ಶಿಯೋಮಿಯಿಂದ ಹೊಸ ಸ್ಮಾರ್ಟ್‌ಟಿವಿ ಸರಣಿ ಬಿಡುಗಡೆ! ಬೆಚ್ಚಿಬಿದ್ದ ಟಿವಿ ಮಾರುಕಟ್ಟೆ!
ಶಿಯೋಮಿ ಕಂಪೆನಿ ತನ್ನ ಸ್ಮಾರ್ಟ್ ಲಿವಿಂಗ್ 2023 ಈವೆಂಟ್‌ನಲ್ಲಿ ಹಲವು ಡಿವೈಸ್‌ಗಳನ್ನು ಅನಾವರಣಗೊಳಿಸಿದೆ. ಇದರಲ್ಲಿ ಶಿಯೋಮಿ ಸ್ಮಾರ್ಟ್ TV X ಪ್ರೊ ಸರಣಿ ಕೂಡ ಬಿಡುಗಡೆ ಮಾಡಲಾಗಿದ್ದು, ಭಾರತದ ಟೆಕ್ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಈ ಸರಣಿಯ ಸ್ಮಾರ್ಟ್‌ಟಿವಿಗಳು 43, 50, 55 ಇಂಚಿನ ಆಯ್ಕೆಗಳಲ್ಲಿ ಬರಲಿವೆ.
ಹೌದು, ಶಿಯೋಮಿ ಸ್ಮಾರ್ಟ್ ಟಿವಿ X ಪ್ರೊ ಸರಣಿ ಭಾರತದಲ್ಲಿ ಲಾಂಚ್ ಆಗಿದೆ. ಈ ಸ್ಮಾರ್ಟ್‌ಟಿವಿಗಳು 4K HDR ಸಕ್ರಿಯಗೊಳಿಸಿದ ಸ್ಕ್ರೀನ್‌ನೊಂದಿಗೆ ಬರಲಿವೆ. ಜೊತೆಗೆ ಗೂಗಲ್ ಟಿವಿ ಒಎಸ್ ಮೂಲಕ ರನ್ ಆಗಲಿದೆ. ಇದಲ್ಲದೆ ಸ್ಮಾರ್ಟ್‌ಟಿವಿ ಸರಣಿಯು ಬೆಜೆಲ್-ಲೆಸ್ ಮೆಟಾಲಿಕ್ ಫ್ರೇಮ್ ಅನ್ನು ಹೊಂದಿದೆ. ಇನ್ನುಳಿದಂತೆ ಶಿಯೋಮಿ ಸ್ಮಾರ್ಟ್‌ಟಿವಿ X ಪ್ರೊ ಸರಣಿ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಒದಿರಿ.

ಶಿಯೋಮಿ ಸ್ಮಾರ್ಟ್ ಟಿವಿ X ಪ್ರೊ ವಿಶೇಷತೆ ಏನು?
ಶಿಯೋಮಿ ಸ್ಮಾರ್ಟ್ ಟಿವಿ X ಪ್ರೊ ಸರಣಿಯು ಹೊಸ ವಿನ್ಯಾಸದಲ್ಲಿ ಎಂಟ್ರಿ ನೀಡಿದೆ. ಇದೇ ಮೊದಲ ಬಾರಿಗೆ ಶಿಯೋಮಿ ಸ್ಮಾರ್ಟ್‌ಟಿವಿಗಳು ಗೂಗಲ್ ಟಿವಿ ಒಎಸ್‌ನಲ್ಲಿ ರನ್ ಆಗಲಿವೆ. ಇನ್ನು ಈ ಸರಣಿಯ ಸ್ಮಾರ್ಟ್‌ಟಿವಿಗಳು ಬೆಜೆಲ್-ಲೆಸ್ ಮೆಟಾಲಿಕ್ ಫ್ರೇಮ್ ಅನ್ನು ಹೊಂದಿವೆ. ಸ್ಮಾರ್ಟ್‌ಟಿವಿಗಳು 43, 50, 55 ಇಂಚಿನ ಮೂರು ಗಾತ್ರದ ಆಯ್ಕೆಗಳಲ್ಲಿ ಎಂಟ್ರಿ ನೀಡಿವೆ. ಇವುಗಳು HDR10+, ಡಾಲ್ಬಿ ವಿಶನ್ ಐಕ್ಯೂ ಹೊಂದಿವೆ.
ಶಿಯೋಮಿ ಸ್ಮಾರ್ಟ್ ಟಿವಿ X ಪ್ರೊ ಫೀಚರ್ಸ್ ಹೇಗಿದೆ?
ಸ್ಮಾರ್ಟ್‌ಟಿವಿಗಳು ಶಿಯೋಮಿ ಸ್ವಾಮ್ಯದ ಬಣ್ಣದ ಪ್ರೊಫೈಲ್ ವಿವಿಡ್ ಪಿಕ್ಚರ್ ಎಂಜಿನ್ 2 ಅನ್ನು ಬೆಂಬಲಿಸುವ 4K LED-ಬ್ಯಾಕ್‌ಲಿಟ್ LCD ಪ್ಯಾನೆಲ್ ಹೊಂದಿವೆ. ಈ ಸ್ಮಾರ್ಟ್‌ಟಿವಿಗಳು 40W ಮತ್ತು 30W ಸ್ಪೀಕರ್ ಆಯ್ಕೆಗಳಲ್ಲಿ ಲಭ್ಯವಾಗಲಿವೆ. ಇದರೊಂದಿಗೆ ಈ ಸರಣಿಯ ಎಲ್ಲಾ ಟಿವಿಗಳು ಕೂಡ ಡಾಲ್ಬಿ ಅಟ್ಮೋಸ್ ಮತ್ತು DTS: X ಅನ್ನು ಬೆಂಬಲಿಸುತ್ತವೆ. ಇನ್ನು ಸ್ಮಾರ್ಟ್‌ಟಿವಿ ಆಟೋಮ್ಯಾಟಿಕ್ ಆಂಬಿಯೆಂಟ್ ಲೈಟ್ ಸೆನ್ಸಾರ್ ಅನ್ನು ಕೂಡ ಪಡೆದಿದೆ.

