Home
ಸುದ್ದಿಜಾಲ

'ಎಂಐ ಫ್ಯಾನ್ ಫೆಸ್ಟಿವಲ್' ಸೇಲ್ ಆರಂಭ!..ಒಂದು ರೂಪಾಯಿಗೆ ಗೆಲ್ಲಿ ರೆಡ್ಮಿ ನೋಟ್ 7 ಪ್ರೋ!!

ಭಾರತದ ಜನಪ್ರಿಯ ಮೊಬೈಲ್ ಕಂಪೆನಿ 2019ರ ಮೊದಲ ಎಂಐ ಫ್ಯಾನ್ ಫೆಸ್ಟಿವಲ್ ಸೇಲ್ ಅನ್ನು ಇದೇ ಏಪ್ರಿಲ್ 4 ರಿಂದ ಆರಂಭಿಸಿದ್ದು, ಈ ಫೆಸ್ಟಿವಲ್ ಸೇಲ್‌ನಲ್ಲಿ ಒಂದು ರೂಪಾಯಿ ಫ್ಲ್ಯಾಶ್ ಸೇಲ್ ಸೇರಿದಂತೆ ಹಲವು ಭರ್ಜರಿ ಆಫರ್‌ಗಳನ್ನು ಪ್ರಕಟಿಸಿದೆ. ಇದೇ ಏಪ್ರಿಲ್ 4 ರಿಂದ ಶನಿವಾರದವರೆಗೆ ಅಂದರೆ ಏಪ್ರಿಲ್ 6ರ ವರೆಗೆ ಈ ಫೆಸ್ಟಿವಲ್ ನಡೆಯಲಿದ್ದು, ಮೂರು ದಿನಗಳ ಈ ಸೇಲ್‌ನಲ್ಲಿ ಶಿಯೋಮಿ ಉತ್ಪನ್ನಗಳನ್ನು ಖರೀದಿಸುವವರಿಗೆ ಭರ್ಜರಿ ಆಫರ್‌ಗಳು ಲಭ್ಯವಿವೆ.

ಒಂದು ರೂಪಾಯಿಯ ಫ್ಲ್ಯಾಶ್ ಸೇಲ್ ನಲ್ಲಿ ರೆಡ್ಮಿ ನೋಟ್ 7 ಪ್ರೋ, ಪೋಕೋ ಎಫ್1,ಎಂಐ ಸೌಂಡ್ ಬಾರ್, ಎಂಐ ಎಲ್ಇಡಿ ಟಿವಿ 4ಎ ಪ್ರೋ (32ಇಂಚು), ಹೋಮ್ ಸೆಕ್ಯುರಿಟಿ ಕ್ಯಾಮರಾ ಮತ್ತು ಎಂಐ ಸ್ಪೋರ್ಟ್ಸ್ ಬ್ಲೂಟೂತ್ ಇಯರ್ ಫೋನ್ ಗಳನ್ನು ಖರೀದಿಸುವ ಅವಕಾಶವಿದೆ. ಈ ಒಂದು ರೂಪಾಯಿ ಸೇಲ್ ಅನ್ನು ಫೆಸ್ಟಿವಲ್ ನಡೆಯುವ ಮೂರು ದಿನಗಳಲ್ಲಿ ಪ್ರತಿದಿನ ಭಾರತೀಯ ಕಾಲಮಾನ ಮಧ್ಯಾಹ್ನ 2pm ಗಂಟೆಗೆ ನಡೆಸಲಾಗುತ್ತದೆ ಎಂದು ಶಿಯೋಮಿ ಜಾಹಿರಾತು ನೀಡಿದೆ.

'ಎಂಐ ಫ್ಯಾನ್ ಫೆಸ್ಟಿವಲ್' ಸೇಲ್!..ಒಂದು ರೂಪಾಯಿಗೆ ಗೆಲ್ಲಿ ರೆಡ್ಮಿ ನೋಟ್ 7 ಪ್ರೋ!

