Just In
Don't Miss
- News
ಭಾರತದ ಗೆಲುವನ್ನು ಕಾಂಗ್ರೆಸ್ ಪ್ರದರ್ಶನಕ್ಕೆ ಹೋಲಿಸಿದ ಸಂಜಯ್ ಝಾ
- Sports
ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್: ಅಗ್ರ ಸ್ಥಾನಕ್ಕೇರಿದ ಟೀಮ್ ಇಂಡಿಯಾ
- Automobiles
ವಾಣಿಜ್ಯ ವಾಹನಗಳ ಖರೀದಿಗಾಗಿ ಹಲವು ಆಕರ್ಷಕ ಸಾಲಸೌಲಭ್ಯಗಳಿಗೆ ಚಾಲನೆ ನೀಡಿದ ಟಾಟಾ
- Movies
ಅಂಧ ವ್ಯಕ್ತಿಯ ಬಾಳಿಗೆ ಬೆಳಕಾದ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ
- Education
SBI PO Mains Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Lifestyle
ಜ. 25ಕ್ಕೆ ಕುಂಭ ರಾಶಿಗೆ ಬುಧನ ಸಂಚಾರ: 12 ರಾಶಿಗಳ ಮೇಲೆ ಇದರ ಪ್ರಭಾವವೇನು?
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಶಿಯೋಮಿಯಿಂದ ಪವರ್ ಬ್ಯಾಂಕ್ ಎಫ್‌ಎಂ ರೆಡಿಯೋ ಬಿಡುಗಡೆ
ಟೆಕ್‌ಲೋಕದಲ್ಲಿ ತರಹೇವಾರಿ ಪ್ರೊಡಕ್ಟ್‌ಗಳು ಬಿಡುಗಡೆಯಾಗೋದು ಸಾಮಾನ್ಯ. ಹೊಸ ಹೊಸ ಆವಿಷ್ಕಾರದ ವಸ್ತುಗಳ ಮೇಲೆ ಗ್ರಾಹಕರಿಗೆ ಎಲ್ಲಿಲ್ಲದ ಆಸಕ್ತಿ ಕೂಡ ಇರುತ್ತೆ. ಅದ್ರಲ್ಲೂ ಟು ಇನ್ ಒನ್ ಕಾರ್ಯ ಮಾಡೋ ಪ್ರೊಡಕ್ಟ್‌ಗಳು ಅಂದ್ರೆ ಜಾಸ್ತಿನೆ ಇಷ್ಟ ಪಡ್ತಾರೆ ನಮ್ಮ ಜನ. ಇದೇ ಮಾದರಿಯಲ್ಲಿ ಏಕಕಾಲಕ್ಕೆ ಎರಡು ಕಾರ್ಯನಿರ್ವಹಿಸೋ ಪ್ರೋಡಾಕ್ಟ್ ಒಂದನ್ನ ಸ್ಮಾರ್ಟ್‌ಫೋನ್ ದೈತ್ಯ ಶಿಯೋಮಿ ಮಾರುಕಟ್ಟೆಗೆ ಪರಿಚಯಿಸಿದೆ.

ಶಿಯೋಮಿ ಕಂಪೆನಿ ಇದೀಗ ಮಾರುಕಟ್ಟೆಯಲ್ಲಿ ಹೊಸ 10,000mAh ಪವರ್ ಬ್ಯಾಂಕ್ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಪವರ್ ಬ್ಯಾಂಕ್ ಇತರ ಶಿಯೋಮಿ ಪವರ್ ಬ್ಯಾಂಕಿನಂತೆ ಅಲ್ಲ. ಇದು ನಿಮ್ಮ ಸ್ಮಾರ್ಟ್‌ಫೋನ್ ಮತ್ತು ಇತರ ಡಿವೈಸ್‌ಗಳನ್ನು ಸಹ ಚಾರ್ಜ್ ಮಾಡುತ್ತದೆ. ಅಲ್ಲದೆ ಚಾರ್ಜಿಂಗ್ ಕರ್ತವ್ಯಗಳ ಜೊತೆಗೆ, ಇದರಿಂದ ರೇಡಿಯೊ ಸೇವೆಯನ್ನು ಕೂಡ ಪಡೆಯಬಹುದಾಗಿದೆ.

