ಶ್ಯೋಮಿಯಿಂದ ಗೇಮಿಂಗ್ ಉತ್ಪನ್ನ ಬಿಡುಗಡೆ ಶೀಘ್ರದಲ್ಲಿ

Written By:

2015 ರ ಪ್ರಾರಂಭವನ್ನು ರೆಡ್ಮೀ ನೋಟ್ 2 ನ ಲಾಂಚ್‌ನೊಂದಿಗೆ ಮಾಡಿರುವ ಶ್ಯೋಮಿ ಬೆನ್ನು ಬೆನ್ನಿಗೆ ಇನ್ನೊಂದು ಡಿವೈಸ್ ಎಮ್ ಐ ನೋಟ್ ಅನ್ನು ಲಾಂಚ್ ಮಾಡಲಿದ್ದು ಇದರೊಂದಿಗೆ ಎಮ್ ಐ ನೋಟ್ ಪ್ರೊ ಮತ್ತು ಎಮ್ಐ ಹೆಡ್‌ಫೋನ್ಸ್ ಜೊತೆಗೆ ಎಮ್ಐ ಬಾಕ್ಸ್ ಮಿನಿಯನ್ನು ಹೊರತಂದಿದೆ.

ಇದೀಗ ಶ್ಯೋಮಿ ಮಂಗಳವಾರದ ಇನ್ನೊಂದು ಲಾಂಚ್‌ಗೆ ತೊಡಕವನ್ನು ಆರಂಭಿಸಿದೆ. ಶ್ಯೋಮಿಯು ಗೇಮಿಂಗ್ ಡಿವೈಸ್ ಅನ್ನು ಲಾಂಚ್ ಮಾಡಲಿದ್ದು ಇದು ಮೂರು ಆಯತಾಕಾರದ ಪೆಟ್ಟಿಗೆಗಳನ್ನು ತೋರಿಸಿದ್ದು ಹಿನ್ನಲೆಯಲ್ಲಿ ಕಪ್ಪು ಬಣ್ಣವನ್ನು ಹೊಂದಿದೆ. ಇದು ಮೇಲ್ಭಾಗದಲ್ಲಿ ಕಂಟ್ರೋಲರ್ ಅನ್ನು ಹೊಂದಿದ್ದು ಎಮ್ಐ ಬ್ರ್ಯಾಂಡ್ ಉಳ್ಳ ಮೊದಲ ಕನ್ಸೋಲರ್ ಇದಾಗಿದೆ.

ಶ್ಯೋಮಿಯಿಂದ ಗೇಮಿಂಗ್ ಉತ್ಪನ್ನ ಬಿಡುಗಡೆ ಶೀಘ್ರದಲ್ಲಿ

ಕಳೆದ ವಾರ ಶ್ಯೋಮಿ ನಡೆಸಿದ ದೊಡ್ಡ ಈವೆಂಟ್‌ನಲ್ಲೇ ಜನವರಿ 28 ರಂದು ಕಂಪೆನಿ ಎಮ್ಐ 4 ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಲಾಂಚ್ ಮಾಡುವ ನಿರ್ಧಾರವನ್ನು ಪ್ರಕಟಪಡಿಸಿತ್ತು. ಈ ತಿಂಗಳ ಕೊನೆಯಲ್ಲಿ ಶ್ಯೋಮಿ ಎಮ್ಐ 4 ಭಾರತಕ್ಕೆ ಬರುವುದು ನಿಶ್ಚಿತವಾಗಿದೆ.

ತನ್ನ ಹಳೆಯ ನೀತಿ ಫ್ಲ್ಯಾಶ್ ಸೇಲ್ ಅನ್ನು ಕಂಪೆನಿ ಎಮ್ಐ 4 ಗೆ ಅನುಸರಿಸಲಿದ್ದು ಫೆಬ್ರವರಿ 3 ರಂದು ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್ ಮಾರಾಟವಾಗಲಿದೆ.

English summary
Xiaomi kicked off 2015 with the quiet launch of the Redmi 2 and this was soon followed by the Chinese company's first major event that saw the launch of the new flagship phablet, the Mi Note, and the "even-better" Mi Note Pro alongside the Mi Headphones and Mi Box Mini.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot