Home
ಸುದ್ದಿಜಾಲ

ಬರಲಿದೆ ಶಿಯೋಮಿಯ ಸ್ಮಾರ್ಟ್‌ ವಿಡಿಯೋ ಡೋರ್‌ಬೆಲ್‌ 2!

ಟೆಕ್ನಾಲಜಿ ಮುಂದುವರೆದಂತೆ ಇಂದು ಎಲ್ಲವೂ ಸ್ಮಾರ್ಟ್‌ ಆಗಿ ಪರಿವರ್ತನೆ ಆಗುತ್ತಿದೆ. ಅದರಲ್ಲೂ ಸ್ಮಾರ್ಟ್‌ಹೋಮ್‌ ಪರಿಕಲ್ಪನೆ ಬಂದ ನಂತರ ಮನೆಯಲ್ಲಿನ ಬಹುತೇಕ ಉಪಕರಣಗಳು ಸ್ಮಾರ್ಟ್‌ ಆಗಿ ಬದಲಾಗಿವೆ. ಸದ್ಯ ಸ್ಮಾರ್ಟ್‌ಹೋಮ್‌ಗಳಲ್ಲಿ ಸ್ಮಾರ್ಟ್‌ ಸ್ಪೀಕರ್‌, ಸ್ಮಾರ್ಟ್‌ಟಿವಿ, ಸ್ಮಾರ್ಟ್‌ ಡಿಸ್‌ಪ್ಲೇ ಅಷ್ಟೇ ಯಾಕೆ ಸ್ಮಾರ್ಟ್‌ ವಿಡಿಯೋ ಡೋರ್‌ಬೆಲ್‌ ಕೂಡ ಇಂದು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದೀಗ ಶಿಯೋಮಿ ಕಂಪೆನಿ ಕೂಡ ಹೊಸ ಮಾದರಿಯ ಸ್ಮಾರ್ಟ್‌ ವಿಡಿಯೋ ಡೋರ್‌ಬೆಲ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಸಿದ್ದವಾಗಿದೆ.

ಹೌದು

ಹೌದು, ಚೀನಾ ಮೂಲದ ಸ್ಮಾರ್ಟ್‌ಫೊನ್‌ ಕಂಪೆನಿ ಶಿಯೋಮಿ ಸ್ಮಾರ್ಟ್‌ಹೋಮ್‌ ಪ್ರಾಡಕ್ಟ್‌ಗಳಲ್ಲೂ ತನ್ನ ಕಮಾಲ್‌ ತೋರಿಸುತ್ತಿದೆ. ವೈವಿಧ್ಯಮಯ ಸ್ಮಾರ್ಟ್‌ಪ್ರಾಡಕ್ಟಗಳಿಂದ ಗ್ರಾಹಕರ ನೆಚ್ಚಿನ ಬ್ರ್ಯಾಂಡ್‌ ಆಗಿರುವ ಶಿಯೋಮಿ ತನ್ನ ಹೊಸ ಆವೃತ್ತಿಯ ಸ್ಮಾರ್ಟ್‌ವಿಡಿಯೋ ಡೋರ್‌ಬೆಲ್ 2 ಅನ್ನು ಇದೇ ಮಾರ್ಚ್‌ 11 ರಂದು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ. ಈ ಡೊರ್‌ಬೆಲ್‌ MIJIA ಅನ್ನೊ ಬ್ರ್ಯಾಂಡ್‌ ಲೈನ್‌ ಅಪ್‌ನ ಅಡಿಯಲ್ಲಿ ಬರಲಿದೆ. ಇನ್ನು ಈ ಸ್ಮಾರ್ಟ್‌ ವಿಡಿಯೋ ಡೋರ್‌ಬೆಲ್‌ನ ವಿನ್ಯಾಸ ಹಾಗೂ ವಿಶೇಷತೆಯೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ನೋಡಿ.

ಸ್ಮಾರ್ಟ್‌ವಿಡಿಯೋ ಡೋರ್‌ಬೆಲ್‌

ಸ್ಮಾರ್ಟ್‌ವಿಡಿಯೋ ಡೋರ್‌ಬೆಲ್‌

ಶಿಯೋಮಿ ಕಂಪೆನಿಯ MIJIA ಸ್ಮಾರ್ಟ್‌ವಿಡಿಯೋ ಡೋರ್‌ಬೆಲ್‌ ಹೊಸ ಮಾದರಿಯ ಉತ್ತಮ ಡೋರ್‌ಬೆಲ್‌ ಆಗಿರಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಈ ಡೋರ್‌ಬೆಲ್‌ ಶಿಯೋಮಿ ಕಂಪೆನಿಯ ಜಿರೋ ಸ್ಮಾರ್ಟ್‌ ಡೋರ್‌ಬೆಲ್‌ನ ಆಪ್‌ಗ್ರೇಡೆಡ್‌ ವರ್ಷನ್‌ ಆಗಿದೆ. ಇನ್ನು ಈ ಡೋರ್‌ಬೆಲ್‌ ಆಯತಾಕರವನ್ನ ಹೊಂದಿದ್ದು ದೊಡ್ಡಗಾತ್ರದ ಪ್ಯಾಕ್ಟರ್‌ ಅನ್ನು ಹೊಂದಿರಲಿದೆ ಎಂದು ಹೇಳಲಾಗ್ತಿದೆ. ಅಲ್ಲದೆ ಈ ಡೋರ್‌ಬೆಲ್‌ನಲ್ಲಿ ಸ್ವಚ್ಛ ಹಾಗೂ ಸ್ಪಷ್ಟತೆ ಎದ್ದು ಕಾಣಲಿದೆ ಎಂದು ನಿರೀಕ್ಷಿಸಲಾಗಿದೆ.