ಹೌದು ಶಿಯೋಮಿ ಪವರ್ ಬ್ಯಾಂಕ್ ಜೊತೆಗೆ ಎಫ್ಎಂ ರೇಡಿಯೊವನ್ನು ಸೇರಿಸಿದೆ. ಈ ಪವರ್ ಬ್ಯಾಂಕ್‌ನಿಂದ ಇತರ ಎಲೆಕ್ಟ್ರಾನಿಕ್ಸ್ ಅನ್ನು ಚಾರ್ಜ್ ಮಾಡಬಹುದು ಮತ್ತು ಅದೇ ಸಮಯದಲ್ಲಿ ಎಫ್‌ಎಂ ರೆಡಿಯೋ ಮೂಲಕ ಸಂಗೀತವನ್ನು ಕೂಡ ಆಲಿಸಬಹುದಾಗಿದೆ. ಶಿಯೋಮಿ ಎಫ್‌ಎಂ ರೆಡಿಯೋ ಪವರ್ ಬ್ಯಾಂಕ್ ಎರಡು ಯುಎಸ್‌ಬಿ ಟೈಪ್-ಎ ಪೋರ್ಟ್‌ಗಳನ್ನ ಒಳಗೊಂಡಿದ್ದು. ಟೈಪ್ ಎಂ ಪೋರ್ಟ್‌ಗಳ ಜೊತೆಗೆ ಪವರ್ ಬ್ಯಾಂಕ್ ಅನ್ನು ಎಫ್‌ಎಂ ರೇಡಿಯೋ ಎನ್‌ಕೇಸಿಂಗ್ ಒಳಗೆ ಸಂಯೋಜಿಸಲಾಗಿದೆ.

ಇದರಿಂದ ಸ್ಮಾರ್ಟ್‌ಫೋನ್ ಚಾರ್ಜಿಂಗ್ ಆಗುವಾಗ ಎಫ್‌ಎಂ ರೆಡಿಯೋ ಕೇಳುವ ಅವಕಾಶ ಕಲ್ಪಿಸಿದೆ. ಇನ್ನು ಈ ಪವರ್ ಬ್ಯಾಂಕ್‌ನ ವಿನ್ಯಾಸ ಥೇಟ್ ರೆಟ್ರೋ ಶೈಲಿಯ ರೆಡಿಯೋ ಮಾದರಿಯಿಂದ ಕೂಡಿದೆ. ಇನ್ನು ಇತರ ಶಿಯೋಮಿ ಪವರ್ ಬ್ಯಾಂಕುಗಳಂತೆಯೇ, ಈ ಹೊಸ ಉತ್ಪನ್ನವು 10,000mAh ಬ್ಯಾಟರಿಯನ್ನು ಹೊಂದಿದೆ. ಇನ್ನು ಇದರ ಬೆಲೆ 1,408 ರೂ.ಆಗಿದ್ದು ಇದು ಪೋರ್ಟಬಲ್ ವಿನ್ಯಾಸ ದೊಂದಿಗೆ ಚರ್ಮ ಸ್ನೇಹಿ ಪ್ಲಾಸ್ಟಿಕ್ ನಿಂದ ಹೊರ ಮೈ ಆವೃತ್ತವಾಗಿದೆ.

ಜೊತೆಗೆ ಈ ಪವರ್ ಬ್ಯಾಂಕ್‌ನಲ್ಲಿ 2.1A 5V ಪವರ್ ಸಫ್ಲೈ ಮೂಲಕ ಚಾರ್ಜ್ ಮಾಡಬಹುದು. ಸ್ಮಾರ್ಟ್‌ಫೋನ್‌ಗಳ ಪವರ್ ದಾಹ ತಿರಿಸೋದ್ರ ಜೊತೆಗೆ ಎಫ್‌ಎಂ ಸೇವೆಯ್ನನು ಸಹ ನೀಡುತ್ತಿದೆ. ಇನ್ನು ಚಾರ್ಜ್ ಸಾಮರ್ಥ್ಯವನ್ನು ತೋರಿಸುವ ಡಿಜಿಟಲ್ ಡಿಸ್ಪ್ಲೇಕೂಡ ಇದರಲ್ಲಿ ಅಡಕವಾಗಿದೆ. ಇದಲ್ಲದೆ, ಎಫ್‌ಎಂ ರೇಡಿಯೊವನ್ನು ಆನ್ ಅಥವಾ ಆಫ್ ಮಾಡಲು ಬಟನ್ ಅವಕಾಶವನ್ನು ಸಹ ನೀಡಿದೆ.

ಅದಾಗ್ಯೂ ಈ ಪವರ್ ಬ್ಯಾಂಕ್‌ನಲ್ಲಿ ಆಪಲ್ ಐಫೋನ್ ಎಕ್ಸ್ ಅನ್ನು ದಿನಕ್ಕೆ ಮೂರು ಬಾರಿ ಚಾರ್ಜ್ ಮಾಡಬಹುದು ಎಂದು ಶಿಯೋಮಿ ಹೇಳಿಕೊಂಡಿದೆ. ಇನ್ನು ಈ ಪವರ್ ಬ್ಯಾಂಕ್ ಕಪ್ಪು, ಬಿಳಿ ಮತ್ತು ಗುಲಾಬಿ ಸೇರಿದಂತೆ ಮೂರು ಬಣ್ಣಗಳಲ್ಲಿ ಲಭ್ಯವಿರುತ್ತದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190