ಭಾರತದಲ್ಲಿ ಹೊಸ ಸರಣಿಯ ಸ್ಮಾರ್ಟ್‌ಟಿವಿ ಪರಿಚಯಿಸಿದ ಶಿಯೋಮಿ! ಬೆಲೆ ಎಷ್ಟು?
ಟೆಕ್ ದೈತ್ಯ ಶಿಯೋಮಿ ಕಂಪೆನಿ ಸ್ಮಾರ್ಟ್‌ಫೋನ್ ಮಾತ್ರವಲ್ಲದೆ ಭಿನ್ನ ಶ್ರೇಣಿಯ ಸ್ಮಾರ್ಟ್‌ಟಿವಿಗಳಿಗೆ ಹೆಸರುವಾಸಿಯಾಗಿದೆ. ಇದೀಗ ಶಿಯೋಮಿ ಕಂಪೆನಿ ಭಾರತದಲ್ಲಿ ಹೊಸ ಶಿಯೋಮಿ ಸ್ಮಾರ್ಟ್‌ಟಿವಿ A ಸರಣಿಯನ್ನು ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ 32 ಇಂಚು, 40 ಇಂಚು ಮತ್ತು 43 ಇಂಚಿನ ಗಾತ್ರದ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಲಾಗಿದೆ.
ಹೌದು, ಶಿಯೋಮಿ ಸ್ಮಾರ್ಟ್‌ಟಿವಿ A ಸರಣಿ ಭಾರತಕ್ಕೆ ಎಂಟ್ರಿ ನೀಡಿದೆ. ಈ ಸರಣಿಯ ಸ್ಮಾರ್ಟ್‌ಟಿವಿಗಳು ಶಿಯೋಮಿ ಸ್ವಾಮ್ಯದ ವಿವಿಡ್ ಪಿಕ್ಚರ್ ಎಂಜಿನ್ ಅನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಟಿವಿಗಳು ಗೂಗಲ್ ಟಿವಿನಲ್ಲಿ ರನ್ ಆಗಲಿದೆ. ಈ ಸ್ಮಾರ್ಟ್‌ಟಿವಿಗಳು ಕ್ವಾಡ್ ಕೋರ್ A35 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿಗಳು ಯಾವೆಲ್ಲಾ ಫೀಚರ್ಸ್ ಒಳಗೊಂಡಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಶಿಯೋಮಿ ಸ್ಮಾರ್ಟ್ ಟಿವಿ A ಸರಣಿಯ ವಿಶೇಷತೆ ಏನು?
ಶಿಯೋಮಿ ಸ್ಮಾರ್ಟ್ ಟಿವಿ A ಸ್ಮಾರ್ಟ್‌ಟಿವಿ ಸರಣಿಯು ಗೂಗಲ್ ಟಿವಿಯಲ್ಲಿ ಶಿಯೋಮಿಯ ಸ್ವಂತ ಪ್ಯಾಚ್‌ವಾಲ್ UI ನೊಂದಿಗೆ ಕಾರ್ಯನಿರ್ವಹಿಸಲಿದೆ. ಇದರಿಂದ ಬಳಕೆದಾರರು ಸ್ಮಾರ್ಟ್‌ಟಿವಿಯಲ್ಲಿ ಅಪ್ಲಿಕೇಶನ್‌ಗಳನ್ನು ಸ್ಟ್ರೀಮ್ ಮಾಡಲು ಮತ್ತು ಹೋಮ್ ಸ್ಕ್ರೀನ್‌ನಲ್ಲಿ ಲೈವ್ ಟಿವಿಯನ್ನು ಪ್ರವೇಶಿಸಲು ಅವಕಾಶವಿದೆ. ಇದಕ್ಕಾಗಿ ಇನ್‌ಬಿಲ್ಟ್ ಗೂಗಲ್ ಕ್ರೋಮ್‌ಕಾಸ್ಟ್ ಅನ್ನು ಬೆಂಬಲಿಸಲಿದೆ. ಜೊತೆಗೆ ಬಳಕೆದಾರರು ತಮ್ಮ ಫೋನ್‌ಗಳಿಂದ ಸ್ಮಾರ್ಟ್‌ಟಿವಿಗಳಿಗೆ ಚಲನಚಿತ್ರಗಳನ್ನು ಸ್ಟೀಮ್ ಮಾಡಲು ಸಾಧ್ಯವಾಗಲಿದೆ.
ಇದಲ್ಲದೆ, ಶಿಯೋಮಿ ಈ ಸ್ಮಾರ್ಟ್‌ಟಿವಿ ಸರಣಿಯಲ್ಲಿ 200 ಲೈವ್ ಚಾನೆಲ್‌ಗಳನ್ನು ಉಚಿತವಾಗಿ ಒದಗಿಸುವ ಹೊಸ ಪ್ಯಾಚ್‌ವಾಲ್+ ಸೇವೆಯನ್ನು ಪ್ಯಾಕ್ ಮಾಡಿದೆ. ಇದು IMDb ಏಕೀಕರಣ, ಲೈವ್ ಟಿವಿ, ಯೂನಿವರ್ಸಲ್ ಸರ್ಚ್ ಮತ್ತು ಚಿಲ್ಡ್ರನ್ ಮೋಡ್ ಜೊತೆಗೆ ಪೇರೆಂಟಲ್ ಲಾಕ್ ಅನ್ನು ಸಹ ನೀಡಲಾಗಿದೆ. ಇದಲ್ಲದೆ ಪ್ಯಾಚ್‌ವಾಲ್‌ನಲ್ಲಿ ಯೂಟ್ಯೂಬ್ ಏಕೀಕರಣದೊಂದಿಗೆ, ಬಳಕೆದಾರರು ಪ್ಯಾಚ್‌ವಾಲ್ ಮ್ಯೂಸಿಕ್ ಟ್ಯಾಬ್‌ನಿಂದ ನೇರವಾಗಿ ಯೂಟ್ಯೂಬ್ ಮ್ಯೂಸಿಕ್ ವಿಷಯವನ್ನು ಕಂಡುಹಿಡಿಯಬಹುದಾಗಿದೆ.
