ಶಿಯೋಮಿ 'ರೆಡ್ ಮಿ ನೋಟ್ 5' ಮಾರಾಟದ ದಿನಾಂಕ ಫಿಕ್ಸ್!!..ಖರೀದಿಗೆ ಬಂಪರ್ ಆಫರ್!!
ರೆಡ್ ಮಿ ನೋಟ್ 5, ಶಿಯೋಮಿ ರೆಡ್ ನೋಟ್ 5 ಪ್ರೊ ಮತ್ತು ಶಿಯೋಮಿ ಎಂಐ ಟಿವಿಗಳ ಮೇಲೆ ಅಭಿಮಾನಿಗಳು ಊಹೆ ಮಾಡಿದ್ದಕ್ಕಿಂತಲೂ ಶಿಯೋಮಿ ಲಾಭ ನೀಡಿದೆ.
ಶಿಯೋಮಿ ರೆಡ್ ಮಿ ನೋಟ್ 5, ಶಿಯೋಮಿ ರೆಡ್ ನೋಟ್ 5 ಪ್ರೊ ಮತ್ತು ಶಿಯೋಮಿ ಎಂ ಐ ಟಿವಿಗಳೆಲ್ಲವೂ ಒಂದೇ ದಿನ ಬಿಡುಗಡೆಯಾಗಿ ಭಾರತದ ಮೊಬೈಲ್ ಮಾರುಕಟ್ಟೆಯನ್ನು ಅಲ್ಲೋಲಕಲ್ಲೋಲ ಮಾಡಿರುವುದು ನಿಮಗೆಲ್ಲಾ ಈಗಾಗಲೇ ಗೊತ್ತೇ ಇದೆ.! ಇದರ ಜತೆಯಲ್ಲಿಯೇ ಶಿಯೋಮಿ ಮತ್ತೊಂದು ಸಿಹಿಸುದ್ದಿ ನೀಡಿದೆ.!!
ಹೌದು, ವಿಶ್ವದಲ್ಲಿಯೇ ಮೊಟ್ಟಮೊದಲ ಬಾರಿ ಭಾರತದ ಮೊಬೈಲ್ ಮಾರುಕಟ್ಟೆಗೆ ಲಾಂಚ್ ಆದ ಮೊಬೈಲ್‌ಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಶಿಯೋಮಿ ರೆಡ್ ಮಿ ನೋಟ್ 5 ಮತ್ತು ರೆಡ್ ನೋಟ್ 5 ಪ್ರೊ ಸ್ಮಾರ್ಟ್‌ಫೋನ್‌ಗಳು ಎಲ್ಲರ ಕಣ್ಣುಕುಕ್ಕುತ್ತಿದ್ದು, ಶಿಯೋಮಿ ಕಂಪೆನಿ ಇವುಗಳ ಮೇಲೆ ಮತ್ತಷ್ಟು ಬಂಪರ್ ಆಫರ್ ಅನ್ನು ಘೋಷಿಸಿದೆ.!!

ರೆಡ್ ಮಿ ನೋಟ್ 5, ಶಿಯೋಮಿ ರೆಡ್ ನೋಟ್ 5 ಪ್ರೊ ಮತ್ತು ಶಿಯೋಮಿ ಎಂಐ ಟಿವಿಗಳ ಮೇಲೆ ಅಭಿಮಾನಿಗಳು ಊಹೆ ಮಾಡಿದ್ದಕ್ಕಿಂತಲೂ ಶಿಯೋಮಿ ಲಾಭ ನೀಡಿದ್ದು, ಹಾಗಾದರೆ, ಈ ಮೂರು ಗ್ಯಾಜೆಟ್‌ಗಳ ಬೆಲೆ ಎಷ್ಟು? ಮಾರಾಟ ಯಾವಾಗ ಶುರು? ಖರೀದಿಸಲು ಏನೆಲ್ಲಾ ಆಫರ್ ಲಭ್ಯ? ಎಂಬುದನ್ನು ಮುಂದೆ ತಿಳಿಯಿರಿ.!!

ಶಿಯೋಮಿ ರೆಡ್ ಮಿ ನೋಟ್ 5!!
5.99 ಇಂಚ್ ಫುಲ್ ಹೆಚ್‌ಡಿ ಡಿಸ್‌ಪ್ಲೇ, ಸ್ನ್ಯಾಪ್‌ಡ್ರಾಗನ್ 625 ಪ್ರೊಸೆಸರ್ , 4000mAh ಬ್ಯಾಟರಿ, 3GB RAM ಹಾಗೂ 12 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾದಂತಹ ಫೀಚರ್ಸ್ ಹೊಂದಿರುವ ಶಿಯೋಮಿ ರೆಡ್ ಮಿ ನೋಟ್ 5 ಸ್ಮಾರ್ಟ್‌ಫೋನ್ ಬೆಲೆ ಕೇವಲ 9,999 ರೂಗೆ. ಬಿಡುಗಡೆಯಾಗಿದೆ. 4GB/64GB ವೆರಿಯಂಟ್ ಫೋನ್ ಬೆಲೆ ಕೇವಲ 11,999 ರೂ.ಗಳಾಗಿವೆ!!

