ಟೆಕ್‌ವಲಯದಲ್ಲಿ ಸಂಚಲನ ಸೃಷ್ಟಿಸಿದ ಶಿಯೋಮಿ ಟಿವಿ ಸ್ಪೀಕರ್! ಏನಿದರ ವಿಶೇಷ!
ಶಿಯೋಮಿ ಕಂಪೆನಿ ಸ್ಮಾರ್ಟ್‌ಫೋನ್ ಮಾತ್ರವಲ್ಲದೆ ವಿವಿಧ ಮಾದರಿಯ ಸ್ಮಾರ್ಟ್ ಡಿವೈಸ್‌ಗಳನ್ನು ಸಹ ಪರಿಚಯಿಸುತ್ತಾ ಬಂದಿದೆ. ಇದರಲ್ಲಿ ಸ್ಮಾರ್ಟ್‌ಟಿವಿ ಸ್ಪೀಕರ್‌ಗಳು ಕೂಡ ಸೇರಿವೆ. ಇದೀಗ ಶಿಯೋಮಿ ಕಂಪೆನಿ ಹೊಸ ಸ್ಪೀಕರ್ ಅನ್ನು ಪರಿಚಯಿಸಿದೆ. ಇದನ್ನು ಶಿಯೋಮಿ TV ಸ್ಪೀಕರ್ 5.1.4 ಎಂದು ಹೆಸರಿಸಲಾಗಿದೆ.
ಹೌದು, ಶಿಯೋಮಿ ಸಂಸ್ಥೆ ಹೊಸ ಶಿಯೋಮಿ TV ಸ್ಪೀಕರ್ 5.1.4 ಅನ್ನು ಬಿಡುಗಡೆ ಮಾಡಿದೆ. ಇದು ಎಲ್ಲಾ ಟಿವಿ ಸ್ಪೀಕರ್‌ಗಳಿಗಿಂತ ಹೆಚ್ಚಿನ ಫೀಚರ್ಸ್‌ಗಳನ್ನು ಹೊಂದಿದೆ. ಇನ್ನು 200W ಇಂಡಿಪೆಂಡೆಟ್ ಸಬ್ ವೂಫರ್‌ನೊಂದಿಗೆ ಡಿಟ್ಯಾಚೇಬಲ್ ವಿನ್ಯಾಸವನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿ ಸ್ಪೀಕರ್ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಶಿಯೋಮಿ ಟಿವಿ ಸ್ಪೀಕರ್ 5.1.4 ಫೀಚರ್ಸ್ ವಿವರ: ಶಿಯೋಮಿ ಟಿವಿ ಸ್ಪೀಕರ್ 5.1.4 ನವೀನ ಮಾದರಿಯ ಡಿಸೈನ್ ಅನ್ನು ಹೊಂದಿದೆ. ಈ ಸ್ಪೀಕರ್ ಎರಡು ವಾಯರ್‌ಲೆಸ್ ಸರೌಂಡ್ ಸ್ಪೀಕರ್‌ಗಳನ್ನು ಒಳಗೊಂಡಿದ್ದು, ವಾಯರ್‌ಲೆಸ್ ಸಬ್ ವೂಫರ್‌ಗಳನ್ನು ಒಳಗೊಂಡಿದೆ. ಇದು ಡಿಟ್ಯಾಚೇಬಲ್ ವಿನ್ಯಾಸವನ್ನು ಹೊಂದಿದೆ.
ಇನ್ನು ಸ್ಪೀಕರ್‌ಗಳನ್ನು ನೀವು ಅನುಕೂಲಕರವಾಗಿ ಜೋಡಿಸಬಹುದು ಮತ್ತು ಚಾರ್ಜ್ ಮಾಡಬಹುದು. ಜೊತೆಗೆ ಆಡಿಯೊ ವ್ಯವಸ್ಥೆಯು 3 ಫ್ರಂಟ್ ಚಾನಲ್‌ಗಳು, 2 ಮುಂಭಾಗದ ಚಾನಲ್‌ಗಳು, 2 ಹಿಂದಿನ ಚಾನಲ್‌ಗಳು, 2 ಹಿಂದಿನ ಸರೌಂಡ್ ಚಾನಲ್‌ಗಳು ಮತ್ತು 1 ಬಾಸ್ ಚಾನಲ್‌ಗಳನ್ನು ಹೊಂದಿದೆ.
ಇದಲ್ಲದೆ ಈ ಸ್ಪೀಕರ್‌ನಲ್ಲಿ 450W ವರೆಗಿನ ಪವರ್ ಅನ್ನು ನೀಡಲಾಗಿದ್ದು, 12 ಸ್ಪೀಕರ್ ಯೂನಿಟ್‌ಗಳನ್ನು ನೀಡಲಾಗಿದೆ. ಇವುಗಳನ್ನು ಸೂಕ್ಷ್ಮ ಮತ್ತು ವಾಸ್ತವಿಕ ವಿಹಂಗಮ ಧ್ವನಿಯನ್ನು ರಚಿಸಲು ವಿವಿಧ ಸ್ಥಾನಗಳಲ್ಲಿ ಜೋಡಿಸಲಾಗಿದೆ. ಇನ್ನು ಡಾಲ್ಬಿ ಪನೋರಮಿಕ್ ಸೌಂಡ್ ಸಿಸ್ಟಮ್ ಅನ್ನು ಸಹ ಬೆಂಬಲಿಸುತ್ತದೆ. ಜೊತೆಗೆ 8 ಇಂಚಿನ ಸ್ವತಂತ್ರ 200W ಸಬ್ ವೂಫರ್ ಹೆಚ್ಚು ತಲ್ಲೀನಗೊಳಿಸುವ ಸೌಂಡ್ ಎಫೆಕ್ಟ್‌ಗಳನ್ನು ಒದಗಿಸಲಿದೆ ಎಂದು ಹೇಳಲಾಗಿದೆ.