ಈ ಸ್ಮಾರ್ಟ್‌ಟಿವಿಗಳು ಕ್ವಾಡ್ ಕೋರ್ A35 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ ಈ ಸ್ಮಾರ್ಟ್‌ಟಿವಿಗಳು 1.5GB RAM ಮತ್ತು 8GB ಇಂಟರ್ ಸ್ಟೊರೇಜ್ ಸಾಮರ್ಥ್ಯದೊಂದಿಗೆ ಬರಲಿದೆ. ಇದು ಡಾಲ್ಬಿ ಆಡಿಯೋ ಮತ್ತು DTS ವರ್ಚುವಲ್: X ಬೆಂಬಲದೊಂದಿಗೆ 20W ಸ್ಪೀಕರ್‌ಗಳನ್ನು ಒಳಗೊಂಡಿವೆ. ಈ ಸ್ಮಾರ್ಟ್‌ಟಿವಿಗಳು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಬ್ಯಾಂಡ್ Wi-Fi ಮತ್ತು ಬ್ಲೂಟೂತ್ v5.0 ಅನ್ನು ಒಳಗೊಂಡಿವೆ. ಜೊತೆಗೆ ARC ಮತ್ತು ALLM ಗೆ ಬೆಂಬಲದೊಂದಿಗೆ ಎರಡು HDMI ಪೋರ್ಟ್‌ಗಳನ್ನು ಬೆಂಬಲಿಸಲಿದೆ.
ಇನ್ನು ಶಿಯೋಮಿ ಸ್ಮಾರ್ಟ್‌ಟಿವಿ ಕ್ವಿಕ್ ಮ್ಯೂಟ್, ಕ್ವಿಕ್ ವೇಕ್ ಮತ್ತು ಕ್ವಿಕ್ ಸೆಟ್ಟಿಂಗ್‌ಗಳಂತಹ ಫೀಚರ್ಸ್‌ನೊಂದಿಗೆ ಬರಲಿದೆ. ಇದು ವೀಕ್ಷಕರಿಗೆ ವಾಲ್ಯೂಮ್ ಡೌನ್ ಕೀಯನ್ನು ಡಬಲ್ ಟ್ಯಾಪ್ ಮಾಡುವ ಮೂಲಕ ಟಿವಿಯನ್ನು ಮ್ಯೂಟ್ ಮಾಡಲು ಅನುಮತಿಸುತ್ತದೆ. ಆದರೆ ಕ್ವಿಕ್ ವೇಕ್ ಫೀಚರ್ಸ್ ಅನ್ನು ಕೆಲವು ಸೆಕೆಂಡುಗಳಲ್ಲಿ ಟಿವಿಯನ್ನು ಆನ್ ಮಾಡಲು ಬಳಸಬಹುದಾಗಿದೆ.
ಭಾರತದಲ್ಲಿ ಶಿಯೋಮಿ ಸ್ಮಾರ್ಟ್‌ಟಿವಿ A ಸರಣಿಯ ಬೆಲೆ 32 ಇಂಚಿನ ಆಯ್ಕೆಗೆ 14,999ರೂ ಆಗಿದೆ. ಇದನ್ನು ಲಾಂಚ್ ಆಫರ್‌ನಲ್ಲಿ 13,999ರೂ.ಗಳಿಗೆ ಖರೀದಿಸಬಹುದಾಗಿದೆ. ಇನ್ನು 40 ಇಂಚಿನ ಟಿವಿಯ ಬೆಲೆ 22,999ರೂ ಮತ್ತು 43 ಇಂಚಿನ ಟಿವಿಯ ಬೆಲೆ 24,999ರೂ.ಆಗಿದೆ. ಇನ್ನು ಈ ಎಲ್ಲಾ ಸ್ಮಾರ್ಟ್‌ಟಿವಿ ಮಾಡೆಲ್‌ಗಳು ಕೂಡ ಮಿ.ಕಾಮ್. ಮಿ ಹೋಮ್ಸ್, ಫ್ಲಿಪ್‌ಕಾರ್ಟ್ ಮತ್ತು ರಿಟೆಲ್ ಸ್ಟೋರ್‌ಗಳ ಮೂಲಕ ಖರೀದಿಗೆ ಲಭ್ಯವಾಗಲಿವೆ. ಇವುಗಳ ಕಲರ್ ಆಯ್ಕೆಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.


Click it and Unblock the Notifications