ಶಿಯೋಮಿ ರೆಡ್ ನೋಟ್ 5 ಪ್ರೊ!!
5.99 ಇಂಚ್ ಫುಲ್ ಹೆಚ್‌ಡಿ ಡಿಸ್‌ಪ್ಲೇ, ಸ್ನಾಪ್‌ಡ್ರಾಗನ್ 636 ಪ್ರೋಸೆಸರ್, 6GB RAM, ಡ್ಯುಯಲ್ ಕ್ಯಾಮೆರಾ, ಫೇಸ್‌ಅನ್ ಲಾಕ್ ನಂತಹ ಹೈ ಎಂಡ್ ಫೀಚರ್ಸ್ ಹೊಂದಿರುವ ಶಿಯೋಮಿ ರೆಡ್ ಮಿ ನೋಟ್ 5 ಪ್ರೊ ಸ್ಮಾರ್ಟ್‌ಫೋನ್ ಕೇವಲ 16,999ರೂ.ಗಳಿಗೆ ಬಿಡುಗಡೆಯಾಗಿದೆ. 4GB/64GB ಆವೃತ್ತಿ ಫೋನ್ 13,999 ರೂಪಾಯಿಗಳಿಗೆ ಲಭ್ಯವಿದೆ.!!

ಶಿಯೋಮಿ ಎಂಐ ಟಿವಿ!!
4K UHD ಗುಣಮಟ್ಟದ 55 ಇಂಚಿನ ಶಿಯೋಮಿ ಎಂಐ ಸ್ಮಾರ್ಟ್ ಟಿವಿ ಲೋಕವನ್ನು ಬೆಚ್ಚಿಬೀಳಿಸಿದೆ. 2GB RAM + 8GB ಇಂಟರ್ ನಲ್ ಮೆಮೊರಿ, Wi Fi ಮತ್ತು ಬ್ಲೂಟೂತ್‌ಗೆ ಕನೆಕ್ಟ್ ಮಾಡಬಹುದಾದ ಶಿಯೋಮಿ ಟಿವಿ ಕೇವಲ 39,999 ರೂಪಾಯಿಗಳಿಗೆ ಭಾರತದ ಮಾರುಕಟ್ಟೆಗೆ ಕಾಲಿಟ್ಟಿದೆ.!!

ಮಾರಾಟ ಆರಂಭ ಯಾವಾಗ?
ಪ್ರೇಮಿಗಳ ದಿನಕ್ಕೆ ಬಿಡುಗಡೆಯಾಗಿರುವ ಶಿಯೋಮಿ ರೆಡ್ ಮಿ ನೋಟ್ 5, ಶಿಯೋಮಿ ರೆಡ್ ನೋಟ್ 5 ಪ್ರೊ ಮತ್ತು ಶಿಯೋಮಿ ಎಂ ಐ ಟಿವಿಗಳೆಲ್ಲವೂ ಇದೇ ತಿಂಗಳ 22 ನೇ ತಾರೀಖಿನಿಂದ ಮಾರಾಟಕ್ಕಿರಲಿವೆ. ಶಿಯೋಮಿ ಫಸ್ಟ್ ಸೇಲ್‌ನಲ್ಲಿ ಈ ಗ್ಯಾಜೆಟ್‌ಗಳನ್ನು ಖರೀದಿಸಬಹುದಾಗಿದೆ.!!

ಖರೀದಿಸಲು ಏನೆಲ್ಲಾ ಆಫರ್?
ಶಿಯೋಮಿ ತನ್ನ ಶಿಯೋಮಿ ರೆಡ್ ಮಿ ನೋಟ್ 5, ಶಿಯೋಮಿ ರೆಡ್ ನೋಟ್ 5 ಪ್ರೊ ಸ್ಮಾರ್ಟ್‌ಫೋನ್‌ಗಳ ಮೇಲೆ ಜಿಯೋ ಬಿಗ್ ಆಫರ್ ಅನ್ನು ಘೋಷಿಸಿದೆ. 2200 ರೂಪಾಯಿಗಳವರೆಗೂ ಕ್ಯಾಶ್‌ಬ್ಯಾಕ್ ಹಾಗೂ 100% ಅಡಿಷನಲ್ 4G ಜಿಯೋ ಡೇಟಾಪಡೆಯಬಹುದಾದ ಈ ಆಫರ್ ಎರಡೂ ಸ್ಮಾರ್ಟ್‌ಫೋನ್‌ಗಳಿಗೆ ಲಭ್ಯವಿದೆ.!!

ಮಾರಾಟ ಎಲ್ಲೆಲ್ಲಿ?
ಶಿಯೋಮಿಯ ಎಲ್ಲಾ ಮೂರು ಗ್ಯಾಜೆಟ್‌ಗಳು ಫ್ಲಿಪ್‌ಕಾರ್ಟ್.ಕಾಮ್ ಹಾಗೂ ಮೈ.ಕಾಮ್‌ಗಳಲ್ಲಿ ಫೆಬ್ರವರಿ 22 ನೇ ತಾರೀಖಿನಿಂದ ಮಾರಾಟಕ್ಕಿವೆ. ಆಫ್ ಲೈನ್ ಮಿ ಹೋಮ್ ಮಳಿಗೆಗಳಲ್ಲಿಯೂ ಬಹುಬೇಗ ಮಾರಾಟವನ್ನು ತರಲಾಗುವುದು ಎಂದು ಶಿಯೋಮಿ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.!!


Click it and Unblock the Notifications