ಶಿಯೋಮಿ ಸ್ಮಾರ್ಟ್ ಟಿವಿ X ಪ್ರೊ ಇತರೆ ಫೀಚರ್ಸ್
ಇದಲ್ಲದೆ ಶಿಯೋಮಿ ಸ್ಮಾರ್ಟ್ ಟಿವಿ X ಪ್ರೊ ಸರಣಿಯ ಎಲ್ಲಾ ಮಾದರಿಗಳು ಕೂಡ ಕ್ರೋಮ್‌ಕಾಸ್ಟ್ ಬಿಲ್ಟ್-ಇನ್ ಮತ್ತು ಗೂಗಲ್ ಅಸಿಸ್ಟೆಂಟ್ ಬೆಂಬಲವನ್ನು ಪಡೆದುಕೊಂಡಿವೆ. ಇದರಿಂದ ನಿಮ್ಮ ಸ್ಮಾರ್ಟ್‌ಟಿವಿಗೆ ಸುಲಭವಾಗಿ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಕನೆಕ್ಟ್ ಮಾಡಬಹುದಾಗಿದೆ. ಅಲ್ಲದೆ ಗೂಗಲ್ ಅಸಿಸ್ಟೆಂಟ್ ಮೂಲಕ ಹ್ಯಾಂಡ್ಸ್ ಪ್ರೀ ಸೇವೆಯನ್ನು ಕೂಡ ಪಡೆಯಲು ಸಾಧ್ಯವಾಗಲಿದೆ. ಆದರೆ ಇದರಲ್ಲಿ ಏರ್‌ಪ್ಲೇ ಸೇವೆಯನ್ನು ನೀಡಲಾಗಿಲ್ಲ ಅನ್ನೊದು ಬೇಸರದ ಸಂಗತಿಯಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಬ್ಯಾಂಡ್ ವೈಫೈ, ಬ್ಲೂಟೂತ್ 5.0, 3 x HDMI 2.1, 2 x USB, ಆಪ್ಟಿಕಲ್ ಪೋರ್ಟ್, AV ಇನ್‌ಪುಟ್, ಹೆಡ್‌ಫೋನ್ ಔಟ್ ಮತ್ತು ಈಥರ್ನೆಟ್ ಅನ್ನು ಬೆಂಬಲಿಸಲಿದೆ.

ಭಾರತದಲ್ಲಿ ಶಿಯೋಮಿ ಸ್ಮಾರ್ಟ್ ಟಿವಿ X ಪ್ರೊ ಸರಣಿಯ ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಶಿಯೋಮಿ ಸ್ಮಾರ್ಟ್ ಟಿವಿ X ಪ್ರೊ ಸರಣಿಯ 43 ಇಂಚಿನ ಸ್ಮಾರ್ಟ್‌ಟಿವಿ 32,999ರೂ. ಬೆಲೆಯನ್ನು ಹೊಂದಿದೆ. ಆದರೆ ಇದರ 50 ಇಂಚಿನ ಸ್ಮಾರ್ಟ್‌ಟಿವಿ 41,999ರೂ. ಬೆಲೆ ಪಡೆದಿದೆ. ಇನ್ನು 55 ಇಂಚಿನ ಸ್ಮಾರ್ಟ್‌ಟಿವಿ ಬೆಲೆ 47,999ರೂ. ಆಗಿದೆ. ಇನ್ನು ಈ ಮೂರು ಸ್ಮಾರ್ಟ್‌ಟಿವಿಗಳು ಕೂಡ ಶಿಯೋಮಿಯ ಅಧಿಕೃತ ವೆಬ್‌ಸೈಟ್ ಮಿ.ಕಾಮ್, ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್ ಮತ್ತು ಆಫ್‌ಲೈನ್ ರಿಟೇಲ್ ಸ್ಟೋರ್‌ಗಳಲ್ಲಿ ಖರೀದಿಗೆ ಸಿಗಲಿದೆ. ಈ ಸ್ಮಾರ್ಟ್‌ಟಿವಿ ಇದೇ ಏಪ್ರಿಲ್ 19 ರಿಂದ ಮಾರಾಟಕ್ಕೆ ಬರಲಿದ್ದು, ಫಸ್ಟ್ ಸೇಲ್ ಆಫರ್‌ನಲ್ಲಿ 2,000ರೂ. ವರೆಗೆ ಕ್ಯಾಶ್‌ಬ್ಯಾಕ್ ದೊರೆಯಲಿದೆ ಎಂದು ಹೇಳಲಾಗಿದೆ.


Click it and Unblock the Notifications








