ರೆಡ್‌ಮಿ ನೋಟ್ 4 ಸ್ಪೋಟವಾಗಲು ಕಾರಣವೇನು?..ಶಿಯೋಮಿ ಹೇಳಿದ್ದು ಹೀಗೆ!!

10 ಲಕ್ಷಕ್ಕೂ ಹೆಚ್ಚು ಶಿಯೋಮಿ ರೆಡ್‌ಮಿ ನೋಟ್ 4 ಗಳಲ್ಲಿ ಎರಡು ಮೂರು ಫೋನ್‌ಗಳು ಬ್ಲಾಸ್ಟ್ ಆಗಿವೆ.!!

|

ಭಾರತದಲ್ಲಿ ಅತಿ ಹೆಚ್ಚು ಸೇಲ್ ಆಗುತ್ತಿರುವ ಸ್ಮಾರ್ಟ್‌ಫೋನ್ ಶೀಯೋಮಿ ರೆಡ್‌ ಮಿ ನೋಟ್ 4 ಸ್ಪೋಟಗೊಳ್ಳುತ್ತಿರುವ ವಿಷಯ ಈಗಾಗಲೇ ಎಲ್ಲೆಡೆ ಹರಿದಾಡುತ್ತಿದ್ದು, ಈ ಬಗ್ಗೆ ರೆಡ್‌ ಮಿ 4 ಬಳಕೆದಾರರು ಕೂಡ ಹೆಚ್ಚು ಗಾಬರಿಯಾಗಿದ್ದಾರೆ.! ಹಾಗಾಗಿ, ಈ ಬಗ್ಗೆ ಶಿಯೋಮಿ ಮೊಬೈಲ್ ಕಂಪೆನಿ ತನ್ನ ಸ್ಪಷ್ಟನೆ ನೀಡಿದೆ.!!

10 ಲಕ್ಷಕ್ಕೂ ಹೆಚ್ಚು ಶಿಯೋಮಿ ರೆಡ್‌ಮಿ ನೋಟ್ 4 ಗಳಲ್ಲಿ ಎರಡು ಮೂರು ಫೋನ್‌ಗಳು ಬ್ಲಾಸ್ಟ್ ಆಗಿವೆ ಎಂದು ಮಾಧ್ಯಮಗಳಿಂದ ತಿಳಿದುಬಂದಿದೆ.! ಆದರೆ, ನೋಟ್ 4 ನಲ್ಲಿನ ಯಾವುದೇ ತಾಂತ್ರಿಕ ತೊಂದರೆಗಳಿಂದ ಈ ತಪ್ಪು ಸಂಭವಿಸಿಲ್ಲ.! ಅದರಲ್ಲಿ ಬಳಕೆದಾರರ ತಪ್ಪು ಇದೆ ಎಂದು ಹೇಳಿದೆ.!! ಹಾಗಾದರೆ, ಶಿಯೋಮಿ ಹೇಳಿದ್ದೇನು ಎಂದು ತಿಳಿಯಲು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ!!

 ಉಪಯೋಗ ವಿಧಾನ ಸರಿಯಲ್ಲ.!!

ಉಪಯೋಗ ವಿಧಾನ ಸರಿಯಲ್ಲ.!!

ದೇಶದೆಲ್ಲೆಡೆ ಸೇರಿದಂತೆ ಬೆಂಗಳೂರು ಮತ್ತು ತುಮಕೂರಿನಲ್ಲಿಯೂ ರೆಡ್‌ಮಿ ನೋಟ್ 4 ಸ್ಪೋಟವಾಗಿರುವ ವಿಷಯ ನಿಮಗೆ ಗೊತ್ತಿರಬಹುದು. ಇದಕ್ಕೆ ಸಂಭಂದಿಸಿದಂತೆ ಶಿಯೋಮಿ ಸ್ಪಷ್ಟನೆ ನೀಡಿದ್ದು, ರೆಡ್‌ಮಿ ಪೋನ್ ಉಪಯೋಸಿಸುವಾಗ ಅವರು ಉಪಯೋಗಿಸುವ ವಿಧಾನವೇ ಸರಿಯಿಲ್ಲ. ಹಾಗಾಗಿ, ಫೋನ್ ಬ್ಲಾಸ್ಟ್ ಆಗಿರಬಹುದು ಎಂದು ಹೇಳಿದೆ.!!

