Home
ಸುದ್ದಿಜಾಲ

ಶಿಯೋಮಿಯಿಂದ ಹೊಸ ಸ್ಮಾರ್ಟ್‌ ಡಿಜಿಟಲ್‌ ಸ್ಲೇಟ್‌ ಲಾಂಚ್‌! ಬೆಲೆ ಕೇವಲ 599ರೂ!

ಶಿಯೋಮಿ ಕಂಪೆನಿ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ವಿವಿಧ ಮಾದರಿಯ ಸ್ಮಾರ್ಟ್‌ ಡಿವೈಸ್‌ಗಳನ್ನು ಪರಿಚಯಿಸುತ್ತಾ ಮುನ್ನಡೆದಿದೆ. ಇದೀಗ ಅದೇ ಹಾದಿಯಲ್ಲಿ ಮುಂದುವರೆದು ಹೊಸ ರೆಡ್ಮಿ ರೈಟಿಂಗ್‌ ಪ್ಯಾಡ್‌ ಅನ್ನು ಪರಿಚಯಿಸಿದೆ. ಇದು ಹಳೆಯ ಸ್ಲೇಟ್‌ ಹೊಸ ಡಿಜಿಟಲ್‌ ಮಾದರಿಯಾಗಿದೆ. ಸ್ಲೇಟ್‌ ಅನ್ನು ಕೂಡ ಡಿಜಿಟಲ್‌ ರೂಪದಲ್ಲಿ ಪರಿಚಯಿಸುವ ಮೂಲಕ ಶಿಯೋಮಿ ಕಂಪೆನಿ ಟೆಕ್‌ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

ಶಿಯೋಮಿ

ಹೌದು, ಶಿಯೋಮಿ ಕಂಪೆನಿ ತನ್ನ ರೆಡ್ಮಿ ಬ್ರ್ಯಾಂಡ್‌ ಅಡಿಯಲ್ಲಿ ಹೊಸ ರೈಟಿಂಗ್‌ ಪ್ಯಾಡ್‌ ಪರಿಚಯಿಸಿದೆ. ಈ ರೈಟಿಂಗ್‌ ಟ್ಯಾಬ್ಲೆಟ್ 8.5 ಇಂಚಿನ ಪಾಲಿಮರ್ LCD ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಜಿಟಲ್‌ ಸ್ಲೇಟ್‌ ಪರಿಸರ ಸ್ನೇಹಿಯಾಗಿದ್ದು, ಕಾಗದ ರಹಿತವಾಗಿದೆ. ಇದು ಸುಮಾರು 20,000ಪೇಜ್‌ಗಳ ಬ್ಯಾಟರಿ ಅವಧಿಯನ್ನು ನೀಡಲಿದೆ ಎಂದು ಶಿಯೋಮಿ ಕಂಪೆನಿ ಹೇಳಿಕೊಂಡಿದೆ. ಹಾಗಾದ್ರೆ ಈ ಹೊಸ ಡಿಜಿಟಲ್‌ ಸ್ಲೇಟ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಶಿಯೋಮಿ

ಶಿಯೋಮಿ ರೆಡ್ಮಿಯ ಡಿಜಿಟಲ್‌ ಸ್ಲೇಟ್‌ ನಿಮಗೆ ಹೊಸ ಅನುಭವ ನೀಡಲಿದೆ. ಇದು ಡಿಜಿಟಲ್‌ ಆಗಿರುವುದರಿಂದ ಕಾಗದವನ್ನು ಬಳಸುವ ಅವಶ್ಯಕತೆ ಇದರಲ್ಲಿ ಬರುವುದಿಲ್ಲ. ಈ ಸ್ಲೇಟ್‌ 8.5 ಇಂಚಿನ ಪಾಲಿಮರ್ LCD ಸ್ಕ್ರೀನ್‌ ಹೊಂದಿದೆ. ಇದು ಬ್ಲ್ಯಾಕ್‌ ಕಲರ್‌ ಆಯ್ಕೆಯಲ್ಲಿ ಬರಲಿದ್ದು, ನೀವು ನೋಟ್‌ಗಳನ್ನು ಬರೆದುಕೊಳ್ಳುವುದಕ್ಕೆ ಅವಕಾಶವಿದೆ. ಅಷ್ಟೇ ಅಲ್ಲ ಇದರಲ್ಲಿ ಸ್ಕೆಚಿಂಗ್‌ ಮಾಡುವುದಕ್ಕೆ ಸೂಕ್ತವಾದ ಫೀಚರ್ಸ್‌ಗಳನ್ನು ನೀಡಲಾಗಿದೆ. ಜೊತೆಗೆ ಇದು ಸಂಪೂರ್ಣ ಪರಿಸರ ಸ್ನೇಹಿಯಾಗಿದ್ದು, ಎಲರ ಗಮನ ಸೆಳೆದಿದೆ.

ರೈಟಿಂಗ್‌

ಇನ್ನು ಈ ರೈಟಿಂಗ್‌ ಪ್ಯಾಡ್ LCD ಟ್ಯಾಬ್ಲೆಟ್ ಎಲೆಕ್ಟ್ರೋಫೋರೆಟಿಕ್ ಡಿಸ್‌ಪ್ಲೇ ಎಂಬ ವಿಶೇಷ ರೀತಿಯ ಸ್ಕ್ರೀನ್‌ ಬಳಸಲಿದೆ. ಇದು ಸ್ಮಾಲ್‌ ಕ್ಯಾಪ್ಸುಲ್‌ಗಳಿಂದ ಮಾಡಲ್ಪಟ್ಟಿದೆ. ಈ ಕ್ಯಾಪ್ಸುಲ್‌ಗಳು ದ್ರವದ ಸಣ್ಣ ಕಣಗಳನ್ನು ಹೊಂದಿದ್ದು, ಅದು ಸುತ್ತಲೂ ಚಲಿಸುತ್ತದೆ. ಇದರಿಂದ ಸ್ಕ್ರೀನ್‌ನ ಬಣ್ಣವನ್ನು ಬದಲಾಯಿಸುತ್ತದೆ ಎಂದು ಹೇಳಲಾಗಿದೆ. ಇನ್ನು ಈ ಪ್ಯಾಡ್‌ ಸಾಕಷ್ಟು ತೆಳುವಾಗಿದ್ದು, ಕೇವಲ 90 ಗ್ರಾಂ ತೂಕವನ್ನು ಹೊಂದಿದೆ.

