ಸ್ಮಾರ್ಟ್ ಡೆಲಿವರಿ ಆಯ್ಕೆಗಾಗಿ ಸ್ಮಾರ್ಟ್ಬಾಕ್ಸ್ ನೊಂದಿಗೆ ಕೈಜೋಡಿಸಿದ ಶಿಯೋಮಿ
ಭಾರತದಲ್ಲಿ ಅಗ್ರ ಸ್ಥಾನ ಪಡೆಯುವ ಸಲುವಾಗಿ ಶಿಯೋಮಿ ಹಲವು ಆಕರ್ಷಕ ಸ್ಕೀಮ್ಗಳನ್ನು ದೇಶದ ಜನತೆಗೆ ನೀಡುತ್ತಿದೆ. ಈ ಸ್ಕೀಮ್ಗಳ ಸಾಲಿಗೆ ಈಗ ಹೊಸದಾಗಿ ಸೇರ್ಪಡೆಯಾಗಿದೆ ಸ್ಮಾರ್ಟ್ಬಾಕ್ಸ್ ಸಹಭಾಗಿತ್ವದಲ್ಲಿ mi.com ಮತ್ತು ಮಿ ಸ್ಟೋರ್ ಆಪ್ ಗಳಲ್ಲಿ ನೀಡುತ್ತಿರುವ ಸ್ಮಾರ್ಟ್ ಡೆಲಿವರಿ ಆಯ್ಕೆ.

ಈ ಸ್ಕೀಮ್ ನ ಅನುಸಾರ ನೀವು ಸ್ಮಾರ್ಟ್ಬಾಕ್ಸ್ ಅನ್ನು ನಿಮ್ಮ ಡೆಲಿವರಿ ಆಯ್ಕೆಯಾಗಿ ಆಯ್ದುಕೊಳ್ಳಬಹುದಾಗಿದ್ದು, ನೀವು ಆರ್ಡರ್ ಮಾಡಿರುವ ಶಿಯೋಮಿ ಉತ್ಪನ್ನಗಳ ಡೆಲಿವರಿಯನ್ನು ನಿಮ್ಮ ಆಯ್ಕೆಯ ಸ್ಥಳದ ಹತ್ತಿರವಿರುವ ಡಿಜಿಟಲ್ ಲಾಕರ್ ನಲ್ಲಿ ಪಡೆಯಬಹುದು. ಡೆಲ್ಹಿವರಿ, ಬ್ಲೂಡಾರ್ಟ್, ಫೆಡೆಕ್ಸ್, ಇಕಾಮ್ ಎಕ್ಸ್ಪ್ರೆಸ್, ಎಕ್ಸ್ಪ್ರೆಸ್ ಬೀಸ್ ಮೊದಲಾದ ಹೆಸರಾಂತ ಡೆಲಿವರಿ ಪಾರ್ಟ್ನರ್ಗಳು ಈ ಡೆಲಿವರಿಯಲ್ಲಿ ಭಾಗಿಯಾಗುತ್ತಾರೆ.
ಈ ಡಿಜಿಟಲ್ ಲಾಕರ್ ಸುರಕ್ಷತೆಗಾಗಿ ಅನನ್ಯ OTP ಹೊಂದಿದ್ದು, ನೀವು ಮಾತ್ರ ಈ ಲಾಕರ್ ಅನ್ನು ತೆರೆಯಬಹುದಾಗಿದೆ. ಹೀಗೆ ಆರ್ಡರ್ ಮಾಡಿದ ಉತ್ಪನ್ನಗಳನ್ನು ಡೆಲಿವರಿಯಾದ 72 ಘಂಟೆಗಳೊಳಗೆ ನಿಮ್ಮ ಅನುಕೂಲತೆಗೆ ತಕ್ಕಂತೆ ಯಾವ ಹೊತ್ತಿಗೆ ಬೇಕಾದರೂ ತೆಗೆದುಕೊಳ್ಳಬಹುದಾಗಿದೆ. 72 ಘಂಟೆಗಳೊಳಗೆ ಈ ಉತ್ಪನ್ನಗಳನ್ನು ನೀವು ಸ್ವೀಕರಿಸದಿದ್ದರೆ , ಅವುಗಳನ್ನು ಶಿಯೋಮಿ ಸಂಸ್ಥೆಗೆ ಮರಳಿಸಲಾಗುವುದು.

