ಫೆಬ್ರವರಿ 14 ರಂದು ಭಾರತದಲ್ಲಿ ಶಿಯೋಮಿ ಫೋನ್ ರಿಲೀಸ್ ಪಕ್ಕಾ!..ಯಾವುದು ಗೊತ್ತಾ!?
ಶಿಯೋಮಿ ಕಂಪೆನಿ 'ರೆಡ್‌ಮಿ ನೋಟ್ 5' ಬಿಡುಗಡೆಯಾಗುವ ಸುಳಿವು ನೀಡಿದ್ದು, ಫೆಬ್ರವರಿ 14 ರಂದು "5" ಫೋನ್ ಬಿಡುಗಡೆಯಾಗಲಿದೆ ಎಂದು ಪತ್ರಿಕಾ ಪ್ರಕಟಣೆಯನ್ನು ಕಳುಹಿಸಿದೆ.!!
ಶಿಯೋಮಿಯ ಅತ್ಯಂತ ಹೆಚ್ಚು ನಿರೀಕ್ಷಿತ ಸ್ಮಾರ್ಟ್‌ಫೋನ್ " ಶಿಯೋಮಿ ರೆಡ್‌ಮಿ ನೋಟ್ 5" ಸ್ಮಾರ್ಟ್‌ಫೋನ್ ಇದೇ ಫೆಬ್ರವರಿ 14 ರಂದು ಬಿಡುಗಡೆಯಾಗಲಿದೆ ಎನ್ನಲಾಗಿದೆ.! ಶಿಯೋಮಿ ಕಂಪೆನಿ 'ರೆಡ್‌ಮಿ ನೋಟ್ 5' ಬಿಡುಗಡೆಯಾಗುವ ಸುಳಿವು ನೀಡಿದ್ದು, ಫೆಬ್ರವರಿ 14 ರಂದು "5" ಫೋನ್ ಬಿಡುಗಡೆಯಾಗಲಿದೆ ಎಂದು ಪತ್ರಿಕಾ ಪ್ರಕಟಣೆಯನ್ನು ಕಳುಹಿಸಿದೆ.!!
2017ರ ಆರಂಭದಲ್ಲಿ ಬಿಡುಗಡೆಯಾಗಿದ್ದ ರೆಡ್‌ಮಿ ಮಿ ನೋಟ್ 4 ಭಾರತದಲ್ಲಿ ಟ್ರೆಂಡ್ ಸೃಷ್ಟಿಸಿದ ನಂತರ ರೆಡ್‌ಮಿ ನೋಟ್ 5 ಅನ್ನು ಭಾರತದಲ್ಲಿ ಮೊದಲು ಬಿಡುಗಡೆ ಮಾಡುವ ಅಭಿಲಾಷೆಯನ್ನು ಶಿಯೋಮಿ ಕಂಪೆನಿ ಹೊಂದಿದ್ದರಿಂದ, ಈ ಪ್ರೇಮಿಗಳ ದಿನಕ್ಕೆ ರೆಡ್‌ಮಿ ನೋಟ್ 5 ಭಾರತತದಲ್ಲಿ ಬಿಡುಗಡೆಯಾಗುವ ಸಂಭವ ಹೆಚ್ಚಿದೆ.!!

ಭಾರತದಲ್ಲಿ ಶಿಯೋಮಿ ಕಂಪೆನಿ ಈ ವರ್ಷದಲ್ಲಿ ಬಿಡುಗಡೆ ಮಾಡುತ್ತಿರುವ ಮೊದಲ ಸ್ಮಾರ್ಟ್‌ಫೋನ್ಇದಾಗಿದ್ದು, ಒಂದು ವೇಳೆ ಬಿಡಗಡೆಯಾಗಲಿರುವ ಫೋನ್ ರೆಡ್ ಮಿ ನೋಟ್ 5 ಆಗಿದ್ದರೆ, ರೆಡ್ ಮಿ ನೋಟ್ 5 ಫೀಚರ್ಸ್ ಏನು? ರೆಡ್ ಮಿ ನೋಟ್ 5 ವಿಶೇಷತೆಗಳೇನು? ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಡಿಸ್‌ಪ್ಲೇ ಮತ್ತು ವಿನ್ಯಾಸ!!
ರೆಡ್‌ಮಿ ನೋಟ್ 4 ಫೋನ್ ವಿನ್ಯಾಸದಲ್ಲಿ ಹೆಚ್ಚು ಬದಲಾವಣೆಯಾಗಿದ್ದು, ಚೀನಾದ ಮತ್ತೊಂದು ವೆಬ್‌ಸೈಟ್ 'ವಿಬೊ' ನೀಡಿರುವ ಮಾಹಿತಿಯಂತೆ ರೆಡ್‌ಮಿ ನೋಟ್ 1080 x 2160 ಪಿಕ್ಸೆಲ್ ರೆಸಲ್ಯೂಶನ್ ಹೈ ಹೆಚ್‌ಡಿ 5.5 ಇಂಚ್ ಡಿಸ್‌ಪ್ಲೇ ಹೊಂದಿರಲಿದೆ. 18:9 ರೆಷ್ಯೂ ಸ್ಕ್ರೀನ್ ಮೂಲಕ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಕಾಲಿಡಲಿದೆ.!!


