Home
ಸುದ್ದಿಜಾಲ

7,999 ರೂ.ಬೆಲೆಯ ಶಿಯೋಮಿ 'ರೆಡ್‌ಮಿ 8' ಖರೀದಿಸಲು ಯೋಗ್ಯವೇ?

ಭಾರತದಲ್ಲಿ ರೆಡ್‌ಮಿ 8 ಸ್ಮಾರ್ಟ್‌ಫೋನ್ ಬಿಡುಗಡೆಯೊಂದಿಗೆ ಶಿಯೋಮಿಯು ತನ್ನ ಬಜೆಟ್ ಉತ್ಪನ್ನ ಶ್ರೇಣಿಯನ್ನು ಮತ್ತಷ್ಟು ವಿಸ್ತರಿಸಿರುವುದು ನಿಮಗೆಲ್ಲಾ ಈಗಾಗಲೇ ತಿಳಿದಿದೆ ಎನ್ನಬಹುದು. ರೆಡ್‌ಮಿ 8 (3ಜಿಬಿ RAM + 32 ಜಿಬಿ ಮೆಮೊರಿ) ಮೂಲ ರೂಪಾಂತರವು ಕೇವಲ 7,999 ರೂ.ಗೆ ಬಿಡುಗಡೆಯಾಗಿದ್ದರೆ, 4 ಜಿಬಿ + 64 ಜಿಬಿ ಮೆಮೊರಿ ಸಾಮರ್ಥ್ಯದ ರೆಡ್‌ಮಿ 8 ಫೋನ್ 8,999 ರೂ.ಗಳಿಗೆ ಬಿಡುಗಡೆಯಾಗಿದೆ. ಅದಾಗ್ಯೂ, ಮೊದಲ 5 ಮಿಲಿಯನ್ ಯುನಿಟ್ ಟಾಪ್-ಎಂಡ್ ಫೋನ್ (4 ಜಿಬಿ + 64 ಜಿಬಿ) ಕೂಡ ವಿಶೇಷ ಕೊಡುಗೆಯಾಗಿ 7,999 ರೂ.ಗಳಿಗೆ ಸಿಗಲಿದೆ.

 5000 ಎಮ್ಎಹೆಚ್ ಬ್ಯಾಟರಿ

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಾಮರ್ಥ್ಯಗಳೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ, ಫಿಂಗರ್ಪ್ರಿಂಟ್ ಸೆನ್ಸರ್, 5000 ಎಮ್ಎಹೆಚ್ ಬ್ಯಾಟರಿ ಮತ್ತು ಫೇಸ್ ಅನ್ಲಾಕ್ ಸಾಮರ್ಥ್ಯಗಳೊಂದಿಗೆ ಇಂದು ರೆಡ್ಮಿ 8 ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಕಾಲಿಟ್ಟಿದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯೊಂದಿಗೆ ಬಂದಿರುವ ನೂತನ ರೆಡ್‌ಮಿ 8 ಫೋನ್ 6.22-ಇಂಚಿನ ಎಚ್‌ಡಿ + ಡಿಸ್ಪ್ಲೇ ಮತ್ತು ಸೆಲ್ಫಿ ಕ್ಯಾಮೆರಾಗೆ ವಾಟರ್ ಡ್ರಾಪ್ ದರ್ಜೆಯ ಶೈಲಿಯಲ್ಲಿದೆ. ಫಿಂಗರ್ಪ್ರಿಂಟ್ ಸೆನ್ಸರ್ ಹೊಂದಿರುವ ಈ ಸಾಧನವು ಔರಾ ಮಿರರ್ ವಿನ್ಯಾಸವನ್ನು ಹೊಂದಿದೆ ಎಂದು ಹೇಳಬಹುದು.

ಸ್ನಾಪ್‌ಡ್ರಾಗನ್ 439 SoC ಪ್ರೊಸೆಸರ್

ಇನ್ನು ಸ್ನಾಪ್‌ಡ್ರಾಗನ್ 439 SoC ಪ್ರೊಸೆಸರ್ ಮತ್ತು 512GB ವರೆಗೆ ಮೆಮೊರಿ ಹೆಚ್ಚಿಸಲು ಮೈಕ್ರೊ SD ಕಾರ್ಡ್ ಸ್ಲಾಟ್‌ಗಳನ್ನು ಸ್ಮಾರ್ಟ್‌ಫೋನ್ ಒಳಗೊಂಡಿದೆ. ಕ್ಯಾಮೆರಾ ವಿಭಾಗದಲ್ಲಿ ರೆಡ್ಮಿ 8 ರ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ 12 ಎಂಪಿ ಪ್ರೈಮರಿ ಸೋನಿ ಐಎಂಎಕ್ಸ್ 363 ಸೆನ್ಸಾರ್ ಎಫ್ / 1.8 ಅಪರ್ಚರ್ ಮತ್ತು ಪೋರ್ಟ್ರೇಟ್ಗಾಗಿ 2 ಎಂಪಿ ಸೆಕೆಂಡರಿ ಡೆಪ್ತ್ ಸೆನ್ಸಾರ್ ಇದೆ. ಗೂಗಲ್ ಲೆನ್ಸ್ ಬೆಂಬಲ ಮತ್ತು ಎಐ ದೃಶ್ಯ ಪತ್ತೆ ಮುಂತಾದ ವೈಶಿಷ್ಟ್ಯಗಳಿವೆ. ಹಾಗೆಯೇ ಈ ಸಾಧನವು 8 ಎಂಪಿ ಎಐ ಸೆಲ್ಫಿ ಕ್ಯಾಮೆರಾದೊಂದಿಗೆ ಬರುತ್ತದೆ.

