ಮೊಬೈಲ್ ಪ್ರಪಂಚ ನಡುಗಿಸಿದ "ರೆಡ್‌ಮಿ ವೈ1" ಮಾರಾಟ ದಿನಾಂಕ ಫಿಕ್ಸ್!!..ಎಂದು ಗೊತ್ತಾ?
ಪ್ಪೊ ಮತ್ತು ವಿವೊ ಸ್ಮಾರ್ಟ್‌ಫೋನ್‌ಗಳಿಗಿಂತ ಅರ್ಧ ಬೆಲೆಗೆ 16MP ಸೆಲ್ಫಿ ಕ್ಯಾಮೆರಾ ಫೋನ್ ಬಿಡುಗಡೆ ಮಾಡಿರುವ ಶಿಯೋಮಿ 'ಶಿಯೋಮಿ ರೆಡ್‌ಮಿ ವೈ1' ಸ್ಮಾರ್ಟ್‌ಫೋನ್ ಲಾಂಚ್ ಮಾಡಿದ್ದು, ನವೆಂಬರ್ ಎಂಟನೇ ತಾರೀಖಿನಿಂದ ಮಾರಾಟಕ್ಕಿಟ್ಟಿದೆ.!
ಇದೇ ಮೊದಲ ಭಾರಿಗೆ ಸೆಲ್ಫಿಗೆ ಹೆಚ್ಚು ಪ್ರಾಮುಖ್ಯತೆ ನೀಡಿ, ಅತ್ಯಂತ ಕಡಿಮೆ ಬೆಲೆಗೆ "ರೆಡ್‌ಮಿ ವೈ1" ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ಶಿಯೋಮಿ ಭಾರತದ ಮೊಬೈಲ್ ಮಾರುಕಟ್ಟೆಗೆ ಒಮ್ಮೆಲೆ ಶಾಕ್ ನೀಡಿದೆ.! ಹೊಸ ವಿಷಯ ಏನೆಂದರೆ ಶಿಯೋಮಿ ಕಂಪೆನಿ "ರೆಡ್‌ಮಿ ವೈ1" ಮಾರಾಟದ ದಿನಾಂಕವನ್ನು ಪ್ರಕಟಿಸಿದೆ.!!
ಹೌದು, ಒಪ್ಪೊ ಮತ್ತು ವಿವೊ ಸ್ಮಾರ್ಟ್‌ಫೋನ್‌ಗಳಿಗಿಂತ ಅರ್ಧ ಬೆಲೆಗೆ 16MP ಸೆಲ್ಫಿ ಕ್ಯಾಮೆರಾ ಫೋನ್ ಬಿಡುಗಡೆ ಮಾಡಿರುವ ಶಿಯೋಮಿ 'ಶಿಯೋಮಿ ರೆಡ್‌ಮಿ ವೈ1' ಸ್ಮಾರ್ಟ್‌ಫೋನ್ ಲಾಂಚ್ ಮಾಡಿದ್ದು, ನವೆಂಬರ್ ಎಂಟನೇ ತಾರೀಖಿನಿಂದ ಮಾರಾಟಕ್ಕಿಟ್ಟಿದೆ.! ಹಾಗಾದರೆ, ರೆಡ್‌ಮಿ ವೈ1 ಫೋನ್ ಮಾರಾಟ ಎಲ್ಲೆಲ್ಲಿ? ಆಫರ್‌ಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

"ರೆಡ್‌ಮಿ ವೈ1" ಮಾರಾಟ ಯಾವಾಗ ಶುರು!!
'ಶಿಯೋಮಿ ರೆಡ್‌ಮಿ ವೈ1' ಸ್ಮಾರ್ಟ್‌ಫೋನ್ ಅನ್ನು ನವೆಂಬರ್ ಎಂಟನೇ ತಾರೀಖಿನಿಂದ ಖರೀದಿಸಬಹುದಾಗಿದ್ದು, ಪ್ರಖ್ಯಾತ ಜಾಲತಾಣ ಅಮೆಜಾನ್ ಮತ್ತು ಶಿಯೋಮಿಯ ಅಫಿಶಿಯಲ್ ವೆಬ್‌ಸೈಟ್‌ನಲ್ಲಿ ಫೋನ್ ಅನ್ನು ಖರೀದಿಸಬಹುದಾಗಿದೆ. 8ನೇ ತಾರೀಖಿನ ಮದ್ಯಾಹ್ನ 12 ಗಂಟೆಗೆ ಸೇಲ್ ಆರಂಭವಾಗಲಿದೆ.!!


280GB ಐಡಿಯಾ ಡೇಟಾ!!
ಶಿಯೋಮಿ ತನ್ನ ನೂತನ ಸ್ಮಾರ್ಟ್‌ಫೋನ್ ಬಿಡುಗಡೆಗೆ ಐಡಿಯಾ ಟೆಲಿಕಾಂ ಜೊತೆಗೆ ಕೈಜೋಡಿಸಿದ್ದು, ಶಿಯೋಮಿ ರೆಡ್‌ಮಿ ವೈ1' ಸ್ಮಾರ್ಟ್‌ಫೋನ್ ಖರೀದಿಯೊಂದಿಗೆ 280GB 4G ಐಡಿಯಾ ಡೇಟಾ ಸಹ ಲಭ್ಯವಿದೆ.! 347 ರೂಪಾಯಿ ರೀಚಾರ್ಜ್ ಮಾಡಿಸಿದರೆ ಡಬಲ್ ಡೇಟಾ ಆಫರ್ ಇದಾಗಿದೆ.!!

16MP ಸೆಲ್ಫಿ ಕ್ಯಾಮೆರಾ!!
ಒಪ್ಪೊ ಮತ್ತು ವಿವೊ ಮೊಬೈಲ್ ಕಂಪೆನಿಗಳಿಗೆ ಶಾಕ್ ನೀಡಿರುವ ಶಿಯೋಮಿ, 16MP ಸೆಲ್ಫಿ ಕ್ಯಾಮೆರಾ ಹೊಂದಿರುವ "ರೆಡ್‌ಮಿ ವೈ1" ಸ್ಮಾರ್ಟ್‌ಫೋನ್ ಅನ್ನು ಕೇವಲ 8,999 ರೂ.ಗೆ ಬಿಡುಗಡೆ ಮಾಡಿದೆ.!! ಸೆಲ್ಫಿಗಾಗಿಯೇ ರೂಪಿತವಾಗಿರುವ ಶಿಯೋಮಿ "ರೆಡ್‌ಮಿ ವೈ1" ಕ್ಯಾಮೆರಾ ಗುಣಮಟ್ಟ ಅತ್ಯದ್ಬುತವಾಗಿರಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.!!

ವಿನ್ಯಾಸ ಮತ್ತು ಡಿಸ್‌ಪ್ಲೇ!!
8,999 ರೂ.ಗೆ ಬಿಡುಗಡೆಯಾಗಿರುವ "ರೆಡ್‌ಮಿ ವೈ1 " ಸ್ಮಾರ್ಟ್‌ಫೋನ್ 5. ಇಂಚ್ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, ಕಾರ್ನಿಂಗ್ ಗೋರಿಲ್ಲ ಗ್ಲಾಸ್‌ನಿಂದ ರಕ್ಷಣೆ ಹೊಂದಿದೆ. 150 ಗ್ರಾಮ್ ತೂಕವಿರುವ ಈ ಫೋನ್ ಹಿಂಬಾಗದಲ್ಲಿ ಫಿಂಗರ್‌ಪ್ರಿಂಟ್ ಫೀಚರ್ ಹೊಂದಿದ್ದು, ಅತ್ಯುತ್ತಮ ಲುಕ್ ಹೊಂದಿದೆ.!!

RAM ಮತ್ತು ಮೆಮೊರಿ!!
ಶಿಯೋಮಿ "ರೆಡ್‌ಮಿ ವೈ1" ಸ್ಮಾರ್ಟ್‌ಫೋನ್ 3GB RAM ಮತ್ತು 32GB ಮೆಮೊರಿ ಹಾಗೂ 4G RAM ಮತ್ತು 64GB ಮೆಮೊರಿ ಹೊಂದಿರುವ ಎರಡು ವೆರಿಯಂಟ್‌ನಲ್ಲಿ ಬಿಡುಗಡೆಯಾಗಿದೆ. 3GB RAM ಮತ್ತು 32GB ವೆರಿಯಂಟ್ ಬೆಲೆ 8,999 ರೂ.ಆದರೆ, 4G RAM ಮತ್ತು 64GB ವೆರಿಯಂಟ್ ಫೋನ್ ಬೆಲೆ 10,999 ರೂಪಾಯಿಗಳಾಗಿವೆ.!!

"ರೆಡ್‌ಮಿ ವೈ1" ಪ್ರೊಸೆಸರ್ ಯಾವುದು?
ಸ್ನ್ಯಾಪ್‌ಡ್ರಾಗನ್ 435 ಆಕ್ಟಕೋರ್ ಪ್ರೊಸೆಸರ್ "ರೆಡ್‌ಮಿ ವೈ1" ಸ್ಮಾರ್ಟ್‌ಪೋನ್‌ನಲ್ಲಿದೆ. ಕ್ಯಾಮೆರಾ ಗುಣಮಟ್ಟ ಹೆಚ್ಚಿಸುವ ಸಲುವಾಗಿ 435 ಆಕ್ಟಕೋರ್ ಪ್ರೊಸೆಸರ್ ಬಳಕೆ ಮಾಡಲಾಗಿದೆ ಎನ್ನಬಹುದಾಗಿದ್ದು, ಬಜೆಟ್ ಬೆಲೆಯ ಫೋನ್ ಆಗಿರುವುದರಿಂದ ಕಾರ್ಯನಿರ್ವಹಣೆ ಉತ್ತಮವಾಗಿರಲಿದೆ.!!

ಡ್ಯುಯಲ್ ನ್ಯಾನೊ ಸಿಮ್!!
"ರೆಡ್‌ಮಿ ವೈ1" ಸ್ಮಾರ್ಟ್‌ಪೋನ್ ಎರಡು ನ್ಯಾನೊ ಸಿಮ್‌ಗಳನ್ನು ಮತ್ತು ಒಂದು ಎಸ್‌ಡಿ ಕಾರ್ಡ್ ಅನ್ನು ಒಟ್ಟಿಗೆ ಹಾಕಬಹುದಾದ ಆಯ್ಕೆಯನ್ನು ಹೋಂದಿದೆ.!! ಹಾಗಾಗಿ, ಎಸ್‌ಡಿ ಕಾರ್ಡ್ ಬಳಕೆ ಮಾಡಲು ಒಂದು ಸಿಮ್ ಅನ್ನು ತೆಗೆದಿಡುವ ಅವಶ್ಯಕತೆ ಈ ಸ್ಮಾರ್ಟ್‌ಫೋನ್‌ನಲ್ಲಿಲ್ಲ.!!


Click it and Unblock the Notifications








