ಇಂದು ಶಿಯೋಮಿ 'ರೆಡ್‌ಮಿ 6 ಪ್ರೊ' ಫ್ಲಾಶ್‌ಸೇಲ್ ಮಾರಾಟ!!

    ಭಾರತದಲ್ಲಿ ಇತ್ತೀಚಿಗಷ್ಟೇ ಬಿಡುಗಡೆಯಾಗಿ ಭರ್ಜರಿ ದಾಖಲೆ ನಿರ್ಮಿಸಿರುವ 'ರೆಡ್‌ಮಿ ನೋಟ್ 6 ಪ್ರೊ' ಸ್ಮಾರ್ಟ್‌ಪೋನಿನ ಮತ್ತೊಂದು ಫ್ಲಾಶ್‌ಸೇಲ್ ಇಂದು ಆಯೋಜನೆಯಾಗಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್ ಮತ್ತು ಶಿಯೋಮಿಯ ಅಫಿಷಿಯಲ್ ವೆಬ್‌ಸೈಟ್‌ಗಳಲ್ಲಿ ಫೋನ್ ಫ್ಲಾಶ್‌ಸೇಲ್ ಖರೀದಿಗೆ ಲಭ್ಯವಿದೆ ಎಂದು ಶಿಯೋಮಿ ಕಂಪೆನಿ ಜಾಹಿರಾತು ನೀಡಿದೆ.

    ಶಿಯೋಮಿ ಕಂಪೆನಿ ಆಯೋಜನೆ ಮಾಡಿರುವ 'ರೆಡ್‌ಮಿ ನೋಟ್ 6 ಪ್ರೊ' ಸ್ಮಾರ್ಟ್‌ಪೋನಿನ ಮೂರನೇ ಫ್ಲಾಶ್‌ಸೇಲ್ ಇದಾಗಿದ್ದು, ಈ ಬಾರಿ ಎಲ್ಲರಿಗೂ ರೆಡ್‌ಮಿ 6 ಪ್ರೊ ಸ್ಮಾರ್ಟ್‌ಫೋನ್ ದೊರಕುವ ಅಭಯವನ್ನು ಕಂಪೆನಿ ನೀಡಿದೆ. ಜೊತೆಗೆ ಸ್ಮಾರ್ಟ್‌ಫೋನ್ ಖರೀದಿದಾರರಿಗೆ 2400 ರೂ. ಜಿಯೋ ಇನ್‌ಸ್ಟಾಂಟ್ ಕ್ಯಾಶ್‌ಬ್ಯಾಕ್‌ ಸಹ ಸಿಗಲಿದೆ ಎಂದು ಕಂಪೆನಿ ತಿಳಿಸಿದೆ.

    ಇಂದು ಶಿಯೋಮಿ 'ರೆಡ್‌ಮಿ 6 ಪ್ರೊ' ಫ್ಲಾಶ್‌ಸೇಲ್ ಮಾರಾಟ!!

    ಆಪಲ್ ಐಫೋನ್ ಎಕ್ಸ್ ಮಾದರಿಯ ಡಿಸ್‌ಪ್ಲೇ ನೋಚ್, 6.26-ಇಂಚಿನ ಪೂರ್ಣ ಹೆಚ್‌ಡಿ+ ಐಪಿಎಸ್ ಎಲ್ಸಿಡಿ ಡಿಸ್‌ಪ್ಲೇ ಸೇರಿದಂತೆ ಹತ್ತು ಹಲವು ಅತ್ಯುತ್ತಮ ಫೀಚರ್ಸ್ ಹೊಂದಿರುವ 'ರೆಡ್‌ಮಿ ನೋಟ್ 6 ಪ್ರೊ' ಫೋನ್ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಹಾಗಾದರೆ, ಭಾರೀ ಹವಾ ಎಬ್ಬಿಸಿರುವ 'ರೆಡ್‌ಮಿ ನೋಟ್ 6 ಪ್ರೊ' ಸ್ಮಾರ್ಟ್‌ಫೋನ್ ಹೇಗಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

    ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

    ಸ್ಮಾರ್ಟ್‌ಪೋನ್ ವಿನ್ಯಾಸ ಹೇಗಿದೆ?

