Home
ಸುದ್ದಿಜಾಲ

7,999 ರೂ.ಗೆ ಇಂದು ಮಾರಾಟಕ್ಕೆ ಬರುತ್ತಿದೆ ದೇಶದ ಬೆಸ್ಟ್ ಬಜೆಟ್ ಫೋನ್!

ಶಿಯೋಮಿಯ ನೂತನ ಬಜೆಟ್ ಸ್ಮಾರ್ಟ್‌ಫೋನ್ ರೆಡ್‌ಮಿ 8 ಇಂದು ಫ್ಲಿಪ್‌ಕಾರ್ಟ್, ಮಿ.ಕಾಮ್ ಮತ್ತು ಮಿ ಹೋಮ್ ಸ್ಟೋರ್‌ಗಳ ಮೂಲಕ ಮತ್ತೊಮ್ಮೆ ಮಾರಾಟಕ್ಕೆ ಸಿದ್ಧವಾಗಿದೆ. ಈ ತಿಂಗಳ ಆರಂಭದಲ್ಲಿ ದೇಶದಲ್ಲಿ ಬಿಡುಗಡೆಯಾಗಿರುವ ರೆಡ್‌ಮಿ 8 ಅಂದಿನಿಂದಲೂ ಕೆಲವು ಬಾರಿ ಮಾರಾಟವಾಗಿದ್ದು, ಇಂದು ಮಧ್ಯಾಹ್ನ 12 ಗಂಟೆಗೆ ಮತ್ತೊಮ್ಮೆ ಮಾರಾಟಕ್ಕೆ ಬರುತ್ತಿದೆ. ಇನ್ನು ಸ್ಮಾರ್ಟ್‌ಫೋನ್ ಪ್ರಚಾರದ ಕೊಡುಗೆಯ ಭಾಗವಾಗಿ ಕಂಪನಿಯು ಮೊದಲ 5 ಮಿಲಿಯನ್ ರೆಡ್‌ಮಿ 8 4 ಜಿಬಿ ರ್ಯಾಮ್ ಯೂನಿಟ್‌ಗಳನ್ನು ಕೇವಲ ರೂ. 7,999 ನೀಡುತ್ತಿದೆ.

ಎಚ್‌ಡಿಎಫ್‌ಸಿ

ಇದು ನಿಮಗೆ ನೇರವಾಗಿ ಸಿಗುತ್ತಿರುವಂತಹ ಮಾರಾಟದ ಕೊಡುಗೆಯಾದರೆ, ಎಚ್‌ಡಿಎಫ್‌ಸಿ ಬ್ಯಾಂಕ್ ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಮಾಡಿದ ಖರೀದಿಗಳಿಗೆ ಮಿ.ಕಾಮ್ ಶೇಕಡಾ 10 ರಷ್ಟು ತ್ವರಿತ ರಿಯಾಯಿತಿ ನೀಡುತ್ತದೆ. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅಥವಾ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನೊಂದಿಗೆ ಪಾವತಿಸುವಾಗ ಫ್ಲಿಪ್‌ಕಾರ್ಟ್ 5 ಪ್ರತಿಶತ ಕ್ಯಾಶ್‌ಬ್ಯಾಕ್ ನೀಡುತ್ತದೆ. ಫ್ಲಿಪ್‌ಕಾರ್ಟ್, ಮಿ.ಕಾಮ್‌ಗಳ ಜೊತೆಗೆ ಮಿ ಹೋಮ್ ಸ್ಟೋರ್‌ಗಳ ಮೂಲಕವೂ ಸ್ಮಾರ್ಟ್‌ಫೋನ್ ಖರೀದಿಗೆ ಲಭ್ಯವಿರುವುದು ಸಿಹಿಸುದ್ದಿಯಾಗಿದೆ.