ಶಿಯೋಮಿ TV ಸ್ಪೀಕರ್ 5.1.4 ಡಾಲ್ಬಿ ಅಟ್ಮಾಸ್ ಮಲ್ಟಿ-ಚಾನೆಲ್ ಆಡಿಯೊವನ್ನು ರವಾನಿಸಲು ಹೊಸ eARC ಟೆಕ್ನಾಲಜಿಯನ್ನು ಬಳಸಿಲಿದೆ ಎಂದು ವರದಯಾಗಿದೆ. ಇದು 4K ಇಮೇಜ್ ಟ್ರಾನ್ಸ್‌ಮಿಷನ್ ಅನ್ನು ಸಹ ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿಗಾಗಿ ಸ್ಪೀಕರ್ ಆಪ್ಟಿಕಲ್, ಏಕಾಕ್ಷ, ಬ್ಲೂಟೂತ್, USB ಮತ್ತು HDMI ಪೋರ್ಟ್‌ಗಳನ್ನು ಹೊಂದಿದೆ.
ಪ್ರಸ್ತುತ ಶಿಯೋಮಿ TV ಸ್ಪೀಕರ್ 5.1.4 ಚೀನಾದಲ್ಲಿ ಮಾತ್ರ ಬಿಡುಗಡೆಯಾಗಿದೆ. ಇದು ಇದೇ ಮೇ 31 ರಂದು ಖರೀದಿಗೆ ಲಭ್ಯವಾಗಲಿದೆ. ಈ ಸ್ಪೀಕರ್ ಚೀನಾದಲ್ಲಿ 3,999 ಯುವಾನ್ (ಅಂದಾಜು 46,736ರೂ) ಆರಂಭಿಕ ಬೆಲೆಯೊಂದಿಗೆ ಬರುತ್ತದೆ.

ಇದಲ್ಲದೆ ಶಿಯೋಮಿ ಕಂಪೆನಿ ಇತ್ತೀಚಿಗೆ ಟೆಕ್ ವಲಯದಲ್ಲಿ ಶಿಯೋಮಿ Civi 3 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ 6.55 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 2400 x 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 8200 5G SoC ಪ್ರೊಸೆಸರ್ ಹೊಂದಿದೆ. ಇದಕ್ಕೆ ಪುರಕವಾಗಿ ಮಾಲಿ-G610 GPU ಸಪೋರ್ಟ್ ಹೊಂದಿದೆ. ಇದು ಆಂಡ್ರಾಯ್ಡ್ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.
ಈ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ರಚನೆ ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX800 ಸೆನ್ಸಾರ್ ಹೊಂದಿದೆ. ಈ ಸ್ಮಾರ್ಟ್‌ಫೋನ್ ಡ್ಯುಯಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಇದರಲ್ಲಿ 32 ಮೆಗಾಪಿಕ್ಸೆಲ್ ಆಟೋಫೋಕಸ್ ಲೆನ್ಸ್ ಕ್ಯಾಮೆರಾ ಮತ್ತು 32 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಕ್ಯಾಮೆರಾವನ್ನು ನೀಡಲಾಗಿದೆ. ಜೊತೆಗೆ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 67W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲಿಸಲಿದೆ.


Click it and Unblock the Notifications








