Home
ಸುದ್ದಿಜಾಲ

ಕಳೆದ 24 ದಿನಗಳಲ್ಲಿ ಮಾರಾಟವಾದ ಶಿಯೋಮಿ 'ಮಿ ಟಿವಿ'ಗಳು ಎಷ್ಟು ಗೊತ್ತಾ?

ಭಾರತೀಯ ಟಿವಿ ಮಾರುಕಟ್ಟೆಯಲ್ಲಿ ಶಿಯೋಮಿಯ ಹೆಜ್ಜೆ ಕಾಲಕ್ರಮೇಣ ಬಲವಾಗಿ ಬೆಳೆಯುತ್ತಿದೆ ಎಂಬುದಕ್ಕೆ ಈ ಬಾರಿಯ ಹಬ್ಬದ ಮಾರಾಟ ಸಾಕ್ಷಿಯಾಗಿದೆ. ಚೀನೀ ಮೊಬೈಲ್ ತಯಾರಕ ಶಿಯೋಮಿ ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳು, ಟಿವಿಗಳು ಮತ್ತು ಇತರ ಸ್ಮಾರ್ಟ್ ಗ್ಯಾಜೆಟ್ಳಿಗೆ ಜನಪ್ರಿಯ ಬ್ರಾಂಡ್ ಆಗಿದ್ದು, ಇತ್ತೀಚಿನ ಹಬ್ಬದ ಮಾರಾಟದ ಸಮಯದಲ್ಲಿ ಆನ್‌ಲೈನ್ ಮತ್ತು ಆಫ್‌ಲೈನ್ ಚಿಲ್ಲರೆ ವ್ಯಾಪಾರಿಗಳ ಮೂಲಕ ಒಟ್ಟು 500,000 ಮಿ ಟಿವಿಗಳನ್ನು ಮಾರಾಟ ಮಾಡಿದೆ ಎಂದು ತಿಳಿದುಬಂದಿದೆ.

 ಹಬ್ಬದ ಋತು

ಹೌದು, ಇತ್ತೀಚೆಗೆ ನಡೆದ ಹಬ್ಬದ ಋತುವಿನ ಮಾರಾಟದ ಸಮಯದಲ್ಲಿ ಮಿ ಟಿವಿಗಳು ಹೆಚ್ಚು ಮಾರಾಟವಾದ ಟಿವಿ ಬ್ರಾಂಡ್ ಎಂದು ಶಿಯೋಮಿ ಹೇಳಿಕೊಂಡಿದೆ. ಸೆಪ್ಟೆಂಬರ್ 24 ರಿಂದ ಪ್ರಾರಂಭವಾದ ನಂತರ 24 ದಿನಗಳಲ್ಲಿ 500,000 ಕ್ಕೂ ಹೆಚ್ಚು ಮಿ ಟಿವಿ ಸೆಟ್‌ಗಳನ್ನು ಮಾರಾಟ ಮಾಡಲಾಗಿದೆ ಎಂದು ಕಂಪೆನಿ ತಿಳಿಸಿದ್ದು, ಮಿ.ಕಾಮ್, ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಇತರ ಜನಪ್ರಿಯ ಆಫ್‌ಲೈನ್ ಚಿಲ್ಲರೆ ವ್ಯಾಪಾರಿಗಳು ಮಿ ಟಿವಿಗಳ ಮಾರಾಟಕ್ಕೆ ಜನಪ್ರಿಯ ಚಾನೆಲ್‌ಗಳಾಗಿವೆ.

