ಶಿಯೋಮಿಯ ಮಿ ಟ್ರೂ ವಾಯರ್‌ಲೆಸ್ ಇಯರ್‌ಫೋನ್ಸ್ 2 ಬಿಡುಗಡೆ!

|

ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಶಿಯೋಮಿ ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ ಡಿವೈಸ್‌ಗಳನ್ನ ಪರಿಚಯಿಸಿದೆ. ಭಿನ್ನ ಮಾದರಿಯ ಸ್ಮಾರ್ಟ್‌ಫೊ ನ್‌ಗಳನ್ನ ಪರಿಚಯಿಸಿ ಸೈ ಎನಿಸಿಕೊಂಡಿರುವ ಶಿಯೋಮಿ ತನ್ನ ವಾಯರ್‌ಲೆಸ್‌ ಇಯರ್‌ಫೋನ್‌ಗಳ ಮೂಲಕವೂ ಜನಪ್ರಿಯತೆಯನ್ನ ಸಾಧಿಸಿದೆ. ಗ್ರಾಹಕರ ಆಶಯಗಳಿಗೆ ತಕ್ಕಂತ ಹೊಸ ವಿನ್ಯಾಸದ ಇಯರ್‌ಫೋನ್‌ಗಳನ್ನ ಲಾಂಚ್‌ ಮಾಡುವ ಮೂಲಕ ಗ್ರಾಹಕರ ಮನೆಸೆಳೆದಿದೆ. ಸದ್ಯ ಇದೇ ಕಂಪೆನಿ ಇದೀಗ ಮತ್ತೊಂದು ಹೊಸ ಇಯರ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ.

ಹೌದು

ಹೌದು ತನ್ನ ಸ್ಮಾರ್ಟ್‌ಫೋನ್‌ಗಳ ಮೂಲಕವೇ ಜನಪ್ರಿಯತೆ ಸಾಧಿಸಿರುವ ಶಿಯೋಮಿ ಇತರೆ ಡಿವೈಸ್‌ಗಳ ಮೂಲಕವೂ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿದೆ. ಎಲ್ಲಾ ಮಾದರಿಯ ಪ್ರಾಡಕ್ಟ್‌ಗಳಲ್ಲೂ ಹೊಸತನವನ್ನ ಪರಿಚಯಿಸುವ ಶಿಯೊಮಿ ಇಯರ್‌ಫೋನ್‌ಗಳ ವಲಯದಲ್ಲೂ ಹೊಸ ಸಂಚಲನವನ್ನೇ ಸೃಷ್ಟಿಸುವ ಇರಾದೆ ಹೊಂದಿದೆ. ಇನ್ನು ಈಗಾಗ್ಲೇ ಟ್ರೂ ವಾಯರ್‌ಲೆಸ್ ಇಯರ್‌ಫೋನ್‌ ಬಿಡುಗಡೆ ಮಾಡಿದ್ದ ಶಿಯೋಮಿ ಇದೀಗ ಮಿ ಟ್ರೂ ವಾಯರ್‌ಲೆಸ್‌ ಇಯರ್‌ಫೋನ್‌ 2 ಅನ್ನು ಬಿಡುಗಡೆ ಮಾಡಿದೆ. ಅಷ್ಟಕ್ಕೂ ಈ ವಾಯರ್‌ಲೆಸ್‌ ಇಯರ್‌ಫೋನ್‌ನ ವಿನ್ಯಾಸ ಹೇಗಿದೆ, ಅದರ ವೈಶಿಷ್ಟ್ಯತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿ.

