'ರೆಡ್ ವೆರಿಯಂಟ್'ನಲ್ಲಿ ಬಿಡುಗಡೆಯಾಗಲು ತಯಾರಾಗಿದೆ 'ರೆಡ್‌ಮಿ ನೋಟ್ 5'!!
ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿರುವ ಶಿಯೋಮಿ ಮೊಬೈಲ್ ಕಂಪೆನಿ ತನ್ನ ಬಜೆಟ್ ಸ್ಮಾರ್ಟ್‌ಫೋನ್ ಒಂದನ್ನು ಕೆಂಪು ವರ್ಣದ ಮಾದರಿಯಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ. ಹೈ ಎಂಡ್ ಮೊಬೈಲ್‌ಗಳಲ್ಲಿ ಮಾತ್ರ ಕಂಡುಬರುತ್ತಿದ್ದ ಈ 'ರೆಡ್ ವೆರಿಯಂಟ್' ಪ್ರಕ್ರಿಯೆಯನ್ನು 9,999 ರೂ. ಬೆಲೆಯ ಸ್ಮಾರ್ಟ್‌ಫೋನ್ ಒಂದಕ್ಕೆ ಶಿಯೋಮಿ ತಂದು ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ.
ಶಿಯೋಮಿ ಸ್ಮಾರ್ಟ್‌ಫೋನ್‌ಗಳಲ್ಲಿಯೇ ಅತಿ ಹೆಚ್ಚು ಮಾರಾಟವಾಗುತ್ತಿರುವ 9,999 ರೂ. ಬೆಲೆಯ 'ರೆಡ್‌ಮಿ ನೋಟ್ 5' ಸ್ಮಾರ್ಟ್‌ಪೋನ್ ರೆಡ್ ವೆರಿಯಂಟ್‌ನಲ್ಲಿ ಬಿಡುಗಡೆಯಾಗಲು ತಯಾರಾಗಿದೆ. ಇಲ್ಲಿಯವರೆಗೂ ಬ್ಲಾಕ್, ಗೋಲ್ಡ್, ರೋಸ್‌ಗೋಲ್ಡ್ ಮತ್ತು ಬ್ಲೂ ಬಣ್ಣಗಲ್ಲಿ ಮಾತ್ರ ಲಭ್ಯವಿದ್ದ 'ರೆಡ್‌ಮಿ ನೋಟ್ 5' ಇನ್ನು ಕೆಂಪು ಬಣ್ಣದ ಸ್ಮಾರ್ಟ್‌ಫೋನ್ ಆಗಿ ಮಿಂಚಲಿದೆ.

ಶಿಯೋಮಿ ಇಂಡಿಯಾದ ಮಖ್ಯಸ್ಥ ಮನುಕುಮಾರ್ ಜೈನ್ ಅವರು ಶಿಯೋಮಿ ಸ್ಮಾರ್ಟ್‌ಪೋನ್‌ಗಳನ್ನ ಇಟ್ಟುಕೊಂಡು ಟ್ವಿಟ್ ಮಾಡಿರುವ ಚಿತ್ರದಲ್ಲಿ ಈ ಮಾಹಿತಿ ಲೀಕ್ ಆಗಿದೆ. ಚಿತ್ರದ ಒಂದು ಕೆಂಪು ಫೋನ್ ಗೋಚರಿಸುತ್ತಿದ್ದು ಇದು ರೆಡ್ ಮಿ ನೋಟ್ 5 ಎಂದು ಕಾಣುತ್ತದೆ. ಹಾಗಾಗಿ, ಶೀಘ್ರದಲ್ಲೇ ಕೆಂಪು ಬಣ್ಣದ 'ರೆಡ್‌ಮಿ ನೋಟ್ 5' ಪೋನ್ ಅನ್ನು ನಾವು ಎದುರುನೋಡಬಹುದು.
ಭಾರತದಲ್ಲಿಯೇ ಮೊದಲು ನೇರವಾಗಿ ಲಾಂಚ್ ಆದ ಮೊದಲ ಸ್ಮಾರ್ಟ್‌ಫೋನ್ ಇದಾಗಿದ್ದು, ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಅತ್ಯುತ್ತಮ ಸ್ಮಾರ್ಟ್‌ಫೋನ್ ಪಟ್ಟಿಯಲ್ಲಿ 'ಶಿಯೋಮಿ ರೆಡ್ ಮಿ ನೋಟ್ 5' ಮೊದಲ ಸ್ಥಾನದಲ್ಲಿ ನಿಲ್ಲಲಿದೆ. ಹಾಗಾದರೆ, ರೆಡ್ ಮಿ ನೋಟ್ 5 ಫೋನ್ ಫೀಚರ್ಸ್ ಯಾವುವು? ಬೆಲೆ ಎಷ್ಟು ಎಂಬುದನ್ನು ಮುಂದೆ ತಿಳಿಯಿರಿ.!

