5000 ರೂ.ಒಳಗಿನ ಬೆಲೆಯಲ್ಲಿ ಬರಲಿವೆ ಶಿಯೋಮಿ ಸ್ಮಾರ್ಟ್‌ಫೋನ್ಸ್!!

Written By:

2017 ರ ಮೊದಲಾರ್ಧದಲ್ಲಿ ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿನ ಶಿಯೋಮಿ ಆದಾಯವು ಶೇ.328 ರಷ್ಟು ಏರಿದ್ದು, ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿರುವ ಚೀನಾ ಮೊಬೈಲ್ ಕಂಪೆನಿ ಶಿಯೋಮಿ ಭವಿಷ್ಯದಲ್ಲಿ ಭಾರೀ ಗುರಿಯನ್ನು ಹಾಕಿಕೊಂಡಿದೆ.!

ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್ ತಯಾರಿಕೆಯ ಮೂಲಕ ಮುಂದಿನ ವರ್ಷ ಶೇಕಡ 70 ರಷ್ಟು ಬೆಳವಣಿಗೆಯಲ್ಲಿ ಮುಂದಿನ ವರ್ಷ 100 ದಶಲಕ್ಷ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುವುದಾಗಿ ಶಿಯೋಮಿಯ ಸಿಇಒ ಮತ್ತು ಮಾಲಿಕ ಲೀ ಜನ್ ಹೇಳಿದ್ದಾರೆ.!!

ಹಾಗಾದರೆ, ಭಾರತದಲ್ಲಿ ಪ್ರಸ್ತುತ ಶಿಯೋಮಿಯ ಮಾರುಕಟ್ಟೆ ಪಾಲು ಎಷ್ಟು? ಶೀಯೋಮಿ ಕಂಪೆನಿ ಹಾಕಿಕೊಂಡಿರುವ ಬಹುದೊಡ್ಡ ಯೋಜನೆಗಳಾವುವು? ಶಿಯೋಮಿ ಸ್ಮಾರ್ಟ್‌ಫೋನ್ ಬೆಲೆ ಎಷ್ಟು ಕಡಿಮೆಯಾಗಬಹುದು? ಎಂಬೆಲ್ಲಾ ಮಾಹಿತಿಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಭಾರತದ ಮಾರುಕಟ್ಟೆಯಲ್ಲಿ ಎರಡನೇ ಸ್ಥಾನ!!

ಭಾರತದ ಮಾರುಕಟ್ಟೆಯಲ್ಲಿ ಎರಡನೇ ಸ್ಥಾನ!!

2017 ರ ಮೊದಲಾರ್ಧದಲ್ಲಿ ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿನ ಶಿಯೋಮಿ ಆದಾಯವು ಶೇ.328 ರಷ್ಟು ಏರಿದ್ದು, ಭಾರತದ ಮೊಬೈಲ್ ಮಾರುಕಟ್ಟೆಯ ಪಾಲಿನಲ್ಲಿ ಶಿಯೋಮಿ ಎರಡನೆಯ ಸ್ಥಾನಕ್ಕೇರಿದೆ.! ಇನ್ನು ಸ್ಯಾಮ್‌ಸಂಗ್ ಮೊದಲನೇ ಸ್ತಾನ ಅಲಂಕರಿಸಿದೆ.!!

5000 ರೂ. ಒಳಗಿನ ಸ್ಮಾರ್ಟ್‌ಫೋನ್!?

5000 ರೂ. ಒಳಗಿನ ಸ್ಮಾರ್ಟ್‌ಫೋನ್!?

ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳ ಮೂಲಕ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಶಿಯೋಮಿ, ಇದಕ್ಕಾಗಿ 5000 ರೂ. ಒಳಗಿನ ಬೆಲೆಯಲ್ಲಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ. ಹಾಗಾಗಿ, 2018 ಕ್ಕೆ ಶಿಯೋಮಿ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಕಾಲಿಡಲಿವೆ.!!

100 ದಶಲಕ್ಷ ಸ್ಮಾರ್ಟ್‌ಫೋನ್‌ ಗುರಿ.!!

100 ದಶಲಕ್ಷ ಸ್ಮಾರ್ಟ್‌ಫೋನ್‌ ಗುರಿ.!!

ಪ್ರಪಂಚದಾಧ್ಯಂತ ಈ ವರ್ಷದ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಶಿಯೋಮಿ 23.10 ದಶಲಕ್ಷ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿದ್ದು, ಮುಂದಿನ ವರ್ಷ 100 ದಶಲಕ್ಷ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಲು ಶಿಯೋಮಿ ಯೋಜನೆಗಳನ್ನು ರೂಪಿಸಿದೆ.!!

ಶಿಯೋಮಿಗೆ ಭಾರತವೇ ಫೇವರೇಟ್!!

ಶಿಯೋಮಿಗೆ ಭಾರತವೇ ಫೇವರೇಟ್!!

ಭಾರತದ ಮೊಬೈಲ್ ಮಾರುಕಟ್ಟೆಯ ಪಾಲಿನಲ್ಲಿ ಶಿಯೋಮಿ ಎರಡನೆಯ ಸ್ಥಾನಕ್ಕೇರಿದ್ದರೂ ತನ್ನ ತವರು ನೆಲ ಚೀನಾದಲ್ಲಿ ಶಿಯೋಮಿ 5 ನೇ ಸ್ಥಾನದಲ್ಲಿದೆ. ಹುವಾವೆ,ಒಪ್ಪೊ, ವಿವೋ, ಮತ್ತು ಆಪಲ್ ನಂತರದ ಸ್ಥಾನ ಶಿಯೋಮಿದ್ದು, ಪ್ರಸ್ತುತ ಶಿಯೋಮಿಗೆ ಭಾರತವೇ ಫೇವರೇಟ್ ಸ್ಥಾನವಾಗಿದೆ.!!

ಓದಿರಿ:ಆನ್‌ಲೈನ್ ಬ್ಯಾಂಕಿಂಗ್ ವಂಚನೆ ಹಣಕ್ಕೆ ಯಾರು ಜವಬ್ದಾರರು? ಗ್ರಾಹಕರು ಏನು ಮಾಡಬೇಕು?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The Chinese company has, once again, eyed the lead in the market after record-high smartphone sales growth in the second quarter.to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot