Home
ಸುದ್ದಿಜಾಲ

ರೆಡ್‌ಮಿಯಿಂದ ಎರಡು ಹೊಸ ಪವರ್‌ಬ್ಯಾಂಕ್‌ ಬಿಡುಗಡೆ!

ಸ್ಮಾರ್ಟ್‌ಫೋನ್‌ಗಳ ಮಾರುಕಟ್ಟೆ ವಿಸ್ತಾರವಾದಂತೆ ಪವರ್‌ಬ್ಯಾಂಕ್‌ಗಳಿಗೂ ಬಾರಿ ಬೇಡಿಕೆ ಸೃಷ್ಟಿಯಾಗುತ್ತಿದ್ದು. ಈಗಾಗ್ಲೆ ಹಲವು ಕಂಪೆನಿಗಳ ಪವರ್‌ಬ್ಯಾಂಕ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಬಳಕೆದಾರರ ಆಶಯಕ್ಕೆ ಅನುಗುಣವಾಗಿ ವಿವಿಧ mAh ಸಾಮರ್ಥ್ಯದ ಪವರ್‌ಬ್ಯಾಂಕ್‌ಗಳನ್ನ ನಾವಿಂದು ಖರೀದಿಸಬಹುದಾಗಿದೆ. ಈ ಸಾಲಿನಲ್ಲಿ ಶಿಯೋಮಿ ಕಂಪೆನಿ ಕೂಡ ವೈವಿಧ್ಯ ಬಗೆಯ ಪವರ್‌ಬ್ಯಾಂಕ್‌ಗಳನ್ನ ಪರಿಚಯಿಸಿದೆ. ಸದ್ಯ ಶಿಯೋಮಿ ಸಬ್‌ಬ್ರಾಂಡ್‌ ರೆಡ್‌ಮಿ ಕಂಪೆನಿ ಹೊಸ ಪವರ್‌ಬ್ಯಾಂಕ್‌ ಅನ್ನು ಭಾರತದಲ್ಲಿ ಲಾಂಚ್‌ ಮಾಡಿದೆ.

ಹೌದು

ಹೌದು, ಚೀನಾ ಮೂಲದ ಸ್ಮಾರ್ಟ್‌ಫೋನ್‌ ಕಂಪೆನಿ ಶಿಯೋಮಿ ತನ್ನ ಹೊಸ ರೆಡ್‌ಮಿ ಪವರ್‌ಬ್ಯಾಂಕ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಸದ್ಯ ಶಿಯೋಮಿ ಕಂಪೆನಿ ಬಿಡುಗಡೆ ಮಾಡಿರುವ ರೆಡ್‌ಮಿ ಪವರ್‌ ಬ್ಯಾಂಕ್‌ ಎರಡು ವಿಭಿನ್ನ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದು 10,000mAh ಮತ್ತು 20,000mAh ವೇರಿಯೆಂಟ್‌ ಆಯ್ಕೆಗಳಲ್ಲಿ ಲಾಂಚ್‌ ಆಗಿದ್ದು. 10,000mAh ಸಾಮರ್ಥ್ಯದ ಪವರ್‌ಬ್ಯಾಂಕ್‌ 799 ರೂ, ಬೆಲೆಯನ್ನ ಹೊಂದಿದ್ದರೆ, 20,000mAh ಸಾಮರ್ಥ್ಯದ ಪವರ್‌ಬ್ಯಾಂಕ್‌ 1,499 ರೂ, ಬೆಲೆಯನ್ನ ಹೊಂದಿದೆ.

ಪವರ್‌ಬ್ಯಾಂಕ್‌ನ ವಿಶೇಷತೆ

ಪವರ್‌ಬ್ಯಾಂಕ್‌ನ ವಿಶೇಷತೆ

ಇನ್ನು ರೆಡ್‌ಮಿ ಪವರ್ ಬ್ಯಾಂಕುಗಳು ಯುಎಸ್‌ಬಿ ಟೈಪ್-ಸಿ ಮತ್ತು ಮೈಕ್ರೋ ಯುಎಸ್‌ಬಿಗೆ ಡ್ಯುಯಲ್ ಇನ್‌ಪುಟ್ ಪೋರ್ಟ್‌ಗಳನ್ನ ಹೊಂದಿವೆ. ಅಲ್ಲದೆ ಇದು ಡ್ಯುಯಲ್ ಯುಎಸ್‌ಬಿ ಔಟ್‌ಪುಟ್ ಅನ್ನು ಸಹ ಹೊಂದಿದೆ, ಇದು ಬಳಕೆದಾರರಿಗೆ ಎರಡು ಡಿವೈಸ್‌ಗಳನ್ನು ಏಕಕಾಲದಲ್ಲಿ ಚಾರ್ಜ್ ಮಾಡಲು ಅವಕಾಶ ಕಲ್ಪಿಸುತ್ತದೆ. ಜೊತೆಗೆ 10,000mAh ರೆಡ್ಮಿ ಪವರ್ ಬ್ಯಾಂಕ್ 10W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. 20,000mAh ರೆಡ್‌ಮಿ ಪವರ್ ಬ್ಯಾಂಕ್‌ 18W ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿದೆ.

