Home
ಸುದ್ದಿಜಾಲ

ಶಿಯೋಮಿಯಿಂದ ಹೊಸ ಸ್ಮಾರ್ಟ್‌ಬ್ಯಾಂಡ್‌ ಲಾಂಚ್‌! ಇದರಲ್ಲಿದೆ ಅಚ್ಚರಿಯ ಫೀಚರ್ಸ್‌!

ಟೆಕ್‌ ದೈತ್ಯ ಶಿಯೋಮಿ ಕಂಪೆನಿ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಸ್ಮಾರ್ಟ್‌ಬ್ಯಾಂಡ್‌ಗಳಿಗೂ ಕೂಡ ಸೈ ಎನಿಸಿಕೊಂಡಿದೆ. ತನ್ನ ವಿಭಿನ್ನ ಸ್ಮಾರ್ಟ್‌ಬ್ಯಾಂಡ್‌ಗಳ ಮೂಲಕ ಗ್ರಾಹಕರಿಂದ ಮೆಚ್ಚುಗೆ ಪಡೆದಿದೆ. ಅದರ ಮುಂದುವರೆದ ಭಾಗವೆಂಬಂತೆ ಶಿಯೋಮಿ ಸ್ಮಾರ್ಟ್‌ ಬ್ಯಾಂಡ್‌ 8 ಆಕ್ಟಿವ್ ಅನ್ನು ಬಿಡುಗಡೆ ಮಾಡಿದೆ. ಜೊತೆಗೆ 210mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.

ಹೌದು, ಶಿಯೋಮಿ ಕಂಪೆನಿ ಹೊಸ ಶಿಯೋಮಿ ಸ್ಮಾರ್ಟ್‌ ಬ್ಯಾಂಡ್‌ 8 ಆಕ್ಟಿವ್ ಸ್ಮಾರ್ಟ್‌ವಾಚ್‌ ಬಿಡುಗಡೆ ಮಾಡಿದೆ. ಸದ್ಯ ಈ ಹೊಸ ಸ್ಮಾರ್ಟ್ ಬ್ಯಾಂಡ್ 8 ಆಕ್ಟಿವ್ ಜಾಗತಿಕವಾಗಿ ಆರ್ಡರ್‌ನಲ್ಲಿ ಲಭ್ಯವಿದೆ. ಇನ್ನು ಸ್ಮಾರ್ಟ್‌ಬ್ಯಾಂಡ್‌ 50ಕ್ಕಿಂತ ಹೆಚ್ಚು ಪ್ರಿಲೋಡ್‌ ಫಿಟ್‌ನೆಸ್‌ ಮೋಡ್‌ಗಳನ್ನು ಹೊಂದಿದೆ. ಆದರೆ ಇದು GPS ಸ್ಥಳ ಡೇಟಾ ಏಕೀಕರಣವನ್ನು ಹೊಂದಿಲ್ಲ. ಹಾಗಾದ್ರೆ ಈ ಸ್ಮಾರ್ಟ್‌ಬ್ಯಾಂಡ್‌ ಯಾವೆಲ್ಲಾ ವಿಶೇಷತೆ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಶಿಯೋಮಿಯಿಂದ ಹೊಸ ಸ್ಮಾರ್ಟ್‌ಬ್ಯಾಂಡ್‌ ಲಾಂಚ್‌! ಇದರಲ್ಲಿದೆ ಅಚ್ಚರಿಯ ಫೀಚರ್ಸ್‌!

ಶಿಯೋಮಿ ಸ್ಮಾರ್ಟ್‌ಬ್ಯಾಂಡ್‌ 8 ಆಕ್ಟಿವ್‌ 1.47 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 172 x 320 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 247 PPI ಪಿಕ್ಸೆಲ್ ಸಾಂದ್ರತೆಯನ್ನು ಪಡೆದಿದೆ. ಇದಲ್ಲದೆ ಡಿಸ್‌ಪ್ಲೇ 450ನೀಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಈ ಸ್ಮಾರ್ಟ್‌ಬ್ಯಾಂಡ್‌ 100+ ವಾಚ್ ಫೇಸ್‌ಗಳನ್ನು ಪ್ರಿ ಲೋಡ್‌ ಮಾಡಲಾಗಿದೆ. ಅಲ್ಲದೆ 50ಕ್ಕಿಂತ ಹೆಚ್ಚು ಪ್ರಿಲೋಡ್‌ ಫಿಟ್‌ನೆಸ್‌ ಮೋಡ್‌ಗಳನ್ನು ಹೊಂದಿದೆ.

