ಶಿಯೋಮಿಯಿಂದ ಹೊಸ ವಿನ್ಯಾಸದ 27-ಇಂಚಿನ ಗೇಮಿಂಗ್ ಮಾನಿಟರ್ ಬಿಡುಗಡೆಗೆ ಸಿದ್ದತೆ!
ಚೀನಾದ ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕ ಶಿಯೋಮಿ ಸ್ಮಾರ್ಟ್‌ಫೋನ್ ಮಾತ್ರವಲ್ಲ ಭಿನ್ನ ಮಾದರಿಯ ಲ್ಯಾಪ್‌ಟಾಪ್‌ಗಳ ಮೂಲಕವೂ ತನ್ನ ಜನಪ್ರಿಯತೆಯನ್ನ ಸಾಧಿಸಿದೆ. ಈಗಾಗಲೇ ಹಲವು ಮಾದರಿಯ ಲ್ಯಾಪ್‌ಟಾಪ್‌ಗಳನ್ನ ಪರಿಚಯಿಸಿರುವ ಶಿಯೋಮಿ ಇದೀಗ ಮತ್ತೊಂದು ಹೊಸ ಮಾದರಿಯ ಲ್ಯಾಪ್‌ಟಾಪ್ ಅನ್ನು ಬಿಡುಗಡೆ ಮಾಡಿದೆ.

ಹೌದು, ಶಿಯೋಮಿ ಕಂಪೆನಿ ತನ್ನ ಹೊಸ ಮಿ ನೋಟ್‌ಬುಕ್ ಪ್ರೊ 15 (2020) ಲ್ಯಾಪ್‌ಟಾಪ್ ಅನ್ನು ಬಿಡುಗಡೆ ಮಾಡಿದೆ. ಇನ್ನು ಈ ನೋಟ್‌ಬುಕ್ 10ನೇ ತಲೆಮಾರಿನ ಇಂಟೆಲ್ ಕೋರ್ I5 ಮತ್ತು ಕೋರ್ I7 ಪ್ರೊಸೆಸರ್ ಅನ್ನು ಹೊಂದಿದೆ ಎನ್ನಲಾಗ್ತಿದೆ. ಇದಲ್ಲದೆ ಈ ನೊಟ್‌ಬುಕ್ ಹೊಸ ಮಾದರಿಯ ವಿನ್ಯಾಸ ಹಾಗೂ ವಿಶೇಷ ಫೀಚರ್ಸ್‌ಗಳನ್ನ ಒಳಗೊಂಡಿದೆ ಎನ್ನಲಾಗ್ತಿದೆ. ಇದಲ್ಲದೆ ಹೊಸ ಮಾದರಿಯ ಗೇಮಿಂಗ್ ಮಾನಿಟರ್ ಹಾಗೂ ಪವರ್‌ಬ್ಯಾಂಕ್ ಅನ್ನು ಸಹ ಪರಿಚಯಿಸಲಿದೆ ಎನ್ನಲಾಗಿದೆ. ಹಾಗಾದರೆ ಈ ನೋಟ್‌ಬುಕ್ ಹಾಗೂ ಗೇಮಿಂಗ್ ಮಾನಿಟರ್ ಹೊಂದಿರುವ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಸದ್ಯ ಶಿಯೋಮಿ ಬಿಡುಗಡೆ ಮಾಡಿರುವ ಮಿ ನೋಟ್‌ಬುಕ್ ಪ್ರೊ 15 ನೋಟ್‌ಬುಕ್ ಹೊಸ ಶೈಲಿಯ ವಿನ್ಯಾಸ ಹೊಂದಿದೆ. ಈ ನೋಟ್‌ಬುಕ್ 10ನೇ ತಲೆಮಾರಿನ ಇಂಟೆಲ್ ಕೋರ್ I5 ಮತ್ತು ಕೋರ್ I7 ಪ್ರೊಸೆಸರ್ ಅನ್ನು ಹೊಂದಿದೆ ಎನ್ನಲಾಗ್ತಿದೆ. ಇದಲ್ಲದೆ ಶಿಯೋಮಿ ಕಂಪೆನಿ 24.5 ಇಂಚಿನ ಶಿಯೋಮಿ ಗೇಮಿಂಗ್ ಮಾನಿಟರ್ ಅನ್ನು ಸಹ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಐಟಿಹೌಸ್ ವರದಿ ಮಾಡಿದೆ. ಅಲ್ಲದೆ 29.5 ಅಥವಾ 27-ಇಂಚಿನ 4K ಮಾನಿಟರ್ ಅನ್ನು ಸಹ ಬಿಡುಗಡೆ ಮಾಡುವ ಯೋಜನೆಯನ್ನು ಹೊಂದಿದೆ.