ರೈಟಿಂಗ್‌

ಮನೆಯಲ್ಲಿ ಕುಳಿತು ಬರವಣಿಗೆ ಅಭ್ಯಾಸ ಮಾಡುವವರಿಗೆ ಒಟ್ಟಾರೆ ಕಾಗದದ ಬಳಕೆಯನ್ನು ಕಡಿಮೆ ಮಾಡುವುದಕ್ಕೆ ಈ ಟ್ಯಾಬ್‌ ಸೂಕ್ತವಾಗಿದೆ. ಇದರಲ್ಲಿ ನೀವು ಬರವಣಿಗೆಯನ್ನು ಕಲಿಯುವುದಕ್ಕೆ ಸೂಕ್ತವಾದ ಮಾದರಿಯನ್ನು ನೀಡಲಾಗಿದೆ. ನೀವು ಸ್ಲೇಟ್‌ ಮೇಲೆ ಬರೆಯುವುದಕ್ಕೆ ಸೂಕ್ತವಾದ ಸ್ಟೈಲಸ್‌ ಅನ್ನು ನೀಡಲಾಗಿದೆ. ಇದಲ್ಲದೆ ರೈಟಿಂಗ್‌ ಪ್ಯಾಡ್‌ನ ಡಿಸ್‌ಪ್ಲೇ ಕೆಳಭಾಗದಲ್ಲಿ ವಿಷಯವನ್ನು ತಿದ್ದಿ ಬರೆಯುವುದನ್ನು ತಡೆಯುವ ಲಾಕ್‌ ಟಾಗಲ್‌ ಅನ್ನು ಕೂಡ ನೀಡಲಾಗಿದೆ. ಇದರಿಂದ ನೀವು ಏನನ್ನಾದರ ಬರೆದು ಬ್ಯಾಗ್‌ನಲ್ಲಿ ಇರಿಸಿದರೆ ಅದು ನೀವು ಮತ್ತೆ ತೆರೆಯುವವರೆಗೂ ಹಾಗೆ ಇರಲಿದೆ.

ರೈಟಿಂಗ್‌

ಈ ರೈಟಿಂಗ್‌ ಪ್ಯಾಡ್‌ ಎಡ್ಜ್‌ನಲ್ಲಿ ಬದಲಾಯಿಸಬಹುದಾದ ಸೆಲ್‌ ಅನ್ನು ಒಳಗೊಂಡಿದೆ. ಇದರಿಂದ ನಿಮ್ಮ ರೈಟಿಂಗ್‌ ಪ್ಯಾಡ್‌ ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ. ಇದು ಬ್ಯಾಟರಿ ಸೆಲ್‌ ಖಾಲಿಯಾಗುವವರೆಗೆ ಸುಮಾರು 20,000 ಪೇಜ್‌ಗಳ ಬ್ಯಾಟರಿ ಅವಧಿಯನ್ನು ನೀಡಲಿದೆ ಎಂದು ರೆಡ್ಮಿ ಬ್ರಾಂಡ್‌ ಹೇಳಿದೆ. ಅಲ್ಲದೆ ಇದರ ಸ್ಕ್ರೀನ್‌ ಕೆಳಗೆ ಡಿವೈಸ್‌ನ ಮುಂಭಾಗದಲ್ಲಿ, ಡಿಸ್‌ಪ್ಲೇ ರಿಸೆಟ್‌ ಮಾಡಬಹುದಾದ ಆರೆಂಜ್‌ ಕಲರ್‌ ಬಟನ್‌ ಅನ್ನು ಕೂಡ ನೀಡಲಾಗಿದೆ. ಇದರಿಂದ ಡಿಸ್‌ಪ್ಲೇಯನ್ನು ನೀವು ಬೇಕಾದಗ ರಿಸೆಟ್‌ ಮಾಡಬಹುದಾಗಿದೆ.

ರೈಟಿಂಗ್‌

ರೆಡ್ಮಿ ರೈಟಿಂಗ್‌ ಪ್ಯಾಡ್‌ ನಿಮಗೆ ಸ್ಲೇಟ್‌ನಲ್ಲಿ ಬರೆಯುವ ಅನುಭವವನ್ನು ನೀಡಲಿದೆ. ಅಲ್ಲದೆ ಬರವಣಿಗೆಗೂ ಮೊದಲು ಡೂಡಲ್ ಮಾಡಲು ಕೂಡ ನಿಮಗೆ ಅನುಮತಿಸಲಿದೆ. ಇನ್ನು ಈ ರೆಡ್ಮಿ ರೈಟಿಂಗ್‌ ಪ್ಯಾಡ್‌ ಪ್ರಸ್ತುತ ಭಾರತದಲ್ಲಿ ಮಿ ಸ್ಟೋರ್‌ನಲ್ಲಿ 599ರೂ. ಬೆಲೆಯಲ್ಲಿ ಲಭ್ಯವಾಗಲಿದೆ.

Best Mobiles in India

English summary
Xiaomi redmi Writing Pad Launched: Specifications, price
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+