5.99 ಇಂಚ್ ಫುಲ್ ಹೆಚ್‌ಡಿ ಡಿಸ್‌ಪ್ಲೇ!
18:9 ಅನುಪಾತದಲ್ಲಿ 5.99 ಇಂಚ್ ಫುಲ್ ಹೆಚ್‌ಡಿ ಡಿಸ್‌ಪ್ಲೇ ಮೂಲಕ ರೆಡ್ ಮಿ ನೋಟ್ 5 ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. 8.05mm ದಪ್ಪವಿರುವ ರೆಡ್ಮಿ ನೋಟ್ 5 ಸ್ಮಾರ್ಟ್‌ಫೋನ್ ಮೆಟಲ್ ಬಾಡಿ ಹಾಗೂ ಹಿಂಬಾಗದಲ್ಲಿ ಟ್ಯಾಪರೆಡ್ ಬ್ಯಾಕ್ ಕವರ್ ಹೊಂದಿದೆ.!

ಸ್ನ್ಯಾಪ್‌ಡ್ರಾಗನ್ 625 ಪ್ರೊಸೆಸರ್!
ಶಿಯೋಮಿ ರೆಡ್ ಮಿ ನೋಟ್ 5 ಸ್ಮಾರ್ಟ್‌ಫೋನಿನಲ್ಲಿ ಸ್ನ್ಯಾಪ್‌ಡ್ರಾಗನ್ 625 ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. ಇನ್ನು ಸ್ಮಾರ್ಟ್‌ಫೋನ್ 3GB RAM ಮತ್ತು 32GB ಮೆಮೊರಿ ಹಾಗೂ 4GB ಮತ್ತು 64GB ಮೆಮೊರಿಯ ಎರಡು ವೆರಿಯಂಟ್‌ಗಳಲ್ಲಿ ಮಾರುಕಟ್ಟೆಗೆ ಕಾಲಿಟ್ಟಿದೆ.!

4000mAh ಬ್ಯಾಟರಿ!
ಶಿಯೋಮಿ ರೆಡ್ ಮಿ ನೋಟ್ 5 ಸ್ಮಾರ್ಟ್‌ಫೋನ್ 4000mAh ಬ್ಯಾಟರಿಯನ್ನು ಹೊಂದಿದೆ. 14 ಗಂಟೆಗಳ ವಿಡಿಯೋ ಪ್ಲೇಬ್ಯಾಕ್, 26 ಗಂಟೆಗಳ ಮ್ಯೂಸಿಕ್ ಪ್ಲೇ ಬ್ಯಾಕ್, 22 ಗಂಟೆಗಳು ಕಾಲ್ ಸ್ಟಾಂಡ್ ಬೈ ಶಕ್ತಿಯನ್ನು ಶಿಯೋಮಿ ರೆಡ್ ಮಿ ನೋಟ್ 5 ಫೋನ್ ಬ್ಯಾಟರಿ ಹೊಂದಿದೆ ಎಂದು ಶಿಯೋಮಿ ಕಂಪೆನಿ ತಿಳಿಸಿದೆ.!

ಉಚಿತ ಮೊಬೈಲ್ ಕೇಸ್!
ಶಿಯೋಮಿ ರೆಡ್ ಮಿ ನೋಟ್ 5 ಸ್ಮಾರ್ಟ್‌ಫೋನ್ ಜತಗೆ ಅಲ್ಟ್ರಾ ಸ್ಲಿಮ್ ಮೊಬೈಲ್ ಕೇಸ್ ಅನ್ನು ಶಿಯೋಮಿ ಕಂಪೆನಿ ಉಚಿತವಾಗಿ ನೀಡುತ್ತಿದೆ.! ಇತರ ಮೊಬೈಲ್ ಕೇಸ್‌ಗಳಿಂದ ಸ್ಮಾರ್ಟ್‌ಫೋನ್ ಬಿಸಿಯಾಗುವುದನ್ನು ತಪ್ಪಿಸಲು ಶಿಯೋಮಿ ಕಂಪೆನಿಯೇ ಅತ್ಯುತ್ತಮ ಮೊಬೈಲ್ ಕೇಸ್ ನೀಡುತ್ತಿದೆ.!

ರೆಡ್ ಮಿ ನೋಟ್ 5 ಬೆಲೆ ಎಷ್ಟು?
ಶಿಯೋಮಿ ರೆಡ್ ಮಿ ನೋಟ್ 5 ಅತ್ಯಂತ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಕಾಲಿಟ್ಟಿದ್ದು, 3GB RAM ಮತ್ತು 32GB ಮೆಮೊರಿ ವೆರಿಯಂಟ್ ಫೋನ್ ಬೆಲೆ ಕೇವಲ 9,999 ರೂಪಾಯಿಗಳಾಗಿದೆ. ಇನ್ನು 4GB ಮತ್ತು 64GB ಮೆಮೊರಿಯಂಟ್ ರೆಡ್ ಮಿ ನೋಟ್ 5 ಬೆಲೆ 11,999 ರೂಪಾಯಿಗಳಿಗೆ ಬಿಡುಗಡೆಗೊಂಡಿದೆ.!


Click it and Unblock the Notifications








