Just In
- 2 hrs ago
ರೈಲ್ವೆ 'ಗ್ರೂಪ್ ಡಿ' ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ 'ವಿ ಟೆಲಿಕಾಂ'ನಿಂದ ಸಿಹಿಸುದ್ದಿ!
- 12 hrs ago
ಸ್ಯಾಮ್ಸಂಗ್ ಗ್ಯಾಲಕ್ಸಿ Z ಫೋಲ್ಡ್ 4 ಮತ್ತು ಗ್ಯಾಲಕ್ಸಿ Z ಫ್ಲಿಪ್ 4 ಫೋನ್ ಬಿಡುಗಡೆ!
- 16 hrs ago
ಭಾರತದಲ್ಲಿ ರಿಯಲ್ಮಿ ಟೆಕ್ಲೈಫ್ ಬಡ್ಸ್ T100 ಲಾಂಚ್ ಡೇಟ್ ಫಿಕ್ಸ್!
- 16 hrs ago
ಲಾಂಚ್ಗೆ ಸಜ್ಜಾಗಿದೆ 'ಮೊಟೊರೊಲಾ ರೇಜರ್'!..ಗ್ಯಾಲಕ್ಸಿ Z ಫೋಲ್ಡ್ 4ಗೆ ಟಾಂಗ್!
Don't Miss
- Finance
ವಿಐ App ಬಳಸಿ ರೈಲ್ವೆಯ ಗ್ರೂಪ್ ಡಿ ಪರೀಕ್ಷೆಗೆ ಸಿದ್ಧತೆ ಹೇಗೆ?
- Movies
ಮತ್ತೊಂದು ಹೊಸ ಸಿನಿಮಾ ನಿರ್ಮಾಣಕ್ಕೆ ಮುಂದಾದ ರಕ್ಷಿತ್ ಶೆಟ್ಟಿ
- Lifestyle
ಉಪ್ಪಿನಕಾಯಿ ರುಚಿಗ ಮಾತ್ರವಲ್ಲ ಆರೋಗ್ಯಕ್ಕೂ ತುಂಬಾ ಒಳ್ಳೆಯದು ಗೊತ್ತಾ!
- News
Breaking: ಭಯೋತ್ಪಾದಕ ದಾಳಿ: ಇಬ್ಬರು ಉಗ್ರರ ಹತ್ಯೆ, ಮೂವರು ಯೋಧರು ಹುತಾತ್ಮ
- Automobiles
ಬೊಲೆರೊ ಮ್ಯಾಕ್ಸ್ ಪಿಕ್-ಅಪ್ ಸಿಟಿ 3000 ಬಿಡುಗಡೆ ಮಾಡಿದ ಮಹೀಂದ್ರಾ
- Sports
ಆ ಇಬ್ಬರು ಸ್ಟಾರ್ಗಳಿಗೆ ಭಾರತ ತಂಡದಲ್ಲಿ ಸ್ಥಾನ ನೀಡಿರುವುದಕ್ಕೆ ಜಯವರ್ಧನೆ ಕಳವಳ
- Travel
ಭಾರತದಲ್ಲಿಯ 10 ಪ್ರಸಿದ್ದ ಹನುಮಂತ ದೇವರ ದೇವಾಲಯಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ಶಿಯೋಮಿ ಕಂಪೆನಿಯ ಸ್ಮಾರ್ಟ್ ಕಾಂಪ್ಯಾಕ್ಟ್ ಪ್ರೊಜೆಕ್ಟರ್ ಬಿಡುಗಡೆ!
ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕ ಶಿಯೋಮಿ ಕಂಪೆನಿ ಈಗಾಗಲೇ ತನ್ನ ಸ್ಮಾರ್ಟ್‌ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಜನಪ್ರಿಯತೆಯನ್ನ ಗಳಿಸಿದೆ. ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿರುವ ಶಿಯೋಮಿ ಇತರೆ ಸ್ಮಾರ್ಟ್‌ಪ್ರಾಡಕ್ಟ್‌ಗಳನ್ನು ಸಹ ಮಾರುಕಟ್ಟೆಗೆ ಲಾಂಚ್ ಮಾಡಿದೆ. ಹಲವು ಮಾದರಿಯ ಸ್ಮಾರ್ಟ್ ಡಿವೈಸ್‌ಗಳನ್ನ ಪರಿಚಯಿಸುವ ಮೂಲಕ ತನ್ನ ಪ್ರಾಬಲ್ಯವನ್ನ ಎಲ್ಲಾ ವಲಯಗಳಲ್ಲೂ ವಿಸ್ತರಿಸುವ ಪ್ರಯತ್ನವನ್ನ ಮಾಡುತ್ತಲೇ ಇದೆ. ಸದ್ಯ ಇದೀಗ ತನ್ನ ಹೊಸ ವಿನ್ಯಾಸದ ಪ್ರೊಜೆಕ್ಟರ್ ಹಾಗೂ ವ್ಯಾಕ್ಯೂಮ್ ಕ್ಲೀನರ್ ಅನ್ನು ಬಿಡುಗಡೆ ಮಾಡಿದೆ.

ಹೌದು, ಜನಪ್ರಿಯ ಶಿಯೋಮಿ ಕಂಪೆನಿ ಸ್ಮಾರ್ಟ್ ಡಿವೈಸ್‌ಗಳ ಮಾರುಕಟ್ಟೆಯಲ್ಲಿ ತನ್ನದೇ ಆದ ಪ್ರಸಿದ್ಧಿಯನ್ನ ಪಡೆದುಕೊಂಡಿದೆ. ಸದ್ಯ ತನ್ನ ಹೊಸ ಸ್ಮಾರ್ಟ್ ಕಾಂಪ್ಯಾಕ್ಟ್ ಪ್ರೊಜೆಕ್ಟರ್ ಹಾಗೂ ಮಿ ಹ್ಯಾಂಡ್‌ಹೆಲ್ಡ್ ವ್ಯಾಕ್ಯೂಮ್ ಕ್ಲೀನರ್ 1C ಅನ್ನು ಪರಿಚಯಿಸಿದೆ. ಈ ಎರಡು ಸ್ಮಾರ್ಟ್ ಡಿವೈಸ್‌ಗಳು ಇದೇ ಮಾರ್ಚ್ 27 ರಂದು ಜಾಗತಿಕ ಮಾರುಕಟ್ಟೆಗಳಲ್ಲಿ ಖರೀದಿಸಲು ಲಭ್ಯವಾಗಲಿದ್ದು, ಈ ಎರಡು ಸ್ಮಾರ್ಟ್ ಡಿವೈಸ್‌ಗಳು ಹೊಸ ಮಾದರಿಯ ವಿನ್ಯಾಸವನನ್ ಒಳಗೊಂಡಿವೆ. ಇನ್ನು ಇವುಗಳ ವಿನ್ಯಾಸ ಹಾಗೂ ವಿಶೇಷತೆಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿ.

ಸದ್ಯ ಶಿಯೋಮಿ ಕಂಪೆನಿ ಬಿಡುಗಡೆ ಮಾಡಿರುವ ಸ್ಮಾರ್ಟ್ ಕಾಂಪ್ಯಾಕ್ಟ್ ಪ್ರೊಜೆಕ್ಟರ್ ಉತ್ತಮ ವಿನ್ಯಾಸವನ್ನ ಹೊಂದಿದ್ದು, ಈ ಮಾದರಿಯ ಪ್ರಾಡಕ್ಟ್‌ಗಳಲ್ಲಿ ಸೋನಿ ಮತ್ತು ಬೆನ್‌ಕ್ಯೂ ಕಂಪೆನಿ ಪ್ರಾಡಕ್ಟ್‌ಗಲಿಗೆ ಪ್ರತಿಸ್ಫರ್ದೆ ಒಡ್ಡುವ ಗುರಿ ಹೊಂದಿದೆ. ಇನ್ನು ಶಿಯೋಮಿ ಸ್ಮಾರ್ಟ್ ಕಾಂಪ್ಯಾಕ್ಟ್ ಪ್ರೊಜೆಕ್ಟರ್ ಒಂದು ಸಣ್ಣ ಪ್ರೊಜೆಕ್ಟರ್ ಆಗಿದ್ದು ಅದು 60 ರಿಂದ 120 ಇಂಚುಗಳ ನಡುವೆ ಹೊಂದಾಣಿಕೆ ಮಾಡಬಹುದಾದ ಪರದೆಯ ಗಾತ್ರಕ್ಕೆ ಪ್ರಕ್ಷೇಪಿಸಬಹುದಾಗಿದೆ. ಜೊತೆಗೆ ಇದು 1080p ಹೈ-ಡೆಫಿನಿಷನ್ ರೆಸಲ್ಯೂಶನ್ ಅನ್ನು ಹೊಂದಿದ್ದು, 500 ANSI ಲ್ಯುಮೆನ್ಸ್ ರೇಟ್ ಒಳಗೊಂಡಿದೆ.

