ಮೊಬೈಲ್ ಖರೀದಿಗೆ ಸ್ವಲ್ಪ ಕಾಯಿರಿ...ಶೀಘ್ರದಲ್ಲೇ ಬರಲಿದೆ 'ರೆಡ್‌ಮಿ ನೋಟ್ 8ಟಿ'!
ಇತ್ತೀಚಿಗಷ್ಟೇ ದೇಶದ ಮೊಬೈಲ್ ಮಾರುಕಟ್ಟೆಗೆ ಕಾಲಿಟ್ಟಿರುವ ಶಿಯೋಮಿ 'ರೆಡ್‌ಮಿ ನೋಟ್ 8' ಸರಣಿಯಲ್ಲೇ ಮತ್ತೊಂದು ಅಪ್‌ಡೇಟ್ ಆಗಿರುವಂತಹ ಫೋನ್ ಮಾದರಿಯೊಂದು ಬಿಡುಗಡೆಯಾಗಲಿರುವ ಸುದ್ದಿ ಇದೀಗ ವೈರಲ್ ಆಗಿದೆ. ರೆಡ್‌ಮಿ ನೋಟ್ 8 ಮತ್ತು ರೆಡ್‌ಮಿ ನೋಟ್ 8 ಪ್ರೊ ಫೋನ್‌ಗಳ ಜೊತೆಗೆ 'ರೆಡ್‌ಮಿ ನೋಟ್ 8ಟಿ' ಎಂಬ ಹೊಸ ಮಾದರಿ ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ತರಲು ಶಿಯೋಮಿ ಕಂಪೆನಿ ಮುಂದಾಗಿದ್ದು, ರೆಡ್‌ಮಿ ನೋಟ್ 8ಟಿ ಇಮೇಜ್ ಸೋರಿಕೆಯಾಗಿರುವುದು ಮೊಬೈಲ್ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ.

ಹೌದು, ಕಳೆದ ಕೆಲವು ದಿನಗಳ ಹಿಂದಿನ ವದಂತಿಯ ಪ್ರಕಾರ ಶಿಯೋಮಿ ರೆಡ್‌ಮಿ ನೋಟ್ 8ಟಿ ತಯಾರಿಕೆಯ ಕೆಲಸದಲ್ಲಿದ್ದು, ಇದು ಮೂಲ ರೆಡ್‌ಮಿ ನೋಟ್ 8 ಫೋನಿಗೆ ಹೋಲುತ್ತದೆ. ಆದರೆ, ರೆಡ್‌ಮಿ ನೋಟ್ 8 ಫೋನಿಗಿಂತಲೂ ಭಿನ್ನವಾಗಿ ರೆಡ್‌ಮಿ ನೋಟ್ 8ಟಿಯಲ್ಲಿ ಎನ್‌ಎಫ್‌ಸಿ ಬೆಂಬಲ ಮತ್ತು 18 ಡಬ್ಲ್ಯೂ ಚಾರ್ಜಿಂಗ್ ಫೀಚರ್ಸ್ ಸೇರಿಕೊಳ್ಳಲಿವೆ. ಇದರಿಂದ ರೆಡ್‌ಮಿ ನೋಟ್ 8 ಸರಣಿಯಲ್ಲೇ ಹೆಚ್ಚು ಫೀಚರ್ಸ್ ಹೊಂದಿರುವ ಶಕ್ತಿಶಾಲಿ ಸ್ಮಾರ್ಟ್‌ಫೋನ್ ಆಗಿ 'ರೆಡ್‌ಮಿ ನೋಟ್ 8ಟಿ' ಮಾರುಕಟ್ಟೆಗೆ ಕಾಲಿಡಲಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ರೆಡ್‌ಮಿ ನೋಟ್ 8ಟಿಯಲ್ಲಿ ಎನ್‌ಎಫ್‌ಸಿ ಬೆಂಬಲ ನೀಡುವ ಮೂಲಕ ಅಪ್ಗ್ರೇಡ್ ಆಗಲು ಶಿಯೋಮಿ ನಿರ್ಧರಿಸಿದ್ದು, ಅಲ್ಪ-ಶ್ರೇಣಿಯ ಹೈ ಫ್ರೀಕ್ವೆನ್ಸಿ ವೈರ್‌ಲೆಸ್ ಸಂವಹನ ತಂತ್ರಜ್ಞಾನವಾಗಿರುವ ಎನ್‌ಎಫ್‌ಸಿ ನೋಟ್ 8ಟಿಯಲ್ಲಿ ಸೇರಿಕೊಳ್ಳಲಿದೆ. ಇದು ಸುಮಾರು 10 ಸೆಂ.ಮೀ ದೂರದಲ್ಲಿ ಸಾಧನಗಳ ನಡುವೆ ಡೇಟಾ ವಿನಿಮಯವನ್ನು ಶಕ್ತಗೊಳಿಸುತ್ತದೆ ಮತ್ತು ಅಸ್ತಿತ್ವದಲ್ಲಿರುವ ಸಾಮೀಪ್ಯ ಕಾರ್ಡ್ ಸ್ಟ್ಯಾಂಡರ್ಡ್‌ನ (ಆರ್‌ಎಫ್‌ಐಡಿ) ಅಪ್‌ಗ್ರೇಡ್ ಮೂಲಕ ಸ್ಮಾರ್ಟ್‌ಕಾರ್ಡ್ ಮತ್ತು ರೀಡರ್‌ನ ಇಂಟರ್ಫೇಸ್ ಅನ್ನು ಒಂದೇ ಸಾಧನವಾಗಿ ಸಂಯೋಜಿಸುತ್ತದೆ.

