ಫೆಬ್ರವರಿ 25ಕ್ಕೆ ಶಿಯೋಮಿಯಿಂದ ಹೊಸ ಹೆಡ್‌ಫೋನ್ ಲಾಂಚ್!
ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್ ಕಂಪೆನಿ ಶಿಯೋಮಿ ಭಾರತದಲ್ಲಿ ಉತ್ತಮ ಮಾರುಕಟ್ಟೆಯನ್ನೇ ಹೊಂದಿದೆ. ಸ್ಮಾರ್ಟ್‌ಫೋನ್ ಮಾತ್ರವಲ್ಲಿದೆ ಇತರೆ ಎಲೆಕ್ಟ್ರಾನಿಕ್ಸ್ ಆಕ್ಸಸರೀಸ್‌ಗಳನ್ನ ಬಿಡುಗಡೆ ಮಾಡಿ ಮಾರುಕಟ್ಟೆಯಲ್ಲಿ ಸೈ ಎನಿಸಿಕೊಂಡಿದೆ. ಇದೀಗ ಹೊಸ ಮಾದರಿಯ ಹೆಡ್‌ಪೋನ್‌ಗಳನ್ನ ಭಾರತದಲ್ಲಿ ಬಿಡುಗಡೆ ಮಾಡೋದಕ್ಕೆ ಸಿದ್ದತೆ ನಡೆಸಿದೆ. ಇನ್ನು ಈಗಾಗ್ಲೆ ಮಾರುಕಟ್ಟೆಯಲ್ಲಿ ಹಲವಾರು ಹೆಡ್‌ಪೋನ್‌ಗಳು ಲಭ್ಯವಿದ್ದು, ಶಿಯೋಮಿಯ ಹೊಸ ಹೆಡ್‌ಫೋನ್ ಹೇಗಿರಲಿದೆ ಅನ್ನೊ ಕುತೂಹಲ ಶುರುವಾಗಿದೆ.

ಹೌದು, ಶಿಯೋಮಿ ಕಂಪೆನಿ ಭಾರತದಲ್ಲಿ ಭಾರಿ ಜನಪ್ರಿಯತೆ ಪಡೆದಿರುವ ಚೀನಾ ಕಂಪೆನಿಗಳಲ್ಲಿ ಒಂದಾಗಿದೆ. ಈಗಾಗ್ಲೆ ಸ್ಮಾರ್ಟ್‌ಫೋನ್ ಪ್ರಿಯರ ನೆಚ್ಚಿನ ಬ್ರ್ಯಾಂಡ್ ಆಗಿ ಗುರುತಿಸಿ ಕೊಂಡಿರುವ ಶಿಯೋಮಿ ಹೆಚ್‌ಡಿ ಆಡಿಯೋ ,ಡ್ಯುಯೆಲ್ ಆಡಿಯೋ ಡೈನಾಮಿಕ್ ಡ್ರೈವರ್‌ಗಳನ್ನು ಹೊಂದಿರುವ ಹೊಸ ಹೆಡ್‌ಫೋನ್‌ಗಳನ್ನ ಇದೇ ಫೆಬ್ರವರಿ 25 ರಂದು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ.

ಇನ್ನು ಈ ಹೊಸ ಹೆಡ್‌ಫೋನ್ ಇಂದಿನ ಯುವಜನತೆಯ ಆಶಯಗಳಿಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದ್ದು, ಡ್ಯುಯಲ್ ಡೈನಾಮಿಕ್ ಆಡಿಯೋ ಡ್ರೈವರ್‌ಗಳನ್ನು ಒಳಗೊಂಡಿದೆ ಎಂದು ಹೇಳಲಾಗ್ತಿದೆ. ಜೊತೆಗೆ ಉತ್ತಮ ವಿನ್ಯಾಸದ ಕೇಬಲ್ ಅನ್ನು ಸಹ ಒಳಗೊಂಡಿರಲಿದೆ. ಇದಲ್ಲದೆ ಶಿಯೋಮಿಯ ಹೆಡ್‌ಫೋನ್ ಬ್ಲೂಟೂತ್ 5.0 ಕನೆಕ್ಟಿವಿಟಿಯನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಈ ಹೆಡ್‌ಫೋನ್ ಬಜೆಟ್ ಬೆಲೆಯ ಆಯ್ಕೆಗಳಲ್ಲಿ ಬರಲಿದೆ ಎನ್ನ್ಲಾಗ್ತಿದೆ.

ಸದ್ಯ ಶಿಯೋಮಿ ತನ್ನ ಅಧಿಕೃತ ಟ್ವಿಟರ್‌ನಲ್ಲಿ ಹೆಡ್‌ಫೋನ್‌ಗೆ ಸಂಬಂಧಿಸಿದಂತೆ ಟೀಸರ್ ವಿಡಿಯೋವನ್ನು ಪೋಸ್ಟ್ ಮಾಡಿದ್ದು, 10 ಸೆಕೆಂಡುಗಳ ಈ ವೀಡಿಯೊದಲ್ಲಿ ಹೆಡ್‌ಫೋನ್ ಹೇಗಿರಲಿದೆ ಅನ್ನೊದರ ಮುನ್ಸೂಚನೆ ಸಿಕ್ಕಿದ್ದು, ಈ ಹೆಡ್‌ಫೋನ್ ಕೇಬಲ್ ಅನ್ನು ಒಳಗೊಂಡಿರಲಿದೆ ಎನ್ನಲಾಗ್ತಿದೆ. ಅಲ್ಲದೆ " ಎಲೆಕ್ಟ್ರಿಫೈಯಿಂಗ್ ಸೌಂಡ್ ಅನ್ನೊ ಟ್ಯಾಗ್‌ಲೈನ್ ಅನ್ನು ಸಹ ನೀಡಲಾಗಿದೆ. ಈ ಮೂಲಕ ಈ ಹೆಡ್‌ಫೊನ್ ಉತ್ತಮ ಹೆಚ್‌ಡಿ ಆಡಿಯೋ ಕ್ವಾಲಿಟಿಯನ್ನ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.

ಇನ್ನು ಈ ಹೆಡ್‌ಫೋನ್ ಡ್ಯುಯಲ್ ಡೈನಾಮಿಕ್ ಆಡಿಯೋ ಡ್ರೈವರ್‌ಗಳ ಹೊಂದಿರುವುದರಿಂದ "ಉತ್ತಮ ಸಮತೋಲಿತ ಧ್ವನಿ" ಅನುಭವವನ್ನು ನೀಡಲಿದೆ. ಇದಲ್ಲದೆ ಇದು ಬಳಕೆದಾರರ ಕಿವಿಯ ವಿನ್ಯಾಸಕ್ಕೆ ತಕ್ಕಂತೆ ಹೊಂದಿಕೊಳ್ಳಲಿದೆ ಎನ್ನಲಾಗ್ತಿದೆ. ಇನ್ನು ಇದರಲ್ಲಿ ಟಚ್ ದಿ ಕಂಟ್ರೋಲ್ ಇದೆಯಾ ಅನ್ನೊದರ ಬಗ್ಗೆ ಯಾವುದೇ ಮಾಹಿತಿಯನ್ನ ಕಂಪೆನಿ ಹಂಚಿಕೊಂಡಿಲ್ಲ. ಸದ್ಯ ಈ ಹೆಡ್‌ಫೋನ್ ಫೆಬ್ರವರಿ 25 ರಂದು ಭಾರತೀಯ ಮಾರುಕಟ್ಟೆಗೆ ಎಂಟ್ರಿ ನೀಡೊದು ಪಕ್ಕಾ ಆಗಿದೆ.


Click it and Unblock the Notifications