 ಬೇರೆ ಚಾರ್ಜರ್ ಬಳಕೆ ಮಾಡಿರುತ್ತಾರೆ!!

ಬೇರೆ ಚಾರ್ಜರ್ ಬಳಕೆ ಮಾಡಿರುತ್ತಾರೆ!!

ಶಿಯೋಮಿ ರೆಡ್‌ಮಿ ನೋಟ್‌4 ಸ್ಮಾರ್ಟ್‌ಫೋನ್‌ಗೆ ಯಾವುದೋ ಕಡಿಮೆ ಗುಣಮಟ್ಟ ಚಾರ್ಜರ್ ಬಳಕೆ ಮಾಡಿರಬಹುದಾದ ತೊಂದರೆಯಿಂದ ಇಂತಹ ಕೆಟ್ಟ ಘಟನೆಗಳು ಜರುಗಿರಬಹುದು.ಕೆಟ್ಟ ಚಾರ್ಜರ್ ಅಥವಾ ಲೋಕಲ್ ಜಾರ್ಜರ್ ಬಳಕೆ ಸ್ಮಾರ್ಟ್‌ಫೋನ್‌ಗಳಿಗೆ ಎಂದಿಗೂ ಅಪಾಯವೇ ಎಂದು ತಿಳಿಸಿದೆ.!!

ವಿದ್ಯುತ್ ಪ್ರವಾಹಕ್ಕೆ ಮಿತಿ ಇದೆ.!!

ವಿದ್ಯುತ್ ಪ್ರವಾಹಕ್ಕೆ ಮಿತಿ ಇದೆ.!!

ಸ್ಮಾರ್ಟ್‌ಫೋನ್‌ ಹಾರ್ಡ್‌ವೇರ್‌ಗೆ ತಕ್ಕದಾದ ತಂತ್ರಜ್ಞಾನವುಳ್ಳ ಚಾರ್ಜರ್ ಗುಣಮಟ್ಟದ್ದಾಗಿದ್ದರೆ ಕಳಪೆ ಗುಣಮಟ್ಟದ ಚಾರ್ಜರ್ ಬಳಸಿದ್ರೆ ಹೆಚ್ಚು ವಿದ್ಯುತ್ ಪ್ರವಹಿಸಿವ ವೇಗದಲ್ಲಿ ಆಗಬಹುದಾದ ಬದಲಾವಣೆಯಿಂದ ಸ್ಮಾರ್ಟ್‌ಗಫೋನ್‌ ಸ್ಪೋಟಗೊಳ್ಳುತ್ತದೆ ಎಂದು ಹೇಳಿದೆ.!!

ಸಾಬೀತುಪಡಿಸಿ.!!

ಸಾಬೀತುಪಡಿಸಿ.!!

ಒಂದು ವೇಳೆ ಅದಾಗದೇ ನೋಟ್ 4 ಫೋನ್ ಸ್ಫೋಟಗೊಂಡಿರುವುದನ್ನು ಸಾಬೀತು ಪಡಿಸಿದರೆ ಅದರ ಬದಲಿಗೆ ಹೊಸ ಫೋನ್ ನೀಡುವುದಾಗಿ ಕಂಪನಿ ತಿಳಿಸಿದೆ. ಆದರೆ, ಸ್ಪೋಟದಿಂದ ಬಳಕೆದಾರರಿಗೆ ಆಗುವ ತೊಂದರೆ ಬಗ್ಗೆ ಶಿಯೋಮಿ ಕಂಪೆನಿ ಏನನ್ನು ತಿಳಿಸಿಲ್ಲ.!!

ಫೇಸ್‌ಬುಕ್‌ನಲ್ಲಿ ಶುಭಕೋರಿದಕ್ಕೆ ಮುರಿದುಬಿತ್ತು ಮದುವೆ!..ಯುವತಿ ಪಾರು!!ಫೇಸ್‌ಬುಕ್‌ನಲ್ಲಿ ಶುಭಕೋರಿದಕ್ಕೆ ಮುರಿದುಬಿತ್ತು ಮದುವೆ!..ಯುವತಿ ಪಾರು!!

Best Mobiles in India

English summary
"Extreme external force" applied to the device has been cited as the cause of Redmi Note 4 explosion.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X