ಶಿಯೋಮಿಯಿಂದ ಹೊಸ ಕನ್ನಡಕ ಬಿಡುಗಡೆ! ಇದರ ಉಪಯೋಗ ಕೇಳಿದ್ರೆ ಅಚ್ಚರಿ ಪಡೋದು ಗ್ಯಾರಂಟಿ!
ಇಂದಿನ ಟೆಕ್ನಾಲಜಿ ಯುಗದಲ್ಲಿ ಸ್ಮಾರ್ಟ್ ಗ್ಲಾಸ್‌ಗಳು ಸಾಕಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿವೆ. ಕೂಲಿಂಗ್ ಗ್ಲಾಸ್‌ಗಳು ಕೇವಲ ಕಣ್ಣಿಗೆ ತಂಪು ಮಾತ್ರವಲ್ಲ ಮನಸ್ಸಿಗೆ ಮುದ ನೀಡುವ ಆಡಿಯೋ ಡಿವೈಸ್‌ಗಳಾಗಿ ಕೂಡ ಕಾರ್ಯನಿರ್ವಹಿಸುತ್ತಿವೆ. ಇದೇ ಕಾರಣಕ್ಕೆ ಜನಪ್ರಿಯ ಶಿಯೋಮಿ ಕಂಪೆನಿ ಸ್ಮಾರ್ಟ್ ಆಡಿಯೋ ಗ್ಲಾಸ್‌ಗಳನ್ನು ಪರಿಚಯಿಸುವತ್ತ ಹೆಚ್ಚಿನ ಒತ್ತು ನೀಡಿದೆ.
ಹೌದು, ಈ ಜಮಾನದ ಅಚ್ಚರಿ ಎಂದೇ ಪರಿಗಣಿಸಲ್ಪಡುತ್ತಿರುವ ಸ್ಮಾರ್ಟ್ ಆಡಿಯೋ ಗ್ಲಾಸ್‌ಗಳ ಸಾಲಿಗೆ ಶಿಯೋಮಿ ಮತ್ತೊಂದು ಸ್ಮಾರ್ಟ್ ಗ್ಲಾಸ್ ಸೇರ್ಪಡೆ ಮಾಡಿದೆ. ಸದ್ಯ ಶಿಯೋಮಿ ಹೊಸ ಮಿಜಿಯಾ ಸ್ಮಾರ್ಟ್ ಆಡಿಯೋ ಗ್ಲಾಸ್ ಅನ್ನು ಅನಾವರಣಗೊಳಿಸಿದೆ. ಇನ್ನು ಈ ಸ್ಮಾರ್ಟ್ ಆಡಿಯೋ ಗ್ಲಾಸ್ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಶಿಯೋಮಿ ಮಿಜಿಯಾ ಸ್ಮಾರ್ಟ್ ಆಡಿಯೋ ಗ್ಲಾಸ್ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಹೊಸ ಅವತಾರದಲ್ಲಿ ಬಂದಿರುವ ಸ್ಮಾರ್ಟ್ ಆಡಿಯೋ ಗ್ಲಾಸ್ ತನ್ನ ಮಲ್ಟಿ ಪಂಕ್ಷನ್ ಕಾರಣಕ್ಕೆ ಟೆಕ್ ವಲಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ. ಇನ್ನು ಈ ಹೊಸ ಸ್ಮಾರ್ಟ್ ಆಡಿಯೋ ಗ್ಲಾಸ್ ಡಿಸೈನ್ ಹಾಗೂ ವಿನ್ಯಾಸ ಅತ್ಯಾಕರ್ಷಕವಾಗಿದ್ದು, ತುಂಬಾ ಹಗುರವಾಗಿದ್ದು ಇದರ ತೂಕ ಕೇವಲ 38.1g ಮಾತ್ರ ಎನ್ನಲಾಗಿದೆ.
ಈ ಸ್ಮಾರ್ಟ್ ಆಡಿಯೋ ಗ್ಲಾಸ್ ಒಪನ್ ಸೌಂಡ್ ಫೀಲ್ಡ್, ಡಬಲ್ ಆಂಟಿ-ಲೀಕೇಜ್, ಕರೆಗಳ ಸಮಯದಲ್ಲಿ ಶಬ್ದ ಕಡಿತಗೊಳಿಸುವ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದು ಲಾಂಗ್ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದೆ. ಇದಲ್ಲದೆ ಈ ಸ್ಮಾರ್ಟ್ ಆಡಿಯೋ ಗ್ಲಾಸ್ ಡ್ಯುಯಲ್-ಡಿವೈಸ್ ಕನೆಕ್ಟಿವಿಟಿಯನ್ನು ಬೆಂಬಲಿಸಲಿದೆ. ಇನ್ನು ಸ್ಮಾರ್ಟ್ ಆಡಿಯೋ ಗ್ಲಾಸ್ ತನ್ನ ಎರಡೂ ಬದಿಗಳಲ್ಲಿ ಅಲ್ಟ್ರಾ-ಲಾಂಗ್ ಟಚ್ ಅನ್ನು ಹೊಂದಿದೆ. ಇದರಿಂದ ಸ್ಮಾರ್ಟ್ ಗ್ಲಾಸ್ ನಿಮ್ಮ ಕಣ್ಣಿಗೆ ಅಂದವನ್ನು ನೀಡಲಿದೆ.