ವಿಶೇಷ ಫೀಚರ್ಸ್‌

ವಿಶೇಷ ಫೀಚರ್ಸ್‌

ರೆಡ್ಮಿ ಪವರ್ ಬ್ಯಾಂಕುಗಳು ಲೋ ಪವರ್ ಮೋಡ್ ಅನ್ನು ಹೊಂದಿದ್ದು, ಪವರ್ ಬಟನ್ ಅನ್ನು ಎರಡು ಬಾರಿ ಒತ್ತುವ ಮೂಲಕ ಸಕ್ರಿಯಗೊಳಿಸಬಹುದು. ಇದು ಪವರ್ ಬ್ಯಾಂಕ್‌ನಲ್ಲಿನ ವಿದ್ಯುತ್ ಬಳಕೆಯನ್ನು ಸರಿಹೊಂದಿಸುತ್ತದೆ. ಅಲ್ಲದೆ ಪವರ್‌ಬ್ಯಾಂಕ್‌ನಲ್ಲಿ ಕಡಿಮೆ ಬ್ಯಾಟರಿ ಚಾರ್ಜ್‌ ಇದ್ದಾಗಲು ನಿಮ್ಮ ಫಿಟ್‌ನೆಸ್ ಬ್ಯಾಂಡ್‌ಗಳು ಮತ್ತು ಬ್ಲೂಟೂತ್ ಹೆಡ್‌ಫೋನ್‌ಗಳಂತಹ ಸಾಧನಗಳಿಗೆ ಚಾರ್ಜಿಂಗ್‌ ಮಾಡಬಹುದಾಗಿದೆ.

ಪವರ್ ಪ್ರೊಟೆಕ್ಷನ್‌

ಪವರ್ ಪ್ರೊಟೆಕ್ಷನ್‌

ಈ ಎರಡು ಪವರ್‌ಬ್ಯಾಂಕ್‌ಗಳು ಕೂಡ ಒಂದೇ ವ್ಯಾಟೇಜ್‌ನಲ್ಲಿ ದ್ವಿಮುಖ ವೇಗದ ಚಾರ್ಜಿಂಗ್ ಅನ್ನು ಸಹ ಬೆಂಬಲಿಸಲಿದ್ದು, ಈ ಪವರ್‌ ಬ್ಯಾಂಕ್‌ಗಳು 12 ಲೇಯರ್ ಸರ್ಕ್ಯೂಟ್‌ ಪ್ರೊಟೆಕ್ಷನ್‌ ಅನ್ನು ಹೊಂದಿವೆ. ಒವರ್‌ ಚಾರ್ಜಿಂಗ್‌, ಶಾರ್ಟ್‌ ಸರ್ಕ್ಯೂಟ್‌, ಫುಲ್‌ ಚಾರ್ಜಿಂಗ್‌, ಸಂದರ್ಭಗಳಲ್ಲಿ ಪ್ರೊಟೆಕ್ಷನ್‌ ನಿಡುತ್ತದೆ. ಅಲ್ಲದೆ ವೇಗದ ಚಾರ್ಜಿಂಗ್‌ ಸಾಮರ್ಥ್ಯವನ್ನ ಹೊಂದಿದ್ದು, ಆಂಟಿ-ಸ್ಲಿಪ್ ಹಿಡಿತ ವಿನ್ಯಾಸವನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಈಗಾಗಲೇ ತಿಳಿಸಿರುವಂತೆ ರೆಡ್ಮಿ ಪವರ್ ಬ್ಯಾಂಕ್ 10,000mAh ಮತ್ತು 20,000mAh ಸಾಮರ್ಥ್ಯದ ವೇರಿಯೆಂಟ್‌ ಆಯ್ಕೆಯಲ್ಲಿ ಲಭ್ಯವಿದ್ದು, 10,000mAh ರೆಡ್ಮಿ ಪವರ್ ಬ್ಯಾಂಕ್ ಬೆಲೆ 799 ರೂ ಮತ್ತು 20,000mAh ಪವರ್‌ಬ್ಯಾಂಕ್‌ 1,499 ರೂ. ಬೆಲೆಯನ್ನ ಹೊಂದಿದೆ. ಇನ್ನು ರೆಡ್ಮಿಯ ಈ ಹೊಸ ಪವರ್‌ ಬ್ಯಾಂಕುಗಳು ಫೆಬ್ರವರಿ 18 ರಿಂದ mi.com ಮತ್ತು Mi Home ಮಳಿಗೆಗಳ ಮೂಲಕ ಮಾರಾಟವಾಗುತ್ತವೆ. ಅಲ್ಲದೆ ಕಪ್ಪು ಮತ್ತು ಬಿಳಿ ಎರಡು ಬಣ್ಣ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

Best Mobiles in India

English summary
Xiaomi’s Redmi brand has a new product category in India for power banks.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+