Home
ಸುದ್ದಿಜಾಲ

ಭಾರತೀಯರ ಆಪಲ್ X...'ಶಿಯೋಮಿ ರೆಡ್‌ಮಿ ವೈ1' ಫೋನ್ ಮಾರಾಟ ಇಂದಿನಿಂದ ಶುರು!!

ಶಿಯೋಮಿಯ ಮೊದಲ ಸೆಲ್ಫಿ ಫೋನ್ 'ಶಿಯೋಮಿ ರೆಡ್‌ಮಿ ವೈ1' ಸ್ಮಾರ್ಟ್‌ಫೋನ್‌ ಇಂದಿನಿಂದ ಮಾರಾಟಕ್ಕೆ ತಯಾರಾಗಿದೆ.!!

By Bhaskar N J

ಒಪ್ಪೊ ಮತ್ತು ವಿವೊ ಕಂಪೆನಿಗಳಿಗೆ ಶಾಕ್ ನೀಡಿರುವ ರೆಡ್‌ಮಿ ಕಂಪೆನಿಯ ನೂತನ ಸೆಲ್ಫಿ ಸ್ಮಾರ್ಟ್‌ಫೋನ್ ಮಾರಾಟ ಇಂದಿನಿಂದ ಆರಂಭವಾಗಲಿದೆ. 16MP ಸೆಲ್ಫಿ ಕ್ಯಾಮೆರಾ ಹೊತ್ತು ಬಂದಿರುವ ಶಿಯೋಮಿಯ ಮೊದಲ ಸೆಲ್ಫಿ ಫೋನ್ 'ಶಿಯೋಮಿ ರೆಡ್‌ಮಿ ವೈ1' ಸ್ಮಾರ್ಟ್‌ಫೋನ್‌ ಇಂದಿನಿಂದ ಮಾರಾಟಕ್ಕೆ ಕೆಲವೇ ನಿಮಿಷಗಳು ಬಾಕಿ ಇವೆ.!!

ಭಾರತದ ಪ್ರಖ್ಯಾತ ಶಾಪಿಂಗ್ ಜಾಲತಾಣ ಅಮೆಜಾನ್ ಮತ್ತು ಶಿಯೋಮಿ ಕಂಪೆನಿಯ ಅಫಿಶಿಯಲ್ ವೆಬ್‌ಸೈಟ್‌ನಲ್ಲಿ ರೆಡ್‌ಮಿ ವೈ1 ಮತ್ತು ರೆಡ್‌ಮಿ ವೈ1 ಲೈಟ್ ಫೋನ್‌ಗಳನ್ನು ಖರೀದಿಸಬಹುದಾಗಿದೆ. ಎರಡೂ ವೆಬ್‌ಸೈಟ್‌ಗಳಲ್ಲಿ ಮಧ್ಯಾಹ್ನ 12 ಗಂಟೆಗೆ ಸೇಲ್ ಆರಂಭವಾಗಲಿದೆ.!

ಇದೇ ಮೊದಲ ಸಾರಿ 16MP ಸೆಲ್ಫಿ ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್ ಒಂದು ಕೇವಲ 8,999 ರೂ.ಗಳಿಗೆ ಬಿಡುಗಡೆಯಾಗಿದ್ದು, ಹಾಗಾದರೆ, ರೆಡ್‌ಮಿ ವೈ1 ಫೋನ್ ಖರೀದಿಸಲೇಬೇಕು ಏಕೆ? ಮತ್ತು ಆಫರ್‌ಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!

280GB ಐಡಿಯಾ ಡೇಟಾ!!

280GB ಐಡಿಯಾ ಡೇಟಾ!!

ಶಿಯೋಮಿ ತನ್ನ ನೂತನ ಸ್ಮಾರ್ಟ್‌ಫೋನ್ ಬಿಡುಗಡೆಗೆ ಐಡಿಯಾ ಟೆಲಿಕಾಂ ಜೊತೆಗೆ ಕೈಜೋಡಿಸಿದ್ದು, ಶಿಯೋಮಿ ರೆಡ್‌ಮಿ ವೈ1' ಸ್ಮಾರ್ಟ್‌ಫೋನ್‌ ಖರೀದಿಯೊಂದಿಗೆ 280GB 4G ಐಡಿಯಾ ಡೇಟಾ ಸಹ ಲಭ್ಯವಿದೆ.! 347 ರೂಪಾಯಿ ರೀಚಾರ್ಜ್ ಮಾಡಿಸಿದರೆ ಡಬಲ್ ಡೇಟಾ ಆಫರ್ ಇದಾಗಿದೆ.!!

Xiaomi Redmi Y1 : ಶಿಯೋಮಿಯ ಮೊದಲ ಸೆಲ್ಪಿ ಫೋನ್ ರೆಡ್‌ಮಿ Y1
16MP ಸೆಲ್ಫಿ ಕ್ಯಾಮೆರಾ!!

16MP ಸೆಲ್ಫಿ ಕ್ಯಾಮೆರಾ!!