18W ಫಾಸ್ಟ್ ಚಾರ್ಜಿಂಗ್‌

ಇವಿಷ್ಟು ರೆಡ್‌ಮಿ 8 ಫೋನಿನ ಸಾಮಾನ್ಯ ಫೀಚರ್ಸ್‌ಗಳಾದರೆ, 18W ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5000mAh ಬ್ಯಾಟರಿ ಮತ್ತು ಯುಎಸ್ಬಿ ಟೈಪ್-ಸಿ ಪೋರ್ಟ್‌ನಂತಹ ವಿಶೇಷ ವೈಶಿಷ್ಟ್ಯಗಳನ್ನು ಸ್ಮಾರ್ಟ್‌ಫೋನ್ ಒಳಗೊಂಡಿದೆ. ಹಾಗಾಗಿ, ಒಂದು ರೀತಿಯಲ್ಲಿ ರೆಡ್‌ಮಿ 8 ಕೂಡ ಕಂಪನಿಯ ಅತ್ಯಂತ ಒಳ್ಳೆ ಸ್ಮಾರ್ಟ್‌ಫೋನ್ ಎನ್ನಬಹುದು. ಆದರೆ, ಈ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 439 ಚಿಪ್‌ಸೆಟ್‌ನಿಂದಕೆಲಸ ಮಾಡುವುದು ನಿರಾಸೆ ಮೂಡಿಸುತ್ತದೆ. ಇದು ಒಂದು ರೀತಿಯಲ್ಲಿ ಎರಡು ಹೆಜ್ಜೆ ಮುಂದಕ್ಕೆ, ಒಂದು ಹೆಜ್ಜೆ ಹಿಂದಕ್ಕೆ ಇಟ್ಟಿರುವಂತೆ ಕಾಣುತ್ತಿದೆ.

AI ದೃಶ್ಯ

22-ಇಂಚಿನ ಎಫ್‌ಹೆಚ್‌ಡಿ + ಡಿಸ್ಪ್ಲೇ ವಿತ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್ ಹೊಂದಿರುವುದು ರೆಡ್ಮಿ 8 ಫೋನಿನ ಮೊದಲ ಆಕರ್ಷಣೆಯಾಗಿದ್ದರೆ, ರೆಡ್‌ಮಿ 8 ರ ಮೂಲ ರೂಪಾಂತರವು 3 ಜಿಬಿ RAM ಅನ್ನು ಪಡೆಯುತ್ತಿರುವುದು ಮತ್ತು 18W ಫಾಸ್ಟ್ ಚಾರ್ಜಿಂಗ್ ಹೊಂದಿರುವುದು ಮತ್ತೊಂದು ಆಕರ್ಷಣೆಯಾಗಿದೆ. ಕ್ಯಾಮೆರಾ ಸೆಟಪ್ 33 ವಿಭಾಗಗಳಿಗೆ AI ದೃಶ್ಯ ಪತ್ತೆಹಚ್ಚುವಿಕೆಯನ್ನು ಸಹ ಬೆಂಬಲಿಸುತ್ತಿದೆ. ಸೆಲ್ಫೀ ಕ್ಯಾಮೆರಾದ ಮಟ್ಟಿಗೆ ಹೇಳುವುದಾದರೆ, ಬೊಕೆ ಶಾಟ್‌ಗಳನ್ನು ಸೆರೆಹಿಡಿಯಲು ಪೋರ್ಟ್ರೇಟ್ ಮೋಡ್‌ನೊಂದಿಗೆ ಫೋನ್ ಸೆಲ್ಫೀ ಪ್ರಿಯರನ್ನು ಸೆಳೆಯುತ್ತಿದೆ.

ರೆಡ್‌ಮಿ 8 ಫೋನ್

ಒಟ್ಟಿನಲ್ಲಿ ರೆಡ್‌ಮಿ 8 ಫೋನ್ ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಉತ್ತಮ ಸ್ಮಾರ್ಟ್‌ಫೋನ್ ಆಗಿದೆ. ಆದರೆ, ನಾವು ಇನ್ನೂ ರೆಡ್‌ಮಿ 8 ರ ಕಾರ್ಯಕ್ಷಮತೆಯನ್ನು ಸಂಪೂರ್ಣವಾಗಿ ಪರೀಕ್ಷಿಸದಿದ್ದರೂ, ಸಿಪಿಯು ಆಯ್ಕೆಯು ಬಹಳ ಪ್ರಶ್ನಾರ್ಹವಾಗಿದೆ. ನಾವಿಲ್ಲಿ ನೆನಪಿಸಿಕೊಳ್ಳಬೇಕಾದರೆ, ರೆಡ್‌ಮಿ 7 ಅನ್ನು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 632 ಸಿಪಿಯುನೊಂದಿಗೆ ಬಿಡುಗಡೆ ಮಾಡಲಾಯಿತು, ಇದು ಇನ್ನೂ ವೇಗವಾಗಿ ಸಂಸ್ಕರಣೆ ಮತ್ತು ಡೌನ್‌ಲೋಡ್ ವೇಗ ಮತ್ತು ಒಟ್ಟಾರೆ ಜಿಪಿಯು ಕಾರ್ಯಕ್ಷಮತೆಯನ್ನು ನೀಡುತ್ತದೆ ಎಂಬುದು ಇಲ್ಲಿ ಗಮನಾರ್ಹವಾಗಿದೆ.

Best Mobiles in India

English summary
edmi 8 looks much premium than its predecessor. The smartphone comes in three colour variants- Sapphire Blue, Onyx Black and Ruby Red. We have got the Ruby red color variant and it looks gorgeous. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+