ಕ್ಯಾಮೆರಾಗೆ ಹೆಚ್ಚು ಒತ್ತು!!
ರೆಡ್‌ಮಿ ನೋಟ್ 5 ಕ್ಯಾಮೆರಾದಲ್ಲಿ ಭಾರಿ ಬದಲಾವಣೆಯಾಗಿದ್ದು, 16 MP ಡ್ಯುಯಲ್ ರಿಯರ್ ಕ್ಯಾಮೆರಾ ಹಾಗೂ 13 MP ಸೆಲ್ಫಿ ಕ್ಯಾಮೆರಾಗಳು ಇರಲಿವೆ.!! ಇದು ರೆಡ್‌ಮಿ ನೋಟ್ 4ನಲ್ಲಿದ ನೂನ್ಯತೆಗಳನ್ನು ಸರಿಪಡಿಸಲಿದೆ ಎಂದು 'ವಿಬೊ' ವೆಬ್‌ಸೈಟ್ ಅಭಿಪ್ರಾಯ ವ್ಯಕ್ತಪಡಿಸಿದೆ!!

ಸ್ನ್ಯಾಪ್‌ಡ್ರಾಗನ್ 630 ಪ್ರೋಸೆಸರ್!!
ರೆಡ್‌ಮಿ ನೋಟ್ 5 ಕಾರ್ಯಚರಣೆಗಾಗಿ ರೆಡ್‌ಮಿ ನೋಟ್ 4ನಲ್ಲಿ ನೀಡಿದ್ದ 64 ಬಿಟ್ ಸ್ನ್ಯಾಪ್‌ಡ್ರಾಗನ್ 630 ಪ್ರೋಸೆಸರ್ ಅನ್ನೇ ತರಲಾಗಿದೆ. ಇದರೊಂದಿಗೆ ಆಡ್ರಿನೋ 508 GPU ಸಹ ಇರಲಿದ್ದು, ಗ್ರಾಫಿಕ್ಸ್ ಗೇಮ್ ಅನುಭವ ಮತ್ತಷ್ಟು ಹೆಚ್ಚಲಿದೆ ಎನ್ನುತ್ತಿದೆ ವರದಿ.!!

ಆಂಡ್ರಾಯ್ಡ್ 7.1.1 ಮತ್ತು MIUI 9 ಇರಲಿದೆ.!!
ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 7.1.1 ಮತ್ತು MIUI 9ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಇದು ಟಾಪ್ ಆಂಡ್ರಾಯ್ಡ್ ಮತ್ತು MIUI ಆವೃತ್ತಿಯಾಗಿದೆ. ಬಳಕೆದಾರಿಗೆ ಹೊಸ ಅನುಭವನ್ನು ನೀಡುವುದರ ಜೊತೆಗೆ ಆಂಡ್ರಾಯ್ಡ್ ಓರಿಯೋಗೆ ಅಪ್‌ಡೇಟ್ ಹೊಂದಬಹುದು ಎಂದು ಹೇಳಲಾಗಿದೆ.

ಬೇರೆ ಏನೆಲ್ಲಾ ಫೀಚರ್ಸ್?
ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನಿನಲ್ಲಿ ರೆಡ್‌ಮಿ ನೋಟ್ 4ನಲ್ಲಿ ನೀಡಿದ್ದ ಫೀಚರ್‌ಗಳೇ ಇರಲಿದೆ. ಕ್ಯಾಮೆರಾ ಮತ್ತು ವಿನ್ಯಾಸ ಬದಲಾಗಿರಬಹುದಾಗಿದ್ದು, ಕ್ವಿಕ್ ಚಾರ್ಜರ್ 4.0, 4G VoLTE ಹಾಗೂ USB 3.1, ಫಿಂಗರ್‌ಪ್ರಿಂಟ್ ಫೀಚರ್ ಎಲ್ಲವೂ ನೋಟ್ 5ನಲ್ಲಿ ಲಭ್ಯವಿರಲಿವೆ.!!

ರೆಡ್‌ಮಿ 5 ಮತ್ತು ರೆಡ್‌ಮಿ 5ಪ್ಲಸ್?
ಇತ್ತೀಚಿಗೆ ಶಿಯೋಮಿ ಕಂಪೆನಿ ಮಲೇಷ್ಯಾದಲ್ಲಿ ರೆಡ್‌ಮಿ 5 ಮತ್ತು ರೆಡ್‌ಮಿ 5ಪ್ಲಸ್ ಸ್ಮಾರ್ಟ್‌ಫೋನುಗಳನ್ನು ಬಿಡುಗಡೆ ಮಾಡಿರುವುದರಿಂದ ಭಾರತದಲ್ಲಿಯೂ ಕೂಡ ಫೆಬ್ರವರಿ 14ಕ್ಕೆ ರೆಡ್‌ಮಿ 5 ಮತ್ತು ರೆಡ್‌ಮಿ 5ಪ್ಲಸ್ ಸ್ಮಾರ್ಟ್‌ಫೋನ್‌ಗಳು ಸಹ ಬಿಡುಗಡೆಯಾಗಬಹುದಾದ ಸಾಧ್ಯತೆಗಳು ಕೂಡ ಹೆಚ್ಚಿದೆ.!!


Click it and Unblock the Notifications








