ಶಿಯೋಮಿ ನಂ.1 ಮಿ ಫ್ಯಾನ್ ಸೇಲ್: ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ಡಿಸ್ಕೌಂಟ್!
ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕ ಶಿಯೋಮಿ ಸ್ಮಾರ್ಟ್‌ಫೋನ್ ಪ್ರಿಯರಿಗಾಗಿ ನಂ 1 ಮಿ ಫ್ಯಾನ್ ಸೇಲ್ ಆಯೋಜಿಸಿದೆ. ಈ ಸೇಲ್ ಇದಿನಿಂದ ಶುರುವಾಗಿದ್ದು, ಇದೇ ಡಿಸೆಂಬರ್ 22ರ ವರೆಗೆ ನಡೆಯಲಿದೆ. ಇನ್ನು ಈ ಸಮಯದಲ್ಲಿ ಶಿಯೋಮಿ ಸ್ಮಾರ್ಟ್‌ಫೋನ್‌ಗಳು, ಮಿ ಟಿವಿಗಳು, ಲ್ಯಾಪ್‌ಟಾಪ್‌ಗಳು, ಮಿ ಬ್ಯಾಂಡ್ 4 ಮತ್ತು ಇತರ ಪರಿಕರಗಳು ಸೇರಿದಂತೆ ವಿವಿಧ ಪ್ರಾಡಕ್ಟ್‌ಗಳ ಮೇಲೆ ಭಾರಿ ರಿಯಾಯಿತಿಯನ್ನು ನೀಡುತ್ತದೆ.

ಹೌದು, ಶಿಯೋಮಿ ತನ್ನ ಗ್ರಾಹಕರಿಗಾಗಿ ನಂಬರ್ 1 ಮಿ ಫ್ಯಾನ್ ಸೇಲ್ ಅನ್ನು ಆಯೋಜಿಸಿದೆ. ಈ ಸೇಲ್‌ನಲ್ಲಿ ಶಿಯೋಮಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ಡಿಸ್ಕೌಂಟ್ ಅನ್ನು ನೀಡಲಾಗಿದೆ. ಅದರಲ್ಲೂ ಬಳಕೆದಾರರು ಸ್ಮಾರ್ಟ್‌ಫೋನ್‌ಗಳ ಮೇಲೆ 8,000 ರೂ., ಮಿ ಟಿವಿಗಳಲ್ಲಿ 4,000 ರೂ., ಲ್ಯಾಪ್‌ಟಾಪ್‌ಗಳಲ್ಲಿ 9,000 ರೂ. ವರೆ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಇನ್ನುಳಿದಂತೆ ನಂ .1 ಮಿ ಫ್ಯಾನ್ ಸೇಲ್ ನಲ್ಲಿ ದೊರೆಯುವ ರಿಯಾಯಿತಿ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ

ರೆಡ್ಮಿ ನೋಟ್ 9 ಸರಣಿ
ಶಿಯೋಮಿಯ ನಂ 1 ಮಿ ಫ್ಯಾನ್ ಸೇಲ್‌ನಲ್ಲಿ ರೆಡ್ಮಿ ನೋಟ್ 9 ಸರಣಿಯ ಸ್ಮಾರ್ಟ್‌ಫೋನ್‌ಗಳಿಗೆ 4,000 ರೂ.ಗಳವರೆಗೆ ರಿಯಾಯಿತಿಯನ್ನು ನೀಡಲಾಗಿದೆ. ಇನ್ನು ಈ ಸೇಲ್‌ನಲ್ಲಿ ರೆಡ್ಮಿ ನೋಟ್ 9 ಸ್ಮಾರ್ಟ್‌ಫೋನ್ 14,999 ರೂ. ಬದಲು 11,999 ರೂ.ಗಳಿಂದ ಪ್ರಾರಂಭವಾಗಲಿದೆ. ರೆಡ್ಮಿ ನೋಟ್ 9 ಪ್ರೊ ಅನ್ನು 16,999 ರೂ.ಗಳ ಬದಲು 12,999 ರೂಗಳಲ್ಲಿ ಖರೀದಿಸಬಹುದು. ಹಾಗೇಯೆ ರೆಡ್ಮಿ ನೋಟ್ 9 ಪ್ರೊ ಮ್ಯಾಕ್ಸ್ ಅನ್ನು 16,999 ರೂಗಳಿಗೆ ಖರೀದಿಸಬಹುದಾಗಿದೆ.