ಇನ್ನು ಶಿಯೋಮಿ ಸ್ಮಾರ್ಟ್‌ಬ್ಯಾಂಡ್‌ 8 ಆಕ್ಟಿವ್‌ 210mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 14 ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ. ಈ ಸ್ಮಾರ್ಟ್‌ ಬ್ಯಾಂಡ್ ಹಲವಾರು ಆರೋಗ್ಯ ಮೇಲ್ವಿಚಾರಣಾ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇದಕ್ಕಾಗಿಯೇ 50ಕ್ಕಿಂತ ಹೆಚ್ಚು ಪೂರ್ವಸ್ಥಾಪಿತ ಫಿಟ್‌ನೆಸ್ ಮೋಡ್‌ಗಳನ್ನು ಹೊಂದಿದೆ. ಆದರೆ ಇದು GPS ಲೊಕೇಶನ್‌ ಡೇಟಾ ಏಕೀಕರಣವನ್ನು ಹೊಂದಿಲ್ಲ.

ಶಿಯೋಮಿ ಸ್ಮಾರ್ಟ್ ಬ್ಯಾಂಡ್ 8 ಆಕ್ಟಿವ್ ಪ್ರಸ್ತುತ UK, ಜರ್ಮನಿ ಮತ್ತು ಆಲಿ ಎಕ್ಸ್‌ಪ್ರೆಸ್‌ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದನ್ನು ಆಲಿಎಕ್ಸ್‌ಪ್ರೆಸ್‌ನಲ್ಲಿ €24.99 (ಅಂದಾಜು 2,189ರೂ.) ಬೆಲೆಯನ್ನು ಹೊಂದಿದೆ. ಇನ್ನು ಈ ಬ್ಯಾಂಡ್ ಐದು ಬಣ್ಣಗಳಲ್ಲಿ ಬರುತ್ತದೆ. ಆದರೆ ಪ್ರಸ್ತುತ ಕಪ್ಪು ಮತ್ತು ಗುಲಾಬಿ ಆಯ್ಕೆಗಳಲ್ಲಿ ಮಾತ್ರ ಲಭ್ಯವಿದೆ.

ಇದಲ್ಲದೆ ಶಿಯೋಮಿ ಕಂಪೆನಿ ಇತ್ತೀಚಿಗೆ ಶಿಯೋಮಿ 13T ಸ್ಮಾರ್ಟ್‌ಫೋನ್‌ ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 8200 ಅಲ್ಟ್ರಾ SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,220x2,712 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಡಿಸ್‌ಪ್ಲೇ 144Hz ರಿಫ್ರೆಶ್ ರೇಟ್ ಬೆಂಬಲವನ್ನು ಪಡೆದಿದ್ದು, 480Hz ಟಚ್ ಸ್ಯಾಂಪ್ಲಿಂಗ್ ರೇಟ್ ಒಳಗೊಂಡಿದೆ.

ಇನ್ನು ಶಿಯೋಮಿ 13T ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ OIS ಮತ್ತು 24mm ಫೋಕಲ್ ಲೆಂತ್ ಅನ್ನು ಹೊಂದಿದೆ. ಇದರ ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಟೆಲಿಫೋಟೋ ಸೆನ್ಸಾರ್‌ ಅನ್ನು ಹೊಂದಿದ್ದು 2x zoom ಅನ್ನು ನೀಡಲಿದೆ. ಇನ್ನು ಮೂರನೇ ಕ್ಯಾಮೆರಾ 12 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್ ಲೆನ್ಸ್‌ ಅನ್ನು ಒಳಗೊಂಡಿದೆ. ಇದಲ್ಲದೆ 20 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

Best Mobiles in India

English summary
Xiaomi Smart Band 8 Active smartwatch Launched: Specs Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+