ಇನ್ನು ಮೂರು ದಿನಗಳ ಈ ಸೇಲ್ ನಲ್ಲಿ ಜನಪ್ರಿಯ ಸ್ಮಾರ್ಟ್‌ಫೋನ್‌ಗಳಾದ ಪೋಕೋ ಎಫ್1 ಮತ್ತು ರೆಡ್ಮಿ ನೋಟ್ 6 ಪ್ರೋ ಸೇರಿದಂತೆ ಇತರೆ ಪ್ರೊಡಕ್ಟ್ ಗಳಾಗಿರುವ ಎಂಐ ಎಲ್ಇಡಿ ಟಿವಿ 4 ಪ್ರೋ, ಎಂಐ ಬ್ಯಾಂಡ್ ಮತ್ತು ಎಂಐ ಏರ್ ಪ್ಯೂರಿಫೈಯರ್ 2ಎಸ್ ಗಳು ಕೂಡ ಕಡಿಮೆ ಬೆಲೆಯಲ್ಲಿ ಸಿಗಲಿದೆ. ಎಂಐ.ಕಾಮ್ ಸಹಯೋಗದೊಂದಿಗೆ ಪಾರ್ಟ್ನರ್ ಆಫ್ ಲೈನ್ ಸ್ಟೋರ್ ಗಳಲ್ಲಿ ಸಹ ಈ ಸೇಲ್ ನಡೆಯುತ್ತಿದೆ. ಹಾಗಾದರೆ 2019ರ ಎಂಐ ಫ್ಯಾನ್ ಫೆಸ್ಟಿವಲ್ ಸೇಲ್ ಹೇಗಿರಲಿದೆ ಎಂಬುದನ್ನು ನೋಡೋಣ ಬನ್ನಿ.

ಎಂಐ ಅಭಿಮಾನಿಗಳಿಗಾಗಿ ಈ ಸೇಲ್!

ಎಂಐ ಅಭಿಮಾನಿಗಳಿಗಾಗಿ ಈ ಸೇಲ್!

ಶಿಯೋಮಿ ಸಂಸ್ಥೆ ಕಳೆದ ಏಳು ವರ್ಷಗಳಲ್ಲಿ ಹೆಚ್ಚು ಪ್ರಸಿದ್ಧಿಯಾಗಿದೆ ಮತ್ತು ಮಿಲಿಯನ್‌ಗಟ್ಟಲೆ ಎಂಐ ಅಭಿಮಾನಿ ಬಳಗವನ್ನು ಹೊಂದಿದೆ. ಭಾರತದಲ್ಲೂ ನಮ್ಮ ಬ್ರ್ಯಾಂಡ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಶಿಯೋಮಿಯ ಎಲ್ಲಾ ಪ್ರೊಡಕ್ಟ್ ಗಳಿಗೆ ಒಳ್ಳೆಯ ಅಭಿಪ್ರಾಯವಿದೆ. ಎಂಐ ಅಭಿಮಾನಿಗಳಿಗಾಗಿ ಈ ಸೇಲ್ ಆಯೋಜಿಸಲಾಗಿದ್ದು ಈ ಹಬ್ಬದ ಸಂಭ್ರಮಕ್ಕೆ ನಾವು ಅಣಿಯಾಗಿದ್ದೇವೆ ಎಂದು ಕಂಪೆನಿಯ ಕೆಟಗರೀಸ್ ಮತ್ತು ಆನ್ಲೈನ್ ಸೇಲ್ ಇಂಡಿಯಾ ವಿಭಾಗದ ಮುಖ್ಯಸ್ಥರಾಗಿರುವ ರಾಘು ರೆಡ್ಡಿಯವರು ಹೇಳಿದ್ದಾರೆ.

ಒಂದು ರೂಪಾಯಿ ಫ್ಲ್ಯಾಶ್ ಸೇಲ್

ಒಂದು ರೂಪಾಯಿ ಫ್ಲ್ಯಾಶ್ ಸೇಲ್

ಒಂದು ರೂಪಾಯಿಯ ಫ್ಲ್ಯಾಶ್ ಸೇಲ್ ನಲ್ಲಿ ರೆಡ್ಮಿ ನೋಟ್ 7 ಪ್ರೋ, ಪೋಕೋ ಎಫ್1,ಎಂಐ ಸೌಂಡ್ ಬಾರ್, ಎಂಐ ಎಲ್ಇಡಿ ಟಿವಿ 4ಎ ಪ್ರೋ (32ಇಂಚು), ಹೋಮ್ ಸೆಕ್ಯುರಿಟಿ ಕ್ಯಾಮರಾ ಮತ್ತು ಎಂಐ ಸ್ಪೋರ್ಟ್ಸ್ ಬ್ಲೂಟೂತ್ ಇಯರ್ ಫೋನ್ ಗಳನ್ನು ಖರೀದಿಸುವ ಅವಕಾಶವಿದೆ. ಈ ಒಂದು ರೂಪಾಯಿ ಸೇಲ್ ಅನ್ನು ಫೆಸ್ಟಿವಲ್ ನಡೆಯುವ ಮೂರು ದಿನಗಳಲ್ಲಿ ಪ್ರತಿದಿನ ಮಧ್ಯಾಹ್ನ 2pm ಗಂಟೆಗೆ ನಡೆಸಲಾಗುತ್ತಿದ್ದು, ಅದೃಷ್ಟವಂತ ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು ಎಂದು ಶಿಯೋಮಿ ತಿಳಿಸಿದೆ

ಫೋಕೋ ಎಫ್1 ಮತ್ತು ನೋಟ್ 5 ಪ್ರೊ!

ಫೋಕೋ ಎಫ್1 ಮತ್ತು ನೋಟ್ 5 ಪ್ರೊ!

ಶಿಯೋಮಿ ತಿಳಿಸಿರುವಂತೆ ಈ ಸೇಲ್‌ನಲ್ಲಿ ಜನಪ್ರಿಯ ಪೋಕೋ ಎಫ್1 6GB RAM + 128GB ವೇರಿಯಂಟ್ ನ ಫೋನ್ 20,999 ರೂಪಾಯಿ ಬೆಲೆಗೆ ಸಿಗುತ್ತದೆ. ಇತ್ತೀಚೆಗೆ ಈ ಫೋನಿನ ಬೆಲೆ 22,999 ಕ್ಕೆ ಇಳಿಕೆಯಾಗಿತ್ತು ಎಂಬುದು ನಿಮಗೆ ನೆನಪಿರಲಿ. ರೆಡ್ಮಿ ನೋಟ್ 5 ಪ್ರೋ 4GB RAM + 64GB ಸ್ಟೋರೇಜ್ ಆಯ್ಕೆಯ ಫೋನ್ ಮತ್ತು 6GB RAM + 64GB ಸ್ಟೋರೇಜ್ ಆಯ್ಕೆಯ ಫೋನ್ ಕ್ರಮವಾಗಿ 10,999 ರುಪಾಯಿ ಮತ್ತು 11,999 ರುಪಾಯಿ ಬೆಲೆಗೆ ಸಿಗುತ್ತದೆ.

ಶಿಯೋಮಿ ರೆಡ್ಮಿ ನೋಟ್ 6 ಪ್ರೋ ಡೀಲ್!

ಶಿಯೋಮಿ ರೆಡ್ಮಿ ನೋಟ್ 6 ಪ್ರೋ ಡೀಲ್!

ಶಿಯೋಮಿಯ ಎಂಐ ಫ್ಯಾನ್ ಫೆಸ್ಟಿವಲ್ 2019 ರ ಅತ್ಯುತ್ತಮ ಡೀಲ್ ಆಗಿ ರೆಡ್ಮಿ ನೋಟ್ 6 ಪ್ರೋ ಕಾಣಿಸಿಕೊಂಡಿದೆ. ರೆಡ್ಮಿ ನೋಟ್ 6 ಪ್ರೋ 4GB+64GB ಕೂಡ ಕಡಿಮೆ ಬೆಲೆಯಲ್ಲಿ ಸಿಗುತ್ತಿದ್ದು 3,000 ರುಪಾಯಿ ಇಳಿಕೆಯಾಗಿದೆ ಅಂದರೆ ನೀವಿದನ್ನು 10,999 ರುಪಾಯಿಗೆ ಖರೀದಿಸಬಹುದಾಗಿದೆ. ಇನ್ನು ಶಿಯೋಮಿ ಕಂಪೆನಿ ಹೊಸದಾಗಿ ಬಿಡುಗಡೆಗೊಂಡಿರುವ ರೆಡ್ಮಿ ನೋಟ್ 7, ರೆಡ್ಮಿ ನೋಟ್ 7 ಪ್ರೋ, ರೆಡ್ಮಿ ಗೋ ಗಳು ಕೂಡ ಈ ಸೇಲ್ ನಲ್ಲಿ ಮಾರಾಟ ಮಾಡಲಾಗುತ್ತದೆ.

ಶಿಯೋಮಿ ಅಸೆಸರಿಸ್ ಡೀಲ್ಸ್

ಶಿಯೋಮಿ ಅಸೆಸರಿಸ್ ಡೀಲ್ಸ್

ಎಂಐ ಕಾಂಪ್ಯಾಕ್ಟ್ ಬ್ಲೂಟೂತ್ ಸ್ಪೀಕರ್ 2 (Rs. 699), ಎಂಐ ಇಯರ್ ಫೋನ್ ಗಳು (Rs. 599), ಎಂಐ ಬಾಡಿ ಕಂಪೋಸಿಷನ್ (Rs. 1,499), ಎಂಐ ಏರ್ ಪ್ಯೂರಿಫೈಯರ್ 2ಎಸ್ (Rs 8,499) ಮತ್ತು ಎಂಐ ಬ್ಯಾಂಡ್ HRX ಎಡಿಷನ್ (Rs. 999) ಗಳು ಈ ಸೇಲ್ ನಲ್ಲಿ ರಿಯಾಯಿತಿ ಬೆಲೆಯಲ್ಲಿ ಸಿಗುತ್ತದೆ ಎಂದು ಶಿಯೋಮಿ ತಿಳಿಸಿದೆ.ಮಿಸ್ಟ್ರಿ ಬಾಕ್ಸ್ ಸೇಲ್ ನ್ನು ಕೂಡ ಶಿಯೋಮಿ ಆಯೋಜಿಸಿದ್ದು ಇಲ್ಲಿ ಗ್ರಾಹಕರಿಗೆ ಆಕರ್ಷಕ ಸಪ್ರೈಸ್ ಪ್ರೊಡಕ್ಟ್ ಗಳನ್ನು ಗೆಲ್ಲುವ ಅವಕಾಶವಿದೆ.