ಇದೀಗ

ಇನ್ನು ಇದೀಗ ಬಿಡುಗಡೆ ಆಗಿರುವ ಮಿ ಟ್ರೂ ವಾಯರ್‌ಲೆಸ್ ಇಯರ್‌ಫೋನ್ಸ್ 2 ಹೊಸ ಮಾದರಿಯ ಜೋಡಿ ಇಯರ್‌ಬಡ್‌ಗಳಾಗಿದೆ. ಈ ಹೊಸ ವಿನ್ಯಾಸ ವಾಯರ್‌ಲೆಸ್‌ ಇಯರ್‌ ಬಡ್ಸ್‌ ಕಳೆದ ವರ್ಷ ಬಿಡುಗಡೆಯಾದ ಮಿ ಟ್ರೂ ವಾಯರ್‌ಲೆಸ್‌ ಇಯರ್‌ಫೋನ್‌ಗಳ ಮುಂದುವರೆದ ಆವೃತ್ತಿಯಾಗಿದೆ. ಇನ್ನು ಈ ಮಿ ಟ್ರೂ ವಾಯರ್‌ಲೆಸ್‌ ಇಯರ್‌ಫೋನ್‌ಗಳಲ್ಲಿ ಶಿಯೋಮಿ ಎಕೋ ನಾಯಿಸ್‌ ಕ್ಯಾನ್ಸಲೇಶನ್‌ (ENC) ಅನ್ನು ಒಳಗೊಂಡಿದೆ. ಅಲ್ಲದೆ ಈ ಇಯರ್‌ಬಡ್‌ಗಳು 14.2mm ಆಡಿಯೋ ಡ್ರೈವರ್‌ಗಳನ್ನು ಹೊಂದಿವೆ.

ಇಯರ್‌ಬಡ್ಸ್‌ಗಳು

ಅಲ್ಲದೆ ಈ ಇಯರ್‌ಬಡ್ಸ್‌ಗಳು ಆಪಲ್ ಏರ್‌ಪಾಡ್‌ಗಳಂತೆಯೇ ಇಯರ್‌ ಡಿಟೆಕ್ಷನ್‌ ಮತ್ತು ಗೆಸ್ಚರ್ ಕಂಟ್ರೋಲ್‌ ಅನ್ನು ಸಕ್ರಿಯಗೊಳಿಸುವ ಸೆನ್ಸಾರ್‌ಗಳನ್ನು ಒಳಗೊಂಡಿದೆ. ಇನ್ನು ಈ ಇಯರ್‌ಬಡ್‌ಗಳು 14.2 ಎಂಎಂ ಆಡಿಯೋ ಡ್ರೈವರ್‌ಗಳನ್ನ ಹೊಂದಿರುವುದರಿಂದ ಇದರಲ್ಲಿ ದೊಡ್ಡ ಗಾತ್ರದ ಸಂಯೋಜಿತ ಡೈನಾಮಿಕ್ ಕಾಯಿಲ್ ಅನ್ನು ನಿಡಲಾಗಿದೆ. ಜೊತೆಗೆ ಈ ಇಯರ್‌ಫೋನ್‌ನಲ್ಲಿ ಉತ್ತಮ ಗುಣಮಟ್ಟದ ಧ್ವನಿಯನ್ನು ವಾಯರ್‌ಲೆಸ್‌ನಲ್ಲಿ ನೀಡುವುದಕ್ಕಾಗಿ ಬ್ಲೂಟೂತ್ ಹೈ-ಡೆಫಿನಿಷನ್ ಟೋನ್ ತಂತ್ರಜ್ಞಾನ (LHDC) ಸಹ ಇದೆ. ಇದಲ್ಲದೆ, ಶಿಯೋಮಿ ನಾಯಿಸ್‌ ಕ್ಯಾನ್ಸೆಲೇಶನ್‌ಗಾಗಿ ಇಎನ್‌ಸಿಯನ್ನು ನೀಡಿದೆ.

ಇಯರ್‌ಬಡ್ಸ್‌ನಲ್ಲಿ

ಇನ್ನು ಈ ಇಯರ್‌ಬಡ್ಸ್‌ನಲ್ಲಿ ಆಪಲ್ ಏರ್‌ಪಾಡ್‌ಗಳಂತೆಯೇ, ಡಬಲ್-ಟ್ಯಾಪ್ ಗೆಸ್ಚರ್ ಬಳಸಿ ಸಂಗೀತ, ವಾಯ್ಸ್‌ ಕಾಲ್‌ ಮತ್ತು ವಾಯ್ಸ್‌ ಅಸಿಸ್ಟೆಂಟ್‌ಗೆ ಅವಕಾಶವನ್ನು ನೀಡಲಾಗಿದೆ. ಅಲ್ಲದೆ ಈ ಇಯರ್‌ಬಡ್‌ಗಳು ಇಂಟರ್‌ ಬಿಲ್ಟ್‌ ಆಪ್ಟಿಕಲ್ ಸೆನ್ಸಾರ್‌ ಬಳಸಿಕೊಂಡು ಇಯರ್‌ ಡಿಟೆಕ್ಷನ್‌ ಅನ್ನು ಸಹ ಒಳಗೊಂಡಿವೆ. ಇನ್ನು ಇತ್ತೀಚಿನ MIUI ಆವೃತ್ತಿಯನ್ನು ಚಾಲನೆ ಮಾಡುವ ಸ್ಮಾರ್ಟ್‌ಫೋನ್‌ಗಳೊಂದಿಗೆ, ಮಿ ಟ್ರೂ ವಾಯರ್‌ಲೆಸ್‌ ಇಯರ್‌ಫೋನ್ಸ್ 2 ಚಾರ್ಜ್‌ ಮಾಡುವ ಇನ್ಸಟಂಟ್ ಪಾಪ್-ಅಪ್ ಕನೆಕ್ಟಿವಿಟಿಯನ್ನು ಸಹ ಬೆಂಬಲಿಸುತ್ತದೆ. ಇದಲ್ಲದೆ, ಇಯರ್‌ಬಡ್‌ಗಳ ಚಾರ್ಜಿಂಗ್ ಗೋಸ್ಕರ ಯುಎಸ್‌ಬಿ ಟೈಪ್-ಸಿ ಹೊಂದಿದೆ.

ವಾಯರ್‌ಲೆಸ್‌

ಸದ್ಯ ಮಿ ಟ್ರೂ ವಾಯರ್‌ಲೆಸ್‌ ಇಯರ್‌ಫೋನ್ 2 ಅನ್ನು ಒಂದೇ ಚಾರ್ಜ್‌ನಲ್ಲಿ ನಾಲ್ಕು ಗಂಟೆಗಳ ಬ್ಯಾಟರಿ ಅವಧಿಯನ್ನು ತಲುಪಿಸಲು ರೇಟ್ ಮಾಡಲಾಗಿದೆ. ಅಲ್ಲದೆ ಈ ಇಂಟರ್‌ ಬಿಲ್ಟ್‌ ಬ್ಯಾಟರಿಗಳನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲುಒಂದು ಗಂಟೆ ಸಮಯ ಬೇಕಾಗಲಿದ್ದು, ಸಿಂಗಲ್‌ ಚಾರ್ಜಿಂಗ್‌ನಲ್ಲಿ ಬ್ಯಾಟರಿಯ ಅವಧಿಯನ್ನು 14 ಗಂಟೆಗಳವರೆಗೆ ವಿಸ್ತರಿಸುತ್ತದೆ. ಇನ್ನು ಮಿ ಟ್ರೂ ವಾಯರ್‌ಲೆಸ್ ಇಯರ್‌ಫೋನ್ಸ್ 2 ಬೆಲೆಯನ್ನು ಯುರೋ 79.99 (ಸುಮಾರು 6,700 ರೂ.) ಎಂದು ನಿಗದಿಪಡಿಸಲಾಗಿದೆ.

Best Mobiles in India

English summary
Mi True Wireless Earphones 2 price is set at EUR 79.99 (roughly Rs. 6,700).to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X