ಶಿಯೋಮಿ ಮಿ

ಎಲ್ಲಾ ಶಿಯೋಮಿ ಮಿ ಟಿವಿಗಳು ಶಿಯೋಮಿಯ ಪ್ಯಾಚ್‌ವಾಲ್ ಇಂಟರ್ಫೇಸ್ ಅಥವಾ ಆಂಡ್ರಾಯ್ಡ್ ಟಿವಿ ಓಎಸ್ ಅನ್ನು ಚಾಲನೆ ಮಾಡುತ್ತವೆ. ಕೆಲವು ಮಿ ಟಿವಿಗಳು ಎರಡೂ ಓಎಸ್ ಅನ್ನು ಒಟ್ಟಿಗೆ ರನ್ ಮಾಡುತ್ತವೆ. ಇತ್ತೀಚೆಗೆ, ಶಿಯೋಮಿ ಮಿ ಟಿವಿ 4 ಎಕ್ಸ್ ಶ್ರೇಣಿಯನ್ನು ಭಾರತದಸ್ಮಾರ್ಟ್ ಟಿವಿ ಮಾರುಕಟ್ಟೆಗೆ ಸೇರಿಸಿತು. 4 ಎಕ್ಸ್ ಸರಣಿಯಲ್ಲಿ 65-ಇಂಚು, 50-ಇಂಚು ಮತ್ತು 43-ಇಂಚಿನ ರೂಪಾಂತರಗಳಲ್ಲಿ ಮಿ ಟಿವಿ 4 ಎಕ್ಸ್ ಶ್ರೇಣಿಯು 4 ಕೆ ಸ್ಮಾರ್ಟ್ ಟಿವಿಗಳನ್ನು ಒಳಗೊಂಡಿದೆ.

ಟಿವಿ ಮಾರಾಟ

ಟಿವಿ ಮಾರಾಟದ ದೃಷ್ಟಿಯಿಂದ ಶಿಯೋಮಿ ಕಂಪನಿಯು ಬಿಡುಗಡೆ ಮಾಡಿರುವ ಮಿ ಟಿವಿಗಳ ಮಾರಾಟ ಸಂಖ್ಯೆ ದೊಡ್ಡದಾಗಿದೆ. ಶಿಯೋಮಿ ತನ್ನ ಖರೀದಿದಾರರಲ್ಲಿ ಹೆಚ್ಚಿನವರು ಆನ್‌ಲೈನ್ ಗ್ರಾಹಕರಾಗಿದ್ದು, ಅಲ್ಲಿ ಟಿವಿಗಳು ಸುಲಭವಾಗಿ ಲಭ್ಯವಿವೆ ಎಂದು ಹೇಳಿರುವುದು ಈಗಲೂ ಆನ್‌ಲೈನ್‌ನ್‌ನಲ್ಲಿ ಶಿಯೋಮಿ ಹವಾ ಹೆಚ್ಚಾಗಿದೆ. ಇದೇ ಸಮಯದಲ್ಲಿ, ಶಿಯೋಮಿ ತನ್ನ ಆಫ್‌ಲೈನ್ ಮಳಿಗೆಗಳನ್ನು ಸಹ ವಿಸ್ತರಿಸುತ್ತಿದೆ. ಇದರಿಂದ ಗ್ರಾಹಕರು ಅನುಭವದ ಮೂಲಕ ಮಿ ಟಿವಿಗಳನ್ನು ಖರೀದಿಸಬಹುದಾಗಿದೆ.

 ಮಿ ಟಿವಿ ಬ್ರಾಂಡ್

ಶಿಯೋಮಿ ತನ್ನ ಮಿ ಟಿವಿ ಬ್ರಾಂಡ್ ಅನ್ನು ಎರಡು ವರ್ಷಗಳ ಹಿಂದೆ ಬಿಡುಗಡೆ ಮಾಡಿದೆ. ಈ ಶಿಯೋಮಿ ಮಿ ಟಿವಿಗಳ ಬೆಲೆ ಮತ್ತು ವೈಶಿಷ್ಟ್ಯಗಳಿಗಾಗಿ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚೆಚ್ಚು ಜನಪ್ರಿಯವಾಗಿದವೆ. ಇನ್ನು ಮಿ ಟಿವಿಗಳು ಅವರು ನೀಡುವ ವೈಶಿಷ್ಟ್ಯಗಳಿಗೆ ಸ್ಪರ್ಧಾತ್ಮಕವಾಗಿ ಬೆಲೆಯಿರುತ್ತವೆ. ಇನ್ನು ಇದೀಗ ಶಿಯೋಮಿಗೆ ಸೆಡ್ಡುಹೊಡೆಯಲು ಒನ್‌ಪ್ಲಸ್, ಮೊಟೊರೊಲಾ, ಸ್ಯಾಮ್‌ಸಂಗ್ ಮತ್ತು ಇತರ ಸ್ಮಾರ್ಟ್‌ಫೋನ್ ತಯಾರಕರು ಸೇರಿರುವುದನ್ನು ನಾವು ಇದೀಗ ನೋಡಬಹುದು.

Best Mobiles in India

English summary
Xiaomi says that it has sold 500,000 Mi TVs during the recent festive sale, both via online and offline retailers.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+