ಶಿಯೋಮಿ ಇನ್ಸೆಂಟ್ ರಿಯಾಯಿತಿಗಳು

ಶಿಯೋಮಿ ಇನ್ಸೆಂಟ್ ರಿಯಾಯಿತಿಗಳು

ಶಿಯೋಮಿಯು ಹೆಚ್ ಡಿಎಫ್ ಸಿ ಬ್ಯಾಂಕ್ ಜೊತೆಗೆ ಕೈಜೋಡಿಸಿದ್ದು ಹೆಚ್ಚುವರಿ 5% ಇನ್ಸೆಂಟ್ ರಿಯಾಯಿತಿಯು 500 ರುಪಾಯಿ ವರೆಗೆ ಹೆಚ್ ಡಿಎಫ್ ಸಿ ಕಾರ್ಡ್ ಬಳಸಿ ಎಂಐ ಎಲ್ಇಡಿ ಟಿವಿ ಮತ್ತು ಎಂಐ ಸೌಂಡ್ ಬಾರ್ ನ್ನು ಇಎಂಐಯಲ್ಲಿ ಖರೀದಿಸಿದವರಿಗೆ ಲಭ್ಯವಾಗುತ್ತದೆ.ಈ ಸೇಲ್ ನಲ್ಲಿ ಯಾವುದೇ ವಸ್ತುವನ್ನು ಮೊಬಿಕ್ ವಿಕ್ ನಲ್ಲಿ ಖರೀದಿಸಿದರೆ ಇನ್ಸೆಂಟ್ ಸೂಪರ್ ಕ್ಯಾಷ್ ಆಫರ್ ಇದ್ದು 2,000 ರುಪಾಯಿವರೆಗೆ ಪಡೆಯುವ ಅವಕಾಶವಿದೆ. ಎಂಐ ಪೇ ಎಂಟಿಟಿ ಗ್ರಾಹಕರಿಗೆ ಎಂಐ ಟಿವಿಗಳು ಮತ್ತು ರೆಡ್ಮಿ ನೋಟ್ 7 ಗೆಲ್ಲುವ ಅವಕಾಶ ಪ್ರತಿದಿನ ಲಭ್ಯವಾಗುತ್ತದೆ.

ಶಿಯೋಮಿ ಗೇಮ್ ಪ್ಲಾನ್‌ಗಳು

ಶಿಯೋಮಿ ಗೇಮ್ ಪ್ಲಾನ್‌ಗಳು

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶಿಯೋಮಿ ಆಕರ್ಷಕ ಗೇಮ್ ಗಳನ್ನು ಪ್ಲಾನ್ ಮಾಡಿದೆ ಉದಾಹರಣೆಗೆ ಫನ್ ಎಂಡ್ ಫ್ಯೂರಿಯಸ್. ಇದರಲ್ಲಿ ಗ್ರಾಹಕರಿಗೆ ರೆಡ್ಮಿ ನೋಟ್ 7 ಗೆಲ್ಲುವ ಅವಕಾಶವಿದೆ. ಪ್ಲೇ ಎಂಡ್ ವಿನ್ ಗೇಮ್ ನಲ್ಲಿ ಬಳಕೆದಾರರಿಗೆ ಪೋಕೋ ಎಫ್1, ಎಂಐ ಬ್ಯಾಂಡ್ 3, ಎಂಐ ಕೂಪನ್ ಗಳನ್ನು ಗೆಲ್ಲುವ ಸದವಕಾಶವಿದೆ. ಇದರಲ್ಲಿ 2,400 ರುಪಾಯಿ ವಸ್ತುಗಳನ್ನು ಕೇವಲ 99 ರುಪಾಯಿಗೆ ಗೆಲ್ಲಬಹುದು. ಮಿಸ್ಟ್ರಿ ಬಾಕ್ಸ್ ಸೇಲ್ ಫೆಸ್ಟಿವಲ್ ನಲ್ಲಿ ಪ್ರತಿದಿನ ಭಾರತೀಯ ಕಾಲಮಾನ 4pm ಗೆ ನಡೆಸಲಾಗುತ್ತದೆ.

Best Mobiles in India

English summary
Xiaomi Redmi Note 7 Pro, Poco F1 & Mi LED TV 4A Pro to be available in Rs 1 Flash Sale during Mi Fan Festival. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+