ಒಪ್ಪೊ ಮತ್ತು ವಿವೊ ಮೊಬೈಲ್ ಕಂಪೆನಿಗಳಿಗೆ ಶಾಕ್ ನೀಡಿರುವ ಶಿಯೋಮಿ, 16MP ಸೆಲ್ಫಿ ಕ್ಯಾಮೆರಾ ಹೊಂದಿರುವ "ರೆಡ್‌ಮಿ ವೈ1" ಸ್ಮಾರ್ಟ್‌ಫೋನ್ ಅನ್ನು ಕೇವಲ 8,999 ರೂ.ಗೆ ಬಿಡುಗಡೆ ಮಾಡಿದೆ.!! ಸೆಲ್ಫಿಗಾಗಿಯೇ ರೂಪಿತವಾಗಿರುವ ಶಿಯೋಮಿ "ರೆಡ್‌ಮಿ ವೈ1" ಕ್ಯಾಮೆರಾ ಗುಣಮಟ್ಟ ಅತ್ಯದ್ಬುತವಾಗಿರಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.!!

ವಿನ್ಯಾಸ ಮತ್ತು ಡಿಸ್‌ಪ್ಲೇ!!

ವಿನ್ಯಾಸ ಮತ್ತು ಡಿಸ್‌ಪ್ಲೇ!!

8,999 ರೂ.ಗೆ ಬಿಡುಗಡೆಯಾಗಿರುವ "ರೆಡ್‌ಮಿ ವೈ1 " ಸ್ಮಾರ್ಟ್‌ಫೋನ್ 5. ಇಂಚ್ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, ಕಾರ್ನಿಂಗ್ ಗೋರಿಲ್ಲ ಗ್ಲಾಸ್‌ನಿಂದ ರಕ್ಷಣೆ ಹೊಂದಿದೆ. 150 ಗ್ರಾಮ್ ತೂಕವಿರುವ ಈ ಫೋನ್ ಹಿಂಬಾಗದಲ್ಲಿ ಫಿಂಗರ್‌ಪ್ರಿಂಟ್ ಫೀಚರ್ ಹೊಂದಿದ್ದು, ಅತ್ಯುತ್ತಮ ಲುಕ್ ಹೊಂದಿದೆ.!!

RAM ಮತ್ತು ಮೆಮೊರಿ!!

RAM ಮತ್ತು ಮೆಮೊರಿ!!

ಶಿಯೋಮಿ "ರೆಡ್‌ಮಿ ವೈ1" ಸ್ಮಾರ್ಟ್‌ಫೋನ್ 3GB RAM ಮತ್ತು 32GB ಮೆಮೊರಿ ಹಾಗೂ 4G RAM ಮತ್ತು 64GB ಮೆಮೊರಿ ಹೊಂದಿರುವ ಎರಡು ವೆರಿಯಂಟ್‌ನಲ್ಲಿ ಬಿಡುಗಡೆಯಾಗಿದೆ. 3GB RAM ಮತ್ತು 32GB ವೆರಿಯಂಟ್ ಬೆಲೆ 8,999 ರೂ.ಆದರೆ, 4G RAM ಮತ್ತು 64GB ವೆರಿಯಂಟ್ ಫೋನ್ ಬೆಲೆ 10,999 ರೂಪಾಯಿಗಳಾಗಿವೆ.!!

"ರೆಡ್‌ಮಿ ವೈ1" ಪ್ರೊಸೆಸರ್ ಯಾವುದು?

ಸ್ನ್ಯಾಪ್‌ಡ್ರಾಗನ್ 435 ಆಕ್ಟಕೋರ್ ಪ್ರೊಸೆಸರ್ "ರೆಡ್‌ಮಿ ವೈ1" ಸ್ಮಾರ್ಟ್‌ಪೋನ್‌ನಲ್ಲಿದೆ. ಕ್ಯಾಮೆರಾ ಗುಣಮಟ್ಟ ಹೆಚ್ಚಿಸುವ ಸಲುವಾಗಿ 435 ಆಕ್ಟಕೋರ್ ಪ್ರೊಸೆಸರ್ ಬಳಕೆ ಮಾಡಲಾಗಿದೆ ಎನ್ನಬಹುದಾಗಿದ್ದು, ಬಜೆಟ್ ಬೆಲೆಯ ಫೋನ್ ಆಗಿರುವುದರಿಂದ ಕಾರ್ಯನಿರ್ವಹಣೆ ಉತ್ತಮವಾಗಿರಲಿದೆ.!!

ಡ್ಯುಯಲ್ ನ್ಯಾನೊ ಸಿಮ್!!

ಡ್ಯುಯಲ್ ನ್ಯಾನೊ ಸಿಮ್!!

"ರೆಡ್‌ಮಿ ವೈ1" ಸ್ಮಾರ್ಟ್‌ಪೋನ್‌ ಎರಡು ನ್ಯಾನೊ ಸಿಮ್‌ಗಳನ್ನು ಮತ್ತು ಒಂದು ಎಸ್‌ಡಿ ಕಾರ್ಡ್ ಅನ್ನು ಒಟ್ಟಿಗೆ ಹಾಕಬಹುದಾದ ಆಯ್ಕೆಯನ್ನು ಹೋಂದಿದೆ.!!ಹಾಗಾಗಿ, ಎಸ್‌ಡಿ ಕಾರ್ಡ್ ಬಳಕೆ ಮಾಡಲು ಒಂದು ಸಿಮ್ ಅನ್ನು ತೆಗೆದಿಡುವ ಅವಶ್ಯಕತೆ ಈ ಸ್ಮಾರ್ಟ್‌ಫೋನ್‌ನಲ್ಲಿಲ್ಲ.!!

Best Mobiles in India

English summary
Redmi Y1, Redmi Y1 Lite Both smartphones go on sale at 12pm IST via Amazon and Mi.com.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+