ಇದಲ್ಲದೆ ಶಿಯೋಮಿಯ ಸಬ್-ಬ್ರಾಂಡ್ ರೆಡ್‌ಮಿ 27 ಇಂಚಿನ ಸಾಮಾನ್ಯ ಮಾನಿಟರ್‌ಗಳು, 27-ಇಂಚಿನ ಗೇಮಿಂಗ್ ಮಾನಿಟರ್‌ಗಳು ಮತ್ತು 23.8-ಇಂಚಿನ ಗೇಮಿಂಗ್ ಮಾನಿಟರ್‌ಗಳನ್ನು ಸಹ ಬಿಡುಗಡೆ ಮಾಡಲಿದೆ ಎಂದು ವರದಿಯಾಗಿದೆ. ಜೊತೆಗೆ 30,000mAh ಮೊಬೈಲ್ ಪವರ್ ಬ್ಯಾಂಕ್ ಅನ್ನು ಪ್ರಾರಂಭಿಸುತ್ತದೆ ಎಂದು ಹೇಳಲಾಗಿದೆ. ಇದಲ್ಲದೆ ಶಿಯೋಮಿ 27 ಇಂಚಿನ ಗೇಮಿಂಗ್ ಮಾನಿಟರ್ ಜುಲೈನಲ್ಲಿ ಖರೀದಿಗೆ ಲಭ್ಯವಾಗಲಿದೆ ಎಂದು ವರದಿಯಾಗಿದೆ. ಜೊತೆಗೆ ಶಿಯೋಮಿ ಕಂಪೆನಿ ಮುಂದಿನ ತಿಂಗಳು ಜಾಗತಿಕವಾಗಿ ಮಿ ಬ್ಯಾಂಡ್ 5 ಫಿಟ್ನೆಸ್ ಬ್ಯಾಂಡ್ ಅನ್ನು ಸಹ ಪ್ರಾರಂಭಿಸಲಿದೆ ಎಂದು ಅಧಿಕೃತವಾಗಿ ದೃಡಪಡಿಸಿದೆ.

ಅಲ್ಲದೆ ಶಿಯೋಮಿ ಕಂಪೆನಿ ಇತ್ತೀಚಿಗಷ್ಟೆ ಮಿ ಬ್ಯಾಂಡ್ 5 ಅನ್ನು ಸಹ ಬಿಡುಗಡೆ ಮಾಡಿದ್ದು, ಇದರ ಬೆಲೆ RMB 189 ಬೆಲೆಯನ್ನ ಹೊಂದಿದ್ದು, ಇದು ಭಾರತದಲ್ಲಿ ಸುಮಾರು 2,025 ರೂ. ಬೆಲೆಯನ್ನ ಹೊಂದಿದೆ. ಭಾರತದಲ್ಲಿ ಶಿಯೋಮಿ ಮಿ ಬ್ಯಾಂಡ್ 4 ಭಾರತದಲ್ಲಿ 2,299 ರೂ. ಬೆಲೆಯನ್ನ ಹೊಂದಿರಲಿದೆ. ಇದಲ್ಲದೆ, ಇತ್ತೀಚಿಗಷ್ಟೇ ಶಿಯೋಮಿ ಮಿ ನೋಟ್ಬುಕ್ 14 ಲ್ಯಾಪ್‌ಟಾಪ್ ಅನ್ನು ಸಹ ಭಾರತದಲ್ಲಿ ಬಿಡುಗಡೆ ಮಾಡಲಾಗಿತ್ತು. ಭಾರತದ ಮಾರುಕಟ್ಟೆಯಲ್ಲಿ ಇದರ ಬೆಲೆ 41,999 ರೂ.ಗಳಿಂದ ಪ್ರಾರಂಭವಾಗುತ್ತದೆ.


Click it and Unblock the Notifications




