ್‌ನಲ್ಲಿ 8ಜಿಬಿ ಆಂತರಿಕ ಸಂಗ್ರಹಣೆ ಇದ್ದು ಇದನ್ನು 32 ಜಿಬಿಗೆ ವಿಸ್ತರಿಸಬಹುದಾಗಿದೆ. ಫೋನ್ ಬ್ಯಾಟರಿ 2200mAh ಆಗಿದ್ದು ಡ್ಯುಯಲ್ ಸಿಮ್ ಫೋನ್ 4ಜಿ ಎಲ್‌ಟಿಇ ಬೆಂಬಲವನ್ನು ಎರಡೂ ಸಿಮ್ ಕಾರ್ಡ್‌ಗಳಲ್ಲಿ ಪಡೆದುಕೊಂಡಿದೆ.

Best Mobiles in India

English summary
This article tells about The much-awaited successor to the Xiaomi Redmi 1S (also tipped as the Redmi 2S) is expected to launch on January 4, with the firm uploading a poster for an event on that date ahead of CES 2015 event.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X