ಇನ್ನು ವದಂತಿಗಳಂತೆ ಶಿಯೋಮಿ ರೆಡ್‌ಮಿ ನೋಟ್ 8ಟಿ ಫೋನಿನಲ್ಲಿ, 409 ಪಿಪಿಐ ಪಿಕ್ಸೆಲ್ ಸಾಂದ್ರತೆಯಲ್ಲಿ ಐಪಿ ಎಲ್‌ಸಿಡಿ (1080 x 2340 ಪಿಕ್ಸೆಲ್ ) ಡಿಸ್‌ಪ್ಲೇ, ಗೆ 48 + 8 + 2 + 2 ಎಂಪಿ ಸಾಮರ್ಥ್ಯದ ರಿಯರ್ ಕ್ಯಾಮೆರಾಗಳು, 4000 mAh ಸಾಮರ್ಥ್ಯದ ಬ್ಯಾಟರಿ, ಡಿಜಿಟಲ್ ಜೂಮ್, ಆಟೋ ಫ್ಲ್ಯಾಶ್, ಫೇಸ್ ಡಿಟೆಕ್ಷನ್, ಫೋಕಸ್ ಮಾಡಲು ಟಚ್ ಮುಂತಾದ ವೈಶಿಷ್ಟ್ಯ ಗಳೊಂದಿಗೆ 13 ಎಂಪಿ ಫ್ರಂಟ್ ಕ್ಯಾಮೆರಾ ಸೇರಿದಂತೆ, ಆಕ್ಟಾ ಕೋರ್ (2 GHz, ಕ್ವಾಡ್ ಕೋರ್, ಕ್ರಿಯೋ 260 + 1.8 GHz, ಕ್ವಾಡ್ ಕೋರ್, ಕ್ರಯೋ 260) ಪ್ರೊಸೆಸರ್ ಹೊಂದಿರಲಿದೆ.

ಭಾರತದಲ್ಲಿ ಶಿಯೋಮಿ ರೆಡ್‌ಮಿ ನೋಟ್ 8 ಟಿ ಸ್ಮಾರ್ಟ್‌ಫೋನ್ ಬೆಲೆ 14,990 ರೂ. ಶಿಯೋಮಿ ರೆಡ್‌ಮಿ ನೋಟ್ 8 ಟಿ ಅನ್ನು 2019 ರ ನವೆಂಬರ್ 29 ರಂದು (ಅನಧಿಕೃತ) ದೇಶದಲ್ಲಿ ಬಿಡುಗಡೆ ಮಾಡಲಾಗುವುದು ಎಂಬ ವದಂತಿ ಇದೆ. ಆದರೆ, ರೆಡ್‌ಮಿ ನೋಟ್ 8ಟಿ ಪ್ರಮಾಣೀಕರಣವು ಫೋನ್ ಪ್ರಾರಂಭಿಸಲು ಹತ್ತಿರದಲ್ಲಿದೆ ಎಂದು ಸೂಚಿಸುತ್ತಿವೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ. ಹಾಗಾಗಿ, ಮುಂದಿನ ಎರಡು ವಾರಗಳಲ್ಲಿ ನಾವು ಭಾರತದಲ್ಲಿ ಶಿಯೋಮಿ ರೆಡ್‌ಮಿ ನೋಟ್ 8 ಟಿ ಸ್ಮಾರ್ಟ್‌ಫೋನ್ ಬಿಡುಗಡೆಯನ್ನು ಎದುರು ನೋಡಬಹುದು.


Click it and Unblock the Notifications