ಇನ್ನು ಈ ಗ್ಲಾಸ್‌ಗಳು 128mm 2 ಅಲ್ಟ್ರಾ-ಡೈನಾಮಿಕ್ ಬ್ಯಾಲೆನ್ಸ್ ಯೂನಿಟ್ ಆಗಿದ್ದು, SBS2.0 ಡಬಲ್-ಸಸ್ಪೆನ್ಶನ್ ಬ್ಯಾಲೆನ್ಸ್ ಸ್ಟ್ರಕ್ಚರ್ ಪಡೆದುಕೊಂಡಿವೆ. ಇದರಿಂದ ಸ್ಮಾರ್ಟ್ ಗ್ಲಾಸ್‌ನಲ್ಲಿ ನಿಮ್ಮ ಮನಸ್ಸಿಗೆ ಮುದ ನೀಡುವ ಆಡಿಯೋ ಅನುಭವಕ್ಕಾಗಿ ಸೌಂಡ್ ಸರೌಂಡ್ ಅಲ್ಗಾರಿದಮ್ ಅನ್ನು ಬಳಸಲಿವೆ. ಅಲ್ಲದೆ ಶಿಯೋಮಿ ಮಿಜಿಯಾ ಸ್ಮಾರ್ಟ್ ಆಡಿಯೋ ಡ್ಯುಯಲ್-ಮೈಕ್ರೊಫೋನ್ ಬೀಮ್ AI ಕಾಲ್ ನಾಯ್ಸ್ ಕ್ಯಾನ್ಸಲೇಶನ್ ಅನ್ನು ಹೊಂದಿದೆ. ಇದರಿಂದ ನೀವು ಕರೆ ಸ್ವಿಕರಿಸಿದಾಗ ಸುತ್ತಲಿನ ಶಬ್ದ ಬೀಳದಂತೆ ಮಾಡಲಿದೆ.
ಶಿಯೋಮಿ ಮಿಜಿಯಾ ಸ್ಮಾರ್ಟ್‌ಗ್ಲಾಸ್ ಅತ್ಯುತ್ತಮವಾದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ನೀಡಲಿದೆ. ಇದರಿಂದ ಸ್ಮಾರ್ಟ್ ಗ್ಲಾಸ್ ದಿನಪೂರ್ತಿ ಬ್ಯಾಟರಿ ಬಾಳಿಕೆಯನ್ನು ಬೆಂಬಲಿಸಲಿದೆ ಎಂದು ಹೇಳಲಾಗಿದೆ. ಇದರಲ್ಲಿ ಏಳು ಗಂಟೆಗಳ ಕಂಟಿನ್ಯೂ ಟಾಕ್, ಹತ್ತು ಗಂಟೆಗಳ ನಿರಂತರ ಸಂಗೀತ ಆಲಿಸುವಿಕೆ ಮತ್ತು 22 ಗಂಟೆಗಳ ದೈನಂದಿನ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ. ಇನ್ನು ಸ್ಮಾರ್ಟ್‌ವಾಚ್ ಎರಡೂ ಬದಿಗಳಲ್ಲಿ 30 ಮಿಮೀ ಉದ್ದದ ಟಚ್ ಏರಿಯಾ ಹೊಂದಿದ್ದು, ಕುರುಡು ಕಾರ್ಯಾಚರಣೆಗೆ ಅವಕಾಶ ಮಾಡಿಕೊಡಲಿದೆ.

ಇದರಲ್ಲಿ ನೀಡಿರುವ ಟಚ್ ಏರಿಯಾವನ್ನು ಲಾಂಗ್ ಪ್ರೆಸ್ ಮಾಡುವ ಮೂಲಕ ವಾಯ್ಸ್ ಅಸಿಸ್ಟೆಂಟ್ ಅನ್ನು ಆನ್ ಮಾಡಬಹುದು. ಈ ಸ್ಮಾರ್ಟ್‌ಗ್ಲಾಸ್‌ನ ಮುಖ್ಯವಾದ ಅಂಶವೆಂದರೆ ಇದರಲ್ಲಿ ಹಸ್ತಚಾಲಿತ ಸ್ವಿಚಿಂಗ್ ಇಲ್ಲದೆ ಡ್ಯುಯಲ್-ಡಿವೈಸ್ ಕನೆಕಟಿವಿಟಿಯನ್ನು ಬೆಂಬಲಿಸುವುದು. ಇದರಿಂದ ಒಂದೇ ಸಮಯದಲ್ಲಿ ಸ್ಮಾರ್ಟ್ ಗ್ಲಾಸ್ ಅನ್ನು ನೀವು ಎರಡು ಬ್ಲೂಟೂತ್ ಡಿವೈಸ್‌ಗಳಿಗೆ ಕನೆಕ್ಟ್ ಮಾಡಲಿದೆ.
ಶೀಯೋಮಿ ಮಿಜಿಯಾ ಸ್ಮಾರ್ಟ್ ಆಡಿಯೊ ಗ್ಲಾಸ್ ಇದೇ ಏಪ್ರಿಲ್ 12 ರಿಂದ ಏಪ್ರಿಲ್ 26 ರವರೆಗೆ ಕ್ರೌಡ್‌ಫಂಡಿಂಗ್‌ಗೆ ಲಭ್ಯವಾಗಲಿದೆ. ಇನ್ನು ಇದರ ಕ್ರೌಡ್‌ಫಂಡಿಂಗ್ ಬೆಲೆ 799 ಯುವಾನ್ (ಅಂದಾಜು 9,519ರೂ) ಆಗಿದೆ.


Click it and Unblock the Notifications