ರೆಡ್ಮಿ 9 ಸರಣಿ
ಇನ್ನು ರೆಡ್ಮಿ 9 ಸರಣಿ ಸ್ಮಾರ್ಟ್‌ಫೋನ್‌ಗಳ ಮೇಲೆ 3000 ರೂ.ಗಳವರೆಗೆ ರಿಯಾಯಿತಿಯನ್ನು ನೀಡಲಾಗಿದೆ. ಇದರಲ್ಲಿ ರೆಡ್ಮಿ 9A ಸ್ಮಾರ್ಟ್‌ಫೋನ್ ಅನ್ನು ಕೇವಲ 6,999 ರೂಗಳಿಗೆ ಖರೀದಿಸಬಹುದಾಗಿದೆ. ಜೊತೆಗೆ ರೆಡ್‌ಮಿ 9I, ರೆಡ್‌ಮಿ 9, ಮತ್ತು ರೆಡ್‌ಮಿ 9 ಪ್ರೈಮ್‌ಗಳನ್ನು ಕ್ರಮವಾಗಿ 8,299, 8,999 ಮತ್ತು 9,999 ರೂಗಳಿಗೆ ಖರೀದಿಸಬಹುದು.

ಮಿ ನೋಟ್ಬುಕ್ 14 ಸರಣಿ
ಮಿ ನೋಟ್ಬುಕ್ 14 ಸರಣಿಯ ಲ್ಯಾಪ್‌ಟಾಪ್‌ಗಳ ಮೇಲೆ ಸಹ ರಿಯಾಯಿತಿಯನ್ನು ನೀಡಲಾಗಿದೆ. ಈ ಸೇಲ್‌ನಲ್ಲಿ ಮಿ ನೋಟ್ಬುಕ್ 14 256 G/UHD ರೂಪಾಂತರಕ್ಕೆ 41,999 ರೂ. ಮತ್ತು 512G ಮಾದರಿಯನ್ನು 43,999 ಕ್ಕೆ ಖರೀದಿಸಬಹುದು.

ಮಿ ಪರಿಕರಗಳ ಮೇಲಿನ ರಿಯಾಯಿತಿಗಳು
ಇನ್ನು ಮಿ ಬ್ಯಾಂಡ್ 4, ಮಿ ವಾಯರ್‌ಲೆಸ್ ಪವರ್ ಬ್ಯಾಂಡ್ 10,000mAh ಮತ್ತು ಮಿ ಡ್ಯುಯಲ್ ಡ್ರೈವರ್ ಇನ್-ಇಯರ್ ಇಯರ್‌ಫೋನ್‌ಗಳು ಸಹ ರಿಯಾಯಿತಿ ದರದಲ್ಲಿ ಲಭ್ಯವಾಗಲಿವೆ. ಮಿ ಬ್ಯಾಂಡ್ 4 ಅನ್ನು 2,499 ರೂಗಳ ಬದಲು 1,999 ರೂಗಳಿಗೆ ಖರೀದಿಸಬಹುದು ಮತ್ತು Mi ನ 10,000 ಪವರ್ ಬ್ಯಾಂಕ್ ಅನ್ನು 1,999 ರೂ.ಗಳಿಗೆ ಖರೀದಿಸಬಹುದಾಗಿದೆ. ಮಿ ಡ್ಯುಯಲ್ ಡ್ರೈವರ್ ಇನ್-ಇಯರ್ ಇಯರ್‌ಫೋನ್‌ಗಳನ್ನು 999 ರೂಗಳ ಬದಲು 599 ರೂಗಳಿಗೆ ಖರೀದಿಸಬಹುದು.


Click it and Unblock the Notifications