ವಿನ್ಯಾಸ

ವಿನ್ಯಾಸ

ಈ ಸ್ಮಾರ್ಟ್‌ ವಿಡಿಯೋ ಡೋರ್‌ಬೆಲ್‌ನ ವಿನ್ಯಾಸವೂ ಕನಿಷ್ಟವಾಗಿದ್ದು, ಇದರಲ್ಲಿ ಕ್ಯಾಮೆರಾ ಇದೆ ಎನ್ನುವುದು ಬೆಲ್‌ ಮಾಡಿದವರಿಗೆ ತಿಳಿಯದಂತೆ ಮರೆಮಾಚಲಾಗಿರುತ್ತದೆ. ಇದು ಸಾಮಾನ್ಯ ಡೋರ್‌ಬೆಲ್‌ನಂತೆ ಕಾಣುತ್ತದೆ. ಇದರಲ್ಲಿ ಹಾರ್ಡ್‌ವೇರ್‌ ಮತ್ತು ಸಾಫ್ಟವೇರ್‌ ಟಾಪ್‌ನೋಚ್‌ ಆಗಿದ್ದು, ಇದು AI- ಫೀಚರ್ಸ್ ಒಳಗೊಂಡ ಕ್ಯಾಮೆರಾವನ್ನು ಒಳಗೊಂಡಿದೆ. ಇದರಿಂದ ನಿಮ್ಮ ಮನೆಯ ಮುಂಭಾಗದಲ್ಲಿ ಏನೆಲ್ಲಾ ನಡೆಯುತ್ತಿದೆ ಅನ್ನೊದನ್ನ ನೀವು ಮನೆಯೊಳಗಡೆ ಕುಳಿತು ಗಮನಿಸಬಹುದಾಗಿದೆ.

ವಿಶೇಷತೆ

ವಿಶೇಷತೆ

MIJIA ವಿಡಿಯೋ ಡೋರ್‌ಬೆಲ್‌ನಲ್ಲಿ ನೀವು ಡೋರ್‌ಬೆಲ್‌ ಮಾಡಿದಾಗ ನಿಮ್ಮ ಮುಖವನ್ನು ಪತ್ತೆ ಮಾಡುವ ಫೀಚರ್ಸ್ ಅನ್ನು ಇದರಲ್ಲಿ ಅಳವಡಿಸಲಾಗಿದೆ. ಇದರಿಂದ ನಿಮ್ಮ ಮನೆಯ ಹೊರಾಂಗಣದಲ್ಲಿ ಡೋರ್‌ಬೆಲ್ ಮಾಡುತ್ತಿರುವವರು ಯಾರು ಅನ್ನೊದು ತಿಳಿಯುತ್ತದೆ. ಅಲ್ಲದೆ ಮನೆಯ ಬಾಗಿಲ ಬಳಿ ಯಾರಾದರೂ ಇದ್ದರೆ, ಕ್ಯಾಮೆರಾ ಸ್ನ್ಯಾಪ್‌ ಮಾಡಿ ನೀವು ಈಗಾಗ್ಲೆ ಕನೆಕ್ಟಿವಿಟಿ ಹೊಂದಿರುವ ಸ್ಮಾರ್ಟ್‌ಫೋನ್‌ಗೆ ಪೋಟೋ ಕಳುಹಿಸುತ್ತದೆ. ಅಲ್ಲದೆ ಟಚ್‌ಸ್ಕ್ರೀನ್ ಸ್ಪೀಕರ್ ಅಥವಾ ಇತರೆ ಸ್ಮಾರ್ಟ್‌ ಸ್ಕ್ರೀನ್‌ ಗಳ ಮೂಲಕವೂ ಈ ಡೋರ್‌ಬೆಲ್ ಅನ್ನು ಕನೆಕ್ಟಿವಿಟಿ ಹೊಂದುವ ಅವಕಾಶವನ್ನು ನೀಡಲಾಗಿದೆ.

ಬೆಲೆ ಮತ್ತು ಇತರೆ

ಬೆಲೆ ಮತ್ತು ಇತರೆ

ಇನ್ನು ಈ ಡೋರ್‌ಬೆಲ್‌ನ ಕ್ಯಾಮೆರಾದ ಕೆಳಗೆ ಡೋರ್‌ಬೆಲ್ ಬಟನ್ ಇದೆ. ಅಲ್ಲದೆ ಮನೆಯ ಒಳಾಂಗಣದಲ್ಲಿ ಇರಿಸಲಾಗುವ ಪೋರ್ಟಬಲ್ ಡೋರ್‌ಬೆಲ್ ರಿಸೀವರ್ ಚೌಕಾಕೃತಿಯನ್ನ ಹೊಂದಿರಲಿದೆ ಇದೆ. ಡೋರ್‌ಬೆಲ್‌ ಆಗುವಾಗ ಈ ಪೋರ್ಟಬಲ್‌ ರೀಸಿವರ್‌ನಿಂದ ಮಾಹಿತಿ ತಿಳಿಯಲಿದೆ. ಇನ್ನು ಈ ಡೋರ್‌ಬೆಲ್ RMB179 (ಅಂದಾಜು 1,915.ರೂ) ಬೆಲೆಯನ್ನ ಹೊಂದಿದ್ದು, ಬ್ಲ್ಯಾಕ್‌ ಕಲರ್‌ನಲ್ಲಿ ಲಭ್ಯವಾಗಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.

Best Mobiles in India

English summary
Xiaomi announced a new smart product – the MIJIA Smart Video Doorbell 2. The product is expected to be launched under the Youpin crowdfunding platform at 10 AM on March 11.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+