ನೀವು ನಿಮ್ಮಿಚ್ಛೆಯ ಉತ್ಪನ್ನವನ್ನು ಖರೀದಿಸುವಾಗ ಕ್ಯಾಶ್ ಆನ್ ಡೆಲಿವರಿ ಆಯ್ಕೆಯನ್ನು ಆಯ್ದುಕೊಂಡರೆ, ಆ ಉತ್ಪನ್ನಗಳನ್ನು ಸ್ವೀಕರಿಸುವ ಸಂದರ್ಭದಲ್ಲಿ ಸ್ಮಾರ್ಟ್ಬಾಕ್ಸ್ ಟರ್ಮಿನಲ್ ಗಳಲ್ಲಿ ಪೇಟಿಯಂ, UPI, ಡೆಬಿಟ್/ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿಸಬಹುದಾಗಿದೆ.
ಸ್ಮಾರ್ಟ್ಬಾಕ್ಸ್ ನ ಸ್ಮಾರ್ಟ್ ಡೆಲಿವರಿ ಆಯ್ಕೆ ಒಂದು ಸುರಕ್ಷಿತ ಮತ್ತು ಅನುಕೂಲಕರ ಆಯ್ಕೆಯಾಗಿದ್ದು, ನಿಮ್ಮ ಆಯ್ಕೆಯ ಸ್ಥಳಕ್ಕೆ ಡೆಲಿವರಿ ಪಡೆದು ಅಲ್ಲಿಂದ ನಿಮ್ಮ ಉತ್ಪನ್ನಗಳನ್ನು ನೀವು ತೆಗೆದುಕೊಳ್ಳಬಹುದಾಗಿದೆ. ಶಿಯೋಮಿ ಸಂಸ್ಥೆಯು ಜನರಿಗೆ ಹಲವು ಅರ್ಥಪೂರ್ಣ ಆಯ್ಕೆಗಳನ್ನು ನೀಡಲು ಬಯಸುತ್ತದೆ ಮತ್ತು ಸ್ಮಾರ್ಟ್ ಡೆಲಿವರಿ ಆಯ್ಕೆ ಶಿಯೋಮಿ ನೀಡುತ್ತಿರುವ ಇಂತಹ ಸೇವೆಗಳಲ್ಲಿ ಒಂದಾಗಿದೆ.
ಸ್ಮಾರ್ಟ್ಬಾಕ್ಸ್ ಡೆಲಿವರಿ ಪಡೆಯುವುದು ಹೇಗೆ?
ಶಿಯೋಮಿಯಿಂದ ಸ್ಮಾರ್ಟ್ಬಾಕ್ಸ್ ಡೆಲಿವರಿ ಪಡೆಯುವುದು ಹೇಗೆ ಎನ್ನುವುದನ್ನು ಈ ಕೆಳಗೆ ಹಂತ ಹಂತವಾಗಿ ವಿವರಿಸಲಾಗಿದೆ.
• ಮೊದಲಿಗೆ ನೀವು ಖರೀದಿಸ ಬಯಸುವ ಉತ್ಪನ್ನವನ್ನು ಕಾರ್ಟ್ ಗೆ ಆಡ್ ಮಾಡಿ
• ಡೆಲಿವರಿ ವಿಳಾಸವನ್ನು ನಮೂದಿಸಿ, ಸ್ಮಾರ್ಟ್ಬಾಕ್ಸ್ ಡೆಲಿವರಿ ಆಯ್ಕೆ ಲಭ್ಯವಿದ್ದರೆ ಅದನ್ನು ಆಯ್ಕೆಮಾಡಿ
• ಈಗ ಸ್ಮಾರ್ಟ್ಬಾಕ್ಸ್ ಡೈಲಾಗ್ ಬಾಕ್ಸ್ ಒಂದು ಚೆಕ್ ಔಟ್ ಪೇಜ್ ನಲ್ಲಿ ಬರುತ್ತದೆ. ಇದರಲ್ಲಿ ನೀವು ನಿಮ್ಮ ಸಮೀಪದ ಸ್ಮಾರ್ಟ್ಬಾಕ್ಸ್ ಟರ್ಮಿನಲ್ ಅನ್ನು ಆಯ್ಕೆ ಮಾಡಬಹುದು.