ಇನ್ನು ಈ ಕಾಂಪ್ಯಾಕ್ಟ್ ಪ್ರೊಜೆಕ್ಟರ್ ನಲ್ಲಿ ಗೂಗಲ್ ಸಾಫ್ಟ್‌ವೇರ್ ಅನ್ನು ಅಳವಡಿಸಲಾಗಿದ್ದು, ಇದು ಆಂಡ್ರಾಯ್ಡ್ ಟಿವಿ 9.0 ಅನ್ನು ಚಾಲನೆ ಮಾಡುತ್ತದೆ ಮತ್ತು ಇಂಟರ್‌ಬಿಲ್ಟ್ ಗೂಗಲ್ ಅಸಿಸ್ಟೆಂಟ್ ಹೊಂದಿದೆ. ಇದಲ್ಲದೆ ಇದರಲ್ಲಿ ದೊಡ್ಡ, ಗಾತ್ರದ ಸೆನ್ಸಾರ್ ಹೊಂದಿರುವ ಸ್ಪೀಕರ್‌ಗಳನ್ನು ನೀಡಲಾಗಿದೆ. ಸದ್ಯ ಈ ಸ್ಪೀಕರ್‌ನ ಗುಣಮಟ್ಟ ಹಾಗೂ ಸೌಂಡ್ ಸಿಸ್ಟಂ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅಲ್ಲದೆ ಇದರ ಬೆಲೆ ಏನು ಅನ್ನುವುದನ್ನು ಸಹ ಕಂಪೆನಿ ಇನ್ನು ಬಹುರಂಗಪಡಿಸಿಲ್ಲ.

ಇದಲ್ಲದೆ ಶಿಯೋಮಿ ಕಂಪೆನಿ ಮಿ ಹ್ಯಾಂಡ್‌ಹೆಲ್ಡ್ ವ್ಯಾಕ್ಯೂಮ್ ಕ್ಲೀನರ್ 1C ಅನ್ನು ಸಹ ಬಿಡುಗಡೆ ಮಾಡಿದೆ. ಹೆಸರೇ ಸೂಚಿಸುವಂತೆ, ಉತ್ಪನ್ನವು ಪೋರ್ಟಬಲ್ ಕನೆಕ್ಟಿವಿಟಿಯನ್ನು ಹೊಂದಿದೆ. ಇದು ಮಲ್ಟಿ-ಸೈಕ್ಲೋನ್ ಫಿಲ್ಟರ್ ಸಿಸ್ಟಮ್‌ನೊಂದಿಗೆ ಶಕ್ತಿಯುತ 120 AW ಹೀರುವಿಕೆಯನ್ನು ಹೊಂದಿದೆ. ಇದರ ವಿನ್ಯಾಸವು ಡೈಸನ್ ವಿ 11 ಸ್ಟಿಕ್ ವ್ಯಾಕ್ಯೂಮ್ ಕ್ಲೀನರ್ನಿಂದ ಸ್ಫೂರ್ತಿ ಪಡೆದಿದ್ದು, ಇದು 5-ಹಂತದ ಶೋಧನೆ ವ್ಯವಸ್ಥೆಯು 99.97 ರಷ್ಟು ಕಣಗಳನ್ನು ಸೆರೆಹಿಡಿಯುತ್ತದೆ.ಇನ್ನು ಇದರ ಬೆಲೆ ಕೂಡ ಎಷ್ಟಿರಲಿದೆ ಎಂಬುದು ಇನ್ನು ಬಹಿರಂಗಗೊಂಡಿಲ್ಲ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086