    ಆಪಲ್ ಐಫೋನ್ ಎಕ್ಸ್ ಮಾದರಿಯ ಡಿಸ್‌ಪ್ಲೇ ನೋಚ್, ನಾಲ್ಕು ಕ್ಯಾಮೆರಾಗಳು ಹಾಗೂ ಹಿಂಬಾಗದಲ್ಲಿ ಫಿಂಗರ್‌ಪ್ರಿಂಟ್ ಆಯ್ಕೆಯನ್ನು ಹೊಂದಿರುವ 'ರೆಡ್‌ಮಿ ನೋಟ್ 6 ಪ್ರೊ' ಸ್ಮಾರ್ಟ್‌ಪೋನ್ ವಿನ್ಯಾಸ ಹೈ ಎಂಡ್ ಸ್ಮಾರ್ಟ್‌ಪೋನ್‌ಗಳಿಗೆ ಸೆಡ್ಡು ಹೊಡೆಯುತ್ತಿದೆ. ಈ ಸ್ಮಾರ್ಟ್‌ಫೋನಿನ ನಾಲ್ಕು ಬದಿಗಳಲ್ಲಿ ರೌಂಡೆಡ್ ಕಾರ್ನರ್ ಎಡ್ಜ್ ವಿನ್ಯಾಸವಿರುವುದು ಸ್ಮಾರ್ಟ್‌ಫೋನಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.

    ಸ್ಮಾರ್ಟ್‌ಪೋನ್ ಡಿಸ್‌ಪ್ಲೇ!

    ಈಗಾಗಲೇ ತಿಳಿದಿರುವಂತೆ, ರೆಡ್‌ಮಿ ನೋಟ್ 6 ಪ್ರೊ ಸ್ಮಾರ್ಟ್‌ಪೋನ್ 6.26-ಇಂಚಿನ ಪೂರ್ಣ ಹೆಚ್‌ಡಿ+ ಐಪಿಎಸ್ ಎಲ್ಸಿಡಿ (1080*2280p) ಡಿಸ್‌ಪ್ಲೇಯನ್ನು ಹೊಂದಿದೆ. 1080*2280 ಪಿಕ್ಸೆಲ್ ಸಾಮರ್ಥ್ಯದ ಡಿಸ್‌ಪ್ಲೇ ಶೇ. 86 ಪ್ರತಿಶತ ಸ್ಕ್ರೀನ್-ಟು-ಬಾಡಿಯನ್ನು ಹೊಂದಿದ್ದು, 19:9 ಆಕಾರ ಅನುಪಾತದಲ್ಲಿರುವುದರಿಂದ ಮಲ್ಟಿಮೀಡಿಯಾ ಪ್ರಿಯರಿಗೆ ಡಿಸ್‌ಪ್ಲೇ ಹೇಳಿ ಮಾಡಿಸಿದಂತಿದೆ. ಇನ್ನು ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆಯನ್ನು ಹೊಂದಿರುವುದು ಡಿಸ್‌ಪ್ಲೇ ಸುರಕ್ಷತೆಗೆ ಖಾತ್ರಿಯಾಗಿದೆ.

    ಕ್ವಾಡ್ ಕ್ಯಾಮೆರಾ ಸ್ಮಾರ್ಟ್‌ಫೋನ್

    'ರೆಡ್ ಮಿ ನೋಟ್ 6 ಪ್ರೊ' ಸ್ಮಾರ್ಟ್‌ಪೋನಿನ ಪ್ರಮುಖ ಆಕರ್ಷಣೆಯೇ ನಾಲ್ಕು ಕ್ಯಾಮೆರಾಗಳಲಾಗಿದ್ದು, 12MP + 5MP ಹಿಂಬದಿಯ ಕ್ಯಾಮರಾ, 20MP + 2MP ಸೆಲ್ಫಿ ಕ್ಯಾಮರಾಗಳನ್ನು ನೀಡಲಾಗಿದೆ. ಡ್ಯುಯಲ್ ಪಿಕ್ಸೆಲ್ ಆಟೋಫೋಕಸ್, 1.4-ಮೈಕ್ರಾನ್ ಪಿಕ್ಸೆಲ್‌ಗಳು, ಎಐ ಭಾವಚಿತ್ರ 2.0 ಮತ್ತು ಎಐ ಡೈನಾಮಿಕ್ ಬೊಕೆ ವೈಶಿಷ್ಟ್ಯಗಳಂತಹ ವೈಶಿಷ್ಟ್ಯಗಳೊಂದಿಗೆ ಬಂದಿದೆ. ಶಿಯೋಮಿಯ ಮೊದಲ ಎಐ ಆಧಾರಿತ ಕ್ವಾಡ್ ಕ್ಯಾಮೆರಾ ಸ್ಮಾರ್ಟ್‌ಫೋನ್ ಆಗಿ 'ರೆಡ್ ಮಿ ನೋಟ್ 6 ಪ್ರೊ' ಹೊರಹೊಮ್ಮಿದೆ.

    ಪ್ರೊಸೆಸರ್ ಮತ್ತು RAM!

    ರೆಡ್ ಮಿ ನೋಟ್ 6 ಪ್ರೊ' ಸ್ಮಾರ್ಟ್‌ಪೋನಿನಲ್ಲಿ ಕ್ಯಾಮೆರಾಗೆ ಹೆಚ್ಚು ಒತ್ತು ನೀಡಿರುವ ಶಿಯೋಮಿ ಕಂಪೆನಿ, ಈ ಸ್ಮಾರ್ಟ್‌ಫೋನಿನಲ್ಲಿ 'ರೆಡ್ ಮಿ ನೋಟ್ 5 ಪ್ರೊ'ನಲ್ಲಿ ನೀಡಲಾಗಿದ್ದ ಸ್ನ್ಯಾಪ್‌ಡ್ರಾಗನ್ 636 ಆಕ್ಟಕೋರ್ ಪ್ರೊಸೆಸರ್ ಅನ್ನೇ ನೀಡಿದೆ. ಕ್ವಾಲ್ಕಮ್ ಸ್ಪೆಕ್ಟ್ರಾ ಪ್ರೊಸೆಸರ್ ,ಅಡ್ರಿನೋ 509 ಜಿಪಿಯು, 4ಜಿಬಿ RAM ಮತ್ತು 64GB ಹಾಗೂ 6ಜಿಬಿ RAM ಮತ್ತು 64GB ಆಂತರಿಕ ಮೆಮೊರಿ ವೆರಿಯಂಟ್‌ಗಳಲ್ಲಿ ಸ್ಮಾರ್ಟ್‌ಫೋನ್ ಭಾರತದ ಮೊಬೈಲ್ ಮಾರುಕಟ್ಟೆಗೆ ಎಂಟ್ರಿ ನೀಡಿದೆ.

    MIUI 10 ಆಧಾರಿತ ಟಾಪ್ ಆಂಡ್ರಾಯ್ಡ್

    ರೆಡ್ ಮಿ ನೋಟ್ 6 ಪ್ರೊ' ಸ್ಮಾರ್ಟ್‌ಪೋನ್ MIUI 10 ಆಧಾರಿತ ಟಾಪ್ ಆಂಡ್ರಾಯ್ಡ್ ಮೂಲಕ ಕಾರ್ಯನಿರ್ವಹಣೆ ನೀಡಲಿದೆ. ಇದು ಶೇ. 30 ರಷ್ಟು ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆ ವೇಗವನ್ನು ಹೆಚ್ಚಿಸಲಿದೆ ಎಂದು ಶಿಯೋಮಿ ಕಂಪೆನಿ ಹೇಳಿಕೊಂಡಿದೆ. ಬ್ಯಾಟರಿ ಉಳಿತಾಯದಲ್ಲಿ MIUI 10 ಆಧಾರಿತ ಟಾಪ್ ಆಂಡ್ರಾಯ್ಡ್ ಸಾಮರ್ಥ್ಯ ಹೆಚ್ಚಿದೆಯಂತೆ. ಪ್ರಸ್ತುತ ಆಂಡ್ರಾಯ್ಡ್ ಓರಿಯೋದಲ್ಲಿ ಕಾರ್ಯನಿರ್ವಹಣೆ ನೀಡುವ ಸ್ಮಾರ್ಟ್‌ಪೋನ್ ಆಂಡ್ರಾಯ್ಡ್ ಪೈಗೆ ಬಹುಬೇಗ ಅಪ್‌ಡೇಟ್ ಆಗಲಿದೆ ಎಂದು ಶಿಯೋಮಿ ಕಂಪೆನಿ ತಿಳಿಸಿದೆ.

    4000mAh ಬ್ಯಾಟರಿ ಸಾಮರ್ಥ್ಯ!

    ರೆಡ್ ಮಿ ನೋಟ್ 6 ಪ್ರೊ' ಸ್ಮಾರ್ಟ್‌ಪೋನಿನಲ್ಲಿ 4,000 mAh ಬ್ಯಾಟರಿಯೊಂದಿಗೆ ಏಕೈಕ ಪೂರ್ಣ ಚಾರ್ಜನಲ್ಲಿ 2 ದಿನ ಬ್ಯಾಟರಿ ಬಾಳಿಕೆ ಅವಧಿಯ ಭರವಸೆಯನ್ನು ಶಿಯೋಮಿ ನೀಡಿದೆ. ವೇಗವಾಗಿ ಚಾರ್ಜಿಂಗ್‌ಗಾಗಿ ರೆಡ್‌ಮಿ ನೋಟ್ 6 ಪ್ರೊ ಕ್ವಿಕ್ ಚಾರ್ಜ್ 3.0 ಅನ್ನು ಬೆಂಬಲಿಸುತ್ತದೆ ಎಂದು ಕಂಪೆನಿ ತಿಳಿಸಿದೆ. ಶಿಯೋಮಿ ಮೊಬೈಲ್ ಪ್ರಿಯರು ಎದುರುನೋಡುತ್ತಿದ್ದ ಬಹುನಿರೀಕ್ಷಿತ ಕ್ವಿಕ್ ಚಾರ್ಜ್ ಫೀಚರ್ ಈಗ ಸಿಕ್ಕಿದೆ.

    ಇತರೆ ಏನೆಲ್ಲಾ ಫೀಚರ್ಸ್?

    ಇಷ್ಟೆಲ್ಲಾ ಮುಖ್ಯ ಫೀಚರ್ಸ್‌ಗಳನ್ನು ಹೊಂದಿರುವ 'ರೆಡ್ ಮಿ ನೋಟ್ 6 ಪ್ರೊ' ಸ್ಮಾರ್ಟ್‌ಪೋನ್, 4-ಇನ್ -1 ಸೂಪರ್ ಪಿಕ್ಸೆಲ್ ಮತ್ತು ಎಐ ಫೇಸ್ ಅನ್ಲಾಕ್ ಸಾಮರ್ಥ್ಯಗಳನ್ನು ಹೊಂದಿರುವುದು ವಿಶೇಷತೆಯಾದರೆ, ಕ್ಯಾಮೆರಾ ತಂತ್ರಜ್ಞಾನದಲ್ಲಿ ಬಹಳಷ್ಟು ಮುಂದಿದೆ. ಎಐ ಆಧಾರಿತ ಕ್ಯಾಮೆರಾ ತಂತ್ರಜ್ಞಾನದಿಂದ ಅದ್ಬುತ ಕ್ಯಾಮೆರಾ ಸ್ಮಾರ್ಟ್‌ಫೋನ್ ಆಗಿ ಸ್ಮಾರ್ಟ್‌ಫೋನ್ ಹೊರಹೊಮ್ಮಿದೆ. ಇನ್ನು ಫೋನ್ ಡ್ಯುಯಲ್ ಸಿಮ್‌ಗಳನ್ನು ಹೊಂದಿದ್ದು, ಎರಡೂ ಸಿಮ್‌ಗಳು ವೋಲ್ಟ್ ಸೇವೆಗೆ ಲಭ್ಯವಿವೆ. ಜೊತೆಗೆ ಫೋನ್ ರಸ್ಟ್ ಪ್ರೊಟೆಕ್ಷನ್ ಹೊಂದಿದೆ.

    ಸ್ಮಾರ್ಟ್‌ಫೋನ್ ಬೆಲೆ ಎಷ್ಟು?

    ಡಾಲರ್ ಎದುರು ರೂಪಾಯಿಯ ಕುಸಿತದ ನಡುವೆಯೂ ಶೀಯೋಮಿ ತನ್ನ ಸ್ಮಾರ್ಟ್‌ಫೋನ್‌ಗಳ ಬೆಲೆಯನ್ನು ನಿರೀಕ್ಷೆಗೂ ಮೀರಿ ಕಡಿತಗೊಳಿಸಿದೆ. 4ಜಿಬಿ RAM ಮತ್ತು 64GB ಆಂತರಿಕ ಮೆಮೊರಿ ಮಾದರಿಯ ರೆಡ್ ಮಿ ನೋಟ್ 6 ಪ್ರೊ' ಸ್ಮಾರ್ಟ್‌ಪೋನ್ ಬೆಲೆ ಕೇವಲ 13,999 ರೂಪಾಯಿಗಳಾಗಿದೆ. ಇನ್ನು 6ಜಿಬಿ RAM ಮತ್ತು 64GB ಆಂತರಿಕ ಮೆಮೊರಿ ಮಾದರಿಯ ಸ್ಮಾರ್ಟ್‌ಪೋನ್ ಬೆಲೆ 15,999 ರೂಪಾಯಿಗಳಾಗಿವೆ.

    ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

    English summary
    Xiaomi Redmi Note 6 Pro goes on sale in India today: Should you buy it?. to know more visit to kannada.gizbot.com
    Opinion Poll

    ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more