• ಆರ್ಡರ್ ಮಾಡಿದ ನಂತರ ನಿಮಗೆ mi.com ನಿಂದ ಒಂದು ಕನ್ಫರ್ಮೇಶನ್ ಮೆಸೇಜ್ ಬರುತ್ತದಲ್ಲದೆ ಸ್ಮಾರ್ಟ್ಬಾಕ್ಸ್ ನಿಂದ OTP ಇರುವ ಮೆಸೇಜ್ ಒಂದು ಬರುತ್ತದೆ
• ನೀವು ಆರ್ಡರ್ ಮಾಡಿದ ಉತ್ಪನ್ನ ನಿಮ್ಮ ಆಯ್ಕೆಯ ಸ್ಮಾರ್ಟ್ಬಾಕ್ಸ್ ಟರ್ಮಿನಲ್ ತಲುಪಿದ ಕೂಡಲೆ ನಿಮ್ಮ ಪಾರ್ಸೆಲ್ ಅನ್ನು ಸ್ವೀಕರಿಸುವಂತೆ ನಿಮಗೆ ಮೆಸೇಜ್ ಬರುತ್ತದೆ.
• ನೀವು ನಿಮ್ಮ ಆರ್ಡರ್ ಗೆ ಈಗಾಗಲೇ ಹಣ ಪಾವತಿಸಿದ್ದರೆ, ಸ್ಮಾರ್ಟ್ಬಾಕ್ಸ್ ಟರ್ಮಿನಲ್ ನಲ್ಲಿ OTP ನಮೂದಿಸುವ ಮೂಲಕ ನೀವು ಆರ್ಡರ್ ಮಾಡಿದ ಉತ್ಪನ್ನವನ್ನು ನೀವುಪಡೆಯಬಹುದಾಗಿದೆ
• ನೀವು ಕ್ಯಾಶ್ ಆನ್ ಡೆಲಿವರಿ ಆಯ್ಕೆಯನ್ನು ಆಯ್ದುಕೊಂಡಿದ್ದರೆ, ಸ್ಮಾರ್ಟ್ಬಾಕ್ಸ್ ಟರ್ಮಿನಲ್ ನಲ್ಲಿ ಪೇಟಿಯಂ, UPI, ಡೆಬಿಟ್/ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿಸಿ ನಿಮ್ಮ ಪಾರ್ಸೆಲ್ ಅನ್ನು ಸ್ಮಾರ್ಟ್ಬಾಕ್ಸ್ ಟರ್ಮಿನಲ್ ನಿಂದ ಪಡೆಯಬಹುದಾಗಿದೆ.
ಲಭ್ಯತೆ
ಸಧ್ಯಕ್ಕೆ ಶಿಯೋಮಿಯ ಸ್ಮಾರ್ಟ್ ಡೆಲಿವರಿ ಆಯ್ಕೆ ದೆಹಲಿ NCR ಪ್ರಾಂತ್ಯದಲ್ಲಿ ಲಭ್ಯವಿದ್ದು, ಶೀಘ್ರವೇ ದೇಶದ ಇತರ ಭಾಗಗಳಲ್ಲಿ ಲಭ್ಯವಾಗಲಿದೆ. ತನ್ನ ಗ್ರಾಹಕರಿಗೆ ಸ್ಮಾರ್ಟ್ಬಾಕ್ಸ್ ನ ಸ್ಮಾರ್ಟ್ ಡೆಲಿವರಿ ಆಯ್ಕೆಯ ಮೂಲಕ ಆರಾಮದಾಯಕ ಶಾಪಿಂಗ್ ಅನುಭವ ನೀಡುವ ಗುರಿ ಶಿಯೋಮಿಯದ್ದಾಗಿದೆ.


Click it and Unblock the Notifications








