Subscribe to Gizbot

ಶ್ಯೋಮಿಗಿನ್ನು ಭಾರತದಲ್ಲಿ ಭರ್ಜರಿ ಮಾರಾಟ

Written By:

ಭಾರತದಲ್ಲಿ ಶ್ಯೋಮಿ ಉತ್ಪನ್ನಗಳ ಆಮದು ಮತ್ತು ಮಾರಾಟದ ಮೇಲಿನ ನಿರ್ಬಂಧವೆಂಬ ಕಳ್ಳಾಟದ ನಡುವೆಯೇ ಕಂಪೆನಿ ಮೊದಲೇ ಮಾತುಕೊಟ್ಟಂತೆ ಕ್ವಾಲ್‌ಕಾಮ್ ಚಿಪ್‌ಸೆಟ್‌ನ ರೆಡ್ಮೀ 1ಎಸ್‌ನ ಮಾರಾಟವನ್ನು ಪ್ರಾರಂಭಿಸಿದೆ.

ಶ್ಯೋಮಿ ರೆಡ್ಮೀ 1ಎಸ್ ಫ್ಲಿಪ್‌ಕಾರ್ಟ್‌ನಲ್ಲಿ ರೂ 5,999 ಕ್ಕೆ ಲಭ್ಯವಿದ್ದು, ಸೋಮವಾರ ತಡರಾತ್ರಿಯವರೆಗೆ ಗ್ರಾಹಕರ ನೋಂದಾವಣೆಯನ್ನು ಮಾಡಿಕೊಂಡಿತ್ತು. ಆದರೆ ಸ್ಮಾರ್ಟ್‌ಫೋನ್ ಮೇಲೆ ದೆಹಲಿ ನ್ಯಾಯಾಲಯ ವಿಧಿಸಿದ್ದ ತಡೆಯನ್ನು ಅನುಸರಿಸಿ ಶ್ಯೋಮಿ ಪ್ರೇಮಿಗಳು ಭಾರೀ ನಿರಾಸೆಯನ್ನೇ ಅನುಭವಿಸಿದ್ದರು.

ರೆಡ್ಮೀ 1ಎಸ್‌ಗೆ ಡಿಮ್ಯಾಂಡಪ್ಪೊ ಡಿಮ್ಯಾಂಡ್

ತದನಂತರ ಶ್ಯೋಮಿಯು ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡ ನಂತರ ನ್ಯಾಯಾಲಯವು ಕ್ವಾಲ್‌ಕಾಮ್ ಆಧಾರಿತ ಚಿಪ್‌ಸೆಟ್ ಚಾಲನೆಯಲ್ಲಿರುವ ರೆಡ್ಮೀ 1 ಎಸ್ ಹಾಗೂ ರೆಡ್ಮೀ ನೋಟ್ 4ಜಿಯ ಆಮದು ಮತ್ತು ಮಾರಾಟಕ್ಕೆ ಅನುಮತಿಯನ್ನು ನೀಡಿತ್ತು. ಇನ್ನು ಕಂಪೆನಿಗೆ ಸಂತಸಕರ ವಿಚಾರವೆಂದರೆ ಫ್ಲ್ಯಾಶ್ ಸೇಲ್‌ನಲ್ಲಿ 50,000 ಹಾಗೂ 75,000 ಸ್ಮಾರ್ಟ್‌ಫೋನ್‌ಗಳ ನೋಂದಾವಣೆಯನ್ನು ಕಂಪೆನಿ ಪಡೆದುಕೊಂಡಿದೆ.

ಎರಿಕ್‌ಸನ್ ವರದಿಯ ಪ್ರಕಾರ ಕ್ವಾಲ್‌ಕಾಮ್ ಅಲ್ಲದ ಚಿಪ್‌ಸೆಟ್ ಅನ್ನು ಹೊಂದಿರುವ ರೆಡ್ಮೀ ನೋಟ್‌ನ 3ಜಿ ವೇರಿಯೇಂಟ್ ಅನ್ನು ಶ್ಯೋಮಿಯು ಭಾರತದಲ್ಲಿ ಮಾರಾಟ ಮಾಡುವಂತಿಲ್ಲ. ಇದಕ್ಕೆ ಬದಲಾಗಿ ಕಂಪೆನಿಯು ರೆಡ್ಮೀ ನೋಟ್ 4ಜಿಯನ್ನು ಫೋನ್ ಅನ್ನು ಭಾರತದಲ್ಲಿ ಲಭ್ಯವಿರುವಂತೆ ಮಾಡಲಿದೆ.

English summary
This article tells about After the dramatic ban on smartphone imports and sales in India, Xiaomi's reprieve last week for handsets based on Qualcomm chipsets will on Tuesday see the Chinese smartphone manufacturer bring the Redmi 1S back on sale again, as promised.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot