ರೆಡ್ ಮಿ 6 ಸ್ಮಾರ್ಟ್ ಪೋನ್ ಸರಣಿ ಬಿಡುಗಡೆಗೆ ಜೂನ್ 12ಕ್ಕೆ ಫಿಕ್ಸ್ ಆಗಿದೆ ಮುಹೂರ್ತ...
ಬಹುನಿರೀಕ್ಷಿತ ರೆಡ್ ಮಿ 6 ಸರಣಿಯ ಸ್ಮಾರ್ಟ್ ಪೋನ್ ಬಿಡುಗಡೆಗೆ ಚೀನಾದಲ್ಲಿ ಇದೇ ಜೂನ್ 12ಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಇತ್ತೀಚಿಗಷ್ಟೇ ಮೇ.31ರಂದು ಮೆಗಾ ಇವೆಂಟ್ ಮಾಡಿ ರೆಡ್ ಮಿ 8 ಸ್ಮಾರ್ಟ್ ಪೋನ್ ಬಿಡುಗಡೆ ಮಾಡಿದ್ದ ಕ್ಷಿಯೋಮಿ ಹೊಸ ಪೋಸ್ಟರ್ ಬಿಡುಗಡೆ ಮಾಡಿದ್ದು, ಇದೇ 12ಕ್ಕೆ ಮತ್ತೊಂದು ಇವೆಂಟ್ ಗೆ ಆಹ್ವಾನಿಸಿದೆ. ಆದರೆ ತನ್ನ ಯಾವುದೇ ಯೋಜನೆಗಳ ಕುರಿತು ಅಧಿಕೃತವಾಗಿ ಕ್ಷಿಯೋಮಿ ಪ್ರಕಟಿಸಿಲ್ಲವಾದ್ದರಿಂದ ಕುತೂಹಲ ಸೃಷ್ಟಿಯಾಗಿದೆ.

ಪೋಸ್ಟರ್ ನಲ್ಲಿ ಬೃಹತ್ 6
ಕ್ಷಿಯೋಮಿ ಬಿಡುಗಡೆ ಮಾಡಿರುವ ಟೀಸರ್ ಪೋಸ್ಟರ್ ನಲ್ಲಿ ಬೃಹತ್ ಗಾತ್ರದ 6 ಬಳಸಿರುವುದರಿಂದ ರೆಡ್ ಮಿ 6 ಸರಣಿಯ ಸ್ಮಾರ್ಟ್ ಪೋನ್ ಅಂದೇ ಬಿಡುಗಡೆಯಾಗುತ್ತೆ ಎಂಬುದು ತಜ್ಞರ ಅಭಿಪ್ರಾಯ. ರೆಡ್ ಮಿ 6 ಜತೆಗೆ ಜೂನ್ 12ಕ್ಕೆ ಅದೇ ಸರಣಿಯ ಮತ್ತೇರಡು ಸ್ಮಾರ್ಟ್ ಪೋನ್ ಗಳು ಬಿಡುಗಡೆಯಾಗುತ್ತಿದ್ದು, ಗ್ರಾಹಕರ ನಿರೀಕ್ಷೆ ಹೆಚ್ಚಿದೆ.

ಲೀಕ್ ಆಗಿದೆ ಫೀಚರ್ಸ್
ರೆಡ್ ಮಿ 6 ಸರಣಿಯ ಸ್ಮಾರ್ಟ್ ಪೋನ್ ಗಳ ಫೀಚರ್ಸ್ ಹೀಗಾಗಲೇ ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು, ಫೀಚರ್ಸ್ ಲೀಕ್ ಆಗಿರುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ 18:9 ಅಸ್ಪೆಕ್ಟ್ ರೇಟಿಯೋದೊಂದಿಗೆ 5.84 ಇಂಚ್ FHD+ ಡಿಸ್ ಪ್ಲೇ, ಕ್ವಾಲ್ ಕಾಮ್ ಸ್ನಾಪ್ ಡ್ರಾಗನ್ 625 ಆಕ್ಟಾಕೋರ್ ಪ್ರೊಸೆಸರ್, 2.0 GHz ವೇಗ ಹೊಂದಿದೆ. Android Oreo ಆಧಾರಿತ MIUI 10 ಸಾಫ್ಟ್ ವೇರ್ ನೊಂದಿಗೆ ಕಾರ್ಯನಿರ್ವಹಿಸಲಿದೆ. ಮೆಟಾಲಿಕ್ ಬಾಡಿ ಹೊಂದಿದ್ದು, ಆಧುನಿಕ ವಿನ್ಯಾಸದೊಂದಿಗೆ ದೊಡ್ಡ ಡಿಸ್ ಪ್ಲೇ ಹೊಂದಿದೆ. ಸ್ಮಾರ್ಟ್ ಪೋನ್ 3 ವಿಧದಲ್ಲಿ ಬಿಡುಗಡೆಯಾಗುತ್ತಿದ್ದು, 16GB+2GB RAM, 32GB+3GB RAM ಮತ್ತು 64GB+4GB RAM ಹೊಂದಿರಲಿವೆ. ಇದರೊಂದಿಗೆ ಡ್ಯುಯಲ್ ಕ್ಯಾಮೆರಾ ವ್ಯವಸ್ಥೆ, 5MP ಸೆಲ್ಫಿ ಕ್ಯಾಮೆರಾ, 3,900mAh ಬ್ಯಾಟರಿ, ಹಿಂಬದಿಯಲ್ಲಿ ಫಿಂಗರ್ ಪ್ರಿಂಟ್ ಸೆನ್ಸಾರ್ ಹೊಂದಿರಲಿದೆ.

Redmi 6A
18:9 ಅಸ್ಪೆಕ್ಟ್ ರೇಟಿಯೋದೊಂದಿಗೆ 5.45 ಇಂಚ್ HD+ ಡಿಸ್ ಪ್ಲೇ, ಸ್ನಾಪ್ ಡ್ರಾಗನ್ 625 ಆಕ್ಟಾಕೋರ್ ಪ್ರೊಸೆಸರ್, Android Oreo ಆಧಾರಿತ MIUI 10ನಲ್ಲಿ ಕಾರ್ಯ ನಿರ್ವಹಿಸಲಿದೆ. 13 MP ಬ್ಯಾಕ್ ಕ್ಯಾಮೆರಾ, 5 MP ಫ್ರಂಟ್ ಕ್ಯಾಮೆರಾ, 3,000mAh ಬ್ಯಾಟರಿ, 3 ವಿಧದ ಮೆಮೊರಿಯಲ್ಲಿ ಲಭ್ಯವಿರಲಿದೆ.

Redmi 6 Pro
18:9 ಅಸ್ಪೆಕ್ಟ್ ರೇಟಿಯೋದೊಂದಿಗೆ 5.84 ಇಂಚ್ FHD+ ಡಿಸ್ ಪ್ಲೇ, ಆಕ್ಟಾಕೋರ್ ಚಿಪ್ ಸೆಟ್, Android Oreo ಆಧಾರಿತ MIUI 10ನಿಂದ ಕಾರ್ಯನಿರ್ವಹಿಸಲಿದೆ. ಮೆಮೊರಿ ವಿಸ್ತರಸಿಲು ಮೈಕ್ರೋSD ಕಾರ್ಡ್ ಸ್ಲಾಟ್, ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ವ್ಯವಸ್ಥೆ, 5MP ಫ್ರಂಟ್ ಕ್ಯಾಮೆರಾ, 4,000mAh ಬ್ಯಾಟರಿ ಸಾಮರ್ಥ್ಯ ಹೊಂದಿರಲಿದೆ.


Click it and Unblock the Notifications