 ಗೊರಿಲ್ಲಾ ಗ್ಲಾಸ್ 5

ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯೊಂದಿಗೆ ಬಂದಿರುವ ನೂತನ ರೆಡ್‌ಮಿ 8 ಫೋನ್ 6.22-ಇಂಚಿನ ಎಚ್‌ಡಿ + ಡಿಸ್ಪ್ಲೇ ಮತ್ತು ಸೆಲ್ಫಿ ಕ್ಯಾಮೆರಾಗೆ ವಾಟರ್ ಡ್ರಾಪ್ ದರ್ಜೆಯ ಶೈಲಿಯಲ್ಲಿದೆ. ಫಿಂಗರ್ಪ್ರಿಂಟ್ ಸೆನ್ಸರ್ ಹೊಂದಿರುವ ಈ ಸಾಧನವು ಇತರ ಕೆಲವು ಶಿಯೋಮಿ ಸ್ಮಾರ್ಟ್‌ಫೋನ್‌ಗಳಲ್ಲಿ ಕಂಡುಬರುವ ಔರಾ ಮಿರರ್ ವಿನ್ಯಾಸವನ್ನು ಹೊಂದಿದೆ ಎಂದು ಹೇಳಬಹುದು. ಇನ್ನು ಸ್ನಾಪ್‌ಡ್ರಾಗನ್ 439 SoC ಪ್ರೊಸೆಸರ್ ಮತ್ತು 512GB ವರೆಗೆ ಶೇಖರಣಾ ಸ್ಥಳವನ್ನು ಹೆಚ್ಚಿಸಲು ಮೀಸಲಾದ ಮೈಕ್ರೊ SD ಕಾರ್ಡ್ ಸ್ಲಾಟ್‌ಗಳನ್ನು ಸ್ಮಾರ್ಟ್‌ಫೋನ್ ಒಳಗೊಂಡಿದೆ.

 ರೆಡ್ಮಿ 8

ಕ್ಯಾಮೆರಾ ವಿಭಾಗದಲ್ಲಿ ರೆಡ್ಮಿ 8 ರ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ 12 ಎಂಪಿ ಪ್ರೈಮರಿ ಸೋನಿ ಐಎಂಎಕ್ಸ್ 363 ಸೆನ್ಸಾರ್ ಎಫ್ / 1.8 ಅಪರ್ಚರ್ ಮತ್ತು ಪೋರ್ಟ್ರೇಟ್ ಶಾಟ್‌ಗಳಿಗಾಗಿ 2 ಎಂಪಿ ಸೆಕೆಂಡರಿ ಡೆಪ್ತ್ ಸೆನ್ಸಾರ್ ಇದೆ. ಗೂಗಲ್ ಲೆನ್ಸ್ ಬೆಂಬಲ ಮತ್ತು ಎಐ ದೃಶ್ಯ ಪತ್ತೆ ಮುಂತಾದ ವೈಶಿಷ್ಟ್ಯಗಳಿವೆ. ಹಾಗೆಯೇ ಈ ಸಾಧನವು 8 ಎಂಪಿ ಎಐ ಸೆಲ್ಫಿ ಕ್ಯಾಮೆರಾದೊಂದಿಗೆ ಬರುತ್ತದೆ. 18W ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5000mAh ಬ್ಯಾಟರಿ ಮತ್ತು ಯುಎಸ್ಬಿ ಟೈಪ್-ಸಿ ಪೋರ್ಟ್ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

 32 ಜಿಬಿ ಶೇಖರಣಾ ಮಾದರಿ

3 ಜಿಬಿ RAM ಮತ್ತು 32 ಜಿಬಿ ಶೇಖರಣಾ ಮಾದರಿ ರೆಡ್ಮಿ 8 ಫೋನ್ ಬೆಲೆ ಬೆಲೆ ರೂ. 7,999 ರೂ.ಗಳಾಗಿದ್ದರೆ, 4 ಜಿಬಿ RAM ಮತ್ತು 64 ಜಿಬಿ ಸ್ಟೋರೇಜ್ ಹೊಂದಿರುವ ರೂಪಾಂತರವು ರೂ. 8,999 ರೂ. ಗಳಿಗೆ ಲಭ್ಯವಿದೆ. ಇನ್ನು ಹಬ್ಬದ ಆಫರ್ ಆಗಿ ಮೊದಲ ಐದು ಮಿಲಿಯನ್ ರೆಡ್‌ಮಿ 8 ಯೂನಿಟ್‌ ಸ್ಮಾರ್ಟ್‌ಫೋನ್‌ಗಳನ್ನು (ಹೈ-ಎಂಡ್ ರೂಪಾಂತರಕ್ಕೆ) 1,000 ರೂ. ರಿಯಾಯಿತಿಯಲ್ಲಿ ನೀಡಲು ಕಂಪೆನಿ ಮುಂದಾಗಿದ್ದು, 4 ಜಿಬಿ RAM ಮತ್ತು 64 ಜಿಬಿ ಸ್ಟೋರೇಜ್ ಹೊಂದಿರುವ ರೆಡ್ಮಿ 8 ಫೋನ್ ಅನ್ನು ಸಹ 7,999 ರೂ.ಗಳಿಗೆ ಖರೀದಿಸಬಹುದಾಗಿದೆ.

Best Mobiles in India

English summary
Redmi 8 to Go on Sale Today via Flipkart, Mi.com, Mi Home Stores: Price